YouTube Shorts ರಚನೆಕಾರರ ಸಮುದಾಯವನ್ನು ಸೇರಿಕೊಳ್ಳಿ

YouTube Shorts ರಚನೆಕಾರರ ಸಮುದಾಯದಲ್ಲಿರುವ ರಚನೆಕಾರರು, Shorts ಅನ್ನು ನ್ಯಾವಿಗೇಟ್ ಮಾಡಲು ಗೈಡ್ ಆಗಿ ನೆರವು ನೀಡುವ YouTube Shorts ಸಮುದಾಯ ಪಾಲುದಾರ ವ್ಯವಸ್ಥಾಪಕರಿಗೆ (CPM) ಆ್ಯಕ್ಸೆಸ್ ಪಡೆಯುತ್ತಾರೆ.

YouTube Shorts ಸಮುದಾಯ ಪಾಲುದಾರ ವ್ಯವಸ್ಥಾಪಕರು ಎಂದರೆ ಯಾರು?

Shorts ರಚನೆಕಾರರ ಸಮುದಾಯಕ್ಕೆ ವಿಷಯಗಳನ್ನು ಕಲಿಸುವುದು, ಉನ್ನತೀಕರಿಸುವುದು ಮತ್ತು ವರ್ಧಿಸುವುದು YouTube Shorts ಸಮುದಾಯ ಪಾಲುದಾರ ವ್ಯವಸ್ಥಾಪಕರ ಗುರಿಯಾಗಿದೆ – ರಚನೆಕಾರರ ಸಂಪರ್ಕಗಳನ್ನು ವಿಸ್ತರಿಸುವ ಅವಕಾಶಗಳಿಗೆ ಆ್ಯಕ್ಸೆಸ್ ಒದಗಿಸುವುದು, YouTube ಮತ್ತು Shorts ನಲ್ಲಿ ರಚನೆಕಾರರಿಗೆ ಮಾರ್ಗದರ್ಶನ ನೀಡುವುದು ಮತ್ತು ತಮ್ಮ YouTube ಅನುಭವದ ಮೇಲೆ ಹಿಡಿತ ಸಾಧಿಸಲು ರಚನೆಕಾರರನ್ನು ಸಬಲಗೊಳಿಸುವುದು ಅವರ ಉದ್ದೇಶವಾಗಿದೆ.

YouTube ನಲ್ಲಿ ರಚನೆಕಾರರು ಯಶಸ್ವಿಯಾಗಲು YouTube Shorts CPM ಗಳು ಸಹಾಯ ಮಾಡಬಹುದಾದ ವಿಧಾನಗಳಲ್ಲಿ ಇವು ಕೆಲವಷ್ಟೇ ಆಗಿವೆ:

  • ಸ್ಫೂರ್ತಿ ನೀಡುವ ರಚನೆಕಾರರ ಬೆಳೆಯುತ್ತಿರುವ ನೆಟ್‌ವರ್ಕ್‌ಗೆ ಆ್ಯಕ್ಸೆಸ್
  • Shorts ಉತ್ತಮ ಅಭ್ಯಾಸಗಳು, ಹೊಸ ಫೀಚರ್‌ಗಳು ಮತ್ತು ವಿಷಯಾಧಾರಿತ ಸಲಹೆಗಳ ಕುರಿತು ನಿಯಮಿತ ಅಪ್‌ಡೇಟ್‌ಗಳು
  • ರಚನೆಕಾರರ/ಔದ್ಯಮಿಕ ಈವೆಂಟ್‌ಗಳು ಹಾಗೂ ವರ್ಕ್‌ಶಾಪ್‌ಗಳಿಗೆ ವಿಶೇಷ ಆಹ್ವಾನಗಳು
  • ಇತ್ತೀಚಿನ ಉತ್ಪನ್ನ ಫೀಚರ್‌ಗಳು, ಲಾಂಚ್‌ಗಳು ಮತ್ತು ಹೊಸ Shorts ಫೀಚರ್‌ಗಳ ಕುರಿತು ಕಲಿಕೆಯ ಪ್ರಾಯೋಗಿಕ ಆವೃತ್ತಿಗೆ ಪ್ರವೇಶ
  • Shorts ತಂಡದೊಂದಿಗೆ ನೇರವಾಗಿ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುವ ಅವಕಾಶ

YouTube Shorts ರಚನೆಕಾರರ ಸಮುದಾಯವನ್ನು ಯಾರು ಸೇರಿಕೊಳ್ಳಬಹುದು?

YouTube Shorts CPM ಸಮುದಾಯವು ಸಕ್ರಿಯ ರಚನೆಕಾರರ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವವರಿಗೆ ಇದನ್ನು ಒದಗಿಸಲಾಗುತ್ತದೆ. ಸಮುದಾಯದಲ್ಲಿನ Shorts ರಚನೆಕಾರರು, Shorts ಅನ್ನು ರಚಿಸುತ್ತಾ ಇರುವವರೆಗೆ ಮತ್ತು ಅರ್ಹತೆಯ ಮಾನದಂಡಗಳನ್ನು ಪಾಲಿಸುವವರೆಗೆ ಇದರಲ್ಲಿರಬಹುದು. Shorts ರಚನೆಕಾರರು ಸಕ್ರಿಯವಾಗಿ Shorts ಅನ್ನು ರಚಿಸುತ್ತಿಲ್ಲ ಅಥವಾ ನಮ್ಮ ಅರ್ಹತೆಯ ಮಾನದಂಡಗಳನ್ನು ಪೂರೈಸುತ್ತಿಲ್ಲ ಎಂದಾದರೆ, ಅವರು ಸಮುದಾಯಕ್ಕೆ ಆ್ಯಕ್ಸೆಸ್ ಕಳೆದುಕೊಳ್ಳಬಹುದು.

ಸಾಮಾನ್ಯವಾಗಿ ಹೇಳುವುದಾದರೆ, ನಾವು ಈ ರೀತಿಯ ಚಾನಲ್‌ಗಳೊಂದಿಗೆ ಕೆಲಸ ಮಾಡುತ್ತೇವೆ:

  • Shorts ಸಮುದಾಯ ಪಾಲುದಾರ ವ್ಯವಸ್ಥಾಪಕರು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ಇರುವ ಅಥವಾ ಗಮನ ಕೇಂದ್ರೀಕರಿಸುವವರು
  • ಮೊದಲ ಬಾರಿಗೆ ಶಾರ್ಟ್-ಫಾರ್ಮ್ ವೀಡಿಯೊ ರಚಿಸುತ್ತಿರುವವರು
  • Shorts ನಲ್ಲಿ ಸಕ್ರಿಯಯವಾಗಿ ಪೋಸ್ಟ್ ಮಾಡುವವರು
  • ಬೆಳವಣಿಗೆಯ ಸಾಮರ್ಥ್ಯ ಹೊಂದಿರುವವರು
  • ಯಾವುದೇ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿರದವರು
  • ಒಂದಕ್ಕಿಂತ ಹೆಚ್ಚು, ಬಗೆಹರಿಯದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಹೊಂದಿರದವರು
  • Shorts ಮಾನಿಟೈಸೇಶನ್ ನೀತಿಗಳೊಂದಿಗೆ ಹೊಂದಿಕೆಯಾಗುವವರು
  • ನಮ್ಮ ಜಾಹೀರಾತುದಾರ-ಸ್ನೇಹಿ ಮಾರ್ಗಸೂಚಿಗಳನ್ನು ಅನುಸರಿಸುವವರು
  • ಸಮುದಾಯ ಈವೆಂಟ್‌ಗಳು, ಕಾರ್ಯಾಗಾರಗಳು ಮತ್ತು ಇಂತಹ ತೊಡಗಿಸಿಕೊಳ್ಳುವಿಕೆಗಳಲ್ಲಿ ಭಾಗವಹಿಸುವಾಗ, ಪಾಲ್ಗೊಳ್ಳುತ್ತಿರುವ ಎಲ್ಲಾ ರಚನೆಕಾರರು ಮತ್ತು ಸಮುದಾಯ ಪಾಲುದಾರ ವ್ಯವಸ್ಥಾಪಕರ ಕುರಿತು ಗೌರವಯುತವಾಗಿ ನಡೆದುಕೊಳ್ಳುವವರು

ನಮ್ಮ YouTube Shorts ರಚನೆಕಾರರ ಸಮುದಾಯಕ್ಕೆ ಆಹ್ವಾನದ ಮೂಲಕವೇ ಪ್ರವೇಶ ಪಡೆಯಬಹುದು. ಆಹ್ವಾನಕ್ಕಾಗಿ ಅರ್ಜಿ ಸಲ್ಲಿಸಲು, YouTube ರಚನೆಕಾರರ ಸೈಟ್‌ನಲ್ಲಿ ನಮ್ಮ ಪುಟಕ್ಕೆ ಹೋಗಿ.

YouTube Shorts ಸಮುದಾಯದ ಕುರಿತು ಇನ್ನಷ್ಟು ತಿಳಿಯಿರಿ

YouTube Shorts CPM ಸಮುದಾಯಕ್ಕೆ ಯಾವ ದೇಶಗಳು/ಪ್ರದೇಶಗಳು ಅರ್ಹವಾಗಿವೆ?

  • ಅರ್ಜೆಂಟಿನಾ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬಹರೈನ್
  • ಬೆಲ್ಜಿಯಂ
  • ಬೊಲಿವಿಯಾ
  • ಬ್ರೆಝಿಲ್
  • ಕೆನಡಾ
  • ಚಿಲಿ
  • ಕೊಲಂಬಿಯಾ
  • ಕೋಸ್ಟ ರಿಕಾ
  • ಕ್ಯೂಬಾ
  • ಡೆನ್ಮಾರ್ಕ್
  • ಡೊಮಿನಿಕನ್ ರಿಪಬ್ಲಿಕ್
  • ಈಕ್ವಡೋರ್
  • ಈಜಿಪ್ಟ್
  • ಎಲ್ ಸಾಲ್ವಡೋರ್
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಜರ್ಮನಿ
  • ಘಾನಾ
  • ಗ್ವಾಟೆಮಾಲಾ
  • ಹೊಂಡೂರಾಸ್
  • ಭಾರತ
  • ಇಂಡೋನೇಷ್ಯಾ
  • ಇರಾಕ್
  • ಐರ್‌ಲ್ಯಾಂಡ್
  • ಜಪಾನ್
  • ಜೋರ್ಡಾನ್
  • ಕೀನ್ಯಾ
  • ಕುವೈತ್
  • ಲೆಬನಾನ್
  • ಲಿಬಿಯಾ
  • ಲುಕ್ಸೆಂಬರ್ಗ್
  • ಮಲೇಶಿಯಾ
  • ಮೆಕ್ಸಿಕೊ
  • ಮೊರಾಕ್ಕೋ
  • ನಿಕರಾಗುವಾ
  • ನೈಜೀರಿಯಾ
  • ನಾರ್ವೇ
  • ಓಮನ್
  • ಪಾಕಿಸ್ತಾನ
  • ಪನಾಮಾ
  • ಪರಾಗ್ವೇ
  • ಪೆರು
  • ಫಿಲಿಫೈನ್ಸ್
  • ಪ್ಯುರ್ಟೋ ರಿಕೊ
  • ಕತಾರ್
  • ಸೌದಿ ಅರೇಬಿಯಾ
  • ಸಿಂಗಾಪುರ
  • ದಕ್ಷಿಣ ಆಫ್ರಿಕಾ
  • ದಕ್ಷಿಣ ಕೊರಿಯಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ಥಾಯ್ಲೆಂಡ್
  • ದಿ ನೆದರ್‌ಲ್ಯಾಂಡ್ಸ್
  • ಟ್ಯುನೀಸಿಯಾ
  • ಟರ್ಕಿ
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಯುನೈಟೆಡ್ ಕಿಂಗ್‌ಡಮ್
  • ಯುನೈಟೆಡ್ ಸ್ಟೇಟ್ಸ್
  • ಉರುಗ್ವೆ
  • ವೆನಿಜುವೆಲಾ
  • ವಿಯೆಟ್ನಾಂ

YouTube Shorts ಸಮುದಾಯ ಪಾಲುದಾರ ವ್ಯವಸ್ಥಾಪಕರಿಗಾಗಿ ಏನಾದರೂ ವೆಚ್ಚವಾಗುತ್ತದೆಯೇ?

ಇಲ್ಲ, Shorts ಸಮುದಾಯ ಪಾಲುದಾರ ವ್ಯವಸ್ಥಾಪಕರ ಸೇವೆಯನ್ನು ನಿಮಗೆ ಯಾವುದೇ ವೆಚ್ಚವಿಲ್ಲದೆ ಒದಗಿಸಲಾಗುತ್ತದೆ.

YouTube Shorts ಸಮುದಾಯ ಪಾಲುದಾರ ವ್ಯವಸ್ಥಾಪಕರು ಮತ್ತು ಪಾಲುದಾರ ವ್ಯವಸ್ಥಾಪಕರ ನಡುವೆ ಯಾವುದೇ ವ್ಯತ್ಯಾಸವಿದೆಯೇ?

YouTube Shorts CPM ಸಮುದಾಯ ಮತ್ತು YouTube ಪಾಲುದಾರ ವ್ಯವಸ್ಥಾಪಕರ ಪ್ರೋಗ್ರಾಂ ಎಂಬುದು ಅನನ್ಯ ಆಯ್ಕೆಯ ಮಾನದಂಡ ಮತ್ತು ಸೇವೆಯನ್ನು ಒದಗಿಸುವ ಎರಡು ವಿಭಿನ್ನ ಪ್ರೋಗ್ರಾಂಗಳಾಗಿವೆ.

YouTube Shorts CPM ಸಮುದಾಯವು ತ್ವರಿತವಾಗಿ ಪ್ರಗತಿ ಹೊಂದುತ್ತಿರುವ Shorts ರಚನೆಕಾರರ ದೊಡ್ಡ ಸಮುದಾಯವನ್ನು ನಿರ್ವಹಿಸುತ್ತಿದೆ. ಪಾಲುದಾರ ವ್ಯವಸ್ಥಾಪಕರ ಪ್ರೋಗ್ರಾಂ, ಪ್ರತ್ಯೇಕ ರಚನೆಕಾರರನ್ನು ಒನ್-ಆನ್-ಒನ್ ವೈಯಕ್ತಿಕ YouTube ತಜ್ಞರೆಂದು ಬೆಂಬಲಿಸುತ್ತದೆ.

ನಾನು ಅರ್ಹತೆ ಹೊಂದಿಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ನಾನೇನು ಮಾಡಬೇಕು?

ಚಿಂತಿಸಬೇಡಿ! ನಿಮ್ಮ ಚಾನಲ್ ಅನ್ನು ಅಭಿವೃದ್ಧಿಪಡಿಸುವುದಕ್ಕಾಗಿ ನೀವು ಬಳಸಬಹುದಾದ ಇನ್ನೂ ಅನೇಕ ಸಂಪನ್ಮೂಲಗಳಿವೆ:

ನಾನು ಸ್ವೀಕರಿಸುತ್ತಿರುವ ಇಮೇಲ್‌ಗಳು ನಿಜಕ್ಕೂ YouTube ನಿಂದ ಬರುತ್ತಿವೆ ಎಂಬುದು ನನಗೆ ಹೇಗೆ ತಿಳಿಯುತ್ತದೆ?

ರಚನೆಕಾರರು ತಮ್ಮ ಚಾನಲ್‌ನ ಕುರಿತು ಅನೇಕ ಇಮೇಲ್‌ಗಳನ್ನು ಪಡೆಯುತ್ತಾರೆ ಎಂಬುದು ನಮಗೆ ತಿಳಿದಿದೆ. ಇಮೇಲ್ ನಿಜವಾಗಿಯೂ YouTube ತಂಡದಿಂದಲೇ ಬಂದಿದೆಯೇ ಎಂಬುದನ್ನು ಪರಿಶೀಲಿಸಲು ನೀವು ಹೀಗೆ ಮಾಡಬಹುದು:

  • ಇಮೇಲ್ ಡೊಮೇನ್ ಅನ್ನು ಪರಿಶೀಲಿಸಿ: ಇಮೇಲ್, @google.com, @youtube.com, ಅಥವಾ @partnerships.withyoutube.com email ವಿಳಾಸದಿಂದ ಬಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. YouTube ಅಥವಾ Google ನಿಂದ ಬಂದಿದೆ ಎಂಬುದಾಗಿ ಪ್ರತಿಪಾದಿಸುವ, ಇತರ ಯಾವುದೇ ಡೊಮೇನ್‌ಗಳಿಂದ ಬರುವ ಇಮೇಲ್‌ಗಳು ನಕಲಿಯಾಗಿರುವ ಸಾಧ್ಯತೆಯಿದೆ.
  • ಲಿಂಕ್‌ಗಳನ್ನು ಪರಿಶೀಲಿಸಿ: ಇಮೇಲ್‌ಗಳಲ್ಲಿ ಒಳಗೊಂಡಿರುವ ಲಿಂಕ್‌ಗಳು ಅಥವಾ ಫಾರ್ಮ್‌ಗಳ URL, youtube.com, withgoogle.com, withyoutube.com, youtube.secure.force.com, ಅಥವಾ youtube.force.com ಎಂಬುದಾಗಿ ಕೊನೆಗೂಳ್ಳುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14815629442219845349
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false