ವೀಡಿಯೊ ಚಾಪ್ಟರ್‌ಗಳು

ವೀಡಿಯೊ ಚಾಪ್ಟರ್‌ಗಳು ವೀಡಿಯೊವನ್ನು ವಿಭಾಗಗಳಾಗಿ ವಿಭಜಿಸುತ್ತವೆ, ಪ್ರತಿಯೊಂದೂ ಪ್ರತ್ಯೇಕ ಪ್ರಿವ್ಯೂ ಅನ್ನು ಹೊಂದಿದೆ. ವೀಡಿಯೊ ಚಾಪ್ಟರ್‌ಗಳು, ವೀಡಿಯೊದ ಪ್ರತಿಯೊಂದು ಭಾಗಕ್ಕೆ ಮಾಹಿತಿ ಮತ್ತು ಸಂದರ್ಭವನ್ನು ಸೇರಿಸುತ್ತವೆ ಮತ್ತು ವೀಡಿಯೊದ ವಿವಿಧ ಭಾಗಗಳನ್ನು ಸುಲಭವಾಗಿ ಮರುವೀಕ್ಷಿಸಲು ನಿಮಗೆ ಅವಕಾಶ ನೀಡುತ್ತವೆ. ರಚನೆಕಾರರು ಪ್ರತಿ ಅಪ್‌ಲೋಡ್ ಮಾಡಿದ ವೀಡಿಯೊಗೆ ತಮ್ಮದೇ ಆದ ವೀಡಿಯೊ ಚಾಪ್ಟರ್‌ಗಳನ್ನು ಸೇರಿಸಬಹುದು ಅಥವಾ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳನ್ನು ಅವಲಂಬಿಸಬಹುದು. ಟ್ರಾನ್ಸ್‌ಕ್ರಿಪ್ಟ್‌ಗಳಲ್ಲಿ ಚಾಪ್ಟರ್‌ಗಳು ಕಾಣಿಸಿಕೊಳ್ಳಬಹುದು. YouTube Studio ದಲ್ಲಿ ರಚನೆಕಾರರು ಯಾವಾಗಲೂ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳಿಂದ ಹೊರಗುಳಿಯಲು ಆಯ್ಕೆಮಾಡಬಹುದು.

ಗಮನಿಸಿ: ನೀವು ಇನ್ನೂ ಅಧ್ಯಾಯಗಳಿಗೆ ಆ್ಯಕ್ಸೆಸ್ ಅನ್ನು ಹೊಂದಿಲ್ಲದಿದ್ದರೆ, ಸುಧಾರಿತ ಫೀಚರ್‌ಗಳನ್ನು ಆ್ಯಕ್ಸೆಸ್ ಮಾಡಲು ಅಪ್ಲೈ ಮಾಡಿ.

How to Add Chapters to Your Videos Using Timestamps

ನಿಮ್ಮದೇ ಆದ ವೀಡಿಯೊ ಚಾಪ್ಟರ್‌ಗಳನ್ನು ಸೇರಿಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ವಿವರಣೆಯಲ್ಲಿ, ಟೈಮ್‌ಸ್ಟ್ಯಾಂಪ್‌ಗಳು ಮತ್ತು ಶೀರ್ಷಿಕೆಗಳ ಪಟ್ಟಿಯನ್ನು ಸೇರಿಸಿ.
    • ನೀವು ಪಟ್ಟಿಮಾಡುವ ಮೊದಲ ಟೈಮ್‌ಸ್ಟ್ಯಾಂಪ್ 00:00 ರಿಂದ ಪ್ರಾರಂಭವಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ. 
    • ನಿಮ್ಮ ವೀಡಿಯೊ ಆರೋಹಣ ಕ್ರಮದಲ್ಲಿ ಪಟ್ಟಿ ಮಾಡಲಾದ ಕನಿಷ್ಠ ಮೂರು ಟೈಮ್‌ಸ್ಟ್ಯಾಂಪ್‌ಗಳನ್ನು ಹೊಂದಿರಬೇಕು.
    • ವೀಡಿಯೊ ಚಾಪ್ಟರ್‌ಗಳ ಕನಿಷ್ಠ ಅವಧಿ 10 ಸೆಕೆಂಡ್‌ಗಳು.

 5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಗಮನಿಸಿ: ಈ ಆಯ್ಕೆಯು ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳನ್ನು ಅತಿಕ್ರಮಿಸುತ್ತದೆ.

ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳನ್ನು ಬಳಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್ ಮಾಡಿ ಹಾಗೂ ಸ್ವಯಂಚಾಲಿತ ಚಾಪ್ಟರ್‌ಗಳು ಅಡಿಯಲ್ಲಿ, “ಸ್ವಯಂಚಾಲಿತ ಚಾಪ್ಟರ್‌ಗಳು ಮತ್ತು ಪ್ರಮುಖ ಕ್ಷಣಗಳನ್ನು ಅನುಮತಿಸಿ (ಲಭ್ಯವಿರುವಾಗ ಮತ್ತು ಅರ್ಹವಾದಾಗ)” ಎಂಬುದನ್ನು ಆಯ್ಕೆಮಾಡಿ. ಡೀಫಾಲ್ಟ್ ಆಗಿ, ಎಲ್ಲಾ ಹೊಸ ಅಪ್‌ಲೋಡ್‌ಗಳಿಗಾಗಿ ಈ ಬಾಕ್ಸ್ ಅನ್ನು ಗುರುತು ಮಾಡಲಾಗಿರುತ್ತದೆ.ನೀವು ಬೃಹತ್ ಪ್ರಮಾಣದಲ್ಲಿ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳನ್ನು ಸಹ ಅನುಮತಿಸಬಹುದು.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ಎಲ್ಲಾ ವೀಡಿಯೊಗಳು ಸ್ವಯಂಚಾಲಿತ ಚಾಪ್ಟರ್‌ಗಳಿಗೆ ಅರ್ಹವಾಗಿರುವುದಿಲ್ಲ ಮತ್ತು ಎಲ್ಲಾ ಅರ್ಹ ವೀಡಿಯೊಗಳು ಸ್ವಯಂಚಾಲಿತ ಚಾಪ್ಟರ್‌ಗಳನ್ನು ಹೊಂದಿರುವುದಿಲ್ಲ. ಚಾನಲ್ ಯಾವುದೇ ಸಕ್ರಿಯ ಸ್ಟ್ರೈಕ್‌ಗಳನ್ನು ಹೊಂದಿದ್ದರೆ ಅಥವಾ ಕೆಲವು ವೀಕ್ಷಕರಿಗೆ ಕಂಟೆಂಟ್ ಅನುಚಿತವಾಗಿದ್ದರೆ, ವೀಡಿಯೊ ಚಾಪ್ಟರ್‌ಗಳ ಫೀಚರ್ ಲಭ್ಯವಿರುವುದಿಲ್ಲ.

ನಿರ್ದಿಷ್ಟ ವೀಡಿಯೊಗಾಗಿ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳಿಂದ ಹೊರಗುಳಿಯಲು:

ನಿರ್ದಿಷ್ಟ ವೀಡಿಯೊಗಾಗಿ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳಿಂದ ಹೊರಗುಳಿಯಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್ ಮಾಡಿ ಮತ್ತು ಸ್ವಯಂಚಾಲಿತ ಚಾಪ್ಟರ್‌ಗಳು ಅಡಿಯಲ್ಲಿನ “ಸ್ವಯಂಚಾಲಿತ ಚಾಪ್ಟರ್‌ಗಳನ್ನು ಅನುಮತಿಸಿ (ಲಭ್ಯವಿರುವಾಗ ಮತ್ತು ಅರ್ಹವಾದಾಗ)" ಎಂಬುದರ ಆಯ್ಕೆಯನ್ನು ರದ್ದುಗೊಳಿಸಿ.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.
ಗಮನಿಸಿ: ನೀವು ಬೃಹತ್ ಪ್ರಮಾಣದಲ್ಲಿ ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳಿಂದ ಸಹ ಹೊರಗುಳಿಯಬಹುದು.

ಸ್ವಯಂಚಾಲಿತ ವೀಡಿಯೊ ಚಾಪ್ಟರ್‌ಗಳನ್ನು ಬಳಸುವುದರಿಂದ ಹೊರಗುಳಿಯುವುದಕ್ಕೆ ಆಯ್ಕೆಮಾಡಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  3. ಡೀಫಾಲ್ಟ್‌ಗಳನ್ನು ಅಪ್‌ಲೋಡ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ಸುಧಾರಿತ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ, "ಸ್ವಯಂಚಾಲಿತ ಚಾಪ್ಟರ್‌ಗಳನ್ನು ಅನುಮತಿಸಿ (ಲಭ್ಯವಿರುವಾಗ ಮತ್ತು ಅರ್ಹವಾದಾಗ)" ಎಂದು ಗುರುತಿಸಿರುವುದನ್ನು ತೆಗೆಯಿರಿ.
  5. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11734127506933406660
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false