ಜಾಹೀರಾತುದಾರ ಸ್ನೇಹಿ ಕಂಟೆಂಟ್ ರಚಿಸಲು ಉತ್ತಮ ಅಭ್ಯಾಸಗಳು

ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ ಮತ್ತು ಆ್ಯಡ್‌ಗಳ ಮೂಲಕ ಹಣ ಸಂಪಾದಿಸಲು ಬಯಸಿದರೆ, ನಿಮ್ಮ ಕಂಟೆಂಟ್ ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಅನ್ನು ಅನುಸರಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. 

ಎಲ್ಲಾ ಕಂಟೆಂಟ್‌ಗಳು ಮಾರ್ಗಸೂಚಿಗಳನ್ನು ಅನುಸರಿಸಬೇಕು

ನಿಮ್ಮ ಕಂಟೆಂಟ್‌ನ ಎಲ್ಲಾ ಅಂಶಗಳನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ. ಇಲ್ಲಿ ಕಂಟೆಂಟ್ ಎಂದರೆ:

  • ವೀಡಿಯೊ, Short ಅಥವಾ ಲೈವ್ ಸ್ಟ್ರೀಮ್ ಕಂಟೆಂಟ್
  • ಶೀರ್ಷಿಕೆ
  • ಥಂಬ್‌ನೇಲ್
  • ವಿವರಣೆ
  • ಟ್ಯಾಗ್‌ಗಳು

ಆ್ಯಡ್‌ಗಳಿಗೆ ಸೂಕ್ತವಾಗಿರಲು, ನಿಮ್ಮ ಎಲ್ಲಾ ಕಂಟೆಂಟ್‌ಗಳು ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸಬೇಕು.

ನಿಮ್ಮ ವೀಡಿಯೊಗಳಿಗೆ ಸಾಂದರ್ಭಿಕತೆಯನ್ನು ಸೇರಿಸಿ

ಸಾಂದರ್ಭಿಕತೆಯು ಪ್ರಮುಖ ಅಂಶವಾಗಿರುತ್ತದೆ. ನಿಮ್ಮ ವೀಡಿಯೊಗೆ ಶೈಕ್ಷಣಿಕ, ಸಾಕ್ಷ್ಯಚಿತ್ರ, ವೈಜ್ಞಾನಿಕ ಅಥವಾ ಕಲಾತ್ಮಕ ಮೌಲ್ಯವಿದ್ದರೆ, ಅದು ಜಾಹೀರಾತುದಾರರಿಗೆ ವೀಡಿಯೊದ ಸೂಕ್ತತೆಯನ್ನು ಬದಲಾಯಿಸಬಹುದು. ಉದಾಹರಣೆಗೆ, "ನಶೆ ಅಥವಾ ಮತ್ತು ಬರಲು" ಕೊಕೇನ್ ಅನ್ನು ಹೇಗೆ ಬಳಸುವುದು ಎಂದು ನೀವು ತೋರಿಸುತ್ತಿದ್ದರೆ ಅದು ಆ್ಯಡ್‌ಗಳಿಗೆ ಸೂಕ್ತವಲ್ಲ, ಆದ್ದರಿಂದ ನೀವು ಆ ವೀಡಿಯೊಗಾಗಿ ಆ್ಯಡ್‌ಗಳನ್ನು ಆನ್ ಮಾಡಬಾರದು. ಆದರೆ, ಕೊಕೇನ್ ಅನ್ನು ವೈದ್ಯಕೀಯ ಪ್ರಕ್ರಿಯೆಯ ಭಾಗವಾಗಿ ಬಳಸಲಾಗುತ್ತಿದೆ ಎಂದು ನಿಮ್ಮ ವೀಡಿಯೊ ತೋರಿಸಿದರೆ, ಕೆಲವು ಜಾಹೀರಾತುದಾರರಿಗೆ ಅದು ಸೂಕ್ತವಾಗಿ ಕಾಣಬಹುದು. 

ಸಾಂದರ್ಭಿಕತೆಯನ್ನು ಸೇರಿಸುವುದರಿಂದ ಸರಿಯಾದ ಮಾನಿಟೈಸೇಶನ್ ನಿರ್ಧಾರವನ್ನು ಮಾಡಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಸಿಸ್ಟಂಗಳಿಗೆ ಎಲ್ಲಾ ಸಮಯದಲ್ಲೂ ಸರಿಯಾದ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಾಗದೇ ಇರಬಹುದು ನಮ್ಮ ಸಿಸ್ಟಂಗಳು ನಿಮ್ಮ ವೀಡಿಯೊವನ್ನು ಎಲ್ಲಾ ಜಾಹೀರಾತುದಾರರಿಗೆ ಸೂಕ್ತವಲ್ಲ ಎಂದು ಗುರುತಿಸಿದರೆ, ನೀವು ಮಾನವರಿಂದ ವಿಮರ್ಶೆಯನ್ನು ವಿನಂತಿಸಬಹುದು. ನಮ್ಮ ಮಾನವ ವಿಮರ್ಶಕರು ಅಂತಿಮ ಮಾನಿಟೈಸೇಶನ್ ನಿರ್ಧಾರವನ್ನು ತೆಗೆದುಕೊಳ್ಳಲು ನಿಮ್ಮ ಕಂಟೆಂಟ್ ಮತ್ತು ಸಂದರ್ಭವನ್ನು ಮೌಲ್ಯಮಾಪನ ಮಾಡುತ್ತಾರೆ. 

ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಬಳಸಿಕೊಂಡು ವಿಮರ್ಶಕರು ಕಂಟೆಂಟ್ ಅನ್ನು ಹೇಗೆ ನಿರ್ಣಯಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ. 

ಜಾಹೀರಾತುದಾರ ಸ್ನೇಹಿಯಲ್ಲದ ಕಂಟೆಂಟ್‌ಗಾಗಿ ಆ್ಯಡ್‌ಗಳನ್ನು ಆಫ್ ಮಾಡಿ

ನಮ್ಮ ಜಾಹೀರಾತುದಾರ-ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಅನುಸರಿಸದ ಕಂಟೆಂಟ್ ಅನ್ನು ನೀವು ಅಪ್‌ಲೋಡ್ ಮಾಡಲು ಬಯಸಿದರೆ, ಪ್ರತಿಯೊಂದು ವೀಡಿಯೊಗಳಲ್ಲಿ ಆ್ಯ‌ಡ್‌ಗಳನ್ನು ಆಫ್ ಮಾಡಿ. ಆಗ ಈ ಆಯ್ಕೆಯು ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿ ಇದ್ದುಕೊಂಡೆ, ಜಾಹೀರಾತುದಾರ ಸ್ನೇಹಿಯಲ್ಲದ ಯಾವುದೇ ವೀಡಿಯೊಗಳನ್ನು ಮಾನಿಟೈಸೇಶನ್‌ನಿಂದ ಹೊರಗೆ ಇರಿಸುವುದಕ್ಕೆ, ನಿಮಗೆ ಅನುಮತಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1117217557207473393
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false