ಲೈವ್ ಸ್ಟ್ರೀಮ್‌ಗಳಲ್ಲಿ Content ID ಹೊಂದಾಣಿಕೆಯನ್ನು ಬಳಸಿ

 

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನೈಜ ಸಮಯದಲ್ಲಿ ನಡೆಯುತ್ತಿರುವ ತಮ್ಮ ಲೈವ್ ಸ್ಟ್ರೀಮ್‌ಗಳ ನಕಲುಗಳನ್ನು ಹುಡುಕಲು, ಕೆಲವು ಪಾಲುದಾರರು Content ID ಹೊಂದಾಣಿಕೆಯನ್ನು ಬಳಸಬಹುದು. ಕಂಟೆಂಟ್ ಮ್ಯಾನೇಜರ್ ಮಟ್ಟದಲ್ಲಿ ಲೈವ್ Content ID ಹೊಂದಾಣಿಕೆಗೆ ಆ್ಯಕ್ಸೆಸ್ ನೀಡಲಾಗಿದೆ. ಆದಾಗ್ಯೂ, ಹೊಂದಾಣಿಕೆಯನ್ನು ವೈಯಕ್ತಿಕ ಚಾನಲ್ ಸ್ಟ್ರೀಮಿಂಗ್ ಮೂಲಕ ಮಾತ್ರ ಆನ್ ಮಾಡಬಹುದಾಗಿದೆ ಮತ್ತು ನಿರ್ವಹಿಸಬಹುದಾಗಿದೆ.

ನಿಮ್ಮ ಲೈವ್ ಸ್ಟ್ರೀಮಿಂಗ್‌ಗಾಗಿ Content ID ಹೊಂದಾಣಿಕೆಯನ್ನು ಆನ್ ಮಾಡಿ

ನೀವು ಪ್ರಾರಂಭಿಸುವ ಮೊದಲು, ಈವೆಂಟ್ ಅನ್ನು ಲೈವ್ ಸ್ಟ್ರೀಮಿಂಗ್ ಮಾಡುವ ಯಾವುದೇ ದೃಢೀಕೃತ ಚಾನಲ್ ಅನ್ನು ನಿಮ್ಮ ಅನುಮತಿ ಪಟ್ಟಿಗೆ ಸೇರಿಸಲು ಮರೆಯದಿರಿ.

Content ID ಹೊಂದಾಣಿಕೆಯ ಜೊತೆಗೆ ನಿಮ್ಮ ಲೈವ್ ಸ್ಟ್ರೀಮ್ ಪ್ರಾರಂಭಿಸಲು:

  1. YouTube Studio ಗೆ ಸೈನ್ ಮಾಡಿ ಮತ್ತು ರಚಿಸಿ ನಂತರ ಲೈವ್ ಹೋಗಿ ಆಯ್ಕೆಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸ್ಟ್ರೀಮ್ ಮಾಡಿ ಕ್ಲಿಕ್ ಮಾಡಿ.
  3. ಹೊಸ ಲೈವ್ ಈವೆಂಟ್ ಕ್ಲಿಕ್ ಮಾಡಿ.
  4. ಮಾನಿಟೈಸೇಶನ್ ಟ್ಯಾಬ್ ಆಯ್ಕೆಮಾಡಿ.
  5. “ಬಳಕೆಯ ನೀತಿ” ಅಡಿಯಲ್ಲಿ, ನಿಮ್ಮ ಲೈವ್ ಸ್ಟ್ರೀಮ್‌ಗೆ ಸಂಬಂಧಿಸಿದ ನೀತಿಯನ್ನು ಆಯ್ಕೆಮಾಡಿ.
  6. “Content ID ಹೊಂದಾಣಿಕೆಗಳು” ಕೆಳಗಿರುವ ಬಾಕ್ಸ್ ಟಿಕ್ ಮಾಡಿ ಮತ್ತು ಹೊಂದಿಕೆ ನೀತಿಯನ್ನು ನಿರ್ಬಂಧಿಸಿ ಅಥವಾ ಮಾನಿಟೈಸ್ ಮಾಡಿ ಎಂಬುದನ್ನು ಆಯ್ಕೆಮಾಡಿ. ಗಮನಿಸಿ: ಕೆಲವು ನೀತಿಗಳು ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ ಅಥವಾ ಲೈವ್ Content ID ಹೊಂದಾಣಿಕೆಯ ಜೊತೆಗೆ ಬಳಸಲಾಗುವುದಿಲ್ಲ. ಕೆಳಗೆ ವಿವರಗಳನ್ನು ನೋಡಿ.
  7. ನಿಮ್ಮ ಸ್ವತ್ತಿನ ಕುರಿತಾದ ವಿವರಗಳನ್ನು ನಮೂದಿಸಿ. ವೆಬ್ ಅನ್ನು ನಿಮ್ಮ ಸ್ವತ್ತಿನ ಪ್ರಕಾರ ಎಂಬಂತೆ ಆಯ್ಕೆಮಾಡಿ.
  8. ನಿಮ್ಮ ಲೈವ್ ಸ್ಟ್ರೀಮ್‌ಗೆ ಸಂಬಂಧಿಸಿದ ಉಳಿದ ವಿವರಗಳನ್ನು ಸೇರಿಸಿ ಮತ್ತು ಸ್ಟ್ರೀಮಿಂಗ್ ಪ್ರಾರಂಭಿಸಿ.

ಲೈವ್ ಸ್ಟ್ರೀಮ್‌ಗಳನ್ನು ರಚಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ನೀತಿಗಳು ಲೈವ್ ಸ್ಟ್ರೀಮ್‌ಗಳ ಜೊತೆಗೆ ಹೇಗೆ ಕಾರ್ಯನಿರ್ವಹಿಸುತ್ತವೆ?

ನಿಮ್ಮ ಲೈವ್ ಸ್ಟ್ರೀಮ್‌ನ ನಕಲುಗಳನ್ನು ಟ್ರ್ಯಾಕ್ ಮಾಡಲಾಗುವುದಿಲ್ಲ ಅಥವಾ ಮಾನಿಟೈಸ್ ಮಾಡಲಾಗುವುದಿಲ್ಲ. ನೀವು ಹೊಂದಿಕೆ ನೀತಿಯನ್ನು ಮಾನಿಟೈಸ್ ಮಾಡಬಹುದು ಅಥವಾ ನಿರ್ಬಂಧಿಸಬಹುದು, ಆದರೆ ಈ ಎರಡೂ ಆಯ್ಕೆಗಳು ಲೈವ್ ಸ್ಟ್ರೀಮ್ ಕುರಿತು ಎಚ್ಚರಿಕೆಗಳನ್ನು ನೀಡುವುದಕ್ಕೆ ಮತ್ತು ಅಂತಿಮವಾಗಿ ತೆಗೆದುಹಾಕುವುದಕ್ಕೆ ಕಾರಣವಾಗಬಹುದು. ಲೈವ್ ಸ್ಟ್ರೀಮ್‌ಗಳಲ್ಲಿ Content ID ಹೊಂದಾಣಿಕೆಗಾಗಿ ಟ್ರ್ಯಾಕ್ ನೀತಿಗಳು ಕಾರ್ಯನಿರ್ವಹಿಸುವುದಿಲ್ಲ.

ಹೆಚ್ಚುವರಿಯಾಗಿ, ಕಂಟೆಂಟ್‌ಗಳನ್ನು ಪರಿಶೀಲನೆಗಾಗಿ ನಿರ್ದೇಶಿಸುವ ನೀತಿಗಳು ಮತ್ತು ವೀಡಿಯೊ ಹೊಂದಾಣಿಕೆಯ ಶೇಕಡಾವಾರು ಷರತ್ತುಗಳೊಂದಿಗಿನ ನೀತಿಗಳನ್ನು ಲೈವ್ Content ID ಹೊಂದಾಣಿಕೆಯ ಜೊತೆಗೆ ಬಳಸಲಾಗುವುದಿಲ್ಲ.

ಲೈವ್ ಸ್ಟ್ರೀಮ್‌ಗಳಲ್ಲಿ Content ID ಹೊಂದಾಣಿಕೆಗೆ ಸಂಬಂಧಪಟ್ಟ ಅವಶ್ಯಕತೆಗಳು

ಇರಬೇಕಾದ ಅರ್ಹತೆಗಳು

ಲೈವ್ ಸ್ಟ್ರೀಮ್‌ಗಳಲ್ಲಿ Content ID ಹೊಂದಾಣಿಕೆಯನ್ನು ಬಳಸುವುದು ಅತ್ಯಂತ ಸೂಕ್ಷ್ಮ ವಿಷಯವಾಗಿರುತ್ತದೆ ಮತ್ತು ಹಕ್ಕುಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಸಂಕೀರ್ಣತೆಯ ಪದರವನ್ನು ಸೇರಿಸುತ್ತದೆ. ಆ್ಯಕ್ಸೆಸ್ ಪಡೆಯಲು, ನೀವು:

  • ಯಾವುದೇ ಸಮಸ್ಯೆ ಇಲ್ಲದೆಯೇ Content ID ನಿರ್ವಹಿಸುವುದನ್ನು ಸಾಬೀತುಪಡಿಸುವ ದಾಖಲೆಯನ್ನು ಹೊಂದಿರಬೇಕು.
  • ಕ್ರೀಡಾ ಈವೆಂಟ್ ಅಥವಾ ಸಂಗೀತ ಉತ್ಸವದಂತಹ ಸೂಕ್ಷ್ಮ-ಸಮಯದ ಲೈವ್ ಈವೆಂಟ್ ಅನ್ನು ಹೊಂದಿರಬೇಕು.
  • ಬಳಕೆದಾರರು ನಿಮ್ಮ ಕಂಟೆಂಟ್‌ನ ಪ್ರತಿಗಳನ್ನು ಲೈವ್ ಸ್ಟ್ರೀಮ್ ಮಾಡುವ ಹೆಚ್ಚಿನ ಸಂಭವನೀಯತೆಯನ್ನು ಹೊಂದಿರಬೇಕು.

ಆಪರೇಟಿಂಗ್ ಅವಶ್ಯಕತೆಗಳು

ನೀವು ಲೈವ್ ಸ್ಟ್ರೀಮ್‌ಗಳಲ್ಲಿ Content ID ಹೊಂದಾಣಿಕೆಯನ್ನು ಬಳಸಲು ಆ್ಯಕ್ಸೆಸ್ ಹೊಂದಿದ್ದರೆ, ನಿಮ್ಮ ಸ್ಟ್ರೀಮ್ ಈ ಕೆಳಗಿನ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ:

  1. ಜಾಗತಿಕ ಹಕ್ಕುಗಳು: ಲೈವ್ ಸ್ಟ್ರೀಮ್‌ಗಳಿಗಾಗಿ Content ID ಹೊಂದಾಣಿಕೆಯನ್ನು ನೀವು ಜಾಗತಿಕವಾಗಿ ಎಲ್ಲಾ ಪ್ರದೇಶಗಳಲ್ಲಿ ಹಕ್ಕುಗಳನ್ನು ಹೊಂದಿರುವ ಕಂಟೆಂಟ್‌ನಲ್ಲಿ ಮಾತ್ರ ಬಳಸಬಹುದು.
  2. ವಿಶೇಷ ಮಾಲೀಕತ್ವ: ಸ್ಥಿರ ಚಿತ್ರಗಳು, ವಾಣಿಜ್ಯಾತ್ಮಕ ಆ್ಯಡ್‌ಗಳು ಅಥವಾ ಹಿನ್ನೆಲೆ ಸಂಗೀತದಂತಹ ಯಾವುದೇ ಥರ್ಡ್ ಪಾರ್ಟಿ ಕಂಟೆಂಟ್ ಅನ್ನು ನಿಮ್ಮ ಲೈವ್ ಸ್ಟ್ರೀಮ್ ಒಳಗೊಂಡಿರಬಾರದು.

ಲೈವ್ ಸ್ಟ್ರೀಮ್‌ಗಾಗಿ Content ID ಹೊಂದಾಣಿಕೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯಿರಿ

Content ID ಹೊಂದಾಣಿಕೆಯನ್ನು ಬಳಸಿಕೊಂಡು, ನಾವು ನಿಮ್ಮ ಲೈವ್ ಸ್ಟ್ರೀಮ್ ಅನ್ನು ಇತರ ಲೈವ್ ಸ್ಟ್ರೀಮ್‌ಗಳ ಜೊತೆಗೆ ಹೋಲಿಸುತ್ತೇವೆ. ಹೊಂದಾಣಿಕೆ ಕಂಡುಬಂದರೆ:

  • ಪ್ರಾರಂಭಿಕವಾಗಿ, ನಿಮ್ಮ ಕಂಟೆಂಟ್ ಅನ್ನು ಬಳಸುವ ಸ್ಟ್ರೀಮರ್‌ಗೆ ಎಚ್ಚರಿಕೆ ಸಂದೇಶವನ್ನು ತೋರಿಸುತ್ತೇವೆ.
  • ಹೊಂದಾಣಿಕೆ ಮುಂದುವರಿದರೆ, ಅವರ ಸ್ಟ್ರೀಮ್‌ನಲ್ಲಿ ಧ್ವನಿ ಇಲ್ಲದ ಒಂದು ಸ್ಥಿರ ಚಿತ್ರವನ್ನು ಬದಲಾಯಿಸಬಹುದು.
  • ಆ ನಂತರವೂ ಹೊಂದಾಣಿಕೆ ಮುಂದುವರಿದರೆ, ಅವರ ಲೈವ್ ಸ್ಟ್ರೀಮ್ ಅನ್ನು ಕೊನೆಗೊಳಿಸಬಹುದು ಮತ್ತು ಸ್ಟ್ರೀಮ್ ಮಾಡುವ ವ್ಯಕ್ತಿಯು ಲೈವ್ ಫೀಚರ್‌ಗಳಿಗಿರುವ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳಬಹುದು. ಲೈವ್ ಸ್ಟ್ರೀಮ್‌ಗಳಲ್ಲಿ ಕೃತಿಸ್ವಾಮ್ಯ ಸಮಸ್ಯೆಗಳು ಕುರಿತು ಇನ್ನಷ್ಟು ತಿಳಿಯಿರಿ.

ಲೈವ್ Content ID ಹೊಂದಾಣಿಕೆಯನ್ನು ಪ್ರಮಾಣಿತ Content ID ಜೊತೆಗೆ ಹೋಲಿಸಿ ನೋಡಿ

ಲೈವ್ Content ID ಹೊಂದಾಣಿಕೆ ಮತ್ತು ಪ್ರಮಾಣಿತ Content ID ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ.
 

  Live Content ID ಹೊಂದಾಣಿಕೆ ಪ್ರಮಾಣಿತ Content ID 
ಕ್ಲೈಮ್‌ಗಳು ಯಾವುದೇ ಕ್ಲೈಮ್‌ಗಳನ್ನು ರಚಿಸಿಲ್ಲ. ಹೊಂದಾಣಿಕೆ ನೀತಿಗಳನ್ನು ಅನ್ವಯಿಸಲು, ಹೊಂದಾಣಿಕೆ ವೀಡಿಯೊಗಳಲ್ಲಿ ಕ್ಲೈಮ್‌ಗಳನ್ನು ರಚಿಸಲಾಗುವುದು.
Content ID ನಿರ್ವಹಣೆ
 

ವೈಯಕ್ತಿಕ ಚಾನಲ್ ಸ್ಟ್ರೀಮಿಂಗ್‌ನಿಂದ ನಿರ್ವಹಿಸಲಾಗಿದೆ.

ಸ್ಟ್ರೀಮ್ ರಚಿಸಿದ ಬಳಿಕ, ಸೆಟ್ಟಿಂಗ್‌ಗಳನ್ನು ಬದಲಾಯಿಸಲಾಗುವುದಿಲ್ಲ.

ನಿಮ್ಮ ಕಂಟೆಂಟ್ ಮ್ಯಾನೇಜರ್‌ನಿಂದ ಅಥವಾ ವೈಯಕ್ತಿಕ ಚಾನಲ್ ಅಪ್‌ಲೋಡಿಂಗ್‌ನಿಂದ ನಿರ್ವಹಿಸಲಾಗಿದೆ.

ಸೆಟ್ಟಿಂಗ್‌ಗಳನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.

ಜಾರಿ ಸ್ಟ್ರೀಮ್‌ಗೆ ಅಡಚಣೆ ಮಾಡಿ, ಕೊನೆಗೊಳಿಸುವುದಕ್ಕೂ ಮೊದಲು ಸ್ಟ್ರೀಮ್ ಮಾಡುವವರಿಗೆ ಎಚ್ಚರಿಕೆ ಸಂದೇಶಗಳನ್ನು ತೋರಿಸಲಾಗುವುದು. ಹೊಂದಾಣಿಕೆ ಕಂಡುಬಂದಾಗ, ಹೊಂದಾಣಿಕೆ ನೀತಿಗಳು ಸ್ವಯಂಚಾಲಿತವಾಗಿ ಅನ್ವಯವಾಗುತ್ತವೆ.
ನೀತಿಗಳು ಈ ಕೆಳಕಂಡ ನೀತಿ ಪ್ರಕಾರಗಳ ಜೊತೆಗೆ ಕಾರ್ಯನಿರ್ವಹಿಸುವುದಿಲ್ಲ:
  • ಟ್ರ್ಯಾಕ್ ನೀತಿಗಳು
  • ಷರತ್ತುಗಳನ್ನು ಪರಿಶೀಲಿಸಲು ಮಾರ್ಗವನ್ನು ಹೊಂದಿರುವ ನೀತಿಗಳು
  • ವೀಡಿಯೊ ಹೊಂದಾಣಿಕೆ % ಷರತ್ತುಗಳನ್ನು ಹೊಂದಿರುವ ನೀತಿಗಳು
ಎಲ್ಲಾ ಪ್ರಕಾರದ ನೀತಿಗಳ ಜೊತೆಗೆ ಕಾರ್ಯನಿರ್ವಹಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2707486795456176592
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false