ಮಾನಿಟೈಸೇಶನ್‌ಗಾಗಿ ನನ್ನ ಚಾನಲ್ ಅನ್ನು ತಿರಸ್ಕರಿಸಲಾಗಿದೆ ಎಂಬುದರ ಕುರಿತಾದ FAQ ಗಳು

ಮಾನಿಟೈಸೇಶನ್‌ಗಾಗಿ ನನ್ನನ್ನು ಏಕೆ ತಿರಸ್ಕರಿಸಲಾಗಿದೆ?

YouTube ಪಾಲುದಾರ ಕಾರ್ಯಕ್ರಮಕ್ಕೆ (YPP) ಸಂಬಂಧಿಸಿದ ನಿಮ್ಮ ಅರ್ಜಿಯನ್ನು ತಿರಸ್ಕರಿಸಿದರೆ, ನಿಮ್ಮ ಚಾನಲ್‌ನ ಗಮನಾರ್ಹ ಭಾಗವು ನಮ್ಮ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸುತ್ತಿಲ್ಲ ಎಂದು ನಮ್ಮ ಹ್ಯೂಮನ್ ರಿವ್ಯೂವರ್ ನಂಬುತ್ತಾರೆ ಎಂದರ್ಥ. ಮುಂದಿನ ಹಂತಗಳ ಕುರಿತು ತಿಳಿಯಲು, ಈ ಲೇಖನದಲ್ಲಿನ ಇತರ ಪ್ರಶ್ನೆಗಳನ್ನು ನೋಡಿ.

ನಾನು ಪುನಃ ಅರ್ಜಿ ಸಲ್ಲಿಸಬಹುದೇ?

ಹೌದು. ಇದು ನಿಮ್ಮ ಮೊದಲ ತಿರಸ್ಕಾರವಾಗಿದ್ದರೆ, ನಿಮ್ಮ ತಿರಸ್ಕಾರದ ಇಮೇಲ್ ಅನ್ನು ಪಡೆದ 30 ದಿನಗಳ ನಂತರ ನೀವು YouTube ಪಾಲುದಾರ ಕಾರ್ಯಕ್ರಮಕ್ಕೆ ಮರು-ಅರ್ಜಿ ಸಲ್ಲಿಸಬಹುದು. ಇದು ನಿಮ್ಮ ಮೊದಲ ತಿರಸ್ಕಾರ ಅಲ್ಲದಿದ್ದರೆ ಅಥವಾ ನೀವು ಈ ಹಿಂದೆ ಪುನಃ ಅರ್ಜಿ ಸಲ್ಲಿಸಿದ್ದರೆ, ತಿರಸ್ಕಾರದ ಇಮೇಲ್ ಅನ್ನು ಪಡೆದ 90 ದಿನಗಳ ನಂತರ ನೀವು ಅರ್ಜಿ ಸಲ್ಲಿಸಬಹುದು. ನೀವು ಪುನಃ ಅರ್ಜಿ ಸಲ್ಲಿಸುವ ಮೊದಲು ನೀತಿ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅನ್ನು ಪರಿಶೀಲಿಸಲು ನೀವು ಬಯಸುತ್ತೀರಿ.

YouTube ಪಾಲುದಾರ ಕಾರ್ಯಕ್ರಮದಿಂದ (YPP) ನಿಮ್ಮ ಚಾನಲ್ ಅನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ನಿಮಗೆ ಅನಿಸಿದರೆ, ಅರ್ಜಿ ಸಲ್ಲಿಸುವ ಪ್ರಯತ್ನಗಳ ಸಂಖ್ಯೆಯನ್ನು ಲೆಕ್ಕಿಸದೆಯೇ 21 ದಿನಗಳಲ್ಲಿ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. 

ನನ್ನ ಅರ್ಜಿಯನ್ನು ಬಲಗೊಳಿಸಲು ನಾನು ಏನು ಮಾಡಬಹುದು?

ನಿಮ್ಮ ಚಾನಲ್ ಅನ್ನು ಸರಿಪಡಿಸಿದ ನಂತರ ನೀವು ಮಾನಿಟೈಸ್ ಮಾಡಬಹುದು ಎಂದು ನಾವು ಭರವಸೆ ನೀಡುವುದಿಲ್ಲ. ಆದರೆ ನಿಮ್ಮ ಚಾನಲ್ ಅನ್ನು ಪ್ರೋಗ್ರಾಂಗೆ ಅರ್ಹವಾಗುವ ಹಂತಕ್ಕೆ ತಲುಪಿಸುವುದಕ್ಕೆ ನಿಮಗೆ ಸಹಾಯ ಮಾಡಲು ನಾವು ಕೆಲವು ಸಾಮಾನ್ಯ ಮಾರ್ಗಸೂಚಿಗಳನ್ನು ಹೊಂದಿದ್ದೇವೆ.

  1. ನಿಮ್ಮ ತಿರಸ್ಕಾರದ ಇಮೇಲ್ ಅನ್ನು ಓದಿ. ನಿಮ್ಮ ಚಾನಲ್ ಉಲ್ಲಂಘಿಸಿದ ನಿರ್ದಿಷ್ಟ ನೀತಿಗಳನ್ನು ಇದು ನಿಮಗೆ ತಿಳಿಸುತ್ತದೆ.
  2. ನಂತರ, ನಮ್ಮ YouTube ಚಾನಲ್ ಮಾನಿಟೈಸೇಶನ್ ನೀತಿಗಳು ಮತ್ತು ನಮ್ಮ ಸಮುದಾಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ನಿಮ್ಮ ಕಂಟೆಂಟ್ ಅನ್ನು (ವೀಡಿಯೊಗಳು, ಶೀರ್ಷಿಕೆಗಳು, ವಿವರಣೆಗಳು, ಥಂಬ್‌ನೇಲ್‌ಗಳು ಮತ್ತು ಟ್ಯಾಗ್‌ಗಳು) ಪರಿಶೀಲಿಸಿ.
  3. ಮುಂದಿನ ಹಂತ, ನಮ್ಮ ನೀತಿಗಳನ್ನು ಉಲ್ಲಂಘಿಸುವ ಯಾವುದೇ ವೀಡಿಯೊಗಳನ್ನು ಎಡಿಟ್ ಮಾಡುವುದು ಅಥವಾ ಅಳಿಸುವುದಾಗಿದೆ

ನೀವು ಮರು-ಅರ್ಜಿ ಸಲ್ಲಿಸಿದರೆ, ನಮ್ಮ ಪರಿಶೀಲನಾ ತಂಡವು ನಿಮ್ಮ ಕಂಟೆಂಟ್ ಅನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸುತ್ತದೆ. ನಾವು ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ತಿಳಿಸಲು, ನಿಮಗೆ ಇಮೇಲ್ ಅನ್ನು ಕಳುಹಿಸುತ್ತೇವೆ (ಇದು ಒಂದು ತಿಂಗಳಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ). YouTube Studio ದ ಗಳಿಕೆ ವಿಭಾಗದಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಸಹ ನೀವು ಪರಿಶೀಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6499036245559699525
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false