ನಿಮ್ಮ ಮೊಬೈಲ್ ಪೂರೈಕೆದಾರರ (ನೇರ ವಾಹಕ ಬಿಲ್ಲಿಂಗ್) ಮೂಲಕ ಪಾವತಿಸುವ ಸಮಸ್ಯೆಗಳನ್ನು ನಿವಾರಿಸಿ

ನಿಮ್ಮ ಮೊಬೈಲ್ ಫೋನ್ ವಾಹಕದ ಮೂಲಕ ಬಿಲ್ ಮಾಡಲಾದ ಖರೀದಿಯಲ್ಲಿ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಸಮಸ್ಯೆ ನಿವಾರಣೆ ಸಲಹೆಗಳನ್ನು ಪ್ರಯತ್ನಿಸಿ.

ಮೊದಲ ಬಾರಿ ನೇರ ವಾಹಕ ಬಿಲ್ಲಿಂಗ್ ಮಾಡುತ್ತಿರುವ ಗ್ರಾಹಕರಿಗೆ ಸಲಹೆಗಳು

ವಾಹಕ ಬಿಲ್ಲಿಂಗ್ ಅನ್ನು ಬಳಸಿಕೊಂಡು ಖರೀದಿ ಮಾಡುವಾಗ ನಿಮಗೆ ಸಮಸ್ಯೆ ಕಂಡು ಬಂದರೆ, ಈ ಅಂಶಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಪ್ರಾರಂಭಿಸಿ ಎಂದು ನಾವು ಶಿಫಾರಸು ಮಾಡುತ್ತೇವೆ:

  • YouTube ನಲ್ಲಿ ವಾಹಕ ಬಿಲ್ಲಿಂಗ್ ಅನ್ನು ನೀವು ಮೊದಲ ಬಾರಿಗೆ ಬಳಸುತ್ತಿದ್ದರೆ, ನಿಮ್ಮ ವಾಹಕ ನೆಟ್‌ವರ್ಕ್‌ಗೆ ನೀವು ಸಂಪರ್ಕಗೊಂಡಿರಬೇಕು.
  • ನೀವು YouTube ಆ್ಯಪ್ ಅನ್ನು ಬಳಸುತ್ತಿರಬೇಕು, ಮೊಬೈಲ್ ಬ್ರೌಸರ್ ಅಥವಾ ಕಂಪ್ಯೂಟರ್ ಅನ್ನು ಅಲ್ಲ.

ನಿಮ್ಮ ಸಾಧನವನ್ನು ಆಫ್ ಮಾಡಲು ಪ್ರಯತ್ನಿಸಿ, ಕೆಲವು ಸೆಕೆಂಡುಗಳ ಕಾಲ ಕಾಯಿರಿ ಮತ್ತು ನಂತರ ಅದನ್ನು ಮತ್ತೆ ಆನ್ ಮಾಡಿ ಎಂದು ನಾವು ಶಿಫಾರಸು ಮಾಡುತ್ತೇವೆ. ನಿಮ್ಮ ಸಾಧನವನ್ನು ಆನ್ ಮಾಡಿದ ನಂತರ, ನಿಮ್ಮ ಖರೀದಿಯನ್ನು ಮರು-ಪ್ರಯತ್ನಿಸಿ.

ಹೆಚ್ಚುವರಿ ಟ್ರಬಲ್‌ಶೂಟಿಂಗ್ ಸಲಹೆಗಳು

ನೀವು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ:

  • ನೀವು ವೈಯಕ್ತಿಕ ಖಾತೆಯನ್ನು ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ಕೆಲವು ಕಂಪನಿಗಳು ಕಾರ್ಪೊರೇಟ್ ಖಾತೆಗಳಲ್ಲಿ ವಾಹಕ ಬಿಲ್ಲಿಂಗ್ ಅನ್ನು ನಿರ್ಬಂಧಿಸಬಹುದು.
  • ನೀವು ರೂಟ್ ಮಾಡಿದ ಸಾಧನವನ್ನು ಬಳಸುತ್ತಿಲ್ಲ ಎಂದು ದೃಢೀಕರಿಸಿ.
  • ನೀವು ಡ್ಯುಯಲ್ ಸಿಮ್ ಕಾರ್ಡ್‌ಗಳನ್ನು ಹೊಂದಿರುವ ಸಾಧನವನ್ನು ಬಳಸಿದರೆ, ಸರಿಯಾದ ಸಿಮ್ ಕಾರ್ಡ್ ಅನ್ನು ಸ್ಲಾಟ್ 1 ರಲ್ಲಿ ಇರಿಸಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ ಮತ್ತು ಸ್ಲಾಟ್ 2 ಅನ್ನು ಖಾಲಿ ಬಿಡಿ.

ನಿಮ್ಮ ವಾಹಕ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ

ಮೇಲಿನ ಯಾವುದೇ ಸಲಹೆಗಳು ನಿಮ್ಮ ಸಮಸ್ಯೆಯನ್ನು ಪರಿಹರಿಸದಿದ್ದರೆ, ನಿಮ್ಮ ಸೇವೆಯ ಮೇಲೆ ಪರಿಣಾಮ ಬೀರುವಂತಹ ಕೆಲವು ವಾಹಕ ಸೆಟ್ಟಿಂಗ್‌ಗಳಿರುತ್ತವೆ. ನಿಮ್ಮ ವಾಹಕದ ಬಳಿ ಈ ಅಂಶಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ:

  • ನಿಮ್ಮ ವಾಹಕದಿಂದ ಮಾಸಿಕ ಖರ್ಚು ಮೊತ್ತ ಅಥವಾ ವೈಯಕ್ತಿಕ ಖರೀದಿ ಬೆಲೆಗಳಿಗೆ ಸಂಬಂಧಿಸಿದಂತೆ ನೀವು ಯಾವುದೇ ಕ್ಯಾಪ್ ಸೆಟ್ ಅನ್ನು ಪೂರೈಸಿಲ್ಲ (ಆ ಮಿತಿಗಳನ್ನು ತಲುಪಿದಾಗ, ಬಿಲ್ಲಿಂಗ್ ಆಯ್ಕೆಯು ಕಣ್ಮರೆಯಾಗುತ್ತದೆ).
  • ನೀವು ಪ್ರಿ-ಪೇಯ್ಡ್ ಪ್ಲಾನ್ ಬಳಸುತ್ತಿದ್ದರೆ, ಖರೀದಿ ಮೊತ್ತಕ್ಕೆ ಬೇಕಾಗುವಷ್ಟು ಬ್ಯಾಲೆನ್ಸ್ ಅನ್ನು ನೀವು ಹೊಂದಿರುವಿರೆ ಎಂದು ಪರಿಶೀಲಿಸಿ.
  • ನಿಮ್ಮ ಸಾಧನ ಮತ್ತು ಸೇವಾ ಪ್ಲಾನ್ ಪ್ರೀಮಿಯಂ ಕಂಟೆಂಟ್ ಖರೀದಿಗಳನ್ನು ಅನುಮತಿಸುತ್ತದೆಯೇ.
  • ನಿಮ್ಮ ಸಾಧನವು ಮೊಬೈಲ್ ಫೋನ್ ಬಿಲ್ಲಿಂಗ್ ಅನ್ನು ಬಳಸಬಹುದೇ.

ನೀವು ಈ ಹಂತಗಳನ್ನು ಪ್ರಯತ್ನಿಸಿದ್ದರೆ ಮತ್ತು ಇನ್ನೂ ಸಮಸ್ಯೆಗಳು ಬಗೆಹರಿಯದಿದ್ದರೆ, ಹೆಚ್ಚಿನ ಸಹಾಯಕ್ಕಾಗಿ ನಿಮ್ಮ ಮೊಬೈಲ್ ಫೋನ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.

ಮೊಬೈಲ್ ಫೋನ್ ವಾಹಕದ ಮೂಲಕ ಬಿಲ್ ಮಾಡಲಾದ ಅಸ್ತಿತ್ವದಲ್ಲಿರುವ ಸದಸ್ಯತ್ವಗಳ ಕುರಿತು ಸಲಹೆಗಳು

24 ಜನವರಿ 2023 ರಿಂದ ಕೆನಡಾದಲ್ಲಿ ಮರುಕಳಿಸುವ ಪಾವತಿಸಿದ ಸದಸ್ಯತ್ವಗಳಿಗೆ Rogers Communications ಇನ್ನು ಮುಂದೆ ಸ್ವೀಕರಾರ್ಹ ಪಾವತಿ ವಿಧಾನವಾಗಿರುವುದಿಲ್ಲ. ನೀವು Rogers Communications ಮೂಲಕ YouTube Premium, YouTube Music Premium ಅಥವಾ ಚಾನಲ್ ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡಿದ್ದರೆ, ನಿಮ್ಮ ಪಾವತಿ ವಿಧಾನವನ್ನು ಸ್ವೀಕಾರಾರ್ಹ ಪಾವತಿ ವಿಧಾನಗಳಲ್ಲಿ ಯಾವುದಾದರೂ ಒಂದು ವಿಧಾನಕ್ಕೆ ಅಪ್‌ಡೇಟ್ ಮಾಡಿ.

ನೀವು YouTube ಪಾವತಿಸಿದ ಸದಸ್ಯತ್ವಕ್ಕಾಗಿ ಪಾವತಿಸಲು ನೇರ ವಾಹಕ ಬಿಲ್ಲಿಂಗ್ ಅನ್ನು ಬಳಸುತ್ತಿದ್ದರೆ ಮತ್ತು ಪಾವತಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ನಿರಾಕರಣೆಯ ಕಾರಣವನ್ನು ತಿಳಿಯಲು ನಿಮ್ಮ ವಾಹಕವನ್ನು ಸಂಪರ್ಕಿಸಿ. ನಿಮ್ಮ ಖಾತೆಯಲ್ಲಿ ಸಮಸ್ಯೆಯಿರಬಹುದು, ಉದಾಹರಣೆಗೆ ಖರ್ಚು ಮಿತಿಯನ್ನು ಮೀರಿರಬಹುದು.

ನಿಮ್ಮ ವಾಹಕ ಖಾತೆಯಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೆ, ಅದನ್ನು ಪಾವತಿ ವಿಧಾನವಾಗಿ ತೆಗೆದುಹಾಕಲು ಹಾಗೂ ಮರು-ಸೇರಿಸಲು ಪ್ರಯತ್ನಿಸಿ:

  1. ನಿಮ್ಮ Google Pay ನಲ್ಲಿ ನಿಮ್ಮ ಪಾವತಿ ವಿಧಾನಗಳ ಪುಟಕ್ಕೆ ಹೋಗಿ ಮತ್ತು ವಾಹಕ ಬಿಲ್ಲಿಂಗ್ ಪಾವತಿ ವಿಧಾನವನ್ನು ತೆಗೆದುಹಾಕಿ. ಗಮನಿಸಿ: ಪ್ರಸ್ತುತ ಯಾವುದೇ ಸಕ್ರಿಯ ಸದಸ್ಯತ್ವಗಳಿಗಾಗಿ ನೀವು ಈ ಪಾವತಿ ವಿಧಾನವನ್ನು ಬಳಸುತ್ತಿದ್ದರೆ ನಿಮ್ಮ ಖಾತೆಯಿಂದ ವಾಹಕ ಬಿಲ್ಲಿಂಗ್ ಅನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ.
  2. YouTube ಆ್ಯಪ್‌ಗೆ ಹೋಗಿ ಮತ್ತು ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ .
  3. ಖರೀದಿಗಳು ಮತ್ತು ಸದಸ್ಯತ್ವಗಳು ಅನ್ನು ಟ್ಯಾಪ್ ಮಾಡಿ ಮತ್ತು ಸೈನ್ ಅಪ್ ಪ್ರಕ್ರಿಯೆಯನ್ನು ಮತ್ತೊಮ್ಮೆ ಪೂರ್ಣಗೊಳಿಸಿ.

ಕ್ಯಾರಿಯರ್ ಬಿಲ್ಲಿಂಗ್ ಅನ್ನು ಮರು-ಸೇರಿಸುವಾಗ ನಿಮಗೆ ಸಮಸ್ಯೆಗಳು ಕಂಡು ಬಂದರೆ, ಮೊದಲ ಬಾರಿಗೆ ಬಳಸುತ್ತಿರುವ ಬಳಕೆದಾರರಾದವರು ಸಮಸ್ಯೆ ನಿವಾರಣೆಯ ಮೇಲೆ ತಿಳಿಸಲಾದ ಸಲಹೆಗಳನ್ನು ಪ್ರಯತ್ನಿಸಿ.

ಇವುಗಳಿಂದ ನಿಮಗೆ ಉಪಯೋಗವಾಗದಿದ್ದರೆ, ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ನಿಮ್ಮ ಮೊಬೈಲ್ ಫೋನ್ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15097423710418262524
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false