ವೆಬ್‌ಕ್ಯಾಮ್‌ನ ಮೂಲಕ ಲೈವ್ ಸ್ಟ್ರೀಮ್ ಅನ್ನು ರಚಿಸಿ

ಲೈವ್ ಸ್ಟ್ರೀಮಿಂಗ್ ಎನ್‌ಕೋಡಿಂಗ್ ಸಾಫ್ಟ್‌ವೇರ್‌ನ ಅಗತ್ಯವಿಲ್ಲದೆಯೇ ನಿಮ್ಮ ಕಂಪ್ಯೂಟರ್ ಅನ್ನು ಬಳಸಿಕೊಂಡು ಲೈವ್‌ಗೆ ಹೋಗುವುದಕ್ಕೆ ವೆಬ್‌ಕ್ಯಾಮ್ ಸುಲಭವಾದ ವಿಧಾನವಾಗಿದೆ.

YouTube ನಲ್ಲಿ ವೆಬ್‌ಕ್ಯಾಮ್ ಲೈವ್ ಸ್ಟ್ರೀಮ್ ಅನ್ನು ರಚಿಸುವುದು ಹೇಗೆ

 

  1. ನಿಮ್ಮ ಚಾನಲ್ ಅನ್ನು ಲೈವ್ ಸ್ಟ್ರೀಮಿಂಗ್‌ಗಾಗಿ ಸಕ್ರಿಯಗೊಳಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ವೆಬ್‌ಕ್ಯಾಮ್ ಸ್ಟ್ರೀಮಿಂಗ್, Chrome 60+ ಹಾಗೂ Firefox 53+ ಜೊತೆ ಹೊಂದಾಣಿಕೆಯಾಗುತ್ತದೆ.
  2. YouTube ಗೆ ಸೈನ್ ಇನ್ ಮಾಡಿ.
  3. ಮೇಲೆ ಬಲಬದಿಯಲ್ಲಿ, ರಚಿಸಿ  ನಂತರ ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  4. ಎಡಬದಿಯಿಂದ, ವೆಬ್‌ಕ್ಯಾಮ್ ಅನ್ನು ಆಯ್ಕೆ ಮಾಡಿ.
  5. ಒಂದು ಶೀರ್ಷಿಕೆ ಹಾಗೂ ವಿವರಣೆಯನ್ನು ನಮೂದಿಸಿ ಮತ್ತು ಗೌಪ್ಯತೆ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿ. ನಿಮ್ಮ ಲೈವ್ ಸ್ಟ್ರೀಮ್ ಅನ್ನು ನಂತರದ ದಿನಕ್ಕೆ ಸಹ ನಿಗದಿಪಡಿಸಬಹುದು.
    • YouTube ನಲ್ಲಿ 13–17 ವರ್ಷದ ಬಳಕೆದಾರರಿಗಾಗಿ, ನಿಮ್ಮ ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್ ಅನ್ನು ಖಾಸಗಿ ಎಂಬುದಾಗಿ ಸೆಟ್ ಮಾಡಲಾಗುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಕ್ಕೆ ಸೆಟ್ ಮಾಡಲಾಗುತ್ತದೆ. ಎಲ್ಲಾ ಸ್ಟ್ರೀಮರ್‌ಗಳು ತಮ್ಮ ಲೈವ್ ಸ್ಟ್ರೀಮ್ ಅನ್ನು ಸಾರ್ವಜನಿಕ, ಖಾಸಗಿ ಅಥವಾ ಪಟ್ಟಿ ಮಾಡದಿರುವುದು ಎಂಬುದಾಗಿ ಮಾಡಲು ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.
  6. ಇನ್ನಷ್ಟು ಸೆಟ್ಟಿಂಗ್‌ಗಳಿಗಾಗಿ, ಇನ್ನಷ್ಟು ಆಯ್ಕೆಗಳು ನಂತರ ಸುಧಾರಿತ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  7. ಮುಂದಿನದು ಎಂಬುದನ್ನು ಕ್ಲಿಕ್‌ ಮಾಡಿ. ಆನಂತರ ನಿಮ್ಮ ಕ್ಯಾಮರಾ ಥಂಬ್‌ನೇಲ್ ಅನ್ನು ರಚಿಸುತ್ತದೆ.
  8. ನೀವು ಸರಿಯಾದ ವೆಬ್‌ಕ್ಯಾಮ್ ಹಾಗೂ ಮೈಕ್ರೊಫೋನ್ ಅನ್ನು ಆಯ್ಕೆ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  9. ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  10. ನಿಮ್ಮ ಸ್ಟ್ರೀಮ್ ಅನ್ನು ನಿರ್ವಹಿಸಲು, ಉದಾಹರಣೆಗೆ ಟ್ಯಾಗ್‌ಗಳನ್ನು ಸೇರಿಸಲು, ಮಾನಿಟೈಸೇಶನ್ ಮತ್ತು ಚಾಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಹಾಗೂ ಇನ್ನಷ್ಟನ್ನು ಮಾಡಲು, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಸ್ಟ್ರೀಮ್ ಲೈವ್ ಆಗಿರಲಿ, ಅಲ್ಲದಿರಲಿ, ನೀವು ಈ ಸೆಟ್ಟಿಂಗ್‌ಗಳನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು.
  11. ನೀವು ಸ್ಟ್ರೀಮಿಂಗ್ ಮುಗಿಸಿದ ಬಳಿಕ, ಕೆಳಗೆ ಸ್ಟ್ರೀಮ್ ಮುಕ್ತಾಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ. 12 ಗಂಟೆಗಳಿಗಿಂತ ಕಡಿಮೆ ಅವಧಿಯ ಎಲ್ಲಾ ಸ್ಟ್ರೀಮ್‌ಗಳನ್ನು ಸ್ವಯಂಚಾಲಿತವಾಗಿ ಆರ್ಕೈವ್ ಮಾಡಲಾಗುತ್ತದೆ. ಲೈವ್ ಟ್ಯಾಬ್‌ನಲ್ಲಿ ಹಿಂದಿನ, ಪ್ರಸ್ತುತ ಮತ್ತು ಮುಂಬರುವ ಸ್ಟ್ರೀಮ್‌ಗಳನ್ನು ನೀವು ಆ್ಯಕ್ಸೆಸ್ ಮಾಡಬಹುದು.
ಗಮನಿಸಿ: ನಿಗದಿತ ಲೈವ್ ಸ್ಟ್ರೀಮ್ ಅನ್ನು ಆ್ಯಕ್ಸೆಸ್ ಮಾಡಲು ಅಥವಾ ಪ್ರಾರಂಭಿಸಲು, ಲೈವ್ ನಿಯಂತ್ರಣ ಕೊಠಡಿಗೆ ಹೋಗಿ ಮತ್ತು ನಿರ್ವಹಿಸಿ ಎಂಬುದನ್ನು ಆಯ್ಕೆ ಮಾಡಿ.

ಲೈವ್ ಕಂಟ್ರೋಲ್ ಪ್ಯಾನೆಲ್ ಅನ್ನು ಬಳಸಿ

ನೀವು ಲೈವ್ ಸ್ಟ್ರೀಮ್ ಮಾಡುವಾಗ, ನಿಮ್ಮ ಸ್ಟ್ರೀಮ್‌ಗೆ ಅಗತ್ಯವಿರುವ ಡಿಸ್‌ಪ್ಲೇ ಪ್ರದೇಶವನ್ನು ಕಡಿಮೆ ಮಾಡಲು ಲೈವ್ ನಿಯಂತ್ರಣ ಕೊಠಡಿಯ ಕಾಂಪ್ಯಾಕ್ಟ್ ಆವೃತ್ತಿಯನ್ನು (ಲೈವ್ ಕಂಟ್ರೋಲ್ ಪ್ಯಾನಲ್) ನೀವು ಬಳಸಬಹುದು. ಲೈವ್ ಕಂಟ್ರೋಲ್ ಪ್ಯಾನಲ್ ನಿಮಗೆ ಲೈವ್ ನಿಯಂತ್ರಣ ಕೊಠಡಿಯಿಂದ ವೀಕ್ಷಣೆಗಳು ಮತ್ತು ಚಾಟ್ ಆದಾಯದಂತಹ ಪ್ರಮುಖ ಮಾಹಿತಿಯನ್ನು ಸಣ್ಣ ಡಿಸ್‌ಪ್ಲೇನಲ್ಲಿ ತೋರಿಸುತ್ತದೆ.

ಲೈವ್ ಕಂಟ್ರೋಲ್ ಪ್ಯಾನೆಲ್ ಅನ್ನು ಆನ್ ಮಾಡಲು:

  1. ಲೈವ್ ನಿಯಂತ್ರಣ ಕೊಠಡಿಯಲ್ಲಿ, ಸ್ಟ್ರೀಮ್ ಡ್ಯಾಶ್‌ಬೋರ್ಡ್‌ಗೆ ಹೋಗಿ.
  2. ಕೆಳಗಿನ ಎಡ ಮೂಲೆಯಲ್ಲಿ, ಪಾಪ್‌ಔಟ್ ಡ್ಯಾಶ್‌ಬೋರ್ಡ್ Pop out ಅನ್ನು ಕ್ಲಿಕ್ ಮಾಡಿ.

ಲೈವ್ ಕಂಟ್ರೋಲ್ ಪ್ಯಾನೆಲ್ ಅನ್ನು ಮುಚ್ಚಲು, ವಿಂಡೋದಿಂದ ನಿರ್ಗಮಿಸಿ.

ಗಮನಿಸಿ: ನೀವು ಎನ್‌ಕೋಡರ್ ಅಥವಾ ವೆಬ್‌ಕ್ಯಾಮ್‌ ಬಳಸಿಕೊಂಡು ಲೈವ್ ಸ್ಟ್ರೀಮ್ ಮಾಡಿದಾಗ ಮಾತ್ರ ನೀವು ಲೈವ್ ಕಂಟ್ರೋಲ್ ಪ್ಯಾನಲ್ ಫೀಚರ್ ಅನ್ನು ಬಳಸಬಹುದು.
 

ವೆಬ್‌ಕ್ಯಾಮ್ ಅನ್ನು ಬಳಸಿಕೊಂಡು ಲೈವ್ ನಿಯಂತ್ರಣ ಕೊಠಡಿಯಲ್ಲಿ ಸ್ಕ್ರೀನ್ ಅನ್ನು ಹಂಚಿಕೊಳ್ಳಿ

ವೆಬ್‌ಕ್ಯಾಮ್ ಮೂಲಕ ಲೈವ್ ನಿಯಂತ್ರಣ ಕೊಠಡಿಯನ್ನು ಬಳಸಿಕೊಂಡು ಲೈವ್ ಸ್ಟ್ರೀಮ್ ಮಾಡುವಾಗ, ನೀವು ಈಗ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಬಹುದು. ವೆಬ್‌ಕ್ಯಾಮ್ ಅನ್ನು ಬಳಸಿಕೊಂಡು ನೀವು ಲೈವ್‌ಗೆ ಹೋದ ನಂತರ:

  1. ಕೆಳಗಿನ ಮಧ್ಯಭಾಗದಲ್ಲಿ, ಮೈಕ್ ಬಟನ್‌ನ ಪಕ್ಕದಲ್ಲಿರುವ ಸ್ಕ್ರೀನ್ ಅನ್ನು ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  2. ನಿಮ್ಮ ಸಂಪೂರ್ಣ ಸ್ಕ್ರೀನ್, ವಿಂಡೋ ಅಥವಾ ಟ್ಯಾಬ್ ಎಂಬುದನ್ನು ಆಯ್ಕೆಮಾಡಿ.
    • ವೆಬ್‌ಕ್ಯಾಮ್ ಅನ್ನು ಬೆಂಬಲಿಸುವ ಬ್ರೌಸರ್ ಟ್ಯಾಬ್ ಅನ್ನು ನೀವು ಪ್ರಸ್ತುತಪಡಿಸಿದರೆ, ಅದು ಆ ಬ್ರೌಸರ್‌ನ ಆಡಿಯೊವನ್ನು ಡಿಫಾಲ್ಟ್ ಆಗಿ ಹಂಚಿಕೊಳ್ಳುತ್ತದೆ.
    • ಬೇರೆ ಟ್ಯಾಬ್ ಅನ್ನು ಪ್ರಸ್ತುತಪಡಿಸಲು, ನೀವು ಪ್ರಸ್ತುತಪಡಿಸಲು ಬಯಸುವ ಟ್ಯಾಬ್ ಅನ್ನು ಆಯ್ಕೆಮಾಡಿ, ಬದಲಿಗೆ ಈ ಟ್ಯಾಬ್ ಅನ್ನು ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  3. ಹಂಚಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.

ಲೈವ್ ನಿಯಂತ್ರಣ ಕೊಠಡಿಯಲ್ಲಿ ನಿಮ್ಮ ಸ್ಕ್ರೀನ್ ಹಂಚಿಕೊಳ್ಳುವುದನ್ನು ನಿಲ್ಲಿಸಲು:

  • ಲೈವ್ ನಿಯಂತ್ರಣ ಕೊಠಡಿಯಲ್ಲಿ, ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ ಅಥವಾ
  • ಬ್ರೌಸರ್ ವಿಂಡೋ ಟ್ಯಾಬ್‌ನಲ್ಲಿ, ಹಂಚಿಕೊಳ್ಳುವುದನ್ನು ನಿಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ
ಗಮನಿಸಿ: ವೆಬ್‌ಕ್ಯಾಮ್ ಮತ್ತು ಮೈಕ್ರೊಫೋನ್ ಕನೆಕ್ಟ್ ಮಾಡಿದ್ದರೆ ಮಾತ್ರ ನೀವು ಲೈವ್ ನಿಯಂತ್ರಣ ಕೊಠಡಿಯಲ್ಲಿ ಸ್ಕ್ರೀನ್ ಅನ್ನು ಹಂಚಿಕೊಳ್ಳಬಹುದು. 

ನಿಮ್ಮ ಲೈವ್ ಸ್ಟ್ರೀಮ್‌ಗೆ ಟ್ರೇಲರ್ ಅನ್ನು ಸೇರಿಸಿ

ಟ್ರೇಲರ್ ಅನ್ನು ತೋರಿಸುವ ಮೂಲಕ, ನಿಮ್ಮ ನಿಗದಿತ ಲೈವ್ ಸ್ಟ್ರೀಮ್‌ನ ಕುರಿತು ನಿಮ್ಮ ಪ್ರೇಕ್ಷಕರಲ್ಲಿ ಆಸಕ್ತಿ ಮೂಡಿಸಿ. ಲೈವ್ ಸ್ಟ್ರೀಮ್ ಆರಂಭವಾಗುವ ಮೊದಲು, ನಿಮ್ಮ ಟ್ರೇಲರ್, ವೀಕ್ಷಕರಿಗಾಗಿ ವೀಕ್ಷಣಾ ಪುಟದಲ್ಲಿ ವೀಕ್ಷಕರಿಗಾಗಿ ಪ್ಲೇ ಆಗುತ್ತದೆ. 

ಲೈವ್ ನಿಯಂತ್ರಣ ಕೊಠಡಿಯಲ್ಲಿ “ನಿರ್ವಹಿಸಿ” ಟ್ಯಾಬ್‌ನಿಂದ ನಿಗದಿಪಡಿಸಲಾದ ಸ್ಟ್ರೀಮ್‌ಗಳಲ್ಲಿ ಮಾತ್ರ ಟ್ರೇಲರ್‌ಗಳನ್ನು ಪ್ಲೇ ಮಾಡಬಹುದು.

  1. ಸಾಮಾನ್ಯ ಅಪ್‌ಲೋಡ್‌ನಲ್ಲಿ ನೀವು ಮಾಡುವ ಹಾಗೆ, ನಿಮ್ಮ ಟ್ರೇಲರ್ ಅನ್ನು ನಿಮ್ಮ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿ.
  2. YouTube Studio > ಲೈವ್‌ಗೆ ಹೋಗಿ ಎಂಬಲ್ಲಿಗೆ ಹೋಗಿ.
  3. ನಿಗದಿತ ಲೈವ್ ಸ್ಟ್ರೀಮ್ ಅನ್ನು ರಚಿಸಿ ಅಥವಾ “ನಿರ್ವಹಿಸಿ” ಟ್ಯಾಬ್‌ನಿಂದ ನಿಗದಿತ ಲೈವ್ ಸ್ಟ್ರೀಮ್ ಅನ್ನು ಆಯ್ಕೆಮಾಡಿ.
  4. ಮೇಲಿನ ಬಲಭಾಗದಲ್ಲಿ, ಎಡಿಟ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  5. ಕಸ್ಟಮೈಸ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
  6. “ಟ್ರೇಲರ್” ಅಡಿಯಲ್ಲಿ ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ನಿಮ್ಮ ಟ್ರೇಲರ್ ವೀಡಿಯೊವನ್ನು ಆಯ್ಕೆ ಮಾಡಿ.
  8. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ಅರ್ಹತೆ

ಈ ಫೀಚರ್, 1,000 ಕ್ಕಿಂತ ಹೆಚ್ಚಿನ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಮತ್ತು ಯಾವುದೇ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳನ್ನು ಹೊಂದಿಲ್ಲದಿರುವ ರಚನೆಕಾರರಿಗೆ ಲಭ್ಯವಿದೆ. 

 

ಅವಶ್ಯಕತೆಗಳು

  • ವೀಡಿಯೊದ ಪ್ರಕಾರ: ಯಾವುದೇ YouTube ಬೆಂಬಲಿತ ವೀಡಿಯೊ ಪ್ರಕಾರವನ್ನು ಬಳಸಿ.
  • ವೀಡಿಯೊದ ಅವಧಿ: 15 ಸೆಕೆಂಡ್‌ಗಳು – 3 ನಿಮಿಷಗಳು.
  • ದೃಶ್ಯಾನುಪಾತ ಮತ್ತು ರೆಸಲ್ಯೂಷನ್: ಪ್ರೀಮಿಯರ್ ಮಾಡುವ ವೀಡಿಯೊದಲ್ಲಿ ಬಳಸುವ ದೃಶ್ಯಾನುಪಾತ ಮತ್ತು ರೆಸಲ್ಯೂಷನ್ ಅನ್ನು ಇಲ್ಲೂ ಬಳಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ.
  • ಆಡಿಯೋ ಮತ್ತು ವೀಡಿಯೊ ಹಕ್ಕುಗಳು: ಟ್ರೇಲರ್, ಬೇರೆ ಕಂಟೆಂಟ್ ಅನ್ನು ಉಲ್ಲಂಘಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಲೈವ್ ಸ್ಟ್ರೀಮ್‌ಗಳನ್ನು ನಿರ್ವಹಿಸಿ

YouTube Studio ಡ್ಯಾಶ್‌ಬೋರ್ಡ್‌ನಿಂದ ನೀವು ಪ್ರಸ್ತುತ, ಮುಂಬರಲಿರುವ ಮತ್ತು ಹಿಂದಿನ ಲೈವ್ ಸ್ಟ್ರೀಮ್‌ಗಳನ್ನು ಆ್ಯಕ್ಸೆಸ್ ಮಾಡಬಹುದು. ಹೇಗೆ ಎನ್ನುವುದು ಇಲ್ಲಿದೆ:
  1. YouTube Studio ಅಥವಾ studio.youtube.com ಗೆ ಹೋಗಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ಲೈವ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
    • ಇದೀಗ ಲೈವ್ ಆಗಿದೆ: ಪ್ರಸ್ತುತ ಲೈವ್ ಸ್ಟ್ರೀಮ್ ಆಗುತ್ತಿರುವ ವೀಡಿಯೊಗಳು.
    • ಮುಂಬರುವುದು: ಇನ್ನೂ ಸ್ಟ್ರೀಮ್ ಆಗಬೇಕಿರುವ, ನಿರ್ದಿಷ್ಟ ಸಮಯಕ್ಕೆ ಸ್ಟ್ರೀಮ್ ಮಾಡಲು ನಿಗದಿಪಡಿಸಲಾಗಿರುವ ವೀಡಿಯೊಗಳು.
    • ಲೈವ್ ಮರುಪ್ಲೇ: ಈಗಾಗಲೇ ಲೈವ್ ಸ್ಟ್ರೀಮ್ ಮಾಡಲಾಗಿರುವ ವೀಡಿಯೊಗಳು.

ನಿಗದಿತ ಲೈವ್ ಸ್ಟ್ರೀಮ್‌ಗಳನ್ನು ಲೈವ್ ನಿಯಂತ್ರಣ ಕೊಠಡಿಯಿಂದಲೂ ಆ್ಯಕ್ಸೆಸ್ ಮಾಡಬಹುದು ಮತ್ತು ಲಾಂಚ್ ಮಾಡಬಹುದು.

  1. ಎಡದಿಂದ, ನಿರ್ವಹಿಸಿ ಎಂಬುದನ್ನು ಆಯ್ಕೆ ಮಾಡಿ.
  2. ನೀವು ಪ್ರಾರಂಭಿಸಲು ಬಯಸುವ ನಿಗದಿತ ಲೈವ್ ಸ್ಟ್ರೀಮ್ ಅನ್ನು ಕ್ಲಿಕ್ ಮಾಡಿ.
  3. ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4903964950475576101
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false