ಪಾವತಿಸಿದ ಸದಸ್ಯತ್ವದ ಬಿಲ್ಲಿಂಗ್ ಅಥವಾ ಆ್ಯಕ್ಸೆಸ್ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ನಿರಾಕರಿಸಿದರೆ, ನಾವು ನಿಮಗೆ ಇಮೇಲ್ ಮೂಲಕ ತಿಳಿಸುತ್ತೇವೆ, ಇದರಿಂದ ನಿಮ್ಮ ಸದಸ್ಯತ್ವವನ್ನು ನೀವು ಮರುಸ್ಥಾಪಿಸಬಹುದು.

ಈ ಇಮೇಲ್ ಅನ್ನು ಪಡೆದ ನಂತರ:

  • ನಿಮ್ಮ ಪಾವತಿಸಿದ ಸದಸ್ಯತ್ವದ ಪ್ರಯೋಜನಗಳಿಗೆ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುವ ಮೊದಲು ಸಮಸ್ಯೆಯನ್ನು ಪರಿಹರಿಸಲು ನೀವು 3 ದಿನಗಳ ಕಾಲಾವಕಾಶವನ್ನು ಹೊಂದಿರುತ್ತೀರಿ. ಈ 3 ದಿನಗಳ ಅವಧಿಯಲ್ಲಿ, ನಿಮ್ಮ ಮಾಸಿಕ ಪಾವತಿಯನ್ನು ಪ್ರಾಸೆಸ್ ಮಾಡಲು ನಾವು ಪ್ರತಿದಿನ ಮರು-ಪ್ರಯತ್ನ ಮಾಡುತ್ತೇವೆ.

  • 3 ದಿನಗಳ ನಂತರವೂ ನಿಮಗೆ ಯಶಸ್ವಿಯಾಗಿ ಶುಲ್ಕ ವಿಧಿಸಲು ನಮಗೆ ಸಾಧ್ಯವಾಗದಿದ್ದರೆ, ನಿಮ್ಮ ಸಬ್‌ಸ್ಕ್ರಿಪ್ಶನ್ 30 ದಿನಗಳವರೆಗೆ "ವಿರಾಮಗೊಳಿಸಲಾಗಿದೆ" ಎಂಬ ಸ್ಥಿತಿಯನ್ನು ಪ್ರವೇಶಿಸುತ್ತದೆ. ಈ ವಿರಾಮದ ಸ್ಥಿತಿಯಲ್ಲಿ, ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ನೀವು ರದ್ದುಗೊಳಿಸದೆ ಇದ್ದರೆ, ನಿಮ್ಮ ಸದಸ್ಯತ್ವ ಆ್ಯಕ್ಸೆಸ್ ಅನ್ನು ಮರುಸ್ಥಾಪಿಸಲು ನಾವು ನಿಯತಕಾಲಿಕವಾಗಿ ಪಾವತಿಯನ್ನು ಪ್ರಾಸೆಸ್ ಮಾಡಲು ಪ್ರಯತ್ನಿಸುತ್ತೇವೆ.

ಈ ಸಮಯದಲ್ಲಿ ನಿಮ್ಮ ಪಾವತಿ ಮಾಹಿತಿಯನ್ನು ನೀವು ಅಪ್‌ಡೇಟ್ ಮಾಡಿದರೆ, ನಿಮ್ಮ ಪಾವತಿ ವಿಧಾನಕ್ಕೆ ಶುಲ್ಕ ವಿಧಿಸುವ ನಮ್ಮ ಮುಂದಿನ ಪ್ರಯತ್ನದಲ್ಲಿ ನಿಮ್ಮ ಸದಸ್ಯತ್ವವನ್ನು ಸ್ವಯಂಚಾಲಿತವಾಗಿ ಮರುಸ್ಥಾಪಿಸಲಾಗುತ್ತದೆ. ಒಂದು ವೇಳೆ ನೀವು ಸಿಸ್ಟಂ ಮರುಪ್ರಯತ್ನಿಸುವವರೆಗೆ ಕಾಯಲು ಬಯಸದಿದ್ದರೆ, ನಿಮ್ಮ ಸಬ್‌ಸ್ಕ್ರಿಪ್ಶನ್ ಅನ್ನು ನೀವು ರದ್ದುಗೊಳಿಸಬಹುದು ಮತ್ತು ಈಗಿನಿಂದಲೇ ಆ್ಯಕ್ಸೆಸ್ ಪಡೆಯಲು ಮರು-ಸೈನ್ ಅಪ್ ಮಾಡಬಹುದು.

Fix billing issues with a Premium membership

ಪಾವತಿಸಿದ ಸದಸ್ಯತ್ವಕ್ಕಾಗಿ ನಿಮಗೆ ಶುಲ್ಕ ವಿಧಿಸಲಾಗಿದೆ ಎಂದು ನೀವು ಭಾವಿಸಿದ್ದರೆ ಹಾಗೂ ನಿಮ್ಮ ಪ್ರಯೋಜನಗಳನ್ನು ಆ್ಯಕ್ಸೆಸ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಈ ಲೇಖನವನ್ನು ಪರಿಶೀಲಿಸಿ.

YouTube ಶುಲ್ಕವನ್ನು ಟ್ರಬಲ್‌ಶೂಟ್ ಮಾಡಿ

ಟ್ರಬಲ್‌ಶೂಟ್ ಮಾಡಲು ಅಥವಾ ನಿಮ್ಮ YouTube ಬಿಲ್ ಕುರಿತು ತಿಳಿಯಲು ಕೆಳಗಿನ ಬಟನ್ ಕ್ಲಿಕ್ ಮಾಡಿ.

YouTube ಶುಲ್ಕವನ್ನು ಟ್ರಬಲ್‌ಶೂಟ್ ಮಾಡಿ

ಪಾವತಿಸಿದ ಸದಸ್ಯತ್ವಕ್ಕಾಗಿ ನಿಮ್ಮ ಪಾವತಿಯನ್ನು ನಿರಾಕರಿಸಿದರೆ, ಬಹುಶಃ ನಿಮ್ಮ ಪಾವತಿ ವಿಧಾನದಲ್ಲಿನ ಸಮಸ್ಯೆಯನ್ನು ನೀವು ಸರಿಪಡಿಸಬೇಕಾಗುತ್ತದೆ. ಈ ಸಮಸ್ಯೆಗಳನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ನಮ್ಮ ಸಲಹೆಗಳನ್ನು ಈ ಕೆಳಗೆ ನೀಡಿದ್ದೇವೆ.

ನಿರಾಕರಿಸಲಾದ ಪಾವತಿಯನ್ನು ಸರಿಪಡಿಸಿ

ನಿಮ್ಮ ಕಾರ್ಡ್ ಅಥವಾ ಇತರ ರೀತಿಯ ಪಾವತಿಯ ಸಮಸ್ಯೆಯಿಂದಾಗಿ ನಿಮ್ಮ ಮಾಸಿಕ ಸದಸ್ಯತ್ವ ಪಾವತಿಯನ್ನು ನಿರಾಕರಿಸಿರಬಹುದು. ಒಮ್ಮೆ ನೀವು ಯಾವುದೇ ಪಾವತಿ ಸಮಸ್ಯೆಗಳನ್ನು ಸರಿಪಡಿಸಿದರೆ, ಸಿಸ್ಟಮ್ ಸ್ವಯಂಚಾಲಿತವಾಗಿ ನಿಮಗೆ ಮತ್ತೆ ಶುಲ್ಕ ವಿಧಿಸಲು ಪ್ರಯತ್ನಿಸುತ್ತದೆ ಮತ್ತು ನಿಮ್ಮ ಸದಸ್ಯತ್ವ ಪ್ರಯೋಜನಗಳಿಗೆ ನಿಮ್ಮ ಆ್ಯಕ್ಸೆಸ್ ಅನ್ನುಮರುಸ್ಥಾಪಿಸುತ್ತದೆ.

ನಿಮ್ಮ ಮಾಹಿತಿ ಅಪ್‌ ಟು ಡೇಟ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ

ಈಗಲೇ ಅಪ್‌ಡೇಟ್ ಮಾಡಿ                

ಅವಧಿ ಮೀರಿದ ಕ್ರೆಡಿಟ್ ಕಾರ್ಡ್ ಅಥವಾ ತಪ್ಪಾದ ಬಿಲ್ಲಿಂಗ್ ವಿಳಾಸದಿಂದಾಗಿ ಪಾವತಿಗಳು ಸಾಮಾನ್ಯವಾಗಿ ವಿಫಲವಾಗುತ್ತವೆ. ಈ ಮಾಹಿತಿಯನ್ನು ಅಪ್‌ಡೇಟ್ ಮಾಡಲು:

  1. ನೀವು ಕಂಪ್ಯೂಟರ್‌ನಲ್ಲಿ ಅಪ್‌ಡೇಟ್ ಮಾಡಲು, ಈ ಪುಟಕ್ಕೆ ಭೇಟಿ ನೀಡಿ youtube.com/paid_memberships . ನೀವು YouTube ಮೊಬೈಲ್ ಆ್ಯಪ್‌ ಬಳಸುತ್ತಿದ್ದರೆ, ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ  ನಂತರ ಖರೀದಿಗಳು ಮತ್ತು ಸದಸ್ಯತ್ವಗಳು.
  2. "ಪ್ರಸ್ತುತ ಪಾವತಿ ವಿಧಾನವನ್ನು ಪ್ರಾಸೆಸ್ ಮಾಡಲು ಸಾಧ್ಯವಿಲ್ಲ" ಎಂಬ ಸಂದೇಶದ ಪಕ್ಕದಲ್ಲಿ  ಕ್ಲಿಕ್ ಮಾಡಿ.
  3. ಪಾವತಿ ವಿಧಾನವನ್ನು ಅಪ್‍ಡೇಟ್ ಮಾಡಿ ಅನ್ನು ಕ್ಲಿಕ್ ಮಾಡಿ.

ಅವಧಿ ಮೀರುವ ದಿನಾಂಕ ಸೇರಿದಂತೆ ನಿಮ್ಮ ಎಲ್ಲಾ ಕಾರ್ಡ್ ಮಾಹಿತಿಯು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಪಾವತಿ ವಿಧಾನಕ್ಕಾಗಿ ಪಟ್ಟಿ ಮಾಡಲಾದ ಪಿನ್ ಕೋಡ್ ನಿಮ್ಮ ಕಾರ್ಡ್‌ನ ಪ್ರಸ್ತುತ ಬಿಲ್ಲಿಂಗ್ ವಿಳಾಸದ ಪಿನ್ ಕೋಡ್‌ಗೆ ಹೊಂದಾಣಿಕೆಯಾಗಬೇಕು.

ಫೈಲ್‌ನಲ್ಲಿ ನಿಮ್ಮ ಪಾವತಿ ವಿಧಾನವನ್ನು ಇನ್ನು ಮುಂದೆ ಬಳಸಲಾಗದಿದ್ದರೆ, ಇನ್ನೊಂದು ಪಾವತಿ ವಿಧಾನವನ್ನು ಸೇರಿಸಿ ಅಥವಾ ಆಯ್ಕೆಮಾಡಿ.

ಸಲಹೆ: ಪಾವತಿ ವಿಧಾನವನ್ನು ಅಪ್‌ಡೇಟ್ ಮಾಡಿ" ಆಯ್ಕೆಯನ್ನು ನೀವು ನೋಡದಿದ್ದರೆ, ನೀವು Google Pay ನ ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಸೇವೆಗಳ ಪುಟದಲ್ಲಿ ಅಪ್‌ಡೇಟ್ ಮಾಡಬಹುದು.

ಯಾವುದೇ ವಿನಂತಿಸಿದ ಮಾಹಿತಿಯನ್ನು ಸಲ್ಲಿಸಿ

ನೀವು Google ಗೆ ಹೆಚ್ಚಿನ ಮಾಹಿತಿಯನ್ನು ಸಲ್ಲಿಸಿ ಎಂದು ವಿನಂತಿಸುವ ದೋಷ ಸಂದೇಶವನ್ನು ನೀವು ನೋಡಿದರೆ, ಆ ವಿವರಗಳನ್ನು ಸಲ್ಲಿಸಲು ಸೂಚನೆಗಳನ್ನು ಅನುಸರಿಸಿ. ಉದಾಹರಣೆಗೆ, ನಿಮ್ಮ Google ಖಾತೆಯನ್ನು ಬಳಸಿಕೊಂಡು ನೀವು ಖರೀದಿಯನ್ನು ಮಾಡುವ ಮೊದಲು Google Pay ನಲ್ಲಿ ನಿಮ್ಮ ಗುರುತನ್ನು ಪರಿಶೀಲಿಸಬೇಕಾಗಬಹುದು.

ಖಾತೆ ಸಮಸ್ಯೆಗಳನ್ನು ಸರಿಪಡಿಸಲು ಅಲರ್ಟ್‌ಗಳು ಅಥವಾ ವಿನಂತಿಗಳಿಗಾಗಿ ನೀವು ಯಾವುದೇ ಸಮಯದಲ್ಲಿ Google Pay ಅನ್ನು ಸಹ ಪರಿಶೀಲಿಸಬಹುದು.

ಖರೀದಿಗೆ ಬೇಕಾದಷ್ಟು ಹಣವನ್ನು ನೀವು ಹೊಂದಿರುವಿರಾ ಎಂಬುದನ್ನು ಪರಿಶೀಲಿಸಿ

ಕೆಲವೊಮ್ಮೆ ಖರೀದಿಗೆ ಬೇಕಾದಷ್ಟು ಹಣವಿಲ್ಲದ ಕಾರಣ ವಹಿವಾಟು ನಿರಾಕರಿಸಲ್ಪಡುತ್ತದೆ. ಖರೀದಿಯನ್ನು ಪೂರ್ಣಗೊಳಿಸಲು ನೀವು ಬೇಕಾದಷ್ಟು ಹಣವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಖಾತೆಯನ್ನು ಪರಿಶೀಲಿಸಿ.

ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ವಿತರಕರನ್ನು ಸಂಪರ್ಕಿಸಿ

ನಿಮ್ಮ ಕಾರ್ಡ್ ನಿರ್ದಿಷ್ಟ ನಿರ್ಬಂಧಗಳನ್ನು ಹೊಂದಿರಬಹುದು, ಅವು ನಿಮ್ಮ ಪಾವತಿಯು ವಿಫಲವಾಗುವಂತೆ ಮಾಡಬಹುದು. ವಹಿವಾಟಿನ ಕುರಿತು ತಿಳಿಯಲು ನಿಮ್ಮ ಕಾರ್ಡ್ ಅನ್ನು ವಿತರಿಸಿದ ಬ್ಯಾಂಕ್ ಅಥವಾ ಕಂಪನಿಯನ್ನು ಸಂಪರ್ಕಿಸಿ.

ಬೇರೆ ಪಾವತಿ ವಿಧಾನದೊಂದಿಗೆ ಪಾವತಿಸಲು ಪ್ರಯತ್ನಿಸಿ 

ಈಗಲೇ ಅಪ್‌ಡೇಟ್ ಮಾಡಿ

ಈ ಹಂತಗಳನ್ನು ಅನುಸರಿಸುವ ಮೂಲಕ ನೀವು ಇನ್ನೊಂದು ಪಾವತಿ ವಿಧಾನಕ್ಕೆ ಬದಲಾಯಿಸಲು ಪ್ರಯತ್ನಿಸಬಹುದು:

  1. ಒಂದು ವೇಳೆ ನೀವು ಕಂಪ್ಯೂಟರ್ ಬಳಸುತ್ತಿದ್ದರೆ, youtube.com/paid_memberships ಪುಟಕ್ಕೆ ಭೇಟಿ ನೀಡಿ. ನೀವು YouTube ಮೊಬೈಲ್ ಆ್ಯಪ್ ಬಳಸುತ್ತಿದ್ದರೆ, ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ  ನಂತರ ಖರೀದಿಗಳು ಮತ್ತು ಸದಸ್ಯತ್ವಗಳು.
  2. "ಪ್ರಸ್ತುತ ಪಾವತಿ ವಿಧಾನವನ್ನು ಪ್ರಾಸೆಸ್ ಮಾಡಲಾಗಲಿಲ್ಲ" ಎಂಬ ಸಂದೇಶದ ಮುಂದಿನ ಐಕಾನ್ ಅನ್ನು ಕ್ಲಿಕ್ ಮಾಡಿ.
  3. ಪಾವತಿ ವಿಧಾನವನ್ನು ಅಪ್‍ಡೇಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  4. ಬೇರೆ ಪಾವತಿ ವಿಧಾನವನ್ನು ಆಯ್ಕೆಮಾಡಿ.

ಶುಲ್ಕ ವಿಧಿಸಿದ ನಂತರ ಪ್ರಯೋಜನಗಳನ್ನು ಆ್ಯಕ್ಸೆಸ್ ಮಾಡುವುದಕ್ಕೆ ಇರುವ ಸಮಸ್ಯೆಗಳನ್ನು ಸರಿಪಡಿಸಿ

ನೀವು ಖರೀದಿಯನ್ನು ಮಾಡಿದ್ದರೂ ನೀವು ಖರೀದಿಸಿದ್ದಕ್ಕೆ ಆ್ಯಕ್ಸೆಸ್ ಅನ್ನು ಹೊಂದಿಲ್ಲದಿದ್ದರೆ, ಶುಲ್ಕವನ್ನು ಇನ್ನೂ ಪ್ರಾಸೆಸ್ ಮಾಡುತ್ತಿರುವ ಸಾಧ್ಯತೆಯಿದೆ. ಶುಲ್ಕವನ್ನು ನಿರಾಕರಿಸಿದರೆ ನೀವು ಆ್ಯಕ್ಸೆಸ್ ಅನ್ನು ಹೊಂದಿಲ್ಲದಿರಬಹುದು.

ದೃಢೀಕರಣ ತಡೆಹಿಡಿದವುಗಳು ಮತ್ತು ಬಾಕಿಯಿರುವ ವಹಿವಾಟುಗಳ ಕುರಿತು

Google Pay ಅಥವಾ ನಿಮ್ಮ ಕಾರ್ಡ್ ಸ್ಟೇಟ್‌ಮೆಂಟ್‌ನಲ್ಲಿ ಬಾಕಿ ಉಳಿದಿರುವ ಶುಲ್ಕಗಳು ದೃಢೀಕರಣ ತಡೆಹಿಡಿದವುಗಳಾಗಿವೆ, ಅವನ್ನು ಇನ್ನೂ ಪ್ರಾಸೆಸ್ ಮಾಡಲಾಗಲಿಲ್ಲ.

ಅದೇ ಸಬ್‌ಸ್ಕ್ರಿಪ್ಶನ್ ಪಾವತಿಗಾಗಿ ಕೆಲವು ಬಾಕಿ ಉಳಿದಿರುವ ಶುಲ್ಕಗಳನ್ನು ನೀವು ನೋಡಬಹುದು, ಏಕೆಂದರೆ ಪ್ರತಿ ಬಾಕಿಯಿರುವ ಶುಲ್ಕವು ದೃಢೀಕರಣ ಪ್ರಯತ್ನವನ್ನು ಪ್ರತಿನಿಧಿಸುತ್ತದೆ. ಒಂದು ಶುಲ್ಕವನ್ನು ಪ್ರಾಸೆಸ್ ಮಾಡುವ ಬದಲು "ಬಾಕಿ" ಇದ್ದಲ್ಲಿ, ಅದಕ್ಕಾಗಿ ನಿಮಗೆ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು ಪಾವತಿಗಾಗಿ ಯಾವುದೇ ವಿಫಲ ಕಾರ್ಡ್ ದೃಢೀಕರಣ ಪ್ರಯತ್ನಗಳು ನಿಮ್ಮ ಸ್ಟೇಟ್‌ಮೆಂಟ್‌ಗಳಿಂದ ತಾವಾಗಿಯೇ ಡ್ರಾಪ್ ಆಗುತ್ತವೆ ಮತ್ತು ಅವನ್ನು ನಿಮಗೆ ಬಿಲ್ ಮಾಡಲಾಗುವುದಿಲ್ಲ.

ಬಾಕಿ ಇರುವ ಶುಲ್ಕವನ್ನು ಹೇಗೆ ಪರಿಶೀಲಿಸುವುದು

  • ನಿಮ್ಮ ಬಿಲ್ಲಿಂಗ್ ಸ್ಟೇಟ್‌ಮೆಂಟ್ ಅಥವಾ Google Pay ಅನ್ನು ಪರಿಶೀಲಿಸಿ. ನೀವು Google Pay ನಲ್ಲಿನ ವಹಿವಾಟಿನ ಮೇಲೆ ಕ್ಲಿಕ್ ಮಾಡಿದರೆ, ನೀವು ಖರೀದಿಯನ್ನು ಪೂರ್ಣಗೊಳಿಸುವ ಬದಲು "ಬಾಕಿಯಿರುವ" ಶುಲ್ಕ ಎಂದು ಪಟ್ಟಿ ಮಾಡಿರುವುದನ್ನು ನೋಡುತ್ತೀರಿ.
  • ಇಮೇಲ್ ರಸೀದಿಗಾಗಿ ಹುಡುಕಿ. ಶುಲ್ಕವನ್ನು ಪ್ರಾಸೆಸ್ ಮಾಡಿದರೆ, ನೀವು YouTube ನಿಂದ ಇಮೇಲ್ ರಸೀದಿಯನ್ನು ಪಡೆಯುತ್ತೀರಿ.
  • ಖಾತೆ ಸಮಸ್ಯೆಗಳನ್ನು ಸರಿಪಡಿಸಲು ಅಲರ್ಟ್‌ಗಳು ಅಥವಾ ವಿನಂತಿಗಳಿಗಾಗಿ ನೀವು ಯಾವುದೇ ಸಮಯದಲ್ಲಿ Google Pay ಅನ್ನು ಸಹ ಪರಿಶೀಲಿಸಬಹುದು. ಉದಾಹರಣೆಗೆ, ನಿಮ್ಮ Google ಖಾತೆಯನ್ನು ಬಳಸಿಕೊಂಡು ಖರೀದಿಸುವ ಮೊದಲು ನೀವು Google Pay ನಲ್ಲಿ ನಿಮ್ಮ ಗುರುತನ್ನು ಪರಿಶೀಲಿಸಬೇಕಾಗಬಹುದು. Google Pay ನಲ್ಲಿ ಯಾವುದೇ ಅಲರ್ಟ್‍ಗಳು ಇಲ್ಲದಿದ್ದರೆ, ಈ ಬಾಕಿಯಿರುವ ಶುಲ್ಕವು 1-14 ವ್ಯವಹಾರದ ದಿನಗಳೊಳಗೆ ಹೊರಟು ಹೋಗಬೇಕು ಅಥವಾ ಪಾವತಿಯನ್ನು ನಿರಾಕರಿಸಿದಾಗ ಕಣ್ಮರೆಯಾಗಬೇಕು. ಈ ಸಮಯದ ನಂತರವೂ ನೀವು ಬಾಕಿಯಿರುವ ಶುಲ್ಕವನ್ನು ನೋಡುತ್ತಿದ್ದರೆ, ನಿಮ್ಮ ಪಾವತಿ ನೀಡುವವರನ್ನು ಸಂಪರ್ಕಿಸಿ.

ನಿರಾಕರಿಸಲಾದ ಶುಲ್ಕವನ್ನು ಹೇಗೆ ಪರಿಶೀಲಿಸುವುದು

Google Pay ನಲ್ಲಿ ನಿಮ್ಮ ಖರೀದಿಯ ಸ್ಥಿತಿಯನ್ನು ನೀವು ಎರಡು ಬಾರಿ ಪರಿಶೀಲಿಸಬಹುದು. Google Pay ವಹಿವಾಟಿನ ಸ್ಥಿತಿಯನ್ನು "ನಿರಾಕರಿಸಲಾಗಿದೆ" ಎಂದು ತೋರಿಸಬೇಕು. ನಿರಾಕರಿಸಲಾದ ಪಾವತಿಯನ್ನು ಹೇಗೆ ಸರಿಪಡಿಸುವುದು ಎಂಬುದರ ಕುರಿತು ಮೇಲಿನ ವಿಭಾಗದಲ್ಲಿ ನಮ್ಮ ಸಲಹೆಗಳನ್ನು ನೋಡಿ.
ನಿಮ್ಮ ಬಿಲ್ಲಿಂಗ್ ಸ್ಟೇಟ್‌ಮೆಂಟ್ ಇನ್ನೂ "ಬಾಕಿ ಉಳಿದಿದೆ" ಎಂದು ತೋರಿಸುತ್ತಿದ್ದರೆ, ಈ ಶುಲ್ಕವು 1-14 ವ್ಯಾವಹಾರಿಕ ದಿನಗಳಲ್ಲಿ ಹೊರಟು ಹೋಗಿಬಿಡಬೇಕು ಅಥವಾ ಅದನ್ನು ನಿರಾಕರಿಸಿದರೆ ಕಣ್ಮರೆಯಾಗಬೇಕು. ಈ ಸಮಯದ ನಂತರವೂ ನೀವು ಬಾಕಿಯಿರುವ ಶುಲ್ಕವನ್ನು ನೋಡುತ್ತಿದ್ದರೆ, ನಿಮ್ಮ ಪಾವತಿ ನೀಡುವವರನ್ನು ಸಂಪರ್ಕಿಸಿ.

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
ಕಂಪ್ಯೂಟರ್‌ Android
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12378439541688338968
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false