Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ವರದಿಗಳನ್ನು ಡೌನ್‌ಲೋಡ್ ಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
Studio ಕಂಟೆಂಟ್ ಮ್ಯಾನೇಜರ್‌ನಿಂದ ನಿಮ್ಮ ಅಂತಿಮಗೊಳಿಸಿದ ಆದಾಯ ಮತ್ತು ಕಾರ್ಯಕ್ಷಮತೆಯ ಡೇಟಾದ .CSV ಫೈಲ್‌ಗಳನ್ನು ನೀವು ಡೌನ್‌ಲೋಡ್ ಮಾಡಬಹುದು. ಈ ವರದಿಗಳನ್ನು ಸ್ವಯಂಚಾಲಿತವಾಗಿ ರಚಿಸಲಾಗುತ್ತದೆ ಮತ್ತು 60 ದಿನಗಳವರೆಗೆ ಲಭ್ಯವಿರುತ್ತದೆ. ಡೇಟಾವನ್ನು ನಂತರದ ಬಳಕೆಗಾಗಿ ಉಳಿಸಿಟ್ಟುಕೊಳ್ಳುವ ನೀತಿಗಳನ್ನು ಅನುಸರಿಸಲು 60 ದಿನಗಳ ನಂತರ ವರದಿಗಳನ್ನು ಅಳಿಸಲಾಗುತ್ತದೆ.

ನಿಮ್ಮ ವರದಿಗಳನ್ನು ಡೌನ್‌ಲೋಡ್ ಮಾಡಿ

Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ನಿಮ್ಮ ವರದಿಗಳನ್ನು ಹುಡುಕಲು ಮತ್ತು ಡೌನ್‌ಲೋಡ್ ಮಾಡಲು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ
  2. ಎಡಭಾಗದ ಮೆನುವಿನಿಂದ, ವರದಿಗಳು ಅನ್ನು ಆಯ್ಕೆಮಾಡಿ.
  3. ಪುಟದ ಮೇಲ್ಭಾಗದಲ್ಲಿ, ನೀವು ಡೌನ್‌ಲೋಡ್ ಮಾಡಲು ಬಯಸುವ ವರದಿಯ ಪ್ರಕಾರವನ್ನು ಆಯ್ಕೆಮಾಡಿ. ವರದಿ ಪ್ರಕಾರಗಳ ಕುರಿತು ಇನ್ನಷ್ಟು ತಿಳಿಯಿರಿ.
  4. “ವೀಕ್ಷಿಸಿ” ಎಂಬುದರ ಪಕ್ಕದಲ್ಲಿ, ಸಾಪ್ತಾಹಿಕ ಅಥವಾ ಮಾಸಿಕ ಅನ್ನು ಆರಿಸಿ.
    • ಸಾಪ್ತಾಹಿಕ ವರದಿಗಳು ಡೀಫಾಲ್ಟ್ ಆಗಿ ಕಳೆದ 2 ತಿಂಗಳುಗಳನ್ನು ತೋರಿಸುತ್ತವೆ. 2 ತಿಂಗಳಿಗಿಂತ ಹಳೆಯದಾದ ವರದಿಗಳನ್ನು ನಮ್ಮ ಡೇಟಾಬೇಸ್‌ನಿಂದ ತೆಗೆದುಹಾಕಲಾಗುತ್ತದೆ.
    • ಆದಾಯವನ್ನು ಒಳಗೊಂಡಿರುವ ಮಾಸಿಕ ವರದಿಗಳು ಡೀಫಾಲ್ಟ್ ಆಗಿ ಕಳೆದ 2 ತಿಂಗಳುಗಳನ್ನು ತೋರಿಸುತ್ತವೆ. ವೀಕ್ಷಣೆಯನ್ನು ವಿಸ್ತರಿಸುವ ಮೂಲಕ ಹಿಂದಿನ ತಿಂಗಳುಗಳ ಒಟ್ಟು ಮೊತ್ತವನ್ನು ನೀವು ನೋಡಲು ಸಾಧ್ಯವಾಗುತ್ತದೆ.
  5. ನೀವು ಡೌನ್‌ಲೋಡ್ ಮಾಡಲು ಬಯಸುವ ವರದಿಯ ಆವೃತ್ತಿಯನ್ನು ಆಯ್ಕೆಮಾಡಿ (ಉದಾ. ಆವೃತ್ತಿ 1.0, ಆವೃತ್ತಿ 1.1).
  6. ಡೌನ್‌ಲೋಡ್ ಮಾಡಲು ವರದಿಯ ಹೆಸರನ್ನು ಕ್ಲಿಕ್ ಮಾಡಿ.
Macintosh ಗಾಗಿ Microsoft Excel, UTF-8 ಎನ್‌ಕೋಡಿಂಗ್ ಅನ್ನು ಬೆಂಬಲಿಸುವುದಿಲ್ಲ. ನಿಮ್ಮ ಮೆಟಾಡೇಟಾವು ಯಾವುದೇ ಲ್ಯಾಟಿನ್-ಅಲ್ಲದ ಅಕ್ಷರಗಳನ್ನು ಒಳಗೊಂಡಿದ್ದರೆ, Google Sheets ನಂತಹ ವಿಭಿನ್ನ ಸ್ಪ್ರೆಡ್‌ಶೀಟ್ ಅಪ್ಲಿಕೇಶನ್ ಅನ್ನು ಬಳಸಿ.

ಲಭ್ಯವಿರುವ ವರದಿಗಳು

ಹಣಕಾಸಿನ ಸಾರಾಂಶ

"ಹಣಕಾಸಿನ ಸಾರಾಂಶ" ಟ್ಯಾಬ್ ಪಾವತಿ ಸಾರಾಂಶ ವರದಿಯನ್ನು ಒಳಗೊಂಡಿದೆ. ಈ ವರದಿಯು ನಿಮ್ಮ ಆದಾಯ ಮತ್ತು ಅಡ್ಜಸ್ಟ್‌ಮೆಂಟ್‌ಗಳ ಅವಲೋಕನವನ್ನು ಒದಗಿಸುತ್ತದೆ. ಇದನ್ನು ಸಾಮಾನ್ಯವಾಗಿ ಪ್ರತಿ ತಿಂಗಳ 17ನೇ ತಾರೀಖಿನ ನಂತರ ಪ್ರಕಟಿಸಲಾಗುತ್ತದೆ.

ಪಾವತಿ ಸಾರಾಂಶ ವರದಿ
ವರದಿ ಹೆಸರು ವಿವರಣೆ
ಪಾವತಿ ಸಾರಾಂಶ ಪಾವತಿಗಳ ಸಾರಾಂಶ ವರದಿಯು ಆದಾಯದ ಪ್ರಕಾರವನ್ನು (ಉದಾ., ಜಾಹೀರಾತುಗಳು, ಸಬ್‌ಸ್ಕ್ರಿಪ್ಶನ್‌ಗಳು, ವಹಿವಾಟು) ಆಧರಿಸಿ ವಿಭಜಿಸಲಾಗಿರುವ ನಿಮ್ಮ ಒಟ್ಟು ಆದಾಯವನ್ನು ತೋರಿಸುತ್ತದೆ. ಇದು ಅಡ್ಜಸ್ಟ್‌ಮೆಂಟ್‌ಗಳನ್ನು ಸಹ ಒಳಗೊಂಡಿದೆ. ಒಟ್ಟು ಆದಾಯವನ್ನು USD ಮತ್ತು ನಿಮ್ಮ ಪಾವತಿಯ ಕರೆನ್ಸಿಯಲ್ಲಿ ವರದಿ ಮಾಡಲಾಗುತ್ತದೆ.

ಹಣಕಾಸು ವರದಿಗಳು

ಈ ವರದಿಗಳು ಅಂತಿಮ ಆದಾಯದ ಡೇಟಾವನ್ನು ಒಳಗೊಂಡಿರುತ್ತವೆ ಮತ್ತು ಸಾಮಾನ್ಯವಾಗಿ ಪ್ರತಿ ತಿಂಗಳ 10ನೇ ಮತ್ತು 14ನೇ ತಾರೀಖಿನ ನಡುವೆ ಪ್ರಕಟಿಸಲಾಗುತ್ತದೆ.

ಹಣಕಾಸು ವರದಿಗಳು
ವರದಿ ಹೆಸರು ವಿವರಣೆ
ಜಾಹೀರಾತುಗಳಿಂದ ಆದಾಯ

ಜಾಹೀರಾತುಗಳ ಆದಾಯ ವರದಿಯು ಜಾಹೀರಾತು-ಬೆಂಬಲಿತ ವೀಡಿಯೊಗಳಿಗೆ ಸಂಬಂಧಿಸಿದ ಆದಾಯ ಮತ್ತು ವೀಕ್ಷಣೆಗಳನ್ನು ಒಳಗೊಂಡಿದೆ.

ಸಬ್‌ಸ್ಕ್ರಿಪ್ಶನ್‌ಗಳ ಆದಾಯ ಸಬ್‌ಸ್ಕ್ರಿಪ್ಶನ್ ಆದಾಯ ವರದಿಯು YouTube Music, Google Play ಸಂಗೀತ, ಹಾಗೂ YouTube Premium ನಿಂದ ಪಡೆದ ಆದಾಯವನ್ನು ಒಳಗೊಂಡಿದೆ.
ವಹಿವಾಟುಗಳ ಆದಾಯ 

ವಹಿವಾಟುಗಳ ಆದಾಯ ವರದಿಯು ಬಾಡಿಗೆ ಚಲನಚಿತ್ರಗಳು (EST) ಹಾಗೂ ಬಾಡಿಗೆ ವೀಡಿಯೊಗಳಿಂದ (VOD) ಪಡೆದ ಆದಾಯವನ್ನು ಒಳಗೊಂಡಿದೆ.

ವಹಿವಾಟುಗಳ ಆದಾಯ ವರದಿಯು ಚಲನಚಿತ್ರ ಮತ್ತು ಟಿವಿ ಪಾಲುದಾರರಿಗೆ ಮಾತ್ರ ಲಭ್ಯವಿದೆ.

ಆಡಿಯೋ ಶ್ರೇಣಿಯ ಆದಾಯ ಆಡಿಯೋ ಶ್ರೇಣಿ ಆದಾಯ ವರದಿಯು ಈ ಬಳಕೆದಾರರಿಂದ YouTube Music ಆದಾಯವನ್ನು ಒಳಗೊಂಡಿದೆ:
  • ಬೇಡಿಕೆಯ-ಮೇರೆಗೆ ಅಲ್ಲದ, ರೇಡಿಯೋದಂತಹ ಅನುಭವವನ್ನು ಬಳಸುತ್ತಿರುವವರು
  • Google Assistant ಅನ್ನು ಸ್ಕ್ರೀನ್-ರಹಿತ ಸಾಧನಗಳಲ್ಲಿ ಬಳಸುತ್ತಿರುವವರು (ಉದಾಹರಣೆಗೆ, Google Home)
ಜಾಹೀರಾತುಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯ

ಜಾಹೀರಾತುಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿಯು ಆ್ಯಡ್‌ಗಳ ಆದಾಯದ ಅಡ್ಜಸ್ಟ್‌ಮೆಂಟ್‌ಗಳ ಸಾರಾಂಶವನ್ನು ಒದಗಿಸುತ್ತದೆ. ಇದು ವಿವಾದದಲ್ಲಿರುವ ಮಾನಿಟೈಸೇಶನ್‌ನಿಂದ ಬರುವ ಆದಾಯ ಮತ್ತು ಸ್ವತ್ತು ಸಂಘರ್ಷ ಪರಿಹಾರದಿಂದ ಬರುವ ಆದಾಯವನ್ನು ಒಳಗೊಂಡಿರಬಹುದು.

ನಿರ್ದಿಷ್ಟ ತಿಂಗಳಿಗೆ ಸಂಬಂಧಿಸಿದಂತೆ ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿದಾಗ ಮಾತ್ರ ಈ ವರದಿಯನ್ನು ಪ್ರಕಟಿಸಲಾಗುತ್ತದೆ.

ಚಾನಲ್ ಮಟ್ಟದ ಅಡ್ಜಸ್ಟ್‌ಮೆಂಟ್

ಚಾನೆಲ್ ಮಟ್ಟದ ಅಡ್ಜಸ್ಟ್‌ಮೆಂಟ್ ವರದಿಯು ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳನ್ನು ಉಲ್ಲಂಘಿಸಿದ ಚಾನಲ್‌ಗಳ ವಿರುದ್ಧ ಅನ್ವಯವಾಗುವಲ್ಲಿ ಕಡಿತಗಳು ಮತ್ತು ಮರು-ಇಂಜೆಕ್ಷನ್‌ಗಳನ್ನು ಒಳಗೊಂಡಿರುತ್ತದೆ. ಈ ವರದಿಯನ್ನು ಚಾನಲ್ ಮತ್ತು ಅವುಗಳ ಕರೆನ್ಸಿ ಕೋಡ್‌ನ ಪ್ರಕಾರ ವಿಂಗಡಿಸಲಾಗುತ್ತದೆ ಮತ್ತು ಕಡಿತಗಳ ಹಿಂದಿನ ಕಾರಣವನ್ನು ಒಳಗೊಂಡಿರುತ್ತದೆ.


ಈ ವರದಿಯು ಸಂಗೀತೇತರ CMS ಪಾಲುದಾರರು ಮತ್ತು MCN-A ಪಾಲುದಾರರಿಗೆ ಮಾತ್ರ ಲಭ್ಯವಿರುತ್ತದೆ.

ಸಬ್‌ಸ್ಕ್ರಿಪ್ಶನ್‌ಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯ

ಸಬ್‌ಸ್ಕ್ರಿಪ್ಶನ್‌ಗಳ ಅಡ್ಜಸ್ಟ್‌ಮೆಂಟ್‌ಗಳಿಂದ ಬರುವ ಆದಾಯದ ವರದಿಯು ಸಬ್‌ಸ್ಕ್ರಿಪ್ಶನ್‌ಗಳ ಆದಾಯದ ಅಡ್ಜಸ್ಟ್‌ಮೆಂಟ್‍ಗಳ ಸಾರಾಂಶವನ್ನು ಒದಗಿಸುತ್ತದೆ.

ನಿರ್ದಿಷ್ಟ ತಿಂಗಳಿಗೆ ಸಂಬಂಧಿಸಿದಂತೆ ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿದಾಗ ಮಾತ್ರ ಈ ವರದಿಯನ್ನು ಪ್ರಕಟಿಸಲಾಗುತ್ತದೆ.

ಪಾವತಿ ಫೀಚರ್‌ಗಳು ಪಾವತಿಸಿದ ಫೀಚರ್‌ಗಳ ವರದಿಯು ಈ ಕೆಳಗಿನವುಗಳಿಂದ ಆದಾಯವನ್ನು ಒಳಗೊಂಡಿದೆ:
  • ಸೂಪರ್ ಚಾಟ್ ಖರೀದಿಗಳು (SCT)
  • ಸದಸ್ಯತ್ವಗಳು (SPT)
  • ಸೂಪರ್ ಸ್ಟಿಕ್ಕರ್ಸ್ (SST)
  • BrandConnect (YTBC)
ಇತರ ವರದಿಗಳು ಕಸ್ಟಮ್ ವರದಿಗಳು (ಎಲ್ಲಾ ಬಳಕೆದಾರರಿಗೆ ಲಭ್ಯವಿಲ್ಲ).

ಕಾರ್ಯಕ್ಷಮತೆಯ ವರದಿಗಳು

ಕಾರ್ಯಕ್ಷಮತೆಯ ವರದಿಗಳನ್ನು ಸಾಮಾನ್ಯವಾಗಿ ವಾರಕ್ಕೊಮ್ಮೆ ಪ್ರಕಟಿಸಲಾಗುತ್ತದೆ. ಕೆಲವು ವರದಿಗಳು ಹೆಚ್ಚಾಗಿ ಪ್ರಕಟವಾಗಬಹುದು. ಕೆಳಗಿನ ಕಾರ್ಯಕ್ಷಮತೆಯ ವರದಿಗಳು ಲಭ್ಯವಿದೆ:

  • ವೀಡಿಯೊಗಳ ವರದಿ
  • ಸ್ವತ್ತುಗಳ ವರದಿ
  • ಉಲ್ಲೇಖಗಳ ವರದಿ
  • ಕ್ಲೇಮ್‌ಗಳ ವರದಿ
  • ಅಭಿಯಾನದ ಕಾರ್ಯಕ್ಷಮತೆಯ ವರದಿ
ಕಾರ್ಯಕ್ಷಮತೆಯ ವರದಿಗಳು
ವರದಿ ಹೆಸರು ವಿವರಣೆ
ವೀಡಿಯೊಗಳು ವೀಡಿಯೊಗಳ ವರದಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
  • ವೀಡಿಯೊ ಸ್ಥಿತಿ
  • ಜಾಹೀರಾತು ಸಕ್ರಿಯಗೊಳಿಸುವಿಕೆ
  • ವೀಕ್ಷಣೆಗಳ ಸಂಖ್ಯೆ
  • ಸ್ವತ್ತಿನ ID
  • ಕಾರ್ಯನೀತಿ

ವೀಡಿಯೊಗಳ ವರದಿಯು ವಾರಕ್ಕೆ 3 ಬಾರಿ ಲಭ್ಯವಿದೆ. ಇದು ಆದಾಯದ ಡೇಟಾವನ್ನು ಒಳಗೊಂಡಿಲ್ಲ.  

ಬಹು ಸ್ವತ್ತುಗಳಿಂದ ವೀಡಿಯೊವನ್ನು ಕ್ಲೇಮ್ ಮಾಡಿದರೆ, ನೀವು ಸ್ವತ್ತು ID ಕಾಲಮ್‌ನಲ್ಲಿ ಬಹು ಆಸ್ತಿ ID ಗಳನ್ನು ನೋಡುತ್ತೀರಿ, ಆದರೆ ಸ್ವತ್ತು ಮೆಟಾಡೇಟಾದ ಒಂದು ಸೆಟ್ ಮಾತ್ರ.

ಸ್ವತ್ತುಗಳು ಸ್ವತ್ತುಗಳ ವರದಿಯು ನಿಮ್ಮ ಸ್ವತ್ತುಗಳ ಕುರಿತು ಎಲ್ಲಾ ಪ್ರಮುಖ ವಿವರಗಳನ್ನು ಒಳಗೊಂಡಿದೆ. 3 ಸ್ವತ್ತುಗಳ ವರದಿಗಳು ಲಭ್ಯವಿವೆ: 
  • ಸ್ವತ್ತಿನ ವರದಿ
  • ಸ್ವತ್ತಿನ ಸಂಘರ್ಷಗಳ ವರದಿ
  • ಸ್ವತ್ತುಗಳ (ಹಂಚಿಕೆಗಳ) ವರದಿ
ಇತರ ವರದಿಗಳಲ್ಲಿ ಕಂಡುಬರದ ಈ ವರದಿಯಲ್ಲಿರುವ ಮಾಹಿತಿಯು ಈ ಕೆಳಗಿನವುಗಳನ್ನು ಒಳಗೊಂಡಿದೆ:
  • ಮಾಲೀಕತ್ವದ ಪ್ರದೇಶಗಳು
  • ಸ್ವತ್ತು ಪ್ರಕಾರ
  • ಘಟಕದ ಸ್ವತ್ತಿನ ID
  • ಸಕ್ರಿಯ ಮತ್ತು ನಿಷ್ಕ್ರಿಯ ಉಲ್ಲೇಖಗಳು
  • ಹೊಂದಿಕೆ ನೀತಿ
ಈ ಕಾರ್ಯಗಳನ್ನು ಮಾಡಲು ಬಯಸುವ ಪಾಲುದಾರರಿಗೆ ಈ ಡಾಕ್ಯುಮೆಂಟ್ ಉಪಯುಕ್ತವಾಗಿದೆ:
  • ಮಾಲೀಕತ್ವದ ಮಾಹಿತಿಯು ಸರಿಯಾಗಿದೆಯೇ ಎಂದು ನೋಡಲು ಸ್ವತ್ತುಗಳ ಗುಂಪನ್ನು ಪರಿಶೀಲಿಸಿ
  • ಸಂಯೋಜಿತ ಸ್ವತ್ತಿನ ID ಗಳಿಗೆ ಘಟಕದ ಸ್ವತ್ತಿನ ID ಗಳನ್ನು ನಕ್ಷೆ ಮಾಡಿ
  • ನಿರ್ದಿಷ್ಟ ಹೊಂದಾಣಿಕೆಯ ನೀತಿಯೊಂದಿಗೆ ಎಲ್ಲಾ ಸ್ವತ್ತುಗಳನ್ನು ನೋಡಿ
ಈ ವರದಿಗಳನ್ನು ಪ್ರತಿದಿನವೂ ಪ್ರಕಟಿಸಲಾಗುತ್ತದೆ (ಲಭ್ಯವಿದ್ದರೆ). 
ಉಲ್ಲೇಖಗಳು

ಉಲ್ಲೇಖಗಳ ವರದಿಯು ಎಲ್ಲಾ ಸಕ್ರಿಯ ಉಲ್ಲೇಖ ಫೈಲ್‌ಗಳು ಮತ್ತು ಸಂಬಂಧಿತ ಹೊಂದಾಣಿಕೆಗಳ ಅವಲೋಕನವನ್ನು ಒದಗಿಸುತ್ತದೆ.

ಕ್ಲೇಮ್‌ಗಳು

ಪ್ರತಿ ಕ್ಲೇಮ್‌ನ ಗುಣಲಕ್ಷಣಗಳು ಮತ್ತು ಸೆಟ್ಟಿಂಗ್‌ಗಳನ್ನು ಒಳಗೊಂಡಂತೆ ಖಾತೆಗೆ ಸಂಬಂಧಿಸಿದ ಎಲ್ಲಾ ಸಕ್ರಿಯ ಕ್ಲೇಮ್‌ಗಳ ಸಂಪೂರ್ಣ ಪಟ್ಟಿಯನ್ನು ಕ್ಲೇಮ್‌ಗಳ ವರದಿಯು ಒಳಗೊಂಡಿದೆ. 

ಅಭಿಯಾನಗಳು

ಅಭಿಯಾನದ ಕಾರ್ಯಕ್ಷಮತೆಯ ವರದಿಯು ಅರ್ಹ ವೀಡಿಯೊಗಳಲ್ಲಿ ಎಷ್ಟು ಬಾರಿ ಪ್ರಚಾರ ಕಾರ್ಡ್‌ಗಳನ್ನು ಕ್ಲಿಕ್ ಮಾಡಲಾಗಿದೆ ಎಂಬುದನ್ನು ತಿಳಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17919922975951673381
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false