ಅನಧಿಕೃತ ಶುಲ್ಕವನ್ನು ವರದಿ ಮಾಡಿ

YouTube ನಲ್ಲಿ ನೀವು ಮಾಡಿರದ ಡಿಜಿಟಲ್ ಖರೀದಿಗಾಗಿ ನಿಮ್ಮ ಕಾರ್ಡ್ ಅಥವಾ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಶುಲ್ಕ ವಿಧಿಸಿರುವುದನ್ನು ನೀವು ನೋಡಿದರೆ, ವಹಿವಾಟು ನಡೆದ 120 ದಿನಗಳೊಳಗೆ ನೀವು ಆ ಶುಲ್ಕಗಳ ಕುರಿತಾಗಿ ನಮ್ಮ ಬೆಂಬಲ ತಂಡಕ್ಕೆ ವರದಿ ಮಾಡಬಹುದು.

ಹಂತ 1: YouTube ಶುಲ್ಕಗಳನ್ನು ಗುರುತಿಸಿ

ಎಲ್ಲಾ YouTube ಖರೀದಿಗಳು ನಿಮ್ಮ ಸ್ಟೇಟ್‌ಮೆಂಟ್‌ನಲ್ಲಿ GOOGLE*YouTube [ಸೇವೆಯ ಹೆಸರು] ಎಂದು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ, YouTube TV ಶುಲ್ಕವು GOOGLE*YouTube TV ಎಂದು ಕಾಣಿಸಿಕೊಳ್ಳುತ್ತದೆ.

ಸಂಬಂಧಿತ ಶುಲ್ಕವು ಇವುಗಳಲ್ಲಿನ ಒಂದು ಫಾರ್ಮ್ಯಾಟ್‌ನಲ್ಲಿ ಇರದಿದ್ದರೆ, ಅದು YouTube ನಿಂದ ಬಂದಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ಅಥವಾ ಕಾರ್ಡ್ ವಿತರಕರನ್ನು ಸಂಪರ್ಕಿಸಿ.

ಹಂತ 2: ನಿಮ್ಮ ಕುಟುಂಬ ಮತ್ತು ಸ್ನೇಹಿತರನ್ನು ವಿಚಾರಿಸಿ

ನೀವು YouTube ವಹಿವಾಟನ್ನು ಗುರುತಿಸದಿದ್ದರೆ, ನಿಮ್ಮ ಕುಟುಂಬದವರ ಮತ್ತು ಸ್ನೇಹಿತರ ಬಳಿ ವಿಚಾರಿಸಿ, ಈ ಅಂಶಗಳನ್ನು ಪರಿಶೀಲಿಸಿ:

  • ಅವರು ಖರೀದಿ ಮಾಡಿದರೇ ಅಥವಾ
  • ಮಗುವು ಗೇಮ್ ಆಡಿ, ಅದರಿಂದ ಆಕಸ್ಮಿಕವಾಗಿ ಶುಲ್ಕವನ್ನು ವಿಧಿಸಲಾಗಿದೆಯೇ

ಶುಲ್ಕವು ಅನಧಿಕೃತವಾದದ್ದು ಮತ್ತು ಆಕಸ್ಮಿಕವಾದದ್ದು ಆದರೆ ವಂಚನೆಯ ಕೃತ್ಯವಲ್ಲ ಎಂದು ಕಂಡುಕೊಂಡರೆ, ನೀವು ಮರುಪಾವತಿಯನ್ನು ವಿನಂತಿಸಬಹುದು.

ಹಂತ 3: ನಿಮ್ಮ ಕ್ಲೇಮ್‌ ಅನ್ನು ದಾಖಲಿಸಿ ಮತ್ತು ಟ್ರ್ಯಾಕ್ ಮಾಡಿ

ಶುಲ್ಕವನ್ನು YouTube ವಿಧಿಸಿದೆ ಮತ್ತು ನಿಮಗೆ ತಿಳಿದಿರುವ ಯಾರೂ ಇದನ್ನು ಮಾಡಿಲ್ಲ ಎಂದು ನೀವು ಖಚಿತಪಡಿಸಿಕೊಂಡ ನಂತರ, ವಹಿವಾಟು ನಡೆದ 120 ದಿನಗಳೊಳಗೆ ಶುಲ್ಕಗಳನ್ನು ನಮ್ಮ ಬೆಂಬಲ ತಂಡಕ್ಕೆ ವರದಿ ಮಾಡಿ. ನಿಮ್ಮ ಕ್ಲೇಮ್ ಅನ್ನು ಹುಡುಕಲು, ಕ್ಲೇಮ್ ಅನ್ನು ಸಲ್ಲಿಸಲು ನೀವು ಬಳಸಿದ ಇಮೇಲ್ ವಿಳಾಸ ಮತ್ತು ನಿಮ್ಮ ಇಮೇಲ್‌ಗೆ ಕಳುಹಿಸಲಾದ ಕ್ಲೇಮ್ ID ಬೇಕಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15663287098389918424
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false