ನಿಮ್ಮ ಚಾನಲ್ ಅಥವಾ ವೀಡಿಯೊದ ಪ್ರೇಕ್ಷಕರನ್ನು ಸೆಟ್ ಮಾಡಿ

ನಿಮ್ಮ ಸ್ಥಳ ಯಾವುದೇ ಇರಲಿ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ ಮತ್ತು/ಅಥವಾ ಇತರ ಕಾನೂನುಗಳನ್ನು ನೀವು ಕಾನೂನುರೀತ್ಯಾ ಪಾಲಿಸಬೇಕಾಗುತ್ತದೆ. ನೀವು ಮಕ್ಕಳ ಕಂಟೆಂಟ್ ಅನ್ನು ರಚಿಸಿದರೆ, ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ನೀವು ನಮಗೆ ತಿಳಿಸುವ ಅಗತ್ಯವಿದೆ.

YouTube ರಚನೆಕಾರರಾಗಿ, ಭವಿಷ್ಯದ ಮತ್ತು ಅಸ್ತಿತ್ವದಲ್ಲಿರುವ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆ ಅಥವಾ ಇಲ್ಲ ಎಂಬುದನ್ನು ನೀವು ಸೆಟ್ ಮಾಡಬೇಕಾಗುತ್ತದೆ. ಮಕ್ಕಳಿಗಾಗಿ ಕಂಟೆಂಟ್ ಅನ್ನು ರಚಿಸದ ರಚನೆಕಾರರು ಸಹ ತಮ್ಮ ಪ್ರೇಕ್ಷಕರನ್ನು ಸೆಟ್ ಮಾಡಬೇಕಾಗುತ್ತದೆ. ನಿಮ್ಮ ಕಂಟೆಂಟ್‌ನಲ್ಲಿ ಸೂಕ್ತ ಫೀಚರ್‌ಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಇದು ನಮಗೆ ಸಹಾಯ ಮಾಡುತ್ತದೆ.

Important Update for All Creators: Complying with COPPA

ನೀವು ಅನುಸರಿಸುವುದಕ್ಕೆ ಸಹಾಯ ಮಾಡಲು, YouTube Studio ದಲ್ಲಿ ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದರ ಪ್ರೇಕ್ಷಕರ ಸೆಟ್ಟಿಂಗ್‌ಗಳಿವೆ. ನಿಮ್ಮ ಪ್ರೇಕ್ಷಕರನ್ನು ನೀವು ಇಲ್ಲಿ ಸೆಟ್ ಮಾಡಬಹುದು:

  • ಚಾನಲ್ ಹಂತದಲ್ಲಿ, ಇದು ನಿಮ್ಮ ಭವಿಷ್ಯದ ಮತ್ತು ಪ್ರಸ್ತುತದಲ್ಲಿರುವ ಎಲ್ಲಾ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಅಥವಾ ಇಲ್ಲ ಎಂದು ಸೆಟ್ ಮಾಡುತ್ತದೆ.
  • ಅಥವಾ, ವೀಡಿಯೊ ಹಂತದಲ್ಲಿ. ನೀವು ಈ ಆಯ್ಕೆಯನ್ನು ಆರಿಸಿದರೆ, ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ಪ್ರತಿಯೊಂದು ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಅಥವಾ ಇಲ್ಲ ಎಂದು ನೀವು ಸೆಟ್ ಮಾಡಬೇಕಾಗುತ್ತದೆ.

ಗಮನಿಸಿ:

  • ನಾವು ಪ್ರೇಕ್ಷಕರ ಆಯ್ಕೆ ಟೂಲ್ ಅನ್ನು ಸದ್ಯದಲ್ಲಿಯೇ ಥರ್ಡ್ ಪಾರ್ಟಿ ಆ್ಯಪ್‌ಗಳು ಮತ್ತು YouTube API ಸೇವೆಗಳಲ್ಲಿ ಲಭ್ಯವಾಗುವಂತೆ ಮಾಡುತ್ತೇವೆ. ಸದ್ಯಕ್ಕೆ, ಮಕ್ಕಳಿಗಾಗಿ ರಚಿಸಲಾಗಿದೆ ಎಂಬ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಲು ದಯವಿಟ್ಟು YouTube Studio ಬಳಸಿ.

ಮುಖ್ಯ ಸೂಚನೆ: ಪ್ರತಿ ರಚನೆಕಾರರು ತಮ್ಮ ಪ್ರೇಕ್ಷಕರನ್ನು ಏಕೆ ಸೆಟ್ ಮಾಡಬೇಕು

ಈ ಬದಲಾವಣೆಗಳು, ಯು.ಎಸ್ ಫೆಡರಲ್ ಟ್ರೇಡ್ ಕಮಿಷನ್ (FTC) ಮತ್ತು ನ್ಯೂಯಾರ್ಕ್ ಅಟಾರ್ನಿ ಜನರಲ್ ಜೊತೆಗಿನ ಒಪ್ಪಂದದ ಭಾಗವಾಗಿ ಅಗತ್ಯವಾಗಿವೆ ಮತ್ತು ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು/ಅಥವಾ ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು ಯಾವುದೇ ಸ್ಥಳದಲ್ಲಿದ್ದರೂ, ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಇಲ್ಲವೇ ಎಂದು ನೀವು ನಮಗೆ ತಿಳಿಸುವ ಅಗತ್ಯವಿದೆ. ನಿಮ್ಮ ಪ್ರೇಕ್ಷಕರನ್ನು ನಿಖರವಾಗಿ ಸೆಟ್ ಮಾಡಲು ನೀವು ವಿಫಲವಾದರೆ, FTC ಅಥವಾ ಇತರ ಪ್ರಾಧಿಕಾರಗಳಿಂದ ಅನುಸರಣೆ ಸಂಬಂಧಿ ಸಮಸ್ಯೆಗಳನ್ನು ನೀವು ಎದುರಿಸಬಹುದು ಮತ್ತು ನಿಮ್ಮ YouTube ಖಾತೆಯ ಮೇಲೆ ನಾವು ಕ್ರಮ ತೆಗೆದುಕೊಳ್ಳಬಹುದು. FTC ಯು COPPA ಅನ್ನು ಜಾರಿಗೊಳಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಕೆಲವು ಟಿಪ್ಪಣಿಗಳು:
  • ಸ್ಪಷ್ಟವಾಗಿ ಎಳೆಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುವ ವೀಡಿಯೊಗಳನ್ನು ಗುರುತಿಸುವುದಕ್ಕೆ ನಮಗೆ ಸಹಾಯವಾಗಲು ನಾವು ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ. ನಿಮ್ಮ ಪ್ರೇಕ್ಷಕರನ್ನು ನೀವು ನಿಖರವಾಗಿ ಸೆಟ್ ಮಾಡುತ್ತೀರಿ ಎಂದು ನಾವು ನಂಬಿದ್ದೇವೆ, ಆದರೆ ದೋಷ ಅಥವಾ ದುರುಪಯೋಗ ಕಂಡುಬಂದ ಸಂದರ್ಭಗಳಲ್ಲಿ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ನಾವು ಓವರ್‌ರೈಡ್ ಮಾಡಬಹುದು.
  • ನಿಮ್ಮ ಪ್ರೇಕ್ಷಕರನ್ನು ನಿಮಗಾಗಿ ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ, ಏಕೆಂದರೆ FTC ಅಥವಾ ಇತರ ಪ್ರಾಧಿಕಾರಗಳು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಗುರುತಿಸದೇ ಇರಬಹುದು.
  • ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ನಿಮಗೆ ಸಹಾಯ ಬೇಕಿದ್ದರೆ, ಈ ಸಹಾಯ ಕೇಂದ್ರದ ಲೇಖನವನ್ನು ಓದಿ ಅಥವಾ ಲೀಗಲ್ ಕೌನ್ಸಿಲ್ ಜೊತೆ ಸಮಾಲೋಚಿಸಿ.
  • "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ನೀವು ಸೆಟ್ ಮಾಡುವ ವೀಡಿಯೊಗಳನ್ನು ಇತರ ಮಕ್ಕಳ ವೀಡಿಯೊಗಳ ಜೊತೆಗೆ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ನಿಮ್ಮ ವೀಡಿಯೊಗೆ ನೀವು ಈಗಾಗಲೇ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ ಮತ್ತು YouTube ದೋಷ ಅಥವಾ ದುರುಪಯೋಗವನ್ನು ಪತ್ತೆ ಮಾಡಿದರೆ, ನಿಮ್ಮ ವೀಡಿಯೊವನ್ನು “ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ" ಎಂದು ಸೆಟ್ ಮಾಡಲಾಗಿರುವುದನ್ನು ನೀವು ನೋಡಬಹುದು. ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನೀವು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ನಿಮ್ಮ ಚಾನಲ್‌ನ ಪ್ರೇಕ್ಷಕರನ್ನು ಸೆಟ್ ಮಾಡಿ

ಚಾನಲ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ವರ್ಕ್‌ಫ್ಲೋವನ್ನು ಸರಳಗೊಳಿಸಿ. ಈ ಸೆಟ್ಟಿಂಗ್, ಅಸ್ತಿತ್ವದಲ್ಲಿರುವ ಮತ್ತು ಭವಿಷ್ಯದ ವೀಡಿಯೊಗಳ ಮೇಲೆ ಪರಿಣಾಮ ಬೀರುತ್ತದೆ. ನೀವು ಚಾನಲ್ ಸೆಟ್ಟಿಂಗ್ ಅನ್ನು ಆಯ್ಕೆ ಮಾಡದಿದ್ದರೆ, ನಿಮ್ಮ ಚಾನಲ್‌ನಲ್ಲಿ ಮಕ್ಕಳಿಗಾಗಿ ರಚಿಸಲಾದ ಪ್ರತಿಯೊಂದು ವೀಡಿಯೊವನ್ನು ನೀವು ಗುರುತಿಸುವ ಅಗತ್ಯವಿರುತ್ತದೆ. ಪ್ರತ್ಯೇಕ ವೀಡಿಯೊಗಳ ಸೆಟ್ಟಿಂಗ್‌ಗಳು, ಚಾನಲ್ ಸೆಟ್ಟಿಂಗ್ ಅನ್ನು ಓವರ್‌ರೈಡ್ ಮಾಡುತ್ತವೆ.
ಇದು ನಿಮ್ಮ ಚಾನಲ್‌ನಲ್ಲಿ ಕೆಲವೊಂದು ಫೀಚರ್‌ಗಳನ್ನು ಸಹ ನಿರ್ಬಂಧಿಸುತ್ತದೆ. ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ.
  1. studio.youtube.com ಗೆ ಸೈನ್ ಇನ್ ಮಾಡಿ (ವೆಬ್ ಸ್ಟುಡಿಯೊ ಮಾತ್ರ).
  2. ಎಡಭಾಗದ ಮೆನುವಿನಲ್ಲಿ, ಸೆಟ್ಟಿಂಗ್‌ಗಳು ಅನ್ನು ಕ್ಲಿಕ್ ಮಾಡಿ.
  3. ಚಾನಲ್ ಅನ್ನು ಕ್ಲಿಕ್ ಮಾಡಿ.
  4. ಸುಧಾರಿತ ಸೆಟ್ಟಿಂಗ್‌ಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ. 
  5. ಪ್ರೇಕ್ಷಕರು ಎಂಬುದರ ಅಡಿಯಲ್ಲಿ, ಇದನ್ನು ಆಯ್ಕೆ ಮಾಡಿ:
    1. “ಹೌದು, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿ. ನಾನು ಯಾವಾಗಲೂ, ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುತ್ತೇನೆ.” 
    2. “ಇಲ್ಲ, ಈ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ ಎಂದು ಸೆಟ್ ಮಾಡಿ. ನಾನು ಎಂದೂ ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವುದಿಲ್ಲ.”
    3. “ನಾನು ಪ್ರತಿ ವೀಡಿಯೊಗಾಗಿ ಈ ಸೆಟ್ಟಿಂಗ್ ಅನ್ನು ಪರಿಶೀಲಿಸಲು ಬಯಸುತ್ತೇನೆ.” 
  6. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ಸೆಟ್ ಮಾಡಿ
ನೀವು ಪ್ರತ್ಯೇಕ ವೀಡಿಯೊಗಳನ್ನು, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಬಹುದು. ನಿಮ್ಮ ವೀಡಿಯೊಗಳಲ್ಲಿ ಕೆಲವನ್ನು ಮಾತ್ರ ಮಕ್ಕಳಿಗಾಗಿ ರಚಿಸಲಾಗಿದ್ದರೆ, ಇದು ಒಳ್ಳೆಯ ಆಯ್ಕೆಯಾಗಿದೆ. ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ. 

ಅಪ್‌ಲೋಡ್ ಮಾಡುವಾಗ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿ

  1. studio.youtube.com ಗೆ ಹೋಗಿ. ಗಮನಿಸಿ: ನಿಮ್ಮ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲು, ನೀವು YouTube Studio ಬಳಸಬೇಕಾಗುತ್ತದೆ. Creator Studio Classic ನಲ್ಲಿ ನೀವು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. 
  2. ಮೇಲಿನ ಬಲಭಾಗದ ಮೂಲೆಯಲ್ಲಿ, ಅಪ್‌ಲೋಡ್ ಐಕಾನ್ ಅನ್ನು ಕ್ಲಿಕ್ ಮಾಡಿ. 
  3. ವೀಡಿಯೊ ಅಪ್‌ಲೋಡ್ ಮಾಡಿ (ಬೀಟಾ) ಎಂಬುದನ್ನು ಕ್ಲಿಕ್ ಮಾಡಿ. ನಿಮಗೆ ಇದು ಕಾಣಿಸದಿದ್ದರೆ, ವೀಡಿಯೊ ಅಪ್‌ಲೋಡ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  4. ಸಾಮಾನ್ಯ ಮಾಹಿತಿ ಟ್ಯಾಬ್‌ನಲ್ಲಿ, ಪ್ರೇಕ್ಷಕರು ಎಂಬಲ್ಲಿಗೆ ಸ್ಕ್ರಾಲ್ ಮಾಡಿ.
  5. ಆಯ್ಕೆಮಾಡಿ:
    • “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ".
    • “ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ"
  6. ನಿಮ್ಮ ಕಂಟೆಂಟ್ ಅಪ್‌ಲೋಡ್ ಮಾಡುವುದನ್ನು ಮಂದುವರಿಸಲು ಮುಂದೆ ಎಂಬುದನ್ನು ಕ್ಲಿಕ್ ಮಾಡಿ. 

ನಿಮ್ಮ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದ ನಂತರ, ನಿಮ್ಮ ಅಪ್‌ಲೋಡ್‌ಗಳ ಪಟ್ಟಿಯಲ್ಲಿ ಅದನ್ನು “ಮಕ್ಕಳಿಗಾಗಿ ರಚಿಸಲಾಗಿದೆ - ನೀವು ಸೆಟ್ ಮಾಡಿರುವುದು” ಎಂದು ಲೇಬಲ್ ಮಾಡಲಾಗುತ್ತದೆ. 

ಅಸ್ತಿತ್ವದಲ್ಲಿರುವ ವೀಡಿಯೊಗಳಲ್ಲಿ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಅಪ್‌ಡೇಟ್ ಮಾಡಿ

ಕೆಲವು ವೀಡಿಯೊಗಳನ್ನು YouTube ಈಗಾಗಲೇ “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಸೆಟ್ ಮಾಡಿರುವುದನ್ನು ನೀವು ಗಮನಿಸಬಹುದು. ನಿಮ್ಮ ವೀಡಿಯೊಗಳನ್ನು ಅಥವಾ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಅಥವಾ ಇಲ್ಲ ಎಂದು ಸೆಟ್ ಮಾಡಲು ಇಲ್ಲಿಯವರೆಗೆ ನಿಮಗೆ ಅವಕಾಶ ಸಿಕ್ಕಿರದ ಕಾರಣ, ಇದೀಗ ನೀವು ಇದನ್ನು ಮಾಡಬಹುದು:

  1. studio.youtube.com ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊಗಳ ಪಕ್ಕದಲ್ಲಿರುವ ಬಾಕ್ಸ್‌ಗಳನ್ನು ಗುರುತು ಮಾಡಿ. ಗಮನಿಸಿ: ನಿಮ್ಮ ಅಪ್‌ಲೋಡ್ ಪಟ್ಟಿಯ ಮೇಲ್ಭಾಗದಲ್ಲಿರುವ “ವೀಡಿಯೊ” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡುವ ಮೂಲಕ ನಿಮ್ಮ ಎಲ್ಲಾ ವೀಡಿಯೊಗಳನ್ನು ಆಯ್ಕೆ ಮಾಡಬಹುದು. 
  4. ಎಡಿಟ್ ಮಾಡಿ ನಂತರ ಪ್ರೇಕ್ಷಕರು ನಂತರ “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ” ಎಂಬುದನ್ನು ಆಯ್ಕೆ ಮಾಡಿ.
  5. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ಕೆಲವು ಟಿಪ್ಪಣಿಗಳು: 
  • ಸ್ಪಷ್ಟವಾಗಿ ಎಳೆಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುವ ವೀಡಿಯೊಗಳನ್ನು ಗುರುತಿಸುವುದಕ್ಕೆ ನಮಗೆ ಸಹಾಯವಾಗಲು ನಾವು ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ. ನಿಮ್ಮ ಪ್ರೇಕ್ಷಕರನ್ನು ನೀವು ನಿಖರವಾಗಿ ಸೆಟ್ ಮಾಡುತ್ತೀರಿ ಎಂದು ನಾವು ನಂಬಿದ್ದೇವೆ, ಆದರೆ ದೋಷ ಅಥವಾ ದುರುಪಯೋಗ ಕಂಡುಬಂದರೆ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ನಾವು ಓವರ್‌ರೈಡ್ ಮಾಡಬಹುದು. 
  • ನಿಮ್ಮ ಪ್ರೇಕ್ಷಕರನ್ನು ನಿಮಗಾಗಿ ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ, ಏಕೆಂದರೆ FTC ಅಥವಾ ಇತರ ಪ್ರಾಧಿಕಾರಗಳು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಗುರುತಿಸದೇ ಇರಬಹುದು. 
  • ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ನಿಮಗೆ ಸಹಾಯ ಬೇಕಿದ್ದರೆ, ಈ ಸಹಾಯ ಕೇಂದ್ರದ ಲೇಖನವನ್ನು ಓದಿ ಅಥವಾ ಲೀಗಲ್ ಕೌನ್ಸಿಲ್ ಜೊತೆ ಸಮಾಲೋಚಿಸಿ.
  • "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ನೀವು ಸೆಟ್ ಮಾಡುವ ವೀಡಿಯೊಗಳನ್ನು ಇತರ ಮಕ್ಕಳ ವೀಡಿಯೊಗಳ ಜೊತೆಗೆ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. 
  • ನಿಮ್ಮ ವೀಡಿಯೊಗೆ ನೀವು ಈಗಾಗಲೇ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ ಮತ್ತು YouTube ದೋಷ ಅಥವಾ ದುರುಪಯೋಗವನ್ನು ಪತ್ತೆ ಮಾಡಿದರೆ, ನಿಮ್ಮ ವೀಡಿಯೊವನ್ನು “ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ" ಎಂದು ಸೆಟ್ ಮಾಡಲಾಗಿರುವುದನ್ನು ನೀವು ನೋಡಬಹುದು. ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನೀವು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ನಿಮ್ಮ ಲೈವ್ ಸ್ಟ್ರೀಮ್‌ನ ಪ್ರೇಕ್ಷಕರನ್ನು ಸೆಟ್ ಮಾಡಿ

ಲೈವ್ ಸ್ಟ್ರೀಮ್ ಅನ್ನು ರಚಿಸುವಾಗ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿ

ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಸಹಾಯ ಕೇಂದ್ರದ ಲೇಖನವನ್ನು ನೋಡಿ. 

  1. studio.youtube.com ಎಂಬಲ್ಲಿಗೆ ಹೋಗಿ.
  2. ಮೇಲಿನ ಬಲಭಾಗದ ಮೂಲೆಯಲ್ಲಿ, ಅಪ್‌ಲೋಡ್ ಐಕಾನ್ ಅನ್ನು ಕ್ಲಿಕ್ ಮಾಡಿ.
  3. ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ. ಗಮನಿಸಿ: ಇದನ್ನು ಕ್ಲಿಕ್ ಮಾಡುವುದರಿಂದ ನಿಮ್ಮನ್ನು ಲೈವ್ ನಿಯಂತ್ರಣ ಕೊಠಡಿಗೆ ಕಳುಹಿಸಲಾಗುತ್ತದೆ. ನಮ್ಮ ಕ್ಲಾಸಿಕ್ ಲೈವ್ ಸ್ಟ್ರೀಮಿಂಗ್ ಟೂಲ್‌ಗಳನ್ನು ಬಳಸಿಕೊಂಡು ನಿಮ್ಮ ಲೈವ್ ಸ್ಟ್ರೀಮ್‌ನ ಪ್ರೇಕ್ಷಕರನ್ನು ಸೆಟ್ ಮಾಡಲು ಸಾಧ್ಯವಾಗುವುದಿಲ್ಲ, ಹಾಗಾಗಿ ಲೈವ್ ನಿಯಂತ್ರಣ ಕೊಠಡಿಯನ್ನು ಬಳಸಿಕೊಂಡು ನೀವು ಹಾಗೆ ಮಾಡಬೇಕಾಗುತ್ತದೆ.
  4. ನೀವು ಪ್ರಾಥಮಿಕ ಮಾಹಿತಿಯನ್ನು ಭರ್ತಿ ಮಾಡಿ, ಗೌಪ್ಯತೆ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿದ ನಂತರ, ಪ್ರೇಕ್ಷಕರು ಎಂಬುದಕ್ಕೆ ಸ್ಕ್ರಾಲ್ ಮಾಡಿ. 
  5. ಆಯ್ಕೆಮಾಡಿ:
    • “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ”.
    • “ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ".
  6. ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸೆಟ್ ಅಪ್ ಮಾಡುವುದನ್ನು ಮುಂದುವರಿಸಲು ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.

ಆರ್ಕೈವ್ ಮಾಡಿದ ಲೈವ್ ಸ್ಟ್ರೀಮ್‌ಗಳಲ್ಲಿ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಅಪ್‌ಡೇಟ್ ಮಾಡಿ

ಕೆಲವು ಆರ್ಕೈವ್ ಮಾಡಲಾದ ಲೈವ್ ಸ್ಟ್ರೀಮ್‌ಗಳನ್ನು YouTube ಈಗಾಗಲೇ “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಸೆಟ್ ಮಾಡಿರುವುದನ್ನು ನೀವು ಗಮನಿಸಬಹುದು. ನಿಮ್ಮ ಆರ್ಕೈವ್ ಮಾಡಲಾದ ಲೈವ್ ಸ್ಟ್ರೀಮ್‌ಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಸೆಟ್ ಮಾಡಲು ಇಲ್ಲಿಯವರೆಗೆ ನಿಮಗೆ ಅವಕಾಶ ಸಿಕ್ಕಿರದ ಕಾರಣ, ಇದೀಗ ನೀವು ಇದನ್ನು ಮಾಡಬಹುದು:

  1. studio.youtube.com ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಲೈವ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನೀವು ಎಡಿಟ್ ಮಾಡಲು ಬಯಸುವ ವೀಡಿಯೊಗಳ ಪಕ್ಕದಲ್ಲಿರುವ ಬಾಕ್ಸ್‌ಗಳನ್ನು ಗುರುತು ಮಾಡಿ. ಗಮನಿಸಿ: ಪಟ್ಟಿಯ ಮೇಲ್ತುದಿಯಲ್ಲಿರುವ “ಲೈವ್ ಸ್ಟ್ರೀಮ್” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಮಾಡುವ ಮೂಲಕ ನಿಮ್ಮ ಎಲ್ಲಾ ವೀಡಿಯೊಗಳನ್ನು ನೀವು ಆಯ್ಕೆ ಮಾಡಬಹುದು. 
  5. ಅದು ಮಕ್ಕಳ ಕಂಟೆಂಟ್ ಆಗಿದ್ದರೆ, ಎಡಿಟ್ ಮಾಡಿ ನಂತರ ಪ್ರೇಕ್ಷಕರು ನಂತರ  “ಹೌದು, ಇದನ್ನು ಮಕ್ಕಳಿಗಾಗಿ ರಚಿಸಲಾಗಿದೆ” ಎಂಬುದನ್ನು ಆಯ್ಕೆ ಮಾಡಿ. ಅಥವಾ, ಅದು ಮಕ್ಕಳ ಕಂಟೆಂಟ್ ಆಗಿರದಿದ್ದರೆ “ಇಲ್ಲ, ಇದನ್ನು ಮಕ್ಕಳಿಗಾಗಿ ರಚಿಸಲಾಗಿಲ್ಲ” ಎಂಬುದನ್ನು ಆಯ್ಕೆ ಮಾಡಿ.
  6. ವೀಡಿಯೊಗಳನ್ನು ಅಪ್‌ಡೇಟ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
ಕೆಲವು ಟಿಪ್ಪಣಿಗಳು
  • ಸ್ಪಷ್ಟವಾಗಿ ಎಳೆಯ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡಿರುವ ವೀಡಿಯೊಗಳನ್ನು ಗುರುತಿಸುವುದಕ್ಕೆ ನಮಗೆ ಸಹಾಯವಾಗಲು ನಾವು ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ. ನಿಮ್ಮ ಪ್ರೇಕ್ಷಕರನ್ನು ನೀವು ನಿಖರವಾಗಿ ಸೆಟ್ ಮಾಡುತ್ತೀರಿ ಎಂದು ನಾವು ನಂಬಿದ್ದೇವೆ, ಆದರೆ ದೋಷ ಅಥವಾ ದುರುಪಯೋಗ ಕಂಡುಬಂದರೆ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ನಾವು ಓವರ್‌ರೈಡ್ ಮಾಡಬಹುದು. 
  • ನಿಮ್ಮ ಪ್ರೇಕ್ಷಕರನ್ನು ನಿಮಗಾಗಿ ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ, ಏಕೆಂದರೆ FTC ಅಥವಾ ಇತರ ಪ್ರಾಧಿಕಾರಗಳು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಗುರುತಿಸದೇ ಇರಬಹುದು. 
  • ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ನಿಮಗೆ ಸಹಾಯ ಬೇಕಿದ್ದರೆ, ಈ ಸಹಾಯ ಕೇಂದ್ರದ ಲೇಖನವನ್ನು ಓದಿ ಅಥವಾ ಲೀಗಲ್ ಕೌನ್ಸಿಲ್ ಜೊತೆ ಸಮಾಲೋಚಿಸಿ.
  • "ಮಕ್ಕಳಿಗಾಗಿ ರಚಿಸಲಾಗಿದೆ" ಎಂದು ನೀವು ಸೆಟ್ ಮಾಡುವ ವೀಡಿಯೊಗಳನ್ನು ಇತರ ಮಕ್ಕಳ ವೀಡಿಯೊಗಳ ಜೊತೆಗೆ ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ನಿಮ್ಮ ವೀಡಿಯೊಗೆ ನೀವು ಈಗಾಗಲೇ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ ಮತ್ತು YouTube ದೋಷ ಅಥವಾ ದುರುಪಯೋಗವನ್ನು ಪತ್ತೆ ಮಾಡಿದರೆ, ನಿಮ್ಮ ವೀಡಿಯೊವನ್ನು “ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ" ಎಂದು ಸೆಟ್ ಮಾಡಲಾಗಿರುವುದನ್ನು ನೀವು ನೋಡಬಹುದು. ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನೀವು ಬದಲಾಯಿಸಲು ಸಾಧ್ಯವಾಗುವುದಿಲ್ಲ. ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿ ಸಲ್ಲಿಸಬಹುದು.

ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದಾಗ ಏನಾಗುತ್ತದೆ

ಕಾನೂನಿನ ಅನುಸರಣೆಗಾಗಿ ಮಕ್ಕಳಿಗಾಗಿ ರಚಿಸಲಾಗಿರುವ ಕಂಟೆಂಟ್‌ನಲ್ಲಿ ನಾವು ಡೇಟಾ ಸಂಗ್ರಹಣೆ ಮತ್ತು ಬಳಕೆಯನ್ನು ಮಿತಿಗೊಳಿಸುತ್ತೇವೆ. ಇದರರ್ಥ, ಕಾಮೆಂಟ್‌ಗಳು, ನೋಟಿಫಿಕೇಶನ್‌ಗಳು ಮತ್ತು ಇತ್ಯಾದಿಗಳಂತಹ ಕೆಲವು ಫೀಚರ್‌ಗಳನ್ನು ನಾವು ನಿರ್ಬಂಧಿಸಬೇಕಾಗುತ್ತದೆ ಅಥವಾ ನಿಷ್ಕ್ರಿಯಗೊಳಿಸಬೇಕಾಗುತ್ತದೆ.

ಅತಿ ಮುಖ್ಯವಾಗಿ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು/ಅಥವಾ ಅನ್ವಯಿಸುವ ಇತರ ಕಾನೂನುಗಳ ಅವಶ್ಯಕತೆಯ ಪ್ರಕಾರ, ಮಕ್ಕಳ ಕಂಟೆಂಟ್‌ನಲ್ಲಿ ನಾವು ವೈಯಕ್ತೀಕರಿಸಿದ ಜಾಹೀರಾತುಗಳನ್ನು ಸರ್ವ್ ಮಾಡುವುದಿಲ್ಲ. ಮಕ್ಕಳ ಕಂಟೆಂಟ್‌ನಲ್ಲಿ ವೈಯಕ್ತೀಕರಿಸಿದ ಜಾಹೀರಾತುಗಳನ್ನು ಸರ್ವ್ ಮಾಡದೇ ಇರುವುದರಿಂದ, ತಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗುರುತಿಸುವ ಕೆಲವು ರಚನೆಕಾರರ ಆದಾಯದಲ್ಲಿ ಇಳಿಕೆ ಕಂಡುಬರಬಹುದು. ಕೆಲವು ರಚನೆಕಾರರಿಗೆ, ಈ ಬದಲಾವಣೆಗಳನ್ನು ಸ್ವೀಕರಿಸುವುದು ಸುಲಭವಲ್ಲ ಎಂದು ನಮಗೆ ತಿಳಿದಿದೆ, ಆದರೆ COPPA ಹಾಗೂ ಅನ್ವಯಿಸುವ ಇತರ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಇವು ಕೈಗೊಳ್ಳಬೇಕಾದ ಪ್ರಮುಖ ಹಂತಗಳಾಗಿವೆ.

ಪರಿಣಾಮಕ್ಕೆ ಒಳಗಾಗುವ ಫೀಚರ್‌ಗಳ ಪಟ್ಟಿಗಾಗಿ ಕೆಳಗೆ ಓದಿ:

ನೀವು ವೀಡಿಯೊ ಅಥವಾ ಲೈವ್ ಸ್ಟ್ರೀಮ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿದರೆ

ನಿಮ್ಮ ಕಂಟೆಂಟ್ ಅನ್ನು “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ನೀವು ಸೆಟ್ ಮಾಡಿದಾಗ, ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು ಅನ್ವಯಿಸುವ ಇತರ ಕಾನೂನುಗಳನ್ನು ಅನುಸರಿಸುವುದಕ್ಕಾಗಿ ನಾವು ಕೆಲವೊಂದು ಫೀಚರ್‌ಗಳನ್ನು ನಿರ್ಬಂಧಿಸುತ್ತೇವೆ. ಹೀಗಾದಾಗ, ಪ್ರತ್ಯೇಕ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳಲ್ಲಿ ಈ ಕೆಳಗಿನ ಫೀಚರ್‌ಗಳು ಲಭ್ಯವಿರುವುದಿಲ್ಲ:

  • ಹೋಮ್‌ನಲ್ಲಿ ಆಟೋಪ್ಲೇ
  • ಕಾರ್ಡ್‌ಗಳು ಅಥವಾ ಮುಕ್ತಾಯ ಪರದೆಗಳು
  • ವೀಡಿಯೊ ವಾಟರ್‌ಮಾರ್ಕ್‌ಗಳು
  • ಚಾನಲ್ ಸದಸ್ಯತ್ವಗಳು
  • ಕಾಮೆಂಟ್‌ಗಳು
  • ದೇಣಿಗೆ ಬಟನ್
  • YouTube Music ನಲ್ಲಿ ಲೈಕ್‌ಗಳು ಮತ್ತು ಡಿಸ್‌ಲೈಕ್‌ಗಳು
  • ಲೈವ್ ಚಾಟ್ ಅಥವಾ ಲೈವ್ ಚಾಟ್ ಕೊಡುಗೆಗಳು
  • ವ್ಯಾಪಾರದ ಸರಕು ಮತ್ತು ಟಿಕೆಟಿಂಗ್
  • ನೋಟಿಫಿಕೇಶನ್ ಬೆಲ್
  • ವೈಯಕ್ತಿಕಗೊಳಿಸಿದ ಜಾಹೀರಾತು
  • ಮಿನಿಪ್ಲೇಯರ್‌ನಲ್ಲಿ ಪ್ಲೇಬ್ಯಾಕ್
  • ಸೂಪರ್ ಚಾಟ್ ಅಥವಾ ಸೂಪರ್ ಸ್ಟಿಕ್ಕರ್ಸ್
  • ಪ್ಲೇಪಟ್ಟಿಯಲ್ಲಿ ಸೇವ್ ಮಾಡುವುದು ಮತ್ತು ನಂತರ ವೀಕ್ಷಿಸಿ ಎಂಬ ಪಟ್ಟಿಯಲ್ಲಿ ಸೇವ್ ಮಾಡುವುದು
ನಿಮ್ಮ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ನೀವು ಸೆಟ್ ಮಾಡಿದರೆ

ನಿಮ್ಮ ಚಾನಲ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದ್ದರೆ, ನಿಮ್ಮ ವೀಡಿಯೊಗಳು ಅಥವಾ ಲೈವ್ ಸ್ಟ್ರೀಮ್‌ಗಳು ಈ ಮೇಲಿನ ಯಾವುದೇ ಫೀಚರ್‌ಗಳನ್ನು ಹೊಂದಿರುವುದಿಲ್ಲ. ನಿಮ್ಮ ಚಾನಲ್ ಈ ಕೆಳಗಿನವುಗಳನ್ನು ಸಹ ಹೊಂದಿರುವುದಿಲ್ಲ: 

  • ಚಾನಲ್ ಸದಸ್ಯತ್ವಗಳು
  • ನೋಟಿಫಿಕೇಶನ್ ಬೆಲ್
  • ಪೋಸ್ಟ್‌ಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾಗಿರುವ ಕಂಟೆಂಟ್‌ನಲ್ಲಿ ನೋಟಿಫಿಕೇಶನ್‌ಗಳು, ಕಾಮೆಂಟ್‌ಗಳು ಮತ್ತು ಇತರ ಫೀಚರ್‌ಗಳನ್ನು ಏಕೆ ಆಫ್ ಮಾಡಲಾಗಿದೆ?

ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗೊತ್ತುಪಡಿಸಿದ ಕಂಟೆಂಟ್‌ನಲ್ಲಿ ಡೇಟಾ ಸಂಗ್ರಹಣೆಯನ್ನು ನಾವು ಮಿತಿಗೊಳಿಸುತ್ತೇವೆ. ಇದರಿಂದಾಗಿ, ನೋಟಿಫಿಕೇಶನ್‌ಗಳು ಮತ್ತು ಕಾಮೆಂಟ್‌ಗಳನ್ನು ಒಳಗೊಂಡಂತೆ ಈ ಕಂಟೆಂಟ್‌ನಲ್ಲಿ ಕೆಲವು ಫೀಚರ್‌ಗಳನ್ನು ನಿರ್ಬಂಧಿಸಬಹುದು ಅಥವಾ ಆಫ್ ಮಾಡಬಹುದು.

ನನ್ನ ವೀಡಿಯೊಗಳ ಪ್ರೇಕ್ಷಕರನ್ನು ನಾನು ತಪ್ಪಾಗಿ ಸೆಟ್ ಮಾಡಿದರೆ ಏನಾಗುತ್ತದೆ?

ಈ ಬದಲಾವಣೆಗಳು, ಯು.ಎಸ್ ಫೆಡರಲ್ ಟ್ರೇಡ್ ಕಮಿಷನ್ (FTC) ಮತ್ತು ನ್ಯೂಯಾರ್ಕ್ ಅಟಾರ್ನಿ ಜನರಲ್ ಜೊತೆಗಿನ ಒಪ್ಪಂದದ ಭಾಗವಾಗಿ ಅಗತ್ಯವಾಗಿವೆ ಮತ್ತು ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತಾ ಕಾಯ್ದೆ (COPPA) ಮತ್ತು/ಅಥವಾ ಇತರ ಅನ್ವಯವಾಗುವ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುತ್ತವೆ. ನೀವು ಯಾವುದೇ ಸ್ಥಳದಲ್ಲಿದ್ದರೂ, ನಿಮ್ಮ ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಇಲ್ಲವೇ ಎಂದು ನೀವು ನಮಗೆ ತಿಳಿಸುವ ಅಗತ್ಯವಿದೆ. ನಿಮ್ಮ ಪ್ರೇಕ್ಷಕರನ್ನು ನಿಖರವಾಗಿ ಸೆಟ್ ಮಾಡಲು ನೀವು ವಿಫಲವಾದರೆ, FTC ಅಥವಾ ಇತರ ಪ್ರಾಧಿಕಾರಗಳಿಂದ ಅನುಸರಣೆ ಸಂಬಂಧಿ ಸಮಸ್ಯೆಗಳನ್ನು ನೀವು ಎದುರಿಸಬಹುದು ಮತ್ತು ನಿಮ್ಮ YouTube ಖಾತೆಯ ಕುರಿತಾಗಿ ನಾವು ಕ್ರಮ ತೆಗೆದುಕೊಳ್ಳಬಹುದು. FTC ಯು COPPA ಅನ್ನು ಜಾರಿಗೊಳಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಎಳೆಯ ಪ್ರೇಕ್ಷಕರನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿರುವ ವೀಡಿಯೊಗಳನ್ನು ಗುರುತಿಸುವುದಕ್ಕಾಗಿ ಸಹಾಯ ಮಾಡಲು ನಾವು ಮಷಿನ್ ಲರ್ನಿಂಗ್ ಅನ್ನು ಸಹ ಬಳಸುತ್ತೇವೆ. ನಿಮ್ಮ ಪ್ರೇಕ್ಷಕರನ್ನು ನೀವು ನಿಖರವಾಗಿ ಸೆಟ್ ಮಾಡುತ್ತೀರಿ ಎಂದು ನಾವು ನಂಬಿದ್ದೇವೆ, ಆದರೆ ದೋಷ ಅಥವಾ ದುರುಪಯೋಗ ಕಂಡುಬಂದ ಸಂದರ್ಭಗಳಲ್ಲಿ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ನಾವು ಓವರ್‌ರೈಡ್ ಮಾಡಬಹುದು. ಹಾಗಿದ್ದರೂ, ನಿಮ್ಮ ಪ್ರೇಕ್ಷಕರನ್ನು ನಿಮಗಾಗಿ ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ, ಏಕೆಂದರೆ FTC ಅಥವಾ ಇತರ ಪ್ರಾಧಿಕಾರಗಳು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಪರಿಗಣಿಸುವ ಕಂಟೆಂಟ್ ಅನ್ನು ನಮ್ಮ ಸಿಸ್ಟಂಗಳು ಗುರುತಿಸದೇ ಇರಬಹುದು. ನಿಮ್ಮ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ನೀವು ನಿಖರವಾಗಿ ಸೆಟ್ ಮಾಡದಿದ್ದರೆ, ನೀವು ಕಾನೂನು ಪರಿಣಾಮಗಳನ್ನು ಅಥವಾ YouTube ನಲ್ಲಿ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಣಯಿಸಲು ನಿಮಗೆ ಸಹಾಯ ಬೇಕಿದ್ದರೆ, ಈ ಸಹಾಯ ಕೇಂದ್ರದ ಲೇಖನವನ್ನು ಓದಿ ಅಥವಾ ಲೀಗಲ್ ಕೌನ್ಸಿಲ್ ಜೊತೆ ಸಮಾಲೋಚಿಸಿ.

ನನ್ನ ವೀಡಿಯೊದ ಪ್ರೇಕ್ಷಕರನ್ನು ನಾನು ಸರಿಯಾಗಿ ಸೆಟ್ ಮಾಡಿದ್ದೇನೆಯೇ ಎಂದು ನನಗೆ ಹೇಗೆ ತಿಳಿಯುತ್ತದೆ?

ದುರದೃಷ್ಟವಶಾತ್, ನಿಮ್ಮ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ನೀವು ನಿಖರವಾಗಿ ಸೆಟ್ ಮಾಡಿದ್ದೀರಾ ಇಲ್ಲವೇ ಎಂಬ ಬಗ್ಗೆ ಮಾರ್ಗದರ್ಶನ ನೀಡಲು ನಮಗೆ ಸಾಧ್ಯವಿಲ್ಲ, ಆದರೆ ಮಕ್ಕಳನ್ನು ಗುರಿಯಾಗಿರಿಸುವುದು (ಅಥವಾ, “ಮಕ್ಕಳಿಗಾಗಿ ರಚಿಸಲಾಗಿದೆ”) ಎಂದರೆ ಏನು ಎಂಬುದರ ಬಗ್ಗೆ FTC ಕೆಲವು ಮಾರ್ಗದರ್ಶನ ನೀಡಿದೆ. FTC ಯು ಪ್ರಸ್ತುತ COPPA ಗೆ ಹಲವಾರು ಅಪ್‌ಡೇಟ್‌ಗಳನ್ನು ಪರಿಗಣಿಸುತ್ತಿದ್ದು, ಅವು ಈ ಸಮಸ್ಯೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾರ್ಗದರ್ಶನವನ್ನು ಒಳಗೊಂಡಿರಬಹುದು.

ಸ್ಪಷ್ಟವಾಗಿ ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್ ಅನ್ನು ಹುಡುಕುವುದಕ್ಕೆ ನಮಗೆ ಸಹಾಯವಾಗಲೆಂದು, ನಾವು ಮಷಿನ್ ಲರ್ನಿಂಗ್ ಸಿಸ್ಟಂಗಳನ್ನು ಸಹ ಬಳಸುತ್ತೇವೆ. ಆದರೆ, ನಿಮಗಾಗಿ ಕಂಟೆಂಟ್ ಅನ್ನು ಸೆಟ್ ಮಾಡಲು ನಮ್ಮ ಸಿಸ್ಟಂಗಳನ್ನು ಅವಲಂಬಿಸಬೇಡಿ -- ಎಲ್ಲಾ ಸ್ವಯಂಚಾಲಿತ ಸಿಸ್ಟಂಗಳ ಹಾಗೆ, ಇದು ಪರಿಪೂರ್ಣವಾಗಿಲ್ಲ. ನಾವು ದೋಷ ಅಥವಾ ದುರುಪಯೋಗವನ್ನು ಪತ್ತೆ ಮಾಡಿದ ಸಂದರ್ಭಗಳಲ್ಲಿ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಆಯ್ಕೆಯನ್ನು ನಾವು ಓವರ್‌ರೈಡ್ ಮಾಡಬೇಕಾಗಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ, ವೀಡಿಯೊವೊಂದನ್ನು ಮಕ್ಕಳಿಗಾಗಿ ರಚಿಸಲಾಗಿದೆಯೇ ಎಂದು ನಿರ್ಣಯಿಸಲು ನಾವು ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಅವಲಂಬಿಸುತ್ತೇವೆ.

ನಿಮ್ಮ ಪ್ರೇಕ್ಷಕರನ್ನು ನೀವು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡದಿದ್ದರೆ ಮತ್ತು ಹಾಗೆ ಮಾಡಬೇಕಿತ್ತು ಎಂದು FTC ಅಥವಾ ಇತರ ಪ್ರಾಧಿಕಾರಗಳು ಭಾವಿಸಿದರೆ, ನೀವು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ, ನಿಮ್ಮ ಕಂಟೆಂಟ್ ಅನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಬೇಕೇ ಬೇಡವೇ ಎಂಬುದು ನಿಮಗೆ ಇನ್ನೂ ಖಚಿತವಾಗಿಲ್ಲದಿದ್ದರೆ, ಈ ಸಹಾಯ ಕೇಂದ್ರದ ಲೇಖನವನ್ನು ಓದಿ ಅಥವಾ ಲೀಗಲ್ ಕೌನ್ಸಿಲ್ ಜೊತೆ ಸಮಾಲೋಚಿಸಿ.

ನನ್ನ ವೀಡಿಯೊವನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು YouTube ಹೇಳಿದರೆ, ಅದಕ್ಕೆ ನಾನು ಒಪ್ಪದಿದ್ದರೆ ನಾನೇನು ಮಾಡಬೇಕು?

ನೀವು ಇನ್ನೂ ನಿಮ್ಮ ವೀಡಿಯೊದ ಪ್ರೇಕ್ಷಕರನ್ನು ಸೆಟ್ ಮಾಡಿರದಿದ್ದರೆ: ನಿಮಗಾಗಿ ನಿಮ್ಮ ಪ್ರೇಕ್ಷಕರನ್ನು YouTube ಸೆಟ್ ಮಾಡಿರಬಹುದು. ಇದು, COPPA ಮತ್ತು/ಅಥವಾ ಅನ್ವಯಿಸುವ ಇತರ ಕಾನೂನುಗಳನ್ನು ಅನುಸರಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿದೆ. ಹಾಗಿದ್ದರೂ, ನಿಮ್ಮ ಕಂಟೆಂಟ್ ಅನ್ನು YouTube ಹೇಗೆ ಸೆಟ್ ಮಾಡಿದೆ ಎಂಬುದನ್ನು ನೀವು ಒಪ್ಪದಿದ್ದರೆ, ಬಹುತೇಕ ಸಂದರ್ಭಗಳಲ್ಲಿ ನೀವು ಆಗಲೂ ವೀಡಿಯೊದ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

ನೀವು ಈಗಾಗಲೇ ನಿಮ್ಮ ವೀಡಿಯೊಗಾಗಿ ನಿಮ್ಮ ಪ್ರೇಕ್ಷಕರನ್ನು ಸೆಟ್ ಮಾಡಿದ್ದರೆ: ಮತ್ತು YouTube ದೋಷ ಅಥವಾ ದುರುಪಯೋಗವನ್ನು ಪತ್ತೆ ಮಾಡಿದರೆ, ನಿಮ್ಮ ವೀಡಿಯೊವನ್ನು “ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ" ಎಂದು ಸೆಟ್ ಮಾಡಲಾಗಿರುವುದನ್ನು ನೀವು ನೋಡಬಹುದು. ಹೀಗೆ ಆದಾಗ, ನಿಮ್ಮ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಹಾಗಿದ್ದರೂ, ಕೆಲವೊಮ್ಮೆ ನಮ್ಮಿಂದಲೂ ತಪ್ಪಾಗುತ್ತದೆ ಎನ್ನುವುದು ನಮಗೆ ತಿಳಿದಿದೆ. ಇದು ತಪ್ಪೆಂದು ನಿಮಗನಿಸಿದರೆ, ಈ ನಿರ್ಧಾರದ ಕುರಿತು ನೀವು ಮೇಲ್ಮನವಿ ಸಲ್ಲಿಸಬಹುದು.

 ನಿಮ್ಮ ಕಂಪ್ಯೂಟರ್‌ನಲ್ಲಿ ಮೇಲ್ಮನವಿ ಸಲ್ಲಿಸುವುದನ್ನು ಪ್ರಾರಂಭಿಸಲು:

  1. ಕಂಪ್ಯೂಟರ್‌ನಲ್ಲಿ, studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ನೀವು ಮೇಲ್ಮನವಿ ಸಲ್ಲಿಸಲು ಬಯಸುವ ವೀಡಿಯೊಗೆ ಹೋಗಿ.
  4. “ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ” ಎಂಬುದರ ಮೇಲೆ ಹೋವರ್ ಮಾಡಿ ಮತ್ತು ಮೇಲ್ಮನವಿ ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ಮೇಲ್ಮನವಿ ಸಲ್ಲಿಸುವುದಕ್ಕೆ ನಿಮ್ಮ ಕಾರಣವನ್ನು ನಮೂದಿಸಿ ಮತ್ತು ಸಲ್ಲಿಸಿ ಅನ್ನು ಕ್ಲಿಕ್ ಮಾಡಿ.

ನಿಮ್ಮ ಫೋನ್‌ನಲ್ಲಿ ಮೇಲ್ಮನವಿ ಸಲ್ಲಿಸುವುದನ್ನು ಪ್ರಾರಂಭಿಸಲು:

  1. YouTube Studio ಆ್ಯಪ್ ತೆರೆಯಿರಿ.
  2. ಮೆನು ನಂತರ ವೀಡಿಯೊಗಳು ಎಂಬುದನ್ನು ಟ್ಯಾಪ್ ಮಾಡಿ.
  3. ಅಪ್‌ಲೋಡ್‌ಗಳು ಟ್ಯಾಬ್‌ನಲ್ಲಿ, ನೀವು ಮೇಲ್ಮನವಿ ಸಲ್ಲಿಸಲು ಬಯಸುವ ವೀಡಿಯೊವನ್ನು ಟ್ಯಾಪ್ ಮಾಡಿ.
  4. ನಿರ್ಬಂಧಗಳು ಅಡಿಯಲ್ಲಿ, ಮಕ್ಕಳಿಗಾಗಿ ರಚಿಸಲಾಗಿದೆ ಎಂಬುದಾಗಿ ಸೆಟ್ ಮಾಡಲಾಗಿದೆ ಎಂಬುದನ್ನು ಟ್ಯಾಪ್ ಮಾಡಿ.
  5. ಮೇಲ್ಮನವಿ ಸಲ್ಲಿಸಿ ಅನ್ನು ಟ್ಯಾಪ್ ಮಾಡಿ ಮತ್ತು ಮೇಲ್ಮನವಿ ಸಲ್ಲಿಸುವುದಕ್ಕೆ ಇರುವ ನಿಮ್ಮ ಕಾರಣವನ್ನು ನಮೂದಿಸಿ.
  6. ಸಲ್ಲಿಸಿ ಟ್ಯಾಪ್ ಮಾಡಿ.

ನೀವು ಮೇಲ್ಮನವಿ ಸಲ್ಲಿಸಿದ ನಂತರ

ನಿಮ್ಮ ಮೇಲ್ಮನವಿ ವಿನಂತಿಯ ಫಲಿತಾಂಶವನ್ನು ನಿಮಗೆ ತಿಳಿಸುವ YouTube ನ ಇಮೇಲ್ ಅನ್ನು ನೀವು ಪಡೆಯುತ್ತೀರಿ. ಈ ಕೆಳಗಿನವುಗಳಲ್ಲಿ ಒಂದು ಆಗಬಹುದು:

  • ನಿಮ್ಮ ಮೇಲ್ಮನವಿಯು ಯಶಸ್ವಿಯಾದರೆ, ಮಕ್ಕಳಿಗಾಗಿ ರಚಿಸಲಾಗಿದೆ ಎಂಬ ಪ್ರೇಕ್ಷಕರ ಸೆಟ್ಟಿಂಗ್ ಅನ್ನು ನಾವು ತೆಗೆದುಹಾಕುತ್ತೇವೆ.
  • ನಿಮ್ಮ ಮೇಲ್ಮನವಿಯು ಯಶಸ್ವಿಯಾಗದಿದ್ದರೆ, ಮಕ್ಕಳಿಗಾಗಿ ರಚಿಸಲಾಗಿದೆ ಎಂಬ ಪ್ರೇಕ್ಷಕರ ಸೆಟ್ಟಿಂಗ್ ನಿಮ್ಮ ಕಂಟೆಂಟ್‌ನಲ್ಲಿ ಉಳಿದುಕೊಳ್ಳುತ್ತದೆ. ಇನ್ನು ಮುಂದೆ, ನಿಮ್ಮ ಚಾನಲ್ ಮತ್ತು/ಅಥವಾ ಪ್ರತ್ಯೇಕ ವೀಡಿಯೊದ ಪ್ರೇಕ್ಷಕರ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ನಿಮ್ಮ ಪ್ರೇಕ್ಷಕರನ್ನು ಸೂಕ್ತವಾಗಿ ಸೆಟ್ ಮಾಡುವುದಕ್ಕೆ ವಿಫಲವಾದರೆ, COPPA ಮತ್ತು/ಅಥವಾ ಇತರ ಕಾನೂನುಗಳ ಅಡಿಯಲ್ಲಿ ಕಾನೂನು ಪರಿಣಾಮಗಳು ಉಂಟಾಗಬಹುದು ಅಥವಾ YouTube ಪ್ಲ್ಯಾಟ್‌ಫಾರ್ಮ್‌ನಲ್ಲಿ ಪರಿಣಾಮಗಳು ಉಂಟಾಗಬಹುದು.

ಪ್ರತಿ ವೀಡಿಯೊಗೆ ನೀವು ಒಮ್ಮೆ ಮಾತ್ರ ಮೇಲ್ಮನವಿ ಸಲ್ಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9260738342823263863
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false