ನಿಮ್ಮ YouTube ಪ್ರೇಕ್ಷಕರನ್ನು ಅರ್ಥಮಾಡಿಕೊಳ್ಳಿ

YouTube Analytics ನಲ್ಲಿನ ಪ್ರೇಕ್ಷಕರು ಟ್ಯಾಬ್ ನಿಮ್ಮ YouTube ವೀಡಿಯೊಗಳನ್ನು ಯಾರು ವೀಕ್ಷಿಸುತ್ತಿದ್ದಾರೆ ಎಂಬುದರ ಅವಲೋಕನ ಮತ್ತು ಅವರ ಡೆಮೋಗ್ರಾಫಿಯ ಕುರಿತು ಒಳನೋಟಗಳನ್ನು ಒದಗಿಸುತ್ತದೆ. ಕೀ ಮೆಟ್ರಿಕ್ಸ್ ಕಾರ್ಡ್, ನಿಮ್ಮ ಚಾನಲ್‌ಗೆ ಮರಳಿ ಬರುತ್ತಿರುವ ಮತ್ತು ಹೊಸ ವೀಕ್ಷಕರು, ಅನನ್ಯ ವೀಕ್ಷಕರು, ಸಬ್‌ಸ್ಕ್ರೈಬರ್‌ಗಳು ಮತ್ತು ಒಟ್ಟು ಸದಸ್ಯರನ್ನು ತೋರಿಸುತ್ತದೆ.

ಗಮನಿಸಿ: ಭೌಗೋಳಿಕತೆ, ಟ್ರಾಫಿಕ್ ಮೂಲಗಳು ಅಥವಾ ಲಿಂಗದ ಮಾಹಿತಿಯಂತಹ ಕೆಲವು ಡೇಟಾಗಳು ನಿಮ್ಮ YouTube Analytics ನಲ್ಲಿ ಸೀಮಿತವಾಗಿರಬಹುದು.

ನಿಮ್ಮ YouTube ಪ್ರೇಕ್ಷಕರ ವರದಿಗಳನ್ನು ವೀಕ್ಷಿಸಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, Analytics ಆಯ್ಕೆ ಮಾಡಿ.
  3. ಮೇಲಿನ ಮೆನುವಿನಿಂದ, ಪ್ರೇಕ್ಷಕರು ಎಂಬುದನ್ನು ಆಯ್ಕೆ ಮಾಡಿ.

ಹೊಸ ಮತ್ತು ಮರಳಿ ಭೇಟಿ ನೀಡುತ್ತಿರುವ ಬಳಕೆದಾರರು

ಈ ವರದಿಯು ನಿಮ್ಮ ಚಾನಲ್‌ನ ಹೊಸ ಮತ್ತು ಮರಳಿ ಭೇಟಿ ನೀಡುತ್ತಿರುವ ವೀಕ್ಷಕರನ್ನು ಫಾರ್ಮ್ಯಾಟ್‌ನ ಪ್ರಕಾರ ತೋರಿಸುತ್ತದೆ. ಯಾವ ಫಾರ್ಮ್ಯಾಟ್ ಹೆಚ್ಚಿನ ಹೊಸ ವೀಕ್ಷಕರನ್ನು ಆಕರ್ಷಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೀವು ಇದನ್ನು ಬಳಸಬಹುದು. ಜೊತೆಗೆ, ನಿಮ್ಮ ಚಾನಲ್‌ಗೆ ವೀಕ್ಷಕರು ಮರಳಿ ಭೇಟಿ ನೀಡುವಂತೆ ಮಾಡುವಲ್ಲಿ ಯಾವ ಫಾರ್ಮ್ಯಾಟ್‌ನ ಪಾತ್ರ ಹೆಚ್ಚಾಗಿದೆ ಎಂಬುದನ್ನು ನೋಡಲು ನೀವು ಇದನ್ನು ಬಳಸಬಹುದು.

ನಿಮ್ಮ ವೀಕ್ಷಕರು ಯಾವಾಗ YouTube ನಲ್ಲಿ ಇರುತ್ತಾರೆ

ಕಳೆದ 28 ದಿನಗಳಲ್ಲಿ ನಿಮ್ಮ ವೀಕ್ಷಕರು YouTube ನಾದ್ಯಂತ ಯಾವಾಗ ಆನ್‌ಲೈನ್‌ನಲ್ಲಿದ್ದರು ಎಂಬ ಮಾಹಿತಿಯನ್ನು ಈ ವರದಿಯು ನಿಮಗೆ ತೋರಿಸುತ್ತದೆ. ನಿಮ್ಮ ಸಮುದಾಯವನ್ನು ನಿರ್ಮಿಸಲು, ಪ್ರೀಮಿಯರ್ ಅನ್ನು ಯಾವಾಗ ಸಮಯಕ್ಕೆ ನಿಗದಿಪಡಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಅಥವಾ ನಿಮ್ಮ ಮುಂದಿನ ಲೈವ್ ಸ್ಟ್ರೀಮ್ ಅನ್ನು ಪ್ಲಾನ್ ಮಾಡಲು ಸಹಾಯಕ್ಕಾಗಿ ನೀವು ಇದನ್ನು ಬಳಸಬಹುದು.

ನಿಮ್ಮ ಪ್ರೇಕ್ಷಕರು ವೀಕ್ಷಿಸುವ ಚಾನಲ್‌ಗಳು

ಕಳೆದ 28 ದಿನಗಳಲ್ಲಿ ನಿಮ್ಮ ವೀಕ್ಷಕರು ನಿಮ್ಮ ಚಾನಲ್‌ನ ಹೊರಗೆ ಇತರ ಯಾವ ಚಾನಲ್‌ಗಳನ್ನು ಹೆಚ್ಚಾಗಿ ವೀಕ್ಷಿಸಿದ್ದಾರೆ ಎಂಬ ಮಾಹಿತಿಯನ್ನು ಈ ವರದಿಯು ತೋರಿಸುತ್ತದೆ. ನಿಮ್ಮ ವೀಕ್ಷಕರು ಯಾವ ಚಾನಲ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಮತ್ತು ಕೊಲಬೊರೇಶನ್ ಅವಕಾಶಗಳಿಗಾಗಿ ನೀವು ಇದನ್ನು ಬಳಸಬಹುದು.

ನಿಮ್ಮ ಪ್ರೇಕ್ಷಕರು ಏನನ್ನು ವೀಕ್ಷಿಸುತ್ತಾರೆ

ಕಳೆದ ಏಳು ದಿನಗಳಲ್ಲಿ ನಿಮ್ಮ ವೀಕ್ಷಕರು ನಿಮ್ಮ ಚಾನಲ್‌ನ ಹೊರಗೆ ಇತರ ಯಾವ ವೀಡಿಯೊಗಳು, Shorts, ಲೈವ್ ಸ್ಟ್ರೀಮ್‌ಗಳು ಮತ್ತು ಪಾಡ್‌ಕಾಸ್ಟ್‌ಗಳನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿಯನ್ನು ಈ ವರದಿಯು ತೋರಿಸುತ್ತದೆ. ಹೊಸ ವೀಡಿಯೊಗಳು ಮತ್ತು ಶೀರ್ಷಿಕೆಗಳಿಗಾಗಿ ವಿಷಯಗಳನ್ನು ಹುಡುಕಲು ನೀವು ಇದನ್ನು ಬಳಸಬಹುದು. ಥಂಬ್‌ನೇಲ್ ಹೇಗಿದ್ದರೆ ಚಂದ ಮತ್ತು ಕೊಲಬೊರೇಶನ್ ಅವಕಾಶಗಳಿಗಾಗಿ ನೀವು ಮಾಹಿತಿಯನ್ನು ಬಳಸಬಹುದು. ನೀವು ಅಧಿಕೃತ ಕಲಾವಿದರ ಚಾನಲ್ ಹೊಂದಿದ್ದರೆ, ವೀಡಿಯೊ ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನ ಹೊರಗಿದ್ದರೂ ಸಹ, ನೀವು ಪ್ರಾಥಮಿಕ ಕಲಾವಿದರಾಗಿರುವ ವೀಡಿಯೊಗಳು ನಿಮಗೆ ಕಾಣಿಸುವುದಿಲ್ಲ.

ನಿಮ್ಮ ವೀಕ್ಷಕರು YouTube ನಲ್ಲಿ ವೀಕ್ಷಿಸುವ ಫಾರ್ಮ್ಯಾಟ್‌ಗಳು

ಕಳೆದ 28 ದಿನಗಳಲ್ಲಿ ಜನರು ಇತರ ಯಾವ ಪ್ರಕಾರಗಳ ಫಾರ್ಮ್ಯಾ‌ಟ್‌ಗಳನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ಈ ವರದಿಯು ನಿಮಗೆ ತೋರಿಸುತ್ತದೆ. ಈ ಫಾರ್ಮ್ಯಾಟ್‌ಗಳಲ್ಲಿ ವೀಡಿಯೊಗಳು, Shorts, ಅಥವಾ ಲೈವ್ ಸ್ಟ್ರೀಮ್‌ಗಳು ಒಳಗೊಂಡಿರಬಹುದು. ಜನರು ಯಾವ ಫಾರ್ಮ್ಯಾಟ್‌ಗಳನ್ನು ಅತಿ ಹೆಚ್ಚು ವೀಕ್ಷಿಸುತ್ತಿದ್ದಾರೆ ಎಂಬುದನ್ನು ನೋಡಲು ಮತ್ತು ನಿಮ್ಮ ಕಂಟೆಂಟ್ ಅನ್ನು ಆ ಫಾರ್ಮ್ಯಾಟ್‌ಗೆ ಅಳವಡಿಸಲು ನೀವು ಇದನ್ನು ಬಳಸಬಹುದು.

ಸಬ್‌ಸ್ಕ್ರೈಬರ್ ಬೆಲ್ ನೋಟಿಫಿಕೇಶನ್‌ಗಳು

ನಿಮ್ಮ ಚಾನಲ್‌ನಿಂದ ಶೇಕಡಾ ಎಷ್ಟು ಸಬ್‌ಸ್ಕ್ರೈಬರ್‌‌ಗಳು ಬೆಲ್ ನೋಟಿಫಿಕೇಶನ್‌ಗಳನ್ನು ಪಡೆಯುತ್ತಾರೆ ಎಂಬುದನ್ನು ಈ ವರದಿಯು ಹೇಳುತ್ತದೆ. ಸಬ್‌ಸ್ಕ್ರೈಬರ್‌ ನೋಟಿಫಿಕೇಶನ್‌ಗಳ ಕುರಿತಾಗಿ ಇನ್ನಷ್ಟು ತಿಳಿಯಿರಿ.

ಸಬ್‌ಸ್ಕ್ರೈಬರ್‌ಗಳಿಂದ ಬಂದ ಒಟ್ಟು ವೀಕ್ಷಣೆ ಸಮಯ

ನಿಮ್ಮ ವೀಕ್ಷಣಾ ಸಮಯದ ಎಷ್ಟು ಶೇಕಡಾವಾರು ಭಾಗವು ನಿಮ್ಮ ಸಬ್‌ಸ್ಕ್ರೈಬರ್‌ಗಳಿಂದ ಬಂದಿದೆ ಮತ್ತು ಸಬ್‌ಸ್ಕ್ರೈಬರ್‌ಗಳಾಗದವರಿಂದ ಬಂದಿದೆ ಎಂಬುದನ್ನು ಈ ವರದಿಯು ತೋರಿಸುತ್ತದೆ.

ಟಾಪ್ ಸ್ಥಳಗಳು

ಈ ವರದಿಯು ನಿಮ್ಮ ಚಾನಲ್‌ಗೆ ಯಾವ ದೇಶಗಳಲ್ಲಿ ಮತ್ತು ಪ್ರಾಂತ್ಯಗಳಲ್ಲಿ ಹೆಚ್ಚು ವೀಕ್ಷಣೆ ಸಮಯ ದಾಖಲಾಗಿದೆ ಎಂಬುದನ್ನು ತೋರಿಸುತ್ತದೆ.

ವಯಸ್ಸು ಮತ್ತು ಲಿಂಗ

ಈ ವರದಿಯು ಯಾವ ವಯಸ್ಸಿನ ಪೇಕ್ಷಕರು ನಿಮ್ಮ ವೀಡಿಯೊಗಳನ್ನು ನೋಡಿ ವೀಕ್ಷಣೆ ಸಮಯವನ್ನು ಹೆಚ್ಚಿಸುತ್ತಿದ್ದಾರೆ, ಅವರ ಲಿಂಗ ಯಾವುದು ಎಂಬ ಮಾಹಿತಿಯನ್ನು ನೀಡುತ್ತದೆ.

ಟಾಪ್ ಸಬ್‌ಟೈಟಲ್/CC ಭಾಷೆಗಳು

ಈ ವರದಿಯು ನಿಮ್ಮ ಚಾನಲ್‌ನ ಪ್ರೇಕ್ಷಕರನ್ನು ಸಬ್‌ಟೈಟಲ್ ಭಾಷೆಯ ಪ್ರಕಾರ ತೋರಿಸುತ್ತದೆ.

ನಿಮ್ಮ ವೀಕ್ಷಕರು ಯಾರು ಮತ್ತು ಅವರು ಏನನ್ನು ವೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕಾಗಿ ಸಲಹೆಗಳನ್ನು ಪಡೆಯಿರಿ.

ತಿಳಿಯಬೇಕಾದ ಮೆಟ್ರಿಕ್‌ಗಳು

ಮರಳಿ ಭೇಟಿ ನೀಡುತ್ತಿರುವ ವೀಕ್ಷಕರು ನಿಮ್ಮ ಚಾನಲ್ ಅನ್ನು ಈಗಾಗಲೇ ವೀಕ್ಷಿಸಿರುವ ವೀಕ್ಷಕರ ಸಂಖ್ಯೆ ಮತ್ತು ನೀವು ಪರಿಶೀಲಿಸಲು ಆಯ್ಕೆಮಾಡಿದ ಅವಧಿಯಲ್ಲಿ ವೀಕ್ಷಿಸಲು ಹಿಂತಿರುಗಿದವರು.
ಹೊಸ ವೀಕ್ಷಕರು ಆಯ್ಕೆಮಾಡಿದ ಅವಧಿಯಲ್ಲಿ ನಿಮ್ಮ ಚಾನಲ್ ಅನ್ನು ಮೊದಲ ಬಾರಿಗೆ ವೀಕ್ಷಿಸಿದ ವೀಕ್ಷಕರ ಸಂಖ್ಯೆ. ಖಾಸಗಿ ಬ್ರೌಸರ್‌ನಿಂದ ವೀಕ್ಷಿಸುವ, ತಮ್ಮ ವೀಕ್ಷಣೆ ಇತಿಹಾಸವನ್ನು ಅಳಿಸಿದ ಅಥವಾ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಮ್ಮ ಚಾನಲ್ ಅನ್ನು ವೀಕ್ಷಿಸದಿರುವ ವೀಕ್ಷಕರನ್ನು ಹೊಸ ವೀಕ್ಷಕರು ಎಂದು ಪರಿಗಣಿಸಲಾಗುತ್ತದೆ.
ಅನನ್ಯ ವೀಕ್ಷಕರು ಆಯ್ಕೆ ಮಾಡಿದ ದಿನಾಂಕ ವ್ಯಾಪ್ತಿಯಲ್ಲಿ ನಿಮ್ಮ ಕಂಟೆಂಟ್ ಅನ್ನು ವೀಕ್ಷಿಸಿದ ಅಂದಾಜು ವೀಕ್ಷಕರ ಸಂಖ್ಯೆ.
ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಆಗಿರುವ ವೀಕ್ಷಕರ ಸಂಖ್ಯೆ.
ವೀಕ್ಷಣೆ ಸಮಯ (ಗಂಟೆಗಳು) ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಿರುವ ಸಮಯದ ಪ್ರಮಾಣ.
ವೀಕ್ಷಣೆಗಳು ನಿಮ್ಮ ಚಾನಲ್‌ಗಳು ಅಥವಾ ವೀಡಿಯೊಗಳಿಗೆ ಸಂಬಂಧಿಸಿದ ನ್ಯಾಯಸಮ್ಮತ ವೀಕ್ಷಣೆಗಳ ಸಂಖ್ಯೆ.
ಪ್ರತಿ ವೀಕ್ಷಕರ ಸರಾಸರಿ ವೀಕ್ಷಣೆಗಳು ಈ ಸಮಯಾವಧಿಯಲ್ಲಿ, ಈ ನಿರ್ದಿಷ್ಟ ವೀಡಿಯೊವನ್ನು ವೀಕ್ಷಕರೊಬ್ಬರು ವೀಕ್ಷಿಸಿದ ಸರಾಸರಿ ಸಂಖ್ಯೆ.
ವೀಕ್ಷಿಸಲಾದ ಸರಾಸರಿ ಶೇಕಡಾವಾರು ಪ್ರತಿ ವೀಕ್ಷಣೆಯ ಸಂದರ್ಭ, ನಿಮ್ಮ ಪ್ರೇಕ್ಷಕರು ವೀಕ್ಷಿಸುವ ವೀಡಿಯೊದ ಸರಾಸರಿ ಶೇಕಡಾವಾರು.
ಸರಾಸರಿ ವೀಕ್ಷಣೆಯ ಅವಧಿ ಆಯ್ಕೆ ಮಾಡಿದ ವೀಡಿಯೊ ಮತ್ತು ದಿನಾಂಕದ ವ್ಯಾಪ್ತಿಯಲ್ಲಿ, ಪ್ರತಿ ವೀಕ್ಷಣೆಯ ಸಂದರ್ಭ ವೀಕ್ಷಿಸಲಾದ ಸರಾಸರಿ ಅಂದಾಜು ನಿಮಿಷಗಳನ್ನು ತೋರಿಸುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1400070138203538192
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false