ಅಪ್‌ಡೇಟ್ ಮಾಡಲಾದ ಸೇವಾ ನಿಯಮಗಳ FAQ ಗಳು

ನಮ್ಮ ತೀರಾ ಇತ್ತೀಚಿನ ಸೇವಾ ನಿಯಮಗಳು ಈ ನಿರ್ದಿಷ್ಟ ವಿಷಯಗಳ ಕುರಿತಾದ ಅಪ್‌ಡೇಟ್‌ಗಳನ್ನು ಒಳಗೊಂಡಿವೆ: ಮುಖ ಗುರುತಿಸುವಿಕೆ ಡೇಟಾ, YouTube ನ ಮಾನಿಟೈಸ್ ಹಕ್ಕು ಮತ್ತು ಯು.ಎಸ್‌ ತೆರಿಗೆ ಹೊಣೆಗಾರಿಕೆಗಳು. ಈ ನಿಯಮಗಳು 2020 ನವೆಂಬರ್‌ನಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜಾರಿಗೆ ಬಂದಿವೆ ಮತ್ತು ಜೂನ್ 1, 2021 ರಿಂದ ಯು.ಎಸ್‌ನ ಹೊರಗೆ ಜಾರಿಗೆ ಬಂದಿವೆ.

ನೀವು ಸೇವಾ ನಿಯಮಗಳನ್ನು ಏಕೆ ಬದಲಾಯಿಸಿದ್ದೀರಿ?

YouTube ನಲ್ಲಿ, ನಮ್ಮ ಸೇವಾ ನಿಯಮಗಳನ್ನು ಸ್ಪಷ್ಟವಾಗಿ, ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಕಾಲಕ್ಕೆ ತಕ್ಕ ಹಾಗೆ ನಮ್ಮ ಪಾಲುದಾರರು, ಜಾಹೀರಾತುದಾರರು ಹಾಗೂ ವೀಕ್ಷಕರ ಅಗತ್ಯಗಳನ್ನು ಪೂರೈಸಲು ಅವುಗಳನ್ನು ನಾವು ಅಪ್‌ಡೇಟ್ ಮಾಡುತ್ತಿರುತ್ತೇವೆ.

ನಮ್ಮ ಸೇವಾ ನಿಯಮಗಳಲ್ಲಿ ಈ ಅಪ್‌ಡೇಟ್‌ನ ಮೂಲಕ, ಮುಖ ಗುರುತಿಸುವಿಕೆ ಡೇಟಾ ಸಂಗ್ರಹಣೆಗೆ ಸಂಬಂಧಪಟ್ಟ ನಿರ್ಬಂಧಗಳನ್ನು ನಾವು ಸ್ಪಷ್ಟಪಡಿಸುತ್ತಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ನ ವಿವಿಧ ಜಾಗಗಳಲ್ಲಿ ಆ್ಯಡ್‌ಗಳನ್ನು ರನ್ ಮಾಡಲು ನಾವು ತೆಗೆದುಕೊಳ್ಳುವ ಹಕ್ಕುಗಳ ಕುರಿತಾಗಿ ನಿಮ್ಮೊಂದಿಗೆ ಪಾರದರ್ಶಕವಾಗಿರಲು ಬಯಸುತ್ತೇವೆ. ಉದಾಹರಣೆಗೆ, ನಾವು ವೀಡಿಯೊಗಳು, ಹೋಮ್ ಪೇಜ್‌ನ ಮಾಸ್ಟ್‌ಹೆಡ್ ಮತ್ತು ವಿವಿಧ ಹುಡುಕಾಟ ಫಲಿತಾಂಶಗಳಲ್ಲಿ ಆ್ಯಡ್‌ಗಳನ್ನು ರನ್ ಮಾಡುತ್ತೇವೆ. ಈ ಅಪ್‌ಡೇಟ್ YouTube ನಿಂದ ಬರುವ ಆದಾಯ ಪಾವತಿಗಳನ್ನು ಯು.ಎಸ್‌ ತೆರಿಗೆ ದೃಷ್ಟಿಕೋನದಿಂದ ಹೇಗೆ ರಾಯಲ್ಟಿ ಪಾವತಿ ಎಂದು ಪರಿಗಣಿಸಲಾಗುತ್ತದೆ ಮತ್ತು ಕಾನೂನಿನ ಪ್ರಕಾರ ಈ ಪಾವತಿಗಳಿಂದ Google ತೆರಿಗೆಗಳನ್ನು ತಡೆಹಿಡಿಯುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಮುಖ್ಯ ಬದಲಾವಣೆಗಳು ಯಾವುವು?

ಬದಲಾವಣೆಗಳ ಕುರಿತ ಸಾರಾಂಶ ಹೀಗಿದೆ:

  • ಮುಖ ಗುರುತಿಸುವಿಕೆಗೆ ಸಂಬಂಧಿಸಿದ ನಿರ್ಬಂಧಗಳು. ಯಾವುದೇ ವ್ಯಕ್ತಿಯ ಅನುಮತಿಯಿಲ್ಲದೆ ಅವರನ್ನು ಗುರುತಿಸಬಹುದಾದ ಯಾವುದೇ ಮಾಹಿತಿಯನ್ನು ನೀವು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಸೇವಾ ನಿಯಮಗಳು ಈಗಾಗಲೇ ತಿಳಿಸಿವೆ. ಇದು ಎಂದಿನಂತೆ, ಮುಖ ಗುರುತಿಸುವಿಕೆಯ ಮಾಹಿತಿಯನ್ನು ಒಳಗೊಂಡಿರುತ್ತದೆಯಾದರೂ, ಹೊಸ ನಿಯಮಗಳು ಅದನ್ನು ಸುವ್ಯಕ್ತವಾಗಿ ತಿಳಿಸುತ್ತವೆ. 
     
  • YouTube ನ ಮಾನಿಟೈಸ್ ಹಕ್ಕು. YouTube ಪಾಲುದಾರ ಕಾರ್ಯಕ್ರಮದಲ್ಲಿ ಅಲ್ಲದ ಅಥವಾ ಮಾನಿಟೈಸಿಂಗ್ ಒಪ್ಪಂದದ ಅಡಿಯಲ್ಲಿ ಅಲ್ಲದ ಚಾನಲ್‌ಗಳಲ್ಲಿ ಬ್ರ್ಯಾಂಡ್-ಸುರಕ್ಷಿತ ವೀಡಿಯೊಗಳ ಸೀಮಿತ ಸೆಟ್‌ಗಳಲ್ಲಿ ನಾವು ಕಾಲಕ್ರಮೇಣ ಜಾಹೀರಾತುಗಳನ್ನು ನೀಡಲು ಪ್ರಾರಂಭಿಸುತ್ತಿದ್ದೇವೆ. ಈ ಆ್ಯಡ್‌ಗಳಿಂದ ಆದಾಯ ಹಂಚಿಕೊಳ್ಳುವಿಕೆ ಇರುವುದಿಲ್ಲ, ಆದರೆ ರಚನೆಕಾರರು ಅರ್ಹತಾ ಮಾನದಂಡಗಳನ್ನು ತಲುಪಿದ ನಂತರ , ಅವರು YouTube ಪಾಲುದಾರ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು, ಅದು ಬದಲಾಗದೆ ಉಳಿಯುತ್ತದೆ.
     
  • ರಾಯಲ್ಟಿ ಪಾವತಿಗಳು ಮತ್ತು ತೆರಿಗೆ ತಡೆಹಿಡಿಯುವಿಕೆ. ನಿಮ್ಮ ಮತ್ತು YouTube ನಡುವಿನ ಯಾವುದೇ ಒಪ್ಪಂದದ ಮೂಲಕ, YouTube ನಿಂದ ಪಾವತಿಗಳನ್ನು ಸ್ವೀಕರಿಸಲು ನೀವು ಅರ್ಹರಾಗಿದ್ದರೆ (ಉದಾಹರಣೆಗೆ, YouTube ಪಾಲುದಾರ ಕಾರ್ಯಕ್ರಮದ ಮೂಲಕ), ಅಂತಹ ಎಲ್ಲಾ ಪಾವತಿಗಳನ್ನು ಜೂನ್ 1, 2021 ರಿಂದ ರಾಯಲ್ಟಿಗಳು ಎಂದು ಪರಿಗಣಿಸಲಾಗುತ್ತದೆ. ಕಾನೂನಿನ ಪ್ರಕಾರ, ಅಂತಹ ಪಾವತಿಗಳಿಂದ Google ತೆರಿಗೆಗಳನ್ನು ತಡೆಹಿಡಿಯುತ್ತದೆ.

ಇದು ನನ್ನ YPP ಮಾನಿಟೈಸೇಶನ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಈ ಸೇವಾ ನಿಯಮಗಳ ಅಪ್‌ಡೇಟ್‌ನಿಂದ ಬದಲಾವಣೆಗಳು ನಿಮ್ಮ YouTube ಪಾಲುದಾರ ಕಾರ್ಯಕ್ರಮದ (YPP) ಮಾನಿಟೈಸೇಶನ್ ಸೆಟ್ಟಿಂಗ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ.

ಯುನೈಟೆಡ್ ಸ್ಟೇಟ್ಸ್ ಹೊರಗಿನ ಪಾಲುದಾರರು ತಮ್ಮ ಪಾವತಿಗಳಿಗೆ ಯಾವುದೇ ಯು.ಎಸ್. ತೆರಿಗೆ ತಡೆಹಿಡಿಯುವಿಕೆ ಅನ್ವಯಿಸುತ್ತದೆಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾದಷ್ಟು ಬೇಗ YouTube ಗಾಗಿ AdSense ನಲ್ಲಿ ಸಂಪೂರ್ಣ ತೆರಿಗೆ ಮಾಹಿತಿಯನ್ನು ಸಲ್ಲಿಸಬೇಕು. ಯಾವುದೇ ತಡೆಹಿಡಿಯುವ ತೆರಿಗೆಗಳು ಅನ್ವಯಿಸಿದರೆ, ಜುಲೈ 2021 ರ ಪಾವತಿಯಿಂದ (ಜೂನ್ ಗಳಿಕೆಯನ್ನು ಒಳಗೊಂಡ) ಪಾವತಿಗಳ ಮೇಲಿನ ತೆರಿಗೆಗಳನ್ನು Google ತಡೆಹಿಡಿಯಲು ಪ್ರಾರಂಭಿಸಬಹುದು. ಇನ್ನಷ್ಟು ತಿಳಿಯಲು ಸಹಾಯ ಕೇಂದ್ರದಲ್ಲಿ ನಮ್ಮ ಸಾರಾಂಶವನ್ನು ನೋಡಿ: ಯು.ಎಸ್‌‌ನಲ್ಲಿ YouTube ಗಳಿಕೆಗಳಿಗಾಗಿ ತೆರಿಗೆ ಅವಶ್ಯಕತೆಗಳು

ಇದು ಯುರೋಪಿಯನ್ ಯೂನಿಯನ್ ಹಕ್ಕುಸ್ವಾಮ್ಯ ನಿರ್ದೇಶನ ಅಥವಾ GDPR ನೊಂದಿಗೆ ಸಂಬಂಧ ಹೊಂದಿದೆಯೇ?

ಇಲ್ಲ, ಇದು ಯುರೋಪಿಯನ್ ಯೂನಿಯನ್ ಕೃತಿಸ್ವಾಮ್ಯ ನಿರ್ದೇಶನ ಅಥವಾ GDPR ನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.

ನನ್ನ ಗೌಪ್ಯತೆ ಅಥವಾ ಡೇಟಾದ ಮೇಲೆ ಇದು ಯಾವ ರೀತಿ ಪ್ರಭಾವ ಬೀರುತ್ತದೆ?

ನಿಮ್ಮ ಮಾಹಿತಿಯೊಂದಿಗೆ ನಾವು ಹೇಗೆ ವ್ಯವಹರಿಸುತ್ತೇವೆ ಎಂಬ ವಿಚಾರದಲ್ಲಿ ನಾವು ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ನೀವು Google ಗೌಪ್ಯತಾ ನೀತಿ and YouTube Kids ಗೌಪ್ಯತಾ ಸೂಚನೆ ಪರಿಶೀಲಿಸುವ ಮೂಲಕ ನಮ್ಮ ಗೌಪ್ಯತೆಯ ರೂಢಿಗಳ ಕುರಿತಾಗಿ ಓದಬಹುದು. ಹಾಗೂ ಒಂದು ರಿಮೈಂಡರ್, ನಿಮ್ಮ Google ಖಾತೆಗೆ ಭೇಟಿ ನೀಡುವ ಮೂಲಕ ನೀವು ಯಾವಾಗ ಬೇಕಾದರೂ ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬಹುದು ಮತ್ತು ನಿಮ್ಮ ಡೇಟಾ ವೈಯಕ್ತಿಕಗೊಳಿಸುವಿಕೆಯನ್ನು ನಿರ್ವಹಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15306814174297601047
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false