ಧ್ವನಿ ಹುಡುಕಾಟದ ಮೂಲಕ ವೀಡಿಯೊಗಳನ್ನು ಹುಡುಕಿ

ವೀಡಿಯೊಗಳನ್ನು ಹುಡುಕಲು ಧ್ವನಿ ಹುಡುಕಾಟವನ್ನು ಬಳಸಿ.

YouTube ಧ್ವನಿ ಹುಡುಕಾಟದಿಂದ ನಿಮ್ಮ ಆಡಿಯೋ ರೆಕಾರ್ಡಿಂಗ್‌ಗಳನ್ನು ನಿರ್ವಹಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ಧ್ವನಿ ಹುಡುಕಾಟವನ್ನು ಪ್ರಾರಂಭಿಸಿ

  1. YouTube ಗೆ ಸೈನ್ ಇನ್ ಮಾಡಿ.
  2. ಹುಡುಕಾಟ ಅನ್ನು ಟ್ಯಾಪ್ ಮಾಡಿ.
  3. ಮೈಕ್  ಅನ್ನು ಟ್ಯಾಪ್ ಮಾಡಿ.
  4. ಮೈಕ್ರೊಫೋನ್‌ಗೆ ಆ್ಯಕ್ಸೆಸ್ ಅನ್ನು ಅನುಮತಿಸಿ.
  5. ತಕ್ಷಣವೇ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ.
  6. ರೆಕಾರ್ಡ್ ಮಾಡುವುದನ್ನು ಮುಕ್ತಾಯಗೊಳಿಸಲು ಅನ್ನು ಟ್ಯಾಪ್ ಮಾಡಿ.
  7. ಹಿಂದೆ ಹೋಗಲು ಅಥವಾ ರೆಕಾರ್ಡ್ ಮಾಡುವುದನ್ನು ರದ್ದುಗೊಳಿಸಲು X ಅನ್ನು ಟ್ಯಾಪ್ ಮಾಡಿ.

ಮೈಕ್ರೊಫೋನ್ ಅನುಮತಿಗಳನ್ನು ಬದಲಾಯಿಸಿ

  1. ನೀವು ಈ ಹಿಂದೆ ಮೈಕ್ರೊಫೋನ್ ಅನುಮತಿಗಳನ್ನು ನಿರಾಕರಿಸಿದ್ದರೆ, ನಿಮ್ಮ ಫೋನ್‌ನ ಮೂಲಕ ಮೈಕ್ರೊಫೋನ್ ಅನುಮತಿಗಳಿಗೆ ಅವಕಾಶ ನೀಡಲು ವಿನಂತಿಯನ್ನು ನೀವು ನೋಡಬಹುದು.
  2. ಫೋನ್ ಸೆಟ್ಟಿಂಗ್‌ಗಳಿಗೆ ಹೋಗಲು ಪ್ರಾಂಪ್ಟ್ ಅನ್ನು ಕ್ಲಿಕ್ ಮಾಡಿ ಅಥವಾ ನಿಮ್ಮ Android ಫೋನ್‌ನ ಸಾಮಾನ್ಯ ಮೆನುವಿನಿಂದ Android ಸೆಟ್ಟಿಂಗ್‌ಗಳನ್ನು ಆ್ಯಕ್ಸೆಸ್ ಮಾಡಿ.
  3. Android ಸೆಟ್ಟಿಂಗ್‌ಗಳಿಂದ, ಆ್ಯಪ್‌ಗಳು ಹಾಗೂ ನೋಟಿಫಿಕೇಶನ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  4. YouTube ಆ್ಯಪ್ ಅನ್ನು ಹುಡುಕಿ ಮತ್ತು YouTube ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  5. ಅನುಮತಿಗಳು ಎಂಬುದನ್ನು ಕ್ಲಿಕ್ ಮಾಡಿ.
  6. ಮೈಕ್ರೊಫೋನ್ ಅನುಮತಿಯನ್ನು ಆನ್ ಎಂಬುದಾಗಿ ಬದಲಾಯಿಸಿ.
  7. YouTube ಆ್ಯಪ್‌ಗೆ ಮರಳಿ ಹೋಗಿ, ಮತ್ತು ಇದೀಗ ನಿಮ್ಮ ಧ್ವನಿಯ ಮೂಲಕ ಹುಡುಕಾಟ ನಡೆಸಲು ಸಾಧ್ಯವಾಗುತ್ತದೆ.

ನಿಮ್ಮ ಧ್ವನಿಯನ್ನು ಬಳಸಲು ಇನ್ನಷ್ಟು ವಿಧಾನಗಳು

ಪ್ರಸ್ತುತ, ಈ ಕಮಾಂಡ್‌‍ಗಳು Android ನಲ್ಲಿ ಮಾತ್ರ ಲಭ್ಯವಿವೆ, ಮತ್ತು ಕೆಲವು ವಿಧಾನಗಳು ಪ್ರತಿ ಭಾಷೆಯಲ್ಲಿ ಲಭ್ಯವಿಲ್ಲದಿರಬಹುದು.

ಹಾಡಿನ ಹುಡುಕಾಟ

ನೀವು ಧ್ವನಿಯನ್ನು ಬಳಸಿಕೊಂಡು YouTube ನಲ್ಲಿ ಹುಡುಕಬಹುದು. ಪ್ರಸ್ತುತ ಪ್ಲೇ ಆಗುತ್ತಿರುವ ಹಾಡನ್ನು ಗುನುಗುವ ಅಥವಾ ರೆಕಾರ್ಡ್ ಮಾಡುವ ಮೂಲಕ, ನೀವು ಸಂಬಂಧಿತ YouTube ವೀಡಿಯೊಗಳು, Shorts ಮತ್ತು ಅಧಿಕೃತ ಸಂಗೀತ ಕಂಟೆಂಟ್ ಅನ್ನು ಕಾಣಬಹುದು. 
ಹಾಡಿನ ಹುಡುಕಾಟವನ್ನು ಪ್ರಾರಂಭಿಸಲು: 
  1. YouTube ಗೆ ಸೈನ್ ಇನ್ ಮಾಡಿ.
  2. ಹುಡುಕಾಟ ಅನ್ನು ಟ್ಯಾಪ್ ಮಾಡಿ.
  3. ಮೈಕ್ ಅನ್ನು ಟ್ಯಾಪ್ ಮಾಡಿ.
  4. ಮೈಕ್ರೊಫೋನ್‌ಗೆ ಆ್ಯಕ್ಸೆಸ್ ಅನ್ನು ಅನುಮತಿಸಿ.
  5. ಹಾಡು ಟ್ಯಾಪ್ ಮಾಡಿ.
  6. ರೆಕಾರ್ಡಿಂಗ್ ಕೂಡಲೇ ಪ್ರಾರಂಭವಾಗುತ್ತದೆ ಮತ್ತು ಹಾಡನ್ನು ಗುರುತಿಸಿದ ಬಳಿಕ ಕೊನೆಗೊಳ್ಳುತ್ತದೆ. 
  7. ಹಿಂದೆ ಹೋಗಲು ಅಥವಾ ರೆಕಾರ್ಡ್ ಮಾಡುವುದನ್ನು ರದ್ದುಗೊಳಿಸಲು X ಅನ್ನು ಟ್ಯಾಪ್ ಮಾಡಿ.
ಗಮನಿಸಿ: ಹಾಡನ್ನು ಗುರುತಿಸಲು ಸಾಧ್ಯವಾಗದಿದ್ದರೆ, ಹೊಂದಾಣಿಕೆಯು ಕಂಡುಬಂದಿಲ್ಲ ಎಂಬುದಾಗಿ ನಿಮಗೆ ತಿಳಿಸುವ ದೋಷ ಸಂದೇಶವನ್ನು ನೀವು ಕಾಣುತ್ತೀರಿ.

ನಿರ್ದಿಷ್ಟ ಕಂಟೆಂಟ್ ಅನ್ನು ವೀಕ್ಷಿಸಿ/ಆಲಿಸಿ

  • ಯಾವುದಾದರೂ ಒಂದು ಸಂಗೀತ ಟ್ರ್ಯಾಕ್ ಅಥವಾ ವೀಡಿಯೊಗೆ ನೇರವಾಗಿ ಹೋಗಿ: “ಯಾವುದಾದರೂ ಸಂಗೀತವನ್ನು ಪ್ಲೇ ಮಾಡಿ”
  • ನಿರ್ದಿಷ್ಟ ಕಲಾವಿದರ ವೀಡಿಯೊ ಅಥವಾ ಸಂಗೀತ ಟ್ರ್ಯಾಕ್ ಅನ್ನು ಪ್ಲೇ ಮಾಡಿ: “ಅರಿಯಾನಾ ಗ್ರ್ಯಾಂಡೆ ಅವರ ಹಾಡುಗಳನ್ನು ಪ್ಲೇ ಮಾಡಿ.”
  • ನಿರ್ದಿಷ್ಟ ಶೈಲಿಯ ವೀಡಿಯೊ ಅಥವಾ ಸಂಗೀತ ಟ್ರ್ಯಾಕ್ ಅನ್ನು ಪ್ಲೇ ಮಾಡಿ: “ಹೆವಿ ಮೆಟಲ್ ಸಂಗೀತವನ್ನು ಪ್ಲೇ ಮಾಡಿ.”
  • ನಿಮಗೆ ಹೇಗನಿಸುತ್ತಿದೆ ಎನ್ನುವುದನ್ನು ಆಧರಿಸಿ, ವೀಡಿಯೊ ಅಥವಾ ಸಂಗೀತ ಟ್ರ್ಯಾಕ್ ಅನ್ನು ಪ್ಲೇ ಮಾಡಿ: “ಹಿತವಾದ ಸಂಗೀತವನ್ನು ಪ್ಲೇ ಮಾಡಿ.”
  • ನಿಮಗಾಗಿ ಶಿಫಾರಸು ಮಾಡಲಾದ ಪಟ್ಟಿಯಿಂದ ವೀಡಿಯೊವನ್ನು ಪ್ಲೇ ಮಾಡಿ: “ಶಿಫಾರಸು ಮಾಡಲಾದ ವೀಡಿಯೊಗಳನ್ನು ಪ್ಲೇ ಮಾಡಿ.”

YouTube ನಲ್ಲಿ ನಿರ್ದಿಷ್ಟ ಪುಟಕ್ಕೆ ಹೋಗಿ

  • ಸಬ್‌ಸ್ಕ್ರಿಪ್ಶನ್‌ಗಳಿಗೆ ಹೋಗಿ: “ನನ್ನ ಸಬ್‌ಸ್ಕ್ರಿಪ್ಶನ್‌ಗಳನ್ನು ತೋರಿಸಿ”, ಜೊತೆಗೆ “ನನ್ನ ಸಬ್‌ಸ್ಕ್ರಿಪ್ಶನ್‌ಗಳಲ್ಲಿ ಹೊಸದೇನಿದೆ?”
  • ನಿಮ್ಮ ವೀಕ್ಷಣಾ ಇತಿಹಾಸಕ್ಕೆ ಹೋಗಿ: “ನನ್ನ ವೀಕ್ಷಣಾ ಇತಿಹಾಸವನ್ನು ತೋರಿಸಿ.”
  • ನಿಮ್ಮ ಲೈಬ್ರರಿಗೆ ಹೋಗಿ: ”ನನ್ನ ಲೈಬ್ರರಿಯನ್ನು ತೋರಿಸಿ.”
  • ರಚನೆಕಾರರ ಇತ್ತೀಚಿನ ಅಪ್‌ಲೋಡ್‌ಗಳಿಗೆ ಹೋಗಿ: ”TeamYouTube ನಿಂದ ಇತ್ತೀಚಿನ ವೀಡಿಯೊಗಳನ್ನು ತೋರಿಸಿ.”
  • ನೀವು ವೀಕ್ಷಿಸುತ್ತಿರುವ ಪ್ರಸ್ತುತ ವೀಡಿಯೊವನ್ನು ಆಧರಿಸಿ, ಸಂಬಂಧಿತ ವೀಡಿಯೊಗಳಿಗೆ ಹೋಗಿ: ”ಸಂಬಂಧಿತ ವೀಡಿಯೊಗಳನ್ನು ತೋರಿಸಿ.”
  • ಹೊಸ ವೀಡಿಯೊ ನೋಡಿ, ಅದೃಷ್ಟ ನಿಮ್ಮದಾಗಿಸಿಕೊಳ್ಳಿ: ” YouTube ನಲ್ಲಿ ಏನಿದೆ?”

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Android iPhone ಮತ್ತು iPad
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
402861981668847716
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false