Nintendo Switch ನಲ್ಲಿ YouTube ಅನ್ನು ವೀಕ್ಷಿಸಿ

ನೀವು ಇದೀಗ Nintendo Switch ನಲ್ಲಿ YouTube ವೀಡಿಯೊಗಳನ್ನು ವೀಕ್ಷಿಸಬಹುದು. ನೀವು ನಿಮ್ಮ ಸಬ್‌ಸ್ಕ್ರೈಬ್ ಮಾಡಿದ ಚಾನಲ್‌ಗಳನ್ನು ವೀಕ್ಷಿಸಬಹುದು, ಕಂಟೆಂಟ್‌ಗಾಗಿ ಹುಡುಕಬಹುದು ಮತ್ತು ನಿಮ್ಮ ಮೊಬೈಲ್ ಸಾಧನವನ್ನು ರಿಮೋಟ್ ಆಗಿ ಬಳಸಬಹುದು.

YouTube ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ

YouTube ಗೆ ಸೈನ್ ಇನ್ ಮಾಡಿ ಅಥವಾ ಅದರಿಂದ ಸೈನ್ ಔಟ್ ಮಾಡಿ

  1. ಸೈನ್ ಇನ್ ಎಂಬುದಕ್ಕೆ ಹೋಗಿ.
  2. ನಿಮ್ಮ Google ಖಾತೆಯೊಂದಿಗೆ ಸೈನ್ ಇನ್ ಮಾಡಿ. ನೀವು ಒಂದಕ್ಕಿಂತ ಹೆಚ್ಚು Google ಖಾತೆಗಳನ್ನು ಹೊಂದಿದ್ದರೆ, ನೀವು YouTube ನೊಂದಿಗೆ ಬಳಸುವ ಖಾತೆಯನ್ನು ಆಯ್ಕೆಮಾಡಲು ಮರೆಯದಿರಿ.
  3. ಸೈನ್ ಇನ್ ಮಾಡಿದ ನಂತರ, ನಿಮ್ಮ ಖಾತೆಯೊಂದಿಗೆ ಸಂಯೋಜಿತವಾಗಿರುವ Google ಐಡೆಂಟಿಟಿ‌ಗಳ ಪಟ್ಟಿಯನ್ನು ನೀವು ನೋಡಬಹುದು. ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಲಾದ ಖಾತೆಯನ್ನು ಆಯ್ಕೆಮಾಡಲು ಮರೆಯದಿರಿ. YouTube ಚಾನಲ್ ಹೊಂದಿರದ ಬ್ರ್ಯಾಂಡ್ ಖಾತೆಯನ್ನು ನೀವು ಆಯ್ಕೆಮಾಡಿದರೆ, ನಿಮಗೆ ಸೈನ್ ಇನ್ ಮಾಡಲು ಸಾಧ್ಯವಾಗುವುದಿಲ್ಲ.
ಗಮನಿಸಿ: ಆ್ಯಪ್ ಅನ್ನು ತೆರೆಯುವಾಗ, Nintendo ಖಾತೆಯನ್ನು ಬಳಸುವುದಕ್ಕೆ ಆಯ್ಕೆಮಾಡಲು ನಿಮ್ಮನ್ನು ಕೇಳಲಾಗುತ್ತದೆ. YouTube ಅನ್ನು ಬಳಸಲು ನೀವು ಯಾವುದಾದರೂ Nintendo ಖಾತೆಯನ್ನು ಬಳಸಬಹುದು.

ನಿಮ್ಮ Nintendo Switch ನಿಂದ ನಿಮ್ಮ ಖಾತೆಯನ್ನು ಅನ್‌ಲಿಂಕ್ ಮಾಡುವುದು ಹೇಗೆ ಎಂದು ತಿಳಿಯಿರಿ.

ವೀಡಿಯೊ ನಿಯಂತ್ರಣಗಳು

ಯಾವುದೇ ಕನೆಕ್ಟ್ ಆಗಿರುವ ಕಂಟ್ರೋಲರ್‌ನಲ್ಲಿ, ಎಡ ಜಾಯ್‌ಸ್ಟಿಕ್ ಅಥವಾ ಡಿ-ಪ್ಯಾಡ್‌ನ ಮೂಲಕ YouTube ಅನ್ನು ಎಕ್ಸ್‌ಪ್ಲೋರ್ ಮಾಡಿ. YouTube ಆ್ಯಪ್‌ನಲ್ಲಿ ಪ್ರಸ್ತುತ ಸ್ವೈಪಿಂಗ್ ಗೆಸ್ಚರ್‌ಗಳು ಬೆಂಬಲಿತವಾಗಿಲ್ಲ.
ನೀವು ಪ್ಲೇ ಮಾಡಲು ವೀಡಿಯೊವನ್ನು ಆಯ್ಕೆಮಾಡಿದರೆ, ಪ್ಲೇಯರ್ ಕಂಟ್ರೋಲ್ ಬಾರ್ ಕಾಣಿಸಲಿದ್ದು, ಅದು ಈ ಕೆಳಗಿನ ಕ್ರಿಯೆಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ:
  • ಹೋಮ್: B ಅನ್ನು ಟ್ಯಾಪ್ ಮಾಡುವ ಮೂಲಕ ಹೋಮ್ ಸ್ಕ್ರೀನ್‌ಗೆ ಹಿಂತಿರುಗಿ.
  • ಪ್ಲೇ ಮಾಡಿ Play icon: ನಿಮ್ಮ ವೀಡಿಯೊವನ್ನು ಪ್ಲೇ ಮಾಡಿ ಅಥವಾ ಪುನರಾರಂಭಿಸಿ. ನೀವು A ಅನ್ನು ಸಹ ಟ್ಯಾಪ್ ಮಾಡಬಹುದು.
  • ಶೀರ್ಷಿಕೆಗಳು : ಲಭ್ಯವಿದ್ದರೆ, ವೀಡಿಯೊದ ಉಪಶೀರ್ಷಿಕೆಗಳನ್ನು ತೋರಿಸಿ.

ವೀಡಿಯೊವನ್ನು ಪ್ಲೇ ಮಾಡುವಾಗ, ಹೆಚ್ಚಿನ ಆಯ್ಕೆಗಳನ್ನು ಕಂಡುಕೊಳ್ಳಲು “ಇನ್ನಷ್ಟು ಕ್ರಿಯೆಗಳು” ಎಂಬುದನ್ನು ಆಯ್ಕೆಮಾಡಿ:

  • ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.
  • ವೀಡಿಯೊಗೆ ರೇಟ್ ನೀಡಿ.
  • ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವೀಡಿಯೊವನ್ನು ವರದಿ ಮಾಡಿ.
ಗಮನಿಸಿ: Nintendo Switch ನಲ್ಲಿನ ಸ್ಕ್ರೀನ್‌ಶಾಟ್ ಫಂಕ್ಷನ್, YouTube ಆ್ಯಪ್‌ನಲ್ಲಿ ಬೆಂಬಲಿತವಾಗಿಲ್ಲ.

ವೀಡಿಯೊಗಳನ್ನು ಹುಡುಕಿ

YouTube ನ ಮುಖ್ಯ ಮೆನುವಿನಲ್ಲಿ, ವೀಡಿಯೊಗಳನ್ನು ಹುಡುಕಲು X ಅನ್ನು ಒತ್ತಿರಿ. ಹುಡುಕುವಾಗ, ಸ್ಪೇಸ್ ಸೇರಿಸಲು Y ಅನ್ನು ಮತ್ತು ಅಕ್ಷರವೊಂದನ್ನು ಅಳಿಸಲು B ಅನ್ನು ಒತ್ತಿರಿ.
  • ವೀಡಿಯೊಗಳನ್ನು ಬ್ರೌಸ್ ಮಾಡಿ: ನೀವು ಹುಡುಕಿದಂತೆಲ್ಲಾ, ಸಂಬಂಧಿತ ವೀಡಿಯೊಗಳನ್ನು ಸ್ಕ್ರೀನ್‌ನ ಕೆಳಭಾಗದಲ್ಲಿ ತೋರಿಸಲಾಗುತ್ತದೆ. ವೀಡಿಯೊ ಫಲಿತಾಂಶಗಳನ್ನು ಬ್ರೌಸ್ ಮಾಡಲು, ಡಿ-ಪ್ಯಾಡ್ ಅಥವಾ ಎಡ ಸ್ಟಿಕ್‌ನಲ್ಲಿ ಎಡಕ್ಕೆ ಅಥವಾ ಬಲಕ್ಕೆ ಒತ್ತಿರಿ.
  • ನಿಮ್ಮ ಹುಡುಕಾಟವನ್ನು ಎಡಿಟ್ ಮಾಡಿ: ಟೈಪ್ ಮಾಡಲು ಕೀಬೋರ್ಡ್ ಅನ್ನು ತೆರೆಯಲು X ಅನ್ನು ಮತ್ತೊಮ್ಮೆ ಒತ್ತಿರಿ ಅಥವಾ ಕೀಬೋರ್ಡ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಗಮನಿಸಿ: ಸಾಧನವನ್ನು ಹ್ಯಾಂಡ್‌ಹೆಲ್ಡ್ ಮೋಡ್‌ನಲ್ಲಿ ಬಳಸಿದಾಗ ಟಚ್-ಸ್ಕ್ರೀನ್ ಫೀಚರ್ ಹುಡುಕಾಟ ಕೀಬೋರ್ಡ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ.

ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ತೆರವುಗೊಳಿಸಿ

ವೀಕ್ಷಣೆ ಅಥವಾ ಹುಡುಕಾಟ ಇತಿಹಾಸವನ್ನು ತೆರವುಗೊಳಿಸಲು:
  1. ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ.
  2. ವೀಕ್ಷಣೆ ಇತಿಹಾಸ ತೆರವುಗೊಳಿಸಿ ಅಥವಾ ಹುಡುಕಾಟ ಇತಿಹಾಸ ತೆರವುಗೊಳಿಸಿ ಎಂಬುದನ್ನು ಆಯ್ಕೆಮಾಡಿ.

ಈ ಕ್ರಿಯೆಯು ನಿಮ್ಮ ಖಾತೆಯ ವೀಕ್ಷಣೆ ಅಥವಾ ಹುಡುಕಾಟ ಇತಿಹಾಸವನ್ನು ಎಲ್ಲಾ ಸಾಧನಗಳಿಂದ ಮತ್ತು ನಿಮ್ಮ ಸ್ಟೋರಿಗಳ ವೀಕ್ಷಣೆ ಇತಿಹಾಸದಿಂದ ತೆರವುಗೊಳಿಸುತ್ತದೆ.

Nintendo ಪೋಷಕ ನಿಯಂತ್ರಣಗಳು ಮತ್ತು ಸೈನ್ ಇನ್

Nintendo Switch ಆ್ಯಪ್, ಕನ್ಸೋಲ್‌ನ ಸಿಸ್ಟಂ ಸೆಟ್ಟಿಂಗ್‌ಗಳಲ್ಲಿ ಪೋಷಕ ನಿಯಂತ್ರಣಗಳನ್ನು ಹೊಂದಿದೆ. ಪೋಷಕ ನಿಯಂತ್ರಣಗಳನ್ನು ಆನ್ ಮಾಡಿದರೆ, YouTube ಆ್ಯಪ್ ಲಾಕ್ ಆಗಬಹುದು.
ನಿಮ್ಮ Nintendo Switch ನಲ್ಲಿ ಪೋಷಕ ನಿಯಂತ್ರಣಗಳನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು:
  1. ಸಿಸ್ಟಂ ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ.
  2. ಪೋಷಕ ನಿಯಂತ್ರಣಗಳು ಎಂಬುದನ್ನು ಆಯ್ಕೆಮಾಡಿ.
  3. ಪೋಷಕ ನಿಯಂತ್ರಣಗಳ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  4. ನಾನು ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡಿದ್ದೇನೆ. ಮುಂದೇನು? ಅಥವಾ ನನ್ನ ಬಳಿ ಸ್ಮಾರ್ಟ್ ಸಾಧನವಿಲ್ಲ! ಎಂಬುದನ್ನು ಆಯ್ಕೆಮಾಡಿ ಮತ್ತು ಪ್ರಾಂಪ್ಟ್‌ಗಳನ್ನು ಅನುಸರಿಸಿ..
  5. ನಿಮ್ಮ ಅಪೇಕ್ಷಿತ ನಿರ್ಬಂಧದ ಹಂತವನ್ನು ಆಯ್ಕೆಮಾಡಿ.

“ಹದಿಹರೆಯಕ್ಕಿಂತ ಮೊದಲು” ಮತ್ತು “ಮಕ್ಕಳು” ಎಂಬ ನಿರ್ಬಂಧದ ಹಂತಗಳಿಗಾಗಿ, Nintendo Switch ಆ್ಯಪ್ ಲಾಕ್ ಆಗಿದೆ. “ಹದಿಹರೆಯ” ಮತ್ತು “ನಿರ್ಬಂಧಿಸಲಾಗಿಲ್ಲ” ಎಂಬುದಕ್ಕಾಗಿ, ಆ್ಯಪ್ ಅನ್‌ಲಾಕ್ ಆಗಿದೆ.

ಗಮನಿಸಿ: ನೀವು ಪೋಷಕ ನಿಯಂತ್ರಣಗಳನ್ನು ಆನ್ ಮಾಡಲು ಬಯಸಿದರೆ, ಆದರೆ YouTube ಆ್ಯಪ್‌ಗೆ ಅಗತ್ಯವಿಲ್ಲದಿದ್ದರೆ, ನಿರ್ಬಂಧದ ಹಂತ ನಂತರ ಕಸ್ಟಮ್ ಸೆಟ್ಟಿಂಗ್‌ಗಳು ನಂತರ ನಿರ್ಬಂಧಿತ ಸಾಫ್ಟ್‌ವೇರ್ ಎಂಬಲ್ಲಿಗೆ ಹೋಗಿ.

ನಿಮ್ಮ ಮೊಬೈಲ್ ಸಾಧನವನ್ನು ಜೋಡಿಸಿ

ನಿಮ್ಮ ಮೊಬೈಲ್ ಸಾಧನವನ್ನು ರಿಮೋಟ್ ಕಂಟ್ರೋಲ್ ಆಗಿ ಬಳಸಿ. ನೀವು m.youtube.com, Android ಆ್ಯಪ್‌ಗಾಗಿ YouTube ಅಥವಾ YouTube iOS ಆ್ಯಪ್ ಮೂಲಕ ಇದನ್ನು ಜೋಡಿಸಬಹುದು.

ಖರೀದಿಸಿದ ಕಂಟೆಂಟ್ ಅನ್ನು ವೀಕ್ಷಿಸಿ

YouTube ಆ್ಯಪ್‌ನ ಲೈಬ್ರರಿ ಟ್ಯಾಬ್‌ನಲ್ಲಿ ನಿಮ್ಮ ಖರೀದಿಸಿದ ಕಂಟೆಂಟ್ ಅನ್ನು ನೀವು ನೋಡಬಹುದು ಮತ್ತು ವೀಕ್ಷಿಸಬಹುದು.
ಗಮನಿಸಿ: ಇದೀಗ, ನೀವು ನೇರವಾಗಿ ಸಾಧನದಲ್ಲಿ ಕಂಟೆಂಟ್ ಅನ್ನು ಖರೀದಿಸಲು ಸಾಧ್ಯವಿಲ್ಲ.

360 ವೀಡಿಯೊಗಳನ್ನು ವೀಕ್ಷಿಸಿ

ನಿಮ್ಮ Nintendo Switch ನಲ್ಲಿ ನೀವು 360-ಡಿಗ್ರಿ ವೀಡಿಯೊಗಳನ್ನು ವೀಕ್ಷಿಸಬಹುದು. 360 ವೀಡಿಯೊಗಳನ್ನು ವೀಕ್ಷಿಸುವಾಗ, ಲಗತ್ತಿಸಲಾದ ಕಂಟ್ರೋಲರ್‌ನಲ್ಲಿ ಎಡ ಮತ್ತು ಬಲ ಎರಡೂ ಜಾಯ್‌ಸ್ಟಿಕ್‌ಗಳನ್ನು ವೀಡಿಯೊದ ಸುತ್ತಲೂ ಪ್ಯಾನ್ ಮಾಡಲು ಬಳಸಬಹುದು.

ವೀಡಿಯೊ ಗುಣಮಟ್ಟ

ಹ್ಯಾಂಡ್‌ಹೆಲ್ಡ್ ಮೋಡ್‌ನಲ್ಲಿ, ಬಿಲ್ಟ್-ಇನ್ ಡಿಸ್‌ಪ್ಲೇ 720p ನ ಗರಿಷ್ಠ ರೆಸಲ್ಯೂಷನ್ ಅನ್ನು ಹೊಂದಿದೆ. ಡಾಕ್ ಮಾಡಲಾದ ಮೋಡ್‌ನಲ್ಲಿ, ಗರಿಷ್ಠ ರೆಸಲ್ಯೂಷನ್ 1080p ಆಗಿದೆ.
ವೀಕ್ಷಿಸುವಾಗ ವೀಡಿಯೊ ಗುಣಮಟ್ಟವನ್ನು ಬದಲಾಯಿಸಲು:
  1. ವೀಡಿಯೊ ಪ್ಲೇಯರ್‌ನಲ್ಲಿ, ಇನ್ನಷ್ಟು 3 dot menu icon ಎಂಬುದನ್ನು ಆಯ್ಕೆಮಾಡಿ.
  2. ಗುಣಮಟ್ಟ  ಎಂಬುದನ್ನು ಆಯ್ಕೆಮಾಡಿ.
  3. ನಿಮ್ಮ ಆದ್ಯತೆಯ ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
392261468884518442
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false