ಹಣಕಾಸು ಗ್ರಾಹಕರೊಂದಿಗೆ ನ್ಯಾಯೋಚಿತವಾಗಿ ನಡೆದುಕೊಳ್ಳುವುದರ ಕುರಿತಾದ ಚಾರ್ಟರ್

ಬ್ಯಾಂಕ್ ನೆಗಾರಾ ಮಲೇಷ್ಯಾವು (“BNM”) 6 ನವೆಂಬರ್ 2019 ರಂದು ವಿಧಿಸಿದ ಮತ್ತು ಮೇ 2020 ರಲ್ಲಿ ಜಾರಿಗೊಳಿಸಿದ ಫೇರ್ ಟ್ರೀಟ್‌ಮೆಂಟ್ ಆಫ್ ಫೈನಾನ್ಶಿಯಲ್ ಕನ್ಸ್ಯೂಮರ್ಸ್ ಪಾಲಿಸಿಯನ್ನು ಪೂರೈಸುವುದಕ್ಕಾಗಿ Google Payment ಮಲೇಷ್ಯಾವು (“GPMY”) ಹೊಂದಿರುವ ಗ್ರಾಹಕ ಬೆಂಬಲದ ರೂಢಿಗಳ ಸ್ಥೂಲನೋಟವನ್ನು ಈ ಲೇಖನದಲ್ಲಿ ಒದಗಿಸಲಾಗಿದೆ.

ನಮ್ಮ ಗ್ರಾಹಕರ ಹಿತಾಸಕ್ತಿಗಳು ಹಾಗೂ ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸಲು:

ನಮ್ಮ ಸಂಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ಹಾಗೂ ಮೂಲ ಮೌಲ್ಯಗಳಲ್ಲಿ ನ್ಯಾಯೋಚಿತ ವ್ಯವಹಾರವನ್ನು ಅಳವಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ

  • ನಮ್ಮ ಬಳಕೆದಾರರೊಂದಿಗಿನ ಎಲ್ಲಾ ವ್ಯವಹಾರಗಳಲ್ಲಿ ನ್ಯಾಯೋಚಿತವಾದ ವ್ಯಾಪಾರ ವಿಧಾನಗಳ ಕನಿಷ್ಠ ಮಟ್ಟಗಳನ್ನು ನಾವು ಸೆಟ್ ಮಾಡುತ್ತೇವೆ. ನಮ್ಮ ಗ್ರಾಹಕರ ಮಾಹಿತಿಯ ಗೌಪ್ಯತೆಯನ್ನು ರಕ್ಷಿಸುವುದು ಇದರಲ್ಲಿ ಒಳಗೊಂಡಿದೆ; ಮತ್ತು
  • ನಾವು ಗ್ರಾಹಕರ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ನಮ್ಮ ಸಿಬ್ಬಂದಿಗೆ ತಕ್ಷಣ ರಚನಾತ್ಮಕ ಪ್ರತಿಕ್ರಿಯೆಯನ್ನು ಒದಗಿಸುತ್ತೇವೆ.

ನಮ್ಮ ಗ್ರಾಹಕರಿಗೆ ನ್ಯಾಯೋಚಿತವಾದ ನಿಯಮಗಳನ್ನು ವಿಧಿಸುವುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ

  • ನಮ್ಮ ಕರಾರುಗಳು ಅಥವಾ ಒಪ್ಪಂದಗಳಲ್ಲಿನ ನಿಯಮಗಳು ನ್ಯಾಯೋಚಿತವಾಗಿವೆ, ಪಾರದರ್ಶಕವಾಗಿವೆ ಮತ್ತು ಅವುಗಳನ್ನು ನಮ್ಮ ಬಳಕೆದಾರರಿಗೆ ಸೂಕ್ತ ರೀತಿಯಲ್ಲಿ ತಿಳಿಸಲಾಗಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. 
  • ನಿಯಮಗಳು ಮತ್ತು ನಿಬಂಧನೆಗಳಲ್ಲಿ ಆಯಾಯ ಹಕ್ಕುಗಳು, ಬಾಧ್ಯಸ್ಥಿಕೆಗಳು ಮತ್ತು ಹೊಣೆಗಾರಿಕೆಗಳನ್ನು ಸ್ಪಷ್ಟವಾಗಿ ಮತ್ತು ಆದಷ್ಟು ಸರಳ ಭಾಷೆಯಲ್ಲಿ ವಿವರಿಸಲಾಗಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
  • ನಿಯಮಗಳು ಮತ್ತು ನಿಬಂಧನೆಗಳು/ಸೇವಾ ನಿಯಮಗಳಲ್ಲಿ ಯಾವುದೇ ಬದಲಾವಣೆಗಳು ಜಾರಿಯಾಗುವ ಮೊದಲು ನಾವು ಕನಿಷ್ಠ ಇಪ್ಪತ್ತೊಂದು (21) ದಿನಗಳ ಮೊದಲು ಸೂಚನೆ ನೀಡಲು ಬದ್ಧರಾಗಿದ್ದೇವೆ.

ಗ್ರಾಹಕರಿಗೆ ಸ್ಪಷ್ಟವಾದ, ಸೂಕ್ತವಾದ ಮತ್ತು ಸಮಯಕ್ಕೆ ಸರಿಯಾದ ಆರ್ಥಿಕ ಸೇವೆಗಳು ಹಾಗೂ ಉತ್ಪನ್ನಗಳ ಕುರಿತು ಮಾಹಿತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ

  • Play ಬ್ಯಾಲೆನ್ಸ್ ಬಳಕೆದಾರರಿಗೆ ನಾವು Play ಬ್ಯಾಲೆನ್ಸ್ ಕುರಿತು ಸೂಕ್ತವಾದ ಮತ್ತು ಸಮಯಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸುತ್ತೇವೆ;
  • ಈ ಕೆಳಗಿನ ಸಂದರ್ಭಗಳಲ್ಲಿ, Play ಬ್ಯಾಲೆನ್ಸ್ ಖಾತೆಗಳಲ್ಲಿನ ಬ್ಯಾಲೆನ್ಸ್‌ಗಾಗಿ ವಿನಂತಿಯನ್ನು ಸಲ್ಲಿಸಿದ ದಿನಾಂಕದ ನಂತರ 1 ತಿಂಗಳ ಒಳಗಾಗಿ ಮತ್ತು ಯಾವುದೇ ಹೆಚ್ಚುವರಿ ಖರ್ಚಿಲ್ಲದೆ (ಮರುಪಾವತಿಯನ್ನು ಪೂರ್ಣಗೊಳಿಸಲು ಅಗತ್ಯವಿರುವುದನ್ನು ಹೊರತುಪಡಿಸಿ) ನಾವು ಮರುಪಾವತಿಸುತ್ತೇವೆ:
    • ಬಳಕೆದಾರರು ತಮ್ಮ ಖಾತೆಯನ್ನು ಮುಚ್ಚಲು ನಿರ್ಧರಿಸಿದರೆ;
    • ಬಳಕೆದಾರರು ಇನ್ನು ಮುಂದೆ Play ಬ್ಯಾಲೆನ್ಸ್ ಅನ್ನು ಬಳಸಲು ಬಯಸದಿದ್ದರೆ; ಅಥವಾ
    • ತಾಂತ್ರಿಕ ಸಮಸ್ಯೆಗಳಿಂದಾಗಿ ಬಳಕೆದಾರರಿಗೆ ತಪ್ಪಾಗಿ ಶುಲ್ಕ ವಿಧಿಸಿದ್ದರೆ.
  • Play ಬ್ಯಾಲೆನ್ಸ್ ಬಳಕೆದಾರರು ಮಾರಾಟಕ್ಕಿಂತ ಮೊದಲು, ಮಾರಾಟದ ಸಮಯದಲ್ಲಿ ಮತ್ತು ಅದರ ನಂತರ ಮಾಹಿತಿಯುತ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವ ಹಾಗೆ, ಅವರಿಗೆ ಸ್ಪಷ್ಟವಾದ, ಸೂಕ್ತವಾದ ಮತ್ತು ಸಮಯಕ್ಕೆ ಸರಿಯಾದ ಮಾಹಿತಿಯನ್ನು ( ದೂರುಗಳನ್ನು ನಿರ್ವಹಿಸುವ ಕಾರ್ಯವಿಧಾನಗಳನ್ನು ಒಳಗೊಂಡಂತೆ) ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸಹಾಯ ಕೇಂದ್ರದ ಲೇಖನಗಳಲ್ಲಿ ಸೂಕ್ತ ಮಾಹಿತಿ ಲಭ್ಯವಿದೆ.
  • Play ಬ್ಯಾಲೆನ್ಸ್ ಬಳಕೆದಾರರಿಗೆ ನಾವು ಸ್ಪಷ್ಟವಾದ ನಿಯಮಗಳು ಮತ್ತು ನಿಬಂಧನೆಗಳನ್ನು (“T&C”) ಒದಗಿಸುತ್ತೇವೆ ಮತ್ತು ಇವು, ಮರುಪಾವತಿಗಳಿಗಾಗಿ T&C ಜೊತೆಗೆ, ವೆಬ್‌ಸೈಟ್‌ನಲ್ಲಿ ಕಂಪನಿಯ ಸಹಾಯ ಕೇಂದ್ರದಲ್ಲಿ ಲಭ್ಯವಿವೆ.

GPMY ನ ಸಿಬ್ಬಂದಿ, ಪ್ರತಿನಿಧಿಗಳು ಮತ್ತು ಏಜೆಂಟ್‌ಗಳು (ಒಟ್ಟಾಗಿ, "GPMY ಉದ್ಯೋಗಿಗಳು") ಆರ್ಥಿಕ ಗ್ರಾಹಕರೊಂದಿಗೆ ವ್ಯವಹರಿಸುವಾಗ ಸೂಕ್ತ ಕಾಳಜಿ, ಕೌಶಲ್ಯ ಮತ್ತು ಉದ್ಯಮಶೀಲತೆಯನ್ನು ಬಳಸುವುದನ್ನು ಖಚಿತಪಡಿಸಲು ನಾವು ಬದ್ಧರಾಗಿದ್ದೇವೆ

  • ಆರ್ಥಿಕ ಗ್ರಾಹಕರೊಂದಿಗೆ ನಾವು ಪ್ರಾಮಾಣಿಕವಾಗಿ ವ್ಯವಹರಿಸುತ್ತೇವೆ ಮತ್ತು ಸುಳ್ಳು ಅಥವಾ ಉತ್ಪ್ರೇಕ್ಷೆಯ ಪ್ರತಿಪಾದನೆಗಳನ್ನು ಮಾಡುವುದಿಲ್ಲ;
  • Play ಬ್ಯಾಲೆನ್ಸ್ ಬಳಕೆದಾರರ ವಿಷಯದಲ್ಲಿ ನಮ್ಮ ಬದ್ಧತೆಯು, Google ನ ನಡವಳಿಕೆಯ ಸಂಹಿತೆಯಲ್ಲಿ ವಿವರಿಸಿದ ಹಾಗೆ, ತನ್ನ ಬಳಕೆದಾರರಿಗಾಗಿ Google ನ ಬದ್ಧತೆಗಳನ್ನು ಪ್ರತಿಬಿಂಬಿಸುತ್ತದೆ.

ಆರ್ಥಿಕ ಗ್ರಾಹಕರ ದೂರುಗಳು ಹಾಗೂ ಕ್ಲೇಮ್‌ಗಳನ್ನು ಕ್ಷಿಪ್ರ, ನ್ಯಾಯೋಚಿತ ಮತ್ತು ಪರಿಣಾಮಕಾರಿಯಾದ ರೀತಿಯಲ್ಲಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ

  • ಈ ವಿಷಯಗಳ ಕುರಿತು ನಾವು ಬದ್ಧರಾಗಿದ್ದೇವೆ: ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು; ದೂರನ್ನು ಕೂಲಂಕಷವಾಗಿ ತನಿಖೆ ಮಾಡಲು; ಮತ್ತು ಆರ್ಥಿಕ ಗ್ರಾಹಕರಿಗೆ ಪ್ರತಿಕ್ರಿಯೆ ನೀಡುವಾಗ, ಕೈಗೊಂಡ ನಿರ್ಧಾರಕ್ಕೆ ಆಧಾರವನ್ನು ವಿವರಿಸಲು.
  • ಸುರಕ್ಷಿತ ಕಾರ್ಯಾಚರಣೆಗಳು, ಗ್ರಾಹಕರ ಮಾಹಿತಿಯ ಗೌಪ್ಯತೆ, ವಿಶ್ವಾಸಾರ್ಹವಾದ ಮತ್ತು ಗುಣಮಟ್ಟದ ಸೇವೆಗಳು, ಉತ್ಪನ್ನ ಹಾಗೂ ಸೇವೆಯ ಪಾರದರ್ಶಕತೆ ಮತ್ತು ವಿಚಾರಣೆಗಳು, ದೂರುಗಳು, ಮರುಪಾವತಿ ಮತ್ತು ವಿವಾದಗಳ ಕುರಿತಾದ ವಿಚಾರಣೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ;
  • ದೂರನ್ನು ಸ್ವೀಕರಿಸಿದ ನಂತರ, ನಾವು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ. ಅಂತಿಮ ಫಲಿತಾಂಶದ ಕುರಿತು ಗ್ರಾಹಕರಿಗೆ ತೃಪ್ತಿಯಾಗದಿದ್ದರೆ, ಓಂಬುಡ್ಸ್‌ಮ್ಯಾನ್ ಫಾರ್ ಫೈನಾನ್ಶಿಯಲ್ ಸರ್ವೀಸಸ್‌ನ ಲಭ್ಯತೆಯ ಕುರಿತು ನಾವು ಗ್ರಾಹಕರಿಗೆ ತಿಳಿಸುತ್ತೇವೆ.
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10248522500042887675
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
84680
false
false