Youtube.com/new ನಲ್ಲಿ ಪ್ರಾಯೋಗಿಕ ಫೀಚರ್‌ನ ಬಳಕೆ

ನೀವು youtube.com/new ನಲ್ಲಿ ಪ್ರಾಯೋಗಿಕ YouTube ಫೀಚರ್‌ಗಳ ಕುರಿತು ಕಲಿಯಬಹುದು ಮತ್ತು ಆಯ್ಕೆ ಮಾಡಿಕೊಳ್ಳಬಹುದು.

ಎಲ್ಲಾ ಪ್ರಯೋಗಗಳು ಲೈವ್ ಆಗುವುದಿಲ್ಲ. YouTube ನ ಭವಿಷ್ಯವನ್ನು ರೂಪಿಸಲು ಸಹಾಯ ಮಾಡಲು ನೀವು ಈ ಫೀಚರ್ ಅನ್ನು ಬಳಸುತ್ತಿರುವಾಗ ನಿಮಗೆ ಸಾಧ್ಯವಾದಾಗಲೆಲ್ಲಾ ಪ್ರತಿಕ್ರಿಯೆ ನೀಡಿ.

ಭಾಗವಹಿಸಲು:

  1. youtube.com/new ಗೆ ಭೇಟಿ ನೀಡಿ ಮತ್ತು ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ. ಕೆಲವು ಪ್ರಯೋಗಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತವೆ. ಈ ಪ್ರಯೋಗಗಳು Premium ಸದಸ್ಯತ್ವ ಹೊಂದಿರುವ ಸದಸ್ಯರಿಗೆ ಮಾತ್ರ ಲಭ್ಯವಿರುತ್ತವೆ, ಹಾಗಾಗಿ ಪ್ರಯೋಗಗಳಲ್ಲಿ ಭಾಗವಹಿಸಲು ನೀವು ಸಕ್ರಿಯ YouTube Premium ಸದಸ್ಯತ್ವ ಹೊಂದುವ ಅಗತ್ಯವಿದೆ.
  2. ನೀವು ಪ್ರಯತ್ನಿಸಲು ಬಯಸುವ ಪ್ರಯೋಗವನ್ನು ನೀವು ನೋಡಿದರೆ, ಇದನ್ನು ಬಳಸಿ ನೋಡಿ ಅನ್ನು ಆಯ್ಕೆಮಾಡಿ.
  3. ನೀವು ಆಯ್ಕೆ ಮಾಡಿದ ಫೀಚರ್ ಅನ್ನು ಬಳಸಿ ಮತ್ತು ಪ್ರತಿಕ್ರಿಯೆ ನೀಡಿ. 

ಪ್ರತಿಕ್ರಿಯೆ ನೀಡಲು ಹೆಚ್ಚಿನ ಅವಕಾಶಗಳಿಗಾಗಿ, ನಮ್ಮ ಸಂಶೋಧನಾ ಅಧ್ಯಯನಗಳಲ್ಲಿ ಭಾಗವಹಿಸಲು ನೀವು ಯಾವಾಗಲೂ ಸೈನ್ ಅಪ್ ಮಾಡಬಹುದು.

ಪ್ರತಿಕ್ರಿಯೆಯನ್ನು ಹಂಚಿಕೊಳ್ಳಲು:

  1. youtube.com/new ಗೆ ಭೇಟಿ ನೀಡಿ.
  2. ಪ್ರತಿಕ್ರಿಯೆ ಕಳುಹಿಸಿ ಆಯ್ಕೆಮಾಡಿ.

ವಿಶೇಷವಾಗಿ ಪ್ರಯೋಗವು ಕೊನೆಗೊಳ್ಳುವ ಸಂದರ್ಭದಲ್ಲಿ, ಪ್ರತಿಕ್ರಿಯೆಯನ್ನು ಸಲ್ಲಿಸಲು ನಿಮಗೆ ನೆನಪಿಸಲು YouTube ನಲ್ಲಿ ಸಂದೇಶಗಳು ಗೋಚರಿಸುವುದನ್ನು ನೀವು ನೋಡಬಹುದು.

ಪ್ರಯೋಗದಿಂದ ನಿರ್ಗಮಿಸಲು:

  1. youtube.com/new ಗೆ ಭೇಟಿ ನೀಡಿ.
  2. ಪ್ರಯೋಗದ ಪಕ್ಕದಲ್ಲಿರುವ ಆಫ್ ಮಾಡಿ ಬಟನ್ ಅನ್ನು ಆಯ್ಕೆಮಾಡಿ.
ಗಮನಿಸಿ: ನೀವು Premium ಸದಸ್ಯತ್ವ ಹೊಂದಿರುವ ಸದಸ್ಯರಾಗಿರುವಾಗ ಮಾತ್ರ ಪ್ರಯೋಗಗಳನ್ನು ಆಫ್ ಮಾಡಬಹುದು.ನೀವು ಮುಂಚಿತವಾಗಿ ನಿರ್ಗಮಿಸದಿದ್ದರೆ, ಪ್ರಾಯೋಗಿಕ ಫೀಚರ್ ನಿಗದಿತ ಅಂತಿಮ ದಿನಾಂಕದಂದು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ ಮತ್ತು ನಿಮ್ಮ YouTube ಅನುಭವವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12329369650136383986
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false