ಕಾಮೆಂಟ್‌ಗಳಲ್ಲಿ ಸ್ಪ್ಯಾಮ್ ಅನ್ನು ನಿರ್ವಹಿಸಿ

ಕಾಮೆಂಟ್ ಮಾಡರೇಶನ್ ಅನುಭವವನ್ನು ನಾವು ಸರಳಗೊಳಿಸಿದ್ದೇವೆ ಮತ್ತು YouTube Studio ದಲ್ಲಿ “ಪರಿಶೀಲನೆಗಾಗಿ ತಡೆಹಿಡಿದಿರುವುದು” ಮತ್ತು “ಸಂಭಾವ್ಯವಾಗಿ ಸ್ಪ್ಯಾಮ್” ಎಂಬ ಎರಡು ಮಾಡರೇಶನ್ ಟ್ಯಾಬ್‌ಗಳನ್ನು ವಿಲೀನಗೊಳಿಸಿದ್ದೇವೆ. ಇದೀಗ, YouTube ಸ್ವಯಂಚಾಲಿತವಾಗಿ ತಡೆಹಿಡಿದಿರುವ ಕಾಮೆಂಟ್‍ಗಳು, ಸಂಯೋಜಿತ “ಪರಿಶೀಲನೆಗಾಗಿ ತಡೆಹಿಡಿದಿರುವುದು” ಟ್ಯಾಬ್‌ನಲ್ಲಿ 60 ದಿನಗಳವರೆಗೆ ಕಾಣಿಸಿಕೊಳ್ಳುತ್ತವೆ.

ಕಾಮೆಂಟ್‌ಗಳಿಗಾಗಿ "ವರದಿ ಮಾಡಿ" ಅಥವಾ “ಸ್ಪ್ಯಾಮ್ ಅಥವಾ ದುರುಪಯೋಗ ಎಂಬುದಾಗಿ ವರದಿ ಮಾಡಿ” ಆಯ್ಕೆಯು, ಸ್ಪ್ಯಾಮ್ ಕಾಮೆಂಟ್‌ಗಳ ಸಂಖ್ಯೆಯನ್ನು ನಿಯಂತ್ರಿಸಲು ಸಮುದಾಯಕ್ಕೆ ಅವಕಾಶ ನೀಡುತ್ತದೆ.

ಒಂದು ಕಾಮೆಂಟ್ ಅನ್ನು ಸ್ಪ್ಯಾಮ್ ಎಂಬುದಾಗಿ ವರದಿ ಮಾಡಿ

ಯಾರೂ ಸಹ, ಒಂದು ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಬಹುದು. ಒಂದು ವೀಡಿಯೊ ಅಥವಾ ಚಾನಲ್‌ನ ಕಾಮೆಂಟ್‍ಗಳ ವಿಭಾಗದಿಂದ:

  1. ನೀವು ಸ್ಪ್ಯಾಮ್ ಎಂಬುದಾಗಿ ವರದಿ ಮಾಡಲು ಬಯಸುವ ಕಾಮೆಂಟ್ ಅನ್ನು ಹುಡುಕಿ.
  2. ಇನ್ನಷ್ಟು '' ನಂತರ ವರದಿ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  3. ಅನಪೇಕ್ಷಿತ ವಾಣಿಜ್ಯ ಕಂಟೆಂಟ್ ಅಥವಾ ಸ್ಪ್ಯಾಮ್ ಮತ್ತು ವರದಿ ಮಾಡಿ ಎಂಬುದನ್ನು ಆಯ್ಕೆ ಮಾಡಿ.

YouTube Studio ದಲ್ಲಿ ಕಾಮೆಂಟ್‌ಗಳನ್ನು ಪರಿಶೀಲಿಸುವಾಗಲೂ, ರಚನೆಕಾರರು ಸ್ಪ್ಯಾಮ್ ಅನ್ನು ವರದಿ ಮಾಡಬಹುದು.

ವರದಿ ಮಾಡಿ  ಎಂಬ ಫೀಚರ್ ಅನ್ನು ಎಚ್ಚರಿಕೆಯಿಂದ ಬಳಸಿ. ಅದನ್ನು ದುರುಪಯೋಗಪಡಿಸಿಕೊಂಡವರನ್ನು YouTube ನಿಂದಲೇ ನಿಷೇಧಿಸಬಹುದಾಗಿದೆ. 

ಸ್ಪ್ಯಾಮ್ ಎಂಬುದಾಗಿ ತಡೆಹಿಡಿದಿರುವ ಕಾಮೆಂಟ್‌ಗಳನ್ನು ಪರಿಶೀಲಿಸಿ 

ನಿಮ್ಮ ವೀಡಿಯೊ ಅಥವಾ ಚಾನಲ್‌ನಲ್ಲಿ ಸ್ಪ್ಯಾಮ್ ಎಂಬುದಾಗಿ ವರದಿ ಮಾಡಲಾದ ಕಾಮೆಂಟ್‌ಗಳನ್ನು ಪರಿಶೀಲಿಸಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಾಮೆಂಟ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಪರಿಶೀಲನೆಗಾಗಿ ತಡೆಹಿಡಿದಿರುವುದು ಟ್ಯಾಬ್ ಅನ್ನು ಆಯ್ಕೆ ಮಾಡಿ.
ಗಮನಿಸಿ: ನಿಮ್ಮ ಕಂಟೆಂಟ್‌ನಲ್ಲಿ ಯಾವುದೇ ಕಾಮೆಂಟ್‌ಗಳನ್ನು ಸ್ಪ್ಯಾಮ್ ಎಂಬುದಾಗಿ ವರದಿ ಮಾಡಿದ್ದರೆ, ಪರಿಶೀಲನೆಗಾಗಿ ತಡೆಹಿಡಿದಿರುವುದು ಟ್ಯಾಬ್‍ನಲ್ಲಿ ಕೆಳಭಾಗದಲ್ಲಿ ಅವು ಕಾಣಿಸಿಕೊಳ್ಳುತ್ತವೆ. ಈ ಕಾಮೆಂಟ್‌ಗಳನ್ನು “ಸಂಭಾವ್ಯವಾಗಿ ಸ್ಪ್ಯಾಮ್” ಎಂಬುದಾಗಿಯೂ ಗುರುತಿಸಲಾಗುತ್ತದೆ.

ಪರಿಶೀಲನೆಗಾಗಿ ತಡೆಹಿಡಿದಿರುವುದು, ಟ್ಯಾಬ್‌ನಿಂದ ನೀವು ಇವುಗಳನ್ನು ಮಾಡಲು ಆಯ್ಕೆ ಮಾಡಬಹುದು:

  • ಕಾಮೆಂಟ್‌ಗಳನ್ನು ಅನುಮೋದಿಸುವುದು
  • ಕಾಮೆಂಟ್‌ಗಳನ್ನು ತೆಗೆದುಹಾಕುವುದು
  • ಕಾಮೆಂಟ್‌ಗಳನ್ನು ಸ್ಪ್ಯಾಮ್ ಅಥವಾ ದುರುಪಯೋಗ ಮಾಡಲಾಗಿದೆ ಎಂದು ವರದಿ ಮಾಡುವುದು
  • ನಿಮ್ಮ ಚಾನಲ್‌ನಿಂದ ಬಳಕೆದಾರರನ್ನು ಮರೆಮಾಡುವುದು

ಸ್ಪ್ಯಾಮ್ ಅನ್ನು ಅರ್ಥಮಾಡಿಕೊಳ್ಳಿ

ಸ್ಪ್ಯಾಮ್ ಎಂದರೆ, ಸೂಕ್ತವಾದ ಮತ್ತು ವಸ್ತುನಿಷ್ಠ ಸಾಮಗ್ರಿಯನ್ನು ಕಂಡುಕೊಳ್ಳಲು ಹೆಚ್ಚು ಕಷ್ಟವಾಗಿಸುವ ಮೂಲಕ ನಕಾರಾತ್ಮಕ ಅನುಭವವನ್ನು ರಚಿಸುವ ಕಂಟೆಂಟ್ ಅಥವಾ ಸಂವಹನಗಳು. YouTube ನಲ್ಲಿ ಅನಪೇಕ್ಷಿತವಾದ, ಬೃಹತ್ ಪ್ರಮಾಣದ ಸಂದೇಶಗಳನ್ನು ಬೇಕಾಬಿಟ್ಟಿಯಾಗಿ ಕಳುಹಿಸಲು ಇದನ್ನು ಕೆಲವೊಮ್ಮೆ ಬಳಸಬಹುದು. 

ಒಂದು ಕಾಮೆಂಟ್‌ನ ಪಠ್ಯವನ್ನು ಆಧರಿಸಿ ಅಥವಾ ನಿರ್ದಿಷ್ಟ ಕಾಮೆಂಟರ್ ಅವರ ವರ್ತನೆಯಿಂದ, YouTube ಸ್ಪ್ಯಾಮ್ ಅನ್ನು ಪತ್ತೆಹಚ್ಚುತ್ತದೆ. ಉದಾಹರಣೆಗೆ, ಕಾಮೆಂಟ್‌ಗಳನ್ನು ಪುನರಾವರ್ತಿತವಾಗಿ ಪೋಸ್ಟ್ ಮಾಡುವುದನ್ನು ಸ್ಪ್ಯಾಮ್ ಎಂದು ಪತ್ತೆಹಚ್ಚಬಹುದಾಗಿದೆ.

ಅಪ್‌ಲೋಡ್ ಮಾಡಿದವರು, ತಮ್ಮ ವೀಡಿಯೊಗಳ ಮೇಲಿನ ಕಾಮೆಂಟ್‍ಗಳ ಮೇಲೆ ಹೆಚ್ಚು ನಿಯಂತ್ರಣ ಹೊಂದಿರುತ್ತಾರೆ. ನಿಮ್ಮ ಕಾಮೆಂಟ್ ಅನ್ನು ಪ್ರದರ್ಶಿಸುವ ಮೊದಲೇ ಅವರು ಅದನ್ನು ಪರಿಶೀಲಿಸಬಹುದು ಅಥವಾ ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ಅಪ್‌ಲೋಡ್ ಮಾಡಿದವರು ಒಂದು ಕಾಮೆಂಟ್‍ನ ಮೇಲಿನ ಸ್ಪ್ಯಾಮ್ ಎಂಬ "ಗುರುತನ್ನು ರದ್ದುಮಾಡಬಹುದು".

FAQ

ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ವರದಿ ಮಾಡಿದಾಗ ಏನಾಗುತ್ತದೆ?

ಸ್ಪ್ಯಾಮ್ ಎಂಬುದಾಗಿ ವರದಿ ಮಾಡಲಾದ ಕಾಮೆಂಟ್ ಅನ್ನು YouTube Studio ದ ಕಾಮೆಂಟ್‌ಗಳ ವಿಭಾಗದಲ್ಲಿ ಪರಿಶೀಲನೆಗಾಗಿ 60 ದಿನಗಳವರೆಗೆ ತಡೆಹಿಡಿಯಬಹುದು.

ಒಂದು ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿರುವುದನ್ನು ನಾನು ರದ್ದುಮಾಡಬಹುದೇ?

ಇಲ್ಲ. ಒಂದು ಕಾಮೆಂಟ್ ಅನ್ನು ನೀವು ಒಮ್ಮೆ ಸ್ಪ್ಯಾಮ್ ಎಂದು ಗುರುತಿಸಿದರೆ, ಅದನು ರದ್ದುಪಡಿಸಲು ಸಾಧ್ಯವಿಲ್ಲ.
"ಸ್ಪ್ಯಾಮ್ ಅಥವಾ ದುರುಪಯೋಗವನ್ನು ವರದಿ ಮಾಡಿ" ಫೀಚರ್ ಅನ್ನು ಅತೀವ ಎಚ್ಚರಿಕೆಯೊಂದಿಗೆ ಬಳಸಿ. ನೀವು ಅದನ್ನು ದುರುಪಯೋಗಪಡಿಸಿಕೊಂಡರೆ, ನಿಮ್ಮನ್ನು YouTube ನಿಂದ ನಿಷೇಧಿಸಬಹುದಾಗಿದೆ.

ನನ್ನ ಕಾಮೆಂಟ್‌ಗಳನ್ನು ಸ್ಪ್ಯಾಮ್ ಮಾಡದಂತೆ ಯಾರನ್ನಾದರೂ ನಾನು ಹೇಗೆ ತಡೆಯಬಹುದು?

ನಿಮ್ಮ ಚಾನಲ್‌ನಿಂದ ಯಾರನ್ನಾದರೂ ಮರೆಮಾಡಲು:

  1. ನಿಮ್ಮ ಚಾನಲ್ ಅಥವಾ ವೀಡಿಯೊದಲ್ಲಿ ಅವರು ಸೇರಿಸಿದ ಕಾಮೆಂಟ್ ಅನ್ನು ಹುಡುಕಿ.
  2. ಕಾಮೆಂಟ್‌ನ ಪಕ್ಕದಲ್ಲಿ, ಇನ್ನಷ್ಟು '' ನಂತರ ಚಾನಲ್‌ನಿಂದ ಮರೆಮಾಡಿ  ಎಂಬುದನ್ನು ಆಯ್ಕೆ ಮಾಡಿ.

ಸ್ಪ್ಯಾಮ್ ಕಾಮೆಂಟ್‌ಗಳನ್ನು ಫಿಲ್ಟರ್ ಮಾಡುವುದನ್ನು ನಾನು ತಡೆಯಬಹುದೇ?

YouTube ಕಾಮೆಂಟ್‌ಗಳಲ್ಲಿ ಆರೋಗ್ಯಪೂರ್ಣವಾದ ಮಾತುಕತೆಯನ್ನು ಕಾಯ್ದುಕೊಳ್ಳುವುದಕ್ಕಾಗಿ ಸಹಾಯ ಮಾಡಲು ನಮ್ಮ ಸಿಸ್ಟಂಗಳು ಸ್ವಯಂಚಾಲಿತವಾಗಿ ಸ್ಪ್ಯಾಮ್ ಅನ್ನು ಪತ್ತೆಹಚ್ಚುತ್ತವೆ. "ಸಂಭಾವ್ಯವಾಗಿ ಸ್ಪ್ಯಾಮ್" ಎಂದು ಗುರುತಿಸಲಾದ ಕಾಮೆಂಟ್‌ಗಳನ್ನು ರಚನೆಕಾರರು ಯಾವಾಗ ಬೇಕಾದರೂ ಪರಿಶೀಲಿಸಬಹುದು ಮತ್ತು ಗುರುತಿಸಿರುವುದನ್ನು ರದ್ದು ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7783688241975202273
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false