ನಿಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ನಿರ್ಣಯಿಸುವುದು

ನೀವು ಯಾವುದೇ ಸ್ಥಳದಲ್ಲಿದ್ದರೂ ಸಹ, ಯು.ಎಸ್. ಫೆಡರಲ್ ಟ್ರೇಡ್ ಕಮಿಷನ್ (FTC) ಜೊತೆಗಿನ ಒಪ್ಪಂದದ ಅನುಸಾರವಾಗಿ ಮತ್ತು ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯ್ದೆ (COPPA) ಮತ್ತು/ಅಥವಾ ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡಲು ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೀವು ನಮಗೆ ತಿಳಿಸುವ ಅಗತ್ಯವಿದೆ. ನಿಮ್ಮ ಕಂಟೆಂಟ್ ಅನ್ನು ಸೂಕ್ತವಾಗಿ ಸೆಟ್ ಮಾಡುವುದಕ್ಕೆ ವಿಫಲವಾದರೆ, ಅದು YouTube ನಲ್ಲಿ ಪರಿಣಾಮಗಳು ಅಥವಾ COPPA ಮತ್ತು ಇತರ ಕಾನೂನುಗಳ ಅಡಿಯಲ್ಲಿ ಕಾನೂನು ಪರಿಣಾಮಗಳು ಉಂಟಾಗಬಹುದು.

ಯಾವುದನ್ನು "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ಪರಿಗಣಿಸಲಾಗುತ್ತದೆ ಎಂಬುದರ ಕುರಿತು ಈ ಕೆಳಗೆ ಕೆಲವು ಮಾರ್ಗದರ್ಶನವನ್ನು ನೀಡಿದ್ದೇವೆ, ಆದರೆ ನಾವು ಕಾನೂನು ಸಲಹೆಯನ್ನು ನೀಡಲು ಸಾಧ್ಯವಿಲ್ಲ. ನಿಮ್ಮ ವೀಡಿಯೊಗಳು ಈ ಮಾನದಂಡವನ್ನು ಪೂರೈಸುತ್ತವೆಯೋ ಇಲ್ಲವೋ ಎಂಬುದರ ಕುರಿತು ನೀವು ಖಚಿತವಾಗಿಲ್ಲದಿದ್ದರೆ, ನೀವು ಲೀಗಲ್ ಕೌನ್ಸಿಲ್ ಸಹಾಯ ಪಡೆಯಲು ನಾವು ಸಲಹೆ ನೀಡುತ್ತೇವೆ.

ಗಮನಿಸಿ: YouTube ರಚನೆಕಾರರು ತಮ್ಮ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆಯೇ" ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವುದಕ್ಕೆ ಸಹಾಯ ಮಾಡಲು ನವೆಂಬರ್ 2019 ರಲ್ಲಿ FTC ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿದೆ. FTC ಯ ಬ್ಲಾಗ್‌ನಲ್ಲಿ ನೀವು ಇನ್ನಷ್ಟು ತಿಳಿಯಬಹುದು.

 ಮಕ್ಕಳಿಗಾಗಿ ರಚಿಸಲಾಗಿದೆ  ಮಕ್ಕಳಿಗಾಗಿ ರಚಿಸಲಾಗಿಲ್ಲ

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಯಾವುದನ್ನು ಪರಿಗಣಿಸಬಹುದು ಎಂಬುದು ಈ ಉದಾಹರಣೆಗಳನ್ನು ಒಳಗೊಂಡಿರುತ್ತದೆ:

  • ವೀಡಿಯೊದ ಪ್ರಮುಖ ಪ್ರೇಕ್ಷಕರು ಮಕ್ಕಳಾಗಿರುತ್ತಾರೆ.
  • ಮಕ್ಕಳು ಪ್ರಮುಖ ಪ್ರೇಕ್ಷಕರಲ್ಲ, ಆದರೂ ವೀಡಿಯೊವನ್ನು ಮಕ್ಕಳಿಗೆ ಗುರಿಯಾಗಿಸಲಾಗಿದೆ ಏಕೆಂದರೆ ಇದು ಮಕ್ಕಳನ್ನು ಕೇಂದ್ರೀಕರಿಸುವ ಉದ್ದೇಶವನ್ನು ಬಿಂಬಿಸುವ ಕಲಾವಿದರು, ಪಾತ್ರಗಳು, ಚಟುವಟಿಕೆಗಳು, ಗೇಮ್‌ಗಳು, ಹಾಡುಗಳು, ಸ್ಟೋರಿಗಳು ಅಥವಾ ಇತರ ವಿಷಯವನ್ನು ಫೀಚರ್ ಮಾಡುತ್ತದೆ.

ಕೆಳಗೆ ಇನ್ನಷ್ಟು ಮಾರ್ಗದರ್ಶನವನ್ನು ನೋಡಿ.

ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂದು ಯಾವುದನ್ನು ಪರಿಗಣಿಸಬಹುದು ಎಂಬುದು ಈ ಉದಾಹರಣೆಗಳನ್ನು ಒಳಗೊಂಡಿರುತ್ತದೆ:

  • ಎಳೆಯ ಪ್ರೇಕ್ಷಕರಿಗೆ ಸೂಕ್ತವಲ್ಲದ ಲೈಂಗಿಕ ಥೀಮ್‍ಗಳು, ಹಿಂಸೆ, ಅಶ್ಲೀಲತೆ ಅಥವಾ ಎಳೆಯ ಪ್ರೇಕ್ಷಕರಿಗೆ ಸೂಕ್ತವಾಗಿರದ ಇತರ ಯಾವುದೇ ವಯಸ್ಕ ಥೀಮ್‌ಗಳನ್ನು ಹೊಂದಿರುವ ಕಂಟೆಂಟ್.
  • 18 ವರ್ಷದೊಳಗಿನ ವೀಕ್ಷಕರಿಗೆ ಸೂಕ್ತವಲ್ಲದ ವಯಸ್ಸಿನ ನಿರ್ಬಂಧವಿರುವ ವೀಡಿಯೊಗಳು.

ಕೆಳಗೆ ಇನ್ನಷ್ಟು ಮಾರ್ಗದರ್ಶನವನ್ನು ನೋಡಿ.

 

ನನ್ನ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಬೇಕೇ ಎಂಬುದು ನನಗೆ ಹೇಗೆ ತಿಳಿಯುತ್ತದೆ?
ಮಕ್ಕಳನ್ನು ಕೇಂದ್ರೀಕರಿಸುವ ಉದ್ದೇಶವನ್ನು ಬಿಂಬಿಸುವ ಕಲಾವಿದರು, ಪಾತ್ರಗಳು, ಚಟುವಟಿಕೆಗಳು, ಗೇಮ್‌ಗಳು, ಹಾಡುಗಳು, ಸ್ಟೋರಿಗಳು ಅಥವಾ ಇತರ ವಿಷಯವನ್ನು ನಿಮ್ಮ ವೀಡಿಯೊ ಫೀಚರ್ ಮಾಡಿದರೆ, ಅದನ್ನು ಮಕ್ಕಳಿಗಾಗಿ ರಚಿಸಿರುವ ಸಾಧ್ಯತೆ ಇರುತ್ತದೆ. COPPA ಕುರಿತು FTC ಯ ಮಾರ್ಗಸೂಚಿಯ ಪ್ರಕಾರ, ಈ ಕೆಳಗಿನ ಅಂಶಗಳನ್ನು ಹೊಂದಿದ್ದರೆ ವೀಡಿಯೊವೊಂದು ಮಕ್ಕಳನ್ನು ಉದ್ದೇಶಿಸಿರುತ್ತದೆ (ಅದನ್ನು ನಾವು “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಕರೆಯುತ್ತೇವೆ):
  • ಕೆಳಗೆ ವಿವರಿಸಲಾದ ಅಂಶಗಳ ಆಧಾರದ ಮೇಲೆ ಮಕ್ಕಳು ಪ್ರಮುಖ ಪ್ರೇಕ್ಷಕರಾಗಿದ್ದಾರೆ. 
  • ಮಕ್ಕಳು ಪ್ರಮುಖ ಪ್ರೇಕ್ಷಕರಲ್ಲ, ಆದರೆ ಕೆಳಗಿನ ಅಂಶಗಳನ್ನು ಆಧರಿಸಿ ವೀಡಿಯೊ ಮಕ್ಕಳನ್ನು ಗುರುಯಾಗಿಸುತ್ತದೆ. (COPPA ಅಡಿಯಲ್ಲಿ ಇದನ್ನು “ಮಿಶ್ರ ಪ್ರೇಕ್ಷಕರ” ಕಂಟೆಂಟ್, ಎಂದು ಕರೆಯಲಾಗುತ್ತಿದ್ದು, ಅದು ಮಕ್ಕಳನ್ನು ಉದ್ದೇಶಿಸಿದ ಕಂಟೆಂಟ್‌ನ ಒಂದು ಪ್ರಕಾರವಾಗಿದೆ. "ಸಾಮಾನ್ಯ ಪ್ರೇಕ್ಷಕರ" ಕಂಟೆಂಟ್ "ಮಿಶ್ರ ಪ್ರೇಕ್ಷಕರ" ಕಂಟೆಂಟ್‌ನಂತೆ ಅಲ್ಲ

ನಿಮ್ಮ ಚಾನಲ್ ಅಥವಾ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಇಲ್ಲವೇ ಎಂಬುದನ್ನು ನಿರ್ಧರಿಸುವಾಗ, ಇವುಗಳನ್ನು ಒಳಗೊಂಡಂತೆ ನೀವು ಹಲವಾರು ಅಂಶಗಳನ್ನು ಪರಿಗಣಿಸಬೇಕು:

  • ವೀಡಿಯೊದ ವಿಷಯ ವಸ್ತು (ಉದಾ: ಪ್ರೀಸ್ಕೂಲ್ ಮಕ್ಕಳಿಗಾಗಿ ಶೈಕ್ಷಣಿಕ ಕಂಟೆಂಟ್).
  • ಮಕ್ಕಳು ನಿಮ್ಮ ವೀಡಿಯೊದ ಉದ್ದೇಶಿತ ಪ್ರೇಕ್ಷಕರೇ (ಉದಾ: ನಿಮ್ಮ ವೀಡಿಯೊ ಮೆಟಾಡೇಟಾದಲ್ಲಿ ಸೂಚಿಸಿದಂತೆ) ಅಥವಾ ನಿಜವಾದ ಪ್ರೇಕ್ಷಕರೇ.
  • ವೀಡಿಯೊ ಬಾಲ ಕಲಾವಿದರು ಅಥವಾ ಮಾಡೆಲ್‌ಗಳನ್ನು ಒಳಗೊಂಡಿದೆಯೇ.
  • ಆ್ಯನಿಮೇಶನ್ ಮಾಡಲಾದ ಪಾತ್ರಗಳು ಅಥವಾ ಕಾರ್ಟೂನ್ ಚಿತ್ರಗಳನ್ನು ಒಳಗೊಂಡಂತೆ ಮಕ್ಕಳನ್ನು ಆಕರ್ಷಿಸುವ ಪಾತ್ರಗಳು, ಸೆಲೆಬ್ರಿಟಿಗಳು ಅಥವಾ ಗೊಂಬೆಗಳನ್ನು ವಿಡಿಯೊ ಒಳಗೊಂಡಿದೆಯೇ.
  • ವೀಡಿಯೊದ ಭಾಷೆಯು ಮಕ್ಕಳು ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶವನ್ನು ಹೊಂದಿದೆಯೇ.
  • ನಾಟಕ-ನಟನೆ, ಸರಳವಾದ ಹಾಡುಗಳು ಅಥವಾ ಗೇಮ್‌ಗಳು ಅಥವಾ ಪೂರ್ವ ಶಿಕ್ಷಣದಂತಹ, ಮಕ್ಕಳನ್ನು ಆಕರ್ಷಿಸುವ ಚಟುವಟಿಕೆಗಳನ್ನು ವೀಡಿಯೊ ಒಳಗೊಂಡಿದೆಯೇ.
  • ಮಕ್ಕಳಿಗಾಗಿ ಹಾಡುಗಳು, ಕತೆಗಳು ಅಥವಾ ಪದ್ಯಗಳನ್ನು ವೀಡಿಯೊ ಒಳಗೊಂಡಿದೆಯೇ.
  • ವೀಡಿಯೊದ ಪ್ರೇಕ್ಷಕರ ಪ್ರಾಯೋಗಿಕ ಪುರಾವೆಯಂತಹ, ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ನಿರ್ಣಯಿಸಲು ಸಹಾಯ ಮಾಡುವುದಕ್ಕೆ ನಿಮ್ಮಲ್ಲಿ ಇರಬಹುದಾದ ಇತರ ಯಾವುದೇ ಮಾಹಿತಿ.
  • ಕಂಟೆಂಟ್ ಅನ್ನು ಮಕ್ಕಳಿಗೆ ಪ್ರಚಾರ ಮಾಡಲಾಗಿದೆಯೇ. 

ಟಿಪ್ಪಣಿಗಳು:

  • ನಿಮ್ಮ ಕಂಟೆಂಟ್ ಈ ಅಂಶಗಳಲ್ಲಿ ಕೆಲವನ್ನು ಒಳಗೊಂಡಿರಬಹುದು ಎಂದ ಮಾತ್ರಕ್ಕೆ ಅದನ್ನು ಸ್ವಯಂಚಾಲಿತವಾಗಿ ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಅರ್ಥವಲ್ಲ. ನಿಮ್ಮ ಕಂಟೆಂಟ್ ಅನ್ನು ಮತ್ತು ಮೇಲಿನ ಅಂಶಗಳನ್ನು ನೀವು ಮೌಲ್ಯಮಾಪನ ಮಾಡುವಾಗ ನಿಮ್ಮ ವೀಡಿಯೊಗಳ ಮೂಲಕ ನೀವು ಯಾರನ್ನು ತಲುಪಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು.
  • YouTube Analytics (YTA) ಅನ್ನು ನಿಮ್ಮ ಕಂಟೆಂಟ್ ಮಕ್ಕಳನ್ನು ಉದ್ದೇಶಿಸಿದೆಯೇ ಎಂಬುದನ್ನು ನಿರ್ಣಯಿಸಲು ಸಹಾಯ ಮಾಡುವುದಕ್ಕೆ ವಿನ್ಯಾಸಗೊಳಿಸಿಲ್ಲ. ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಲು FTC ಯಿಂದ ಮೇಲೆ ವಿವರಿಸಲಾದ ಅಂಶಗಳನ್ನು ನೀವು ಬಳಸಬೇಕು.
  • "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ನೀವು ಸೆಟ್ ಮಾಡುವ ವೀಡಿಯೊಗಳನ್ನು ಇತರ ಮಕ್ಕಳ ವೀಡಿಯೊಗಳ ಜೊತೆಗೆ ಶಿಫಾರಸು ಮಾಡುವ ಸಾಧ್ಯತೆಗಳಿರುತ್ತವೆ. ಮಕ್ಕಳಿಗಾಗಿ ರಚಿಸಲಾಗಿರುವ ಕಂಟೆಂಟ್ ಕುರಿತು ನಮ್ಮ ಬಹುತೇಕ ಪದೇಪದೇ ಕೇಳಲಾಗುವ ಪ್ರಶ್ನೆಗಳನ್ನು ನೋಡಿ.  
ಮುಖ್ಯವಾದದ್ದು: ಒಬ್ಬ ರಚನೆಕಾರರಾಗಿ, ನಿಮ್ಮ ವೀಡಿಯೊಗಳು ಮತ್ತು ನಿಮ್ಮ ಪ್ರೇಕ್ಷಕರ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುತ್ತದೆ ಮತ್ತು COPPA ಮತ್ತು/ಅಥವಾ ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸುವುದು ಮತ್ತು ನಿಮ್ಮ ಕಂಟೆಂಟ್ ಅನ್ನು ನಿಖರವಾಗಿ ಗೊತ್ತುಪಡಿಸುವುದು ನಿಮ್ಮ ಕಾನೂನು ಜವಾಬ್ದಾರಿಯಾಗಿರುತ್ತದೆ. ನಿಮ್ಮ ಪ್ರೇಕ್ಷಕರನ್ನು ನಿಮಗಾಗಿ ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ, ಏಕೆಂದರೆ FTC ಅಥವಾ ಇತರ ಪ್ರಾಧಿಕಾರಗಳು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಗುರುತಿಸದೇ ಇರಬಹುದು. ನಿಮ್ಮ ಕಂಟೆಂಟ್ ಅನ್ನು ಸರಿಯಾಗಿ ವರ್ಗೀಕರಿಸಲು ನೀವು ವಿಫಲವಾದರೆ, YouTube ನಲ್ಲಿ ಪರಿಣಾಮಗಳಾಗಬಹುದು, ಅದೇ ರೀತಿ ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯ್ದೆ (COPPA) ಅಥವಾ ಇತರ ಅನ್ವಯವಾಗುವ ಸ್ಥಳೀಯ ಕಾನೂನುಗಳ ಅಡಿಯಲ್ಲಿ ಕಾನೂನು ಪರಿಣಾಮಗಳು ಉಂಟಾಗಬಹುದು. 
ನನ್ನ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂದು ಸೆಟ್ ಮಾಡಬೇಕೇ ಎಂಬುದು ನನಗೆ ಹೇಗೆ ತಿಳಿಯುತ್ತದೆ?
ನಿಮ್ಮ ಕಂಟೆಂಟ್ ಅನ್ನು ನೀವು ಮೌಲ್ಯಮಾಪನ ಮಾಡುವಾಗ ನಿಮ್ಮ ವೀಡಿಯೊಗಳ ಮೂಲಕ ನೀವು ಯಾರನ್ನು ತಲುಪಲು ಪ್ರಯತ್ನಿಸುತ್ತಿದ್ದೀರಿ ಎಂಬುದನ್ನು ಎಚ್ಚರಿಕೆಯಿಂದ ಪರಿಗಣಿಸಿ. ಉದಾಹರಣೆಗೆ, ಈ ಕೆಳಗಿನ ಕಾರಣಕ್ಕಾಗಿಯೇ ವೀಡಿಯೊವೊಂದನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಹೇಳಲಾಗುವುದಿಲ್ಲ:
  • ಪ್ರತಿಯೊಬ್ಬರೂ ವೀಕ್ಷಿಸಲು ಇದು ಸುರಕ್ಷಿತವಾಗಿದೆ ಅಥವಾ ಸೂಕ್ತವಾಗಿದೆ (ಅಂದರೆ, ಇದು "ಕುಟುಂಬ ಸ್ನೇಹಿ"ಯಾಗಿದೆ).
  • ಇದು ಸಾಂಪ್ರದಾಯಿಕವಾಗಿ ಮಕ್ಕಳಿಗೆ ಸಂಬಂಧಿಸಿದ ಚಟುವಟಿಕೆಯನ್ನು ಒಳಗೊಳ್ಳುತ್ತದೆ.
  • ಮಕ್ಕಳು ಅದನ್ನು ಆಕಸ್ಮಿಕವಾಗಿ ನೋಡಬಹುದು. 

ಸಾಮಾನ್ಯ ಪ್ರೇಕ್ಷಕರ ಕಂಟೆಂಟ್

ಸಾಮಾನ್ಯ ಪ್ರೇಕ್ಷಕರ ಕಂಟೆಂಟ್ ಎಲ್ಲರಿಗೂ ಇಷ್ಟವಾಗುವಂತಹ ಕಂಟೆಂಟ್ ಆಗಿದೆ, ಆದರೆ ನಿರ್ದಿಷ್ಟವಾಗಿ ಮಕ್ಕಳಿಗಾಗಿ ಉದ್ದೇಶಿಸಿರುವ ಕಂಟೆಂಟ್ ಅಲ್ಲ ಅಥವಾ ಹದಿಹರೆಯದ ಅಥವಾ ಹಿರಿಯ ಪ್ರೇಕ್ಷಕರಿಗಾಗಿ ಉದ್ದೇಶಿಸಿರುವ ಕಂಟೆಂಟ್ ಅಲ್ಲ. ಸಾಮಾನ್ಯ ಪ್ರೇಕ್ಷಕರ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಿಲ್ಲ" ಎಂದು ಸೆಟ್ ಮಾಡಬೇಕು.

ಮಕ್ಕಳನ್ನು ಕೇಂದ್ರೀಕರಿಸುವ ಉದ್ದೇಶವನ್ನು ಸೂಚಿಸುವ ಮಾಹಿತಿಯ ಅನುಪಸ್ಥಿತಿಯಲ್ಲಿ, "ಸಾಮಾನ್ಯ ಪ್ರೇಕ್ಷಕರು" ಎಂದು ಪರಿಗಣಿಸಬಹುದಾದ ವೀಡಿಯೊಗಳ ಪ್ರಕಾರಗಳ ಕೆಲವು ಉದಾಹರಣೆಗಳು ಇಲ್ಲಿವೆ:  

  • ಸಣ್ಣ ಗೊಂಬೆಗಳನ್ನು ರೀಮೇಕ್ ಮಾಡುವುದು ಅಥವಾ ಮಣ್ಣಿನ ಆಕೃತಿಗಳನ್ನು ಮಾಡುವುದು ಹೇಗೆ ಎಂದು ಹವ್ಯಾಸಿಗಳಿಗೆ ಕಲಿಸುವ DIY ವೀಡಿಯೊ
  • ಅಮ್ಯೂಸ್‌ಮೆಂಟ್ ಪಾರ್ಕ್ ಭೇಟಿಯ ಕುರಿತು ಇತರ ಪೋಷಕರಿಗೆ ಹೇಳುವ ಕುಟುಂಬದ ವ್ಲಾಗ್ 
  • ಮಾರ್ಪಾಟುಗಳು ಅಥವಾ ಅವತಾರ್‌ಗಳನ್ನು ರಚಿಸುವ ಕುರಿತು ವಿವರವಾದ ಸೂಚನೆಗಳನ್ನು ಫೀಚರ್ ಮಾಡುವ ವೀಡಿಯೊ
  • ಎಲ್ಲರಿಗೂ ಇಷ್ಟವಾಗುವ ಆ್ಯನಿಮೇಟೆಡ್ ಕಂಟೆಂಟ್
  • ವಯಸ್ಕರ ಹಾಸ್ಯವನ್ನು ಫೀಚರ್ ಮಾಡುವ ಗೇಮಿಂಗ್ ವೀಡಿಯೊ

ಸಾಮಾನ್ಯ ಪ್ರೇಕ್ಷಕರು ಮತ್ತು ಮಿಶ್ರ ಪ್ರೇಕ್ಷಕರ ನಡುವಿನ ವ್ಯತ್ಯಾಸವೇನು?

ಮತ್ತೊಂದು ಕಡೆ, ಮಿಶ್ರ ಪ್ರೇಕ್ಷಕರ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಕಂಟೆಂಟ್ ಪ್ರಕಾರ ಎಂದು ಪರಿಗಣಿಸಲಾಗುತ್ತದೆ. ಇದು ಮುಖ್ಯ ಅಥವಾ ಪ್ರಾಥಮಿಕ ಪ್ರೇಕ್ಷಕರಲ್ಲದಿದ್ದರೂ ಸಹ ಮಕ್ಕಳನ್ನು ತನ್ನ ಪ್ರೇಕ್ಷಕರಲ್ಲಿ ಒಬ್ಬರನ್ನಾಗಿ ಟಾರ್ಗೆಟ್ ಮಾಡುವ ಕಂಟೆಂಟ್ ಆಗಿದೆ ಮತ್ತು ಮೇಲೆ ವಿವರಿಸಿದ ಅಂಶಗಳನ್ನು ಸಮತೋಲನಗೊಳಿಸಿದ ನಂತರ ಮಕ್ಕಳನ್ನು ಉದ್ದೇಶಿಸಿದ ಎಂಬ ಅರ್ಹತೆ ಪಡೆಯುತ್ತದೆ.
 
ಗಮನಿಸಿ: ಎಳೆಯ ಪ್ರೇಕ್ಷಕರಿಗೆ ಸೂಕ್ತವಲ್ಲದ ಲೈಂಗಿಕ ಥೀಮ್‍ಗಳು, ಹಿಂಸೆ, ಅಶ್ಲೀಲತೆ ಅಥವಾ ಎಳೆಯ ಪ್ರೇಕ್ಷಕರಿಗೆ ಸೂಕ್ತವಾಗಿರದ ಇತರ ಯಾವುದೇ ವಯಸ್ಕ ಥೀಮ್‌ಗಳನ್ನು ಹೊಂದಿರುವ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸದೇ ಇರುವ ಸಾಧ್ಯತೆಯಿರುತ್ತದೆ.

ಮಗುವಿಗೆ ಎಷ್ಟು ವರ್ಷವಾಗಿದೆ?

ಯುನೈಟೆಡ್ ಸ್ಟೇಟ್ಸ್‌ನಲ್ಲಿ "ಮಗುವಿನ" ವಯಸ್ಸನ್ನು 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವ್ಯಾಖ್ಯಾನಿಸಲಾಗಿದೆ. ಹಾಗಿದ್ದರೂ, ಇತರ ದೇಶಗಳಲ್ಲಿ ಮಗುವಿನ ವಯಸ್ಸು ವಿಭಿನ್ನವಾಗಿರಬಹುದು, ಆದ್ದರಿಂದ ಕಂಟೆಂಟ್ ಅನ್ನು "ಮಕ್ಕಳಿಗಾಗಿ ರಚಿಸಲಾಗಿದೆಯೇ" ಎಂಬುದನ್ನು ಮೌಲ್ಯಮಾಪನ ಮಾಡುವಾಗ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ನೀವು ಹೊಂದಿರಬಹುದಾದ ಯಾವುದೇ ಹೆಚ್ಚುವರಿ ಬಾಧ್ಯತೆಗಳನ್ನು ಪರಿಗಣಿಸಿ ಮತ್ತು ನೀವು ಹೆಚ್ಚುವರಿ ಪ್ರಶ್ನೆಗಳನ್ನು ಹೊಂದಿದ್ದರೆ ಲೀಗಲ್ ಕೌನ್ಸಿಲ್ ಅನ್ನು ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4117495817906380938
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false