YouTube ನಲ್ಲಿ ಖರೀದಿಸಿದ ಚಲನಚಿತ್ರ ಅಥವಾ ಶೋ ಅನ್ನು ವೀಕ್ಷಿಸಿ

ನೀವು YouTube ನಲ್ಲಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಖರೀದಿಸಿದ ಅಥವಾ ಬಾಡಿಗೆಗೆ ಪಡೆದ ನಂತರ, ನೀವು ಅವುಗಳನ್ನು ಕಂಪ್ಯೂಟರ್, ಮೊಬೈಲ್ ಸಾಧನ,  ಸ್ಮಾರ್ಟ್ ಟಿವಿ, ಸ್ಟ್ರೀಮಿಂಗ್ ಸಾಧನ ಅಥವಾ ಗೇಮ್ ಕನ್ಸೋಲ್‌ನಲ್ಲಿ ವೀಕ್ಷಿಸಬಹುದು. ನೀವು ಖರೀದಿಸಿದ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಲು, ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಬಾಡಿಗೆಗೆ ಪಡೆದ ಕಂಟೆಂಟ್, ನೀವು ಮೊದಲ ಬಾರಿಗೆ ವೀಕ್ಷಿಸಲು ಪ್ರಾರಂಭಿಸಿದ ಬಳಿಕ ಬಾಡಿಗೆ ಅವಧಿಯಲ್ಲಿ ಲಭ್ಯವಿರುತ್ತದೆ. ಖರೀದಿಸಿದ ಕಂಟೆಂಟ್ ಅನಿರ್ದಿಷ್ಟಾವಧಿಯವರೆಗೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ನಮ್ಮ ಬಳಕೆಯ ನಿಯಮಗಳನ್ನು ನೋಡಿ.

ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ವೀಕ್ಷಕರು: ನೀವು YouTube ನಲ್ಲಿ Primetime ಚಾನಲ್ ಸಬ್‌ಸ್ಕ್ರಿಪ್ಶನ್ ಅನ್ನು ಖರೀದಿಸಿದ್ದರೆ, ಹೋಮ್‌ನಲ್ಲಿನ ನಿಮ್ಮ ಶಿಫಾರಸುಗಳಲ್ಲಿ ಹಾಗೂ ನಿಮ್ಮ YouTube ಹುಡುಕಾಟ ಫಲಿತಾಂಶಗಳಲ್ಲಿ ನಿಮಗೆ ಪ್ರೋಗ್ರಾಂಗಳು ಕಾಣಿಸುತ್ತವೆ. ನೀವು ಖರೀದಿಸಿದ ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ನೇರವಾಗಿಯೂ ವೀಕ್ಷಿಸಬಹುದು.

ಗಮನಿಸಿ: ಕೆಲವು ವೀಡಿಯೊಗಳು ವಿಭಿನ್ನ ಬೆಲೆಯಲ್ಲಿ ಹೆಚ್ಚುವರಿ ಗುಣಮಟ್ಟಗಳನ್ನು ನೀಡುತ್ತವೆ. HD ಮತ್ತು UHD ಶೀರ್ಷಿಕೆಗಳ ಪ್ಲೇಬ್ಯಾಕ್ ಕೆಲವು ಬೆಂಬಲಿತ ಸಾಧನಗಳು ಮತ್ತು ಇಂಟರ್ನೆಟ್ ವೇಗದಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ, HD/UHD ಸಾಧನದ ಅವಶ್ಯಕತೆಗಳನ್ನು ನೋಡಿ.

ಕಂಪ್ಯೂಟರ್‌ನಲ್ಲಿ ವೀಕ್ಷಿಸಿ

ಖರೀದಿಸಿದ ಚಲನಚಿತ್ರಗಳು ಹಾಗೂ ಟಿವಿ ಕಾರ್ಯಕ್ರಮಗಳನ್ನು ಕಂಪ್ಯೂಟರ್‌ನಲ್ಲಿ ಆ್ಯಕ್ಸೆಸ್ ಮಾಡಲು, YouTube ಗೆ ಸೈನ್ ಇನ್ ಮಾಡಿ ಮತ್ತು ಎಡಭಾಗದ ಮೆನುವಿನಲ್ಲಿರುವ "ನಿಮ್ಮ ಚಲನಚಿತ್ರಗಳು ಮತ್ತು ಟಿವಿ" ಎಂಬುದನ್ನು ಆಯ್ಕೆಮಾಡಿ. ಅಲ್ಲಿಂದ, ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು "ಖರೀದಿಸಿರುವುದು" ಎಂಬುದನ್ನು ಆಯ್ಕೆಮಾಡಿ.
HTML5 ಪ್ಲೇಬ್ಯಾಕ್ ಅನ್ನು ಬೆಂಬಲಿಸುವ ವೆಬ್ ಬ್ರೌಸರ್‌ಗಳಲ್ಲಿ ನೀವು ಬಾಡಿಗೆಗೆ ಪಡೆದ ಅಥವಾ ಖರೀದಿಸಿದ ಚಲನಚಿತ್ರಗಳು ಮತ್ತು ಶೋಗಳನ್ನು ನೀವು ವೀಕ್ಷಿಸಬಹುದು. YouTube ನಲ್ಲಿ ಚಲನಚಿತ್ರಗಳು ಮತ್ತು ಶೋಗಳ ಜೊತೆ ಯಾವ ವೆಬ್ ಬ್ರೌಸರ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಪರಿಶೀಲಿಸಿ.

ಮೊಬೈಲ್ ಸಾಧನದಲ್ಲಿ ವೀಕ್ಷಿಸಿ

ಬಾಡಿಗೆಗೆ ಪಡೆದ ಹಾಗೂ ಖರೀದಿಸಿದ ಕಂಟೆಂಟ್ ಅನ್ನು ನಿಮ್ಮ ಸಾಧನದಲ್ಲಿನ YouTube ಮೊಬೈಲ್ ಆ್ಯಪ್ ಅನ್ನು ಬಳಸಿಕೊಂಡು ಕೆಲವು ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳಲ್ಲಿ ನೀವು ವೀಕ್ಷಿಸಬಹುದು.
ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ, "ನಿಮ್ಮ ಚಲನಚಿತ್ರಗಳು ಮತ್ತು ಟಿವಿ" ಎಂಬಲ್ಲಿಗೆ ಹೋಗುವ ಮೂಲಕ ನೀವು ಖರೀದಿಸಿದ ಎಲ್ಲಾ ವೀಡಿಯೊಗಳನ್ನು ನೀವು ಕಾಣಬಹುದು.
ಗಮನಿಸಿ:
  • ಆಯ್ಕೆಮಾಡಿದ ಸ್ಥಳಗಳಲ್ಲಿ ನಿಮ್ಮ iOS ಸಾಧನದಲ್ಲಿ ನೀವು ಕಂಟೆಂಟ್ ಅನ್ನು ಖರೀದಿಸಬಹುದು. ನಿಮ್ಮ ಸ್ಥಳದಲ್ಲಿ iOS ಖರೀದಿಗಳು ಬೆಂಬಲಿತವಾಗಿದೆಯೇ ಎಂದು ನೋಡಲು, ಇಲ್ಲಿ ಪರಿಶೀಲಿಸಿ.
  • ನಿಮ್ಮ ಸ್ಥಳದಲ್ಲಿ iOS ಖರೀದಿಗೆ ಬೆಂಬಲವಿಲ್ಲದಿದ್ದರೆ, ನೀವು ಆಗಲೂ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಮತ್ತೊಂದು ಸಾಧನದಲ್ಲಿ ಖರೀದಿಸಬಹುದು. ಖರೀದಿಸಿದ ನಂತರ, ನಿಮ್ಮ iOS ಸಾಧನದಲ್ಲಿ ನೀವು ಕಂಟೆಂಟ್ ಅನ್ನು ವೀಕ್ಷಿಸಬಹುದು.
  • YouTube Android ಆ್ಯಪ್‌ನಲ್ಲಿ ಮಾಡಿದ ಕೆಲವು ಚಲನಚಿತ್ರಗಳು ಮತ್ತು ಶೋ ಖರೀದಿಗಳಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಬೆಲೆ ಅಥವಾ ದರದ ಮೇಲೆ ಇದು ಪರಿಣಾಮ ಬೀರುವುದಿಲ್ಲ. ನೀವು ಮರುಪಾವತಿಯನ್ನು ಸಹ ವಿನಂತಿಸಬಹುದು.

Chromecast ಅನ್ನು ಬಳಸಿಕೊಂಡು ವೀಕ್ಷಿಸಿ

ನೀವು Chromecast ಅನ್ನು ಹೊಂದಿದ್ದರೆ, ನಿಮ್ಮ ಟಿವಿಯಲ್ಲಿ YouTube ಬಾಡಿಗೆಗಳು ಮತ್ತು ಖರೀದಿಗಳನ್ನು ವೀಕ್ಷಿಸಲು ನೀವು ಅದನ್ನು ಬಳಸಬಹುದು. ನಿಮ್ಮ ಮೊಬೈಲ್ ಸಾಧನದಲ್ಲಿ YouTube ಆ್ಯಪ್ ತೆರೆಯುವ ಮೂಲಕ ಪ್ರಾರಂಭಿಸಿ ಮತ್ತು ನಿಮ್ಮ Google ಖಾತೆಗೆ ನೀವು ಸೈನ್ ಇನ್ ಆಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಅದನ್ನು ಮಾಡಿದ ನಂತರ:
  1. ನೀವು ವೀಕ್ಷಿಸಲು ಬಯಸುವ YouTube ವೀಡಿಯೊವನ್ನು ಆಯ್ಕೆಮಾಡಿ.
  2. ನಿಮ್ಮ ಟಿವಿಗೆ ವೀಡಿಯೊವನ್ನು ಕ್ಯಾಸ್ಟ್ ಮಾಡಲು, ಕ್ಯಾಸ್ಟ್ ಮಾಡಿ  ಕ್ಲಿಕ್ ಮಾಡಿ.
ಈ ಲೇಖನದಲ್ಲಿ ಪಟ್ಟಿ ಮಾಡಲಾದ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ Chrome ಬ್ರೌಸರ್‌ನಿಂದಲೂ ನೀವು ಕ್ಯಾಸ್ಟ್ ಮಾಡಬಹುದು.
Chromecast ಬಳಸುವ ಕುರಿತು ಸಾಮಾನ್ಯ ಪ್ರಶ್ನೆಗಳಿಗಾಗಿ, Chromecast ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.

ಸ್ಮಾರ್ಟ್ ಟಿವಿಗಳು ಅಥವಾ ಇತರ ಸ್ಟ್ರೀಮಿಂಗ್ ಸಾಧನಗಳಲ್ಲಿ ವೀಕ್ಷಿಸಿ

ಸ್ಮಾರ್ಟ್ ಟಿವಿಗಳು, Apple TV, Android TV, Fire TV ಮತ್ತು Roku ಗಾಗಿ ನೀವು YouTube ಆ್ಯಪ್‌ನಲ್ಲಿ ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಸಹ ಆ್ಯಕ್ಸೆಸ್ ಮಾಡಬಹುದು.

YouTube ಆ್ಯಪ್‌ಗೆ ಸೈನ್ ಇನ್ ಮಾಡುವ ಮೂಲಕ ನೀವು YouTube ನಲ್ಲಿ ಖರೀದಿಸಿದ ಚಲನಚಿತ್ರಗಳು ಮತ್ತು ಶೋಗಳನ್ನು ವೀಕ್ಷಿಸಿ. ನಿಮ್ಮ ಎಲ್ಲಾ ಕಂಟೆಂಟ್ ಅನ್ನು ವೀಕ್ಷಿಸಲು ಲೈಬ್ರರಿ ಟ್ಯಾಬ್‌ನಲ್ಲಿ "ನಿಮ್ಮ ಚಲನಚಿತ್ರಗಳು ಮತ್ತು ಶೋಗಳು" ಎಂಬಲ್ಲಿಗೆ ಹೋಗಿ. ನಿಮ್ಮ ಸಾಧನದಲ್ಲಿ ನೀವು YouTube ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.

ಬಾಡಿಗೆಗಳು ಮತ್ತು ಖರೀದಿಗಳನ್ನು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ನಲ್ಲಿ ಕ್ಯಾಸ್ಟ್  ಬಟನ್ ಅನ್ನು ಬಳಸಿಕೊಂಡು Android TV ಗೆ ಕ್ಯಾಸ್ಟ್ ಮಾಡಬಹುದು.

ಗೇಮ್ ಕನ್ಸೋಲ್‌ಗಳಲ್ಲಿ ವೀಕ್ಷಿಸಿ

YouTube ನಲ್ಲಿ ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು Xbox One, Xbox 360, Playstation 3, Playstation 4, Wii U ಮತ್ತು Nintendo Switch ಸಾಧನಗಳನ್ನು ಬಳಸಿಕೊಂಡು ವೀಕ್ಷಿಸಬಹುದು.
ನೀವು ಖರೀದಿಸಿದ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮವನ್ನು ವೀಕ್ಷಿಸಲು, YouTube ಆ್ಯಪ್‌ಗೆ ಸೈನ್ ಇನ್ ಮಾಡಿ, ನಂತರ ಲೈಬ್ರರಿ ಟ್ಯಾಬ್‌  ನಂತರ “ನಿಮ್ಮ ಚಲನಚಿತ್ರಗಳು ಮತ್ತು ಶೋಗಳು" ಎಂಬಲ್ಲಿಗೆ ಹೋಗಿ. ಅಲ್ಲಿಂದ, ನೀವು ಖರೀದಿಸಿದ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಲು "ಖರೀದಿಸಲಾಗಿದೆ" ಎಂಬುದನ್ನು ಆಯ್ಕೆಮಾಡಿ.
ನೀವು ಗೇಮ್ ಕನ್ಸೋಲ್‌ಗಳಲ್ಲಿ ಚಲನಚಿತ್ರಗಳು ಅಥವಾ ಟಿವಿ ಕಾರ್ಯಕ್ರಮಗಳನ್ನು ಖರೀದಿಸಲು ಸಾಧ್ಯವಿಲ್ಲ. ನೀವು ಮತ್ತೊಂದು ಸಾಧನದಲ್ಲಿ ಚಲನಚಿತ್ರ ಅಥವಾ ಟಿವಿ ಕಾರ್ಯಕ್ರಮವನ್ನು ಖರೀದಿಸಬಹುದು ಮತ್ತು ಮೇಲಿನ ಸೂಚನೆಗಳನ್ನು ಬಳಸಿಕೊಂಡು ಅದನ್ನು ನಿಮ್ಮ ಗೇಮ್ ಕನ್ಸೋಲ್‌ನಲ್ಲಿ ವೀಕ್ಷಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17849203321504539943
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false