Android ನಲ್ಲಿ YouTube ಆ್ಯಪ್ ಅನ್ನು ಬೀಟಾ ಪರೀಕ್ಷೆ ಮಾಡುವುದು

Android ಬೀಟಾ ಪ್ರೋಗ್ರಾಂ ಎನ್ನುವುದು ಎಲ್ಲಾ Android ಆ್ಯಪ್ ಡೆವಲಪರ್‌ಗಳಿಗೆ ಅಥವಾ Android ಸಾಧನವನ್ನು ಹೊಂದಿರುವ ಯಾವುದೇ ಬಳಕೆದಾರರಿಗೆ ಮುಕ್ತವಾಗಿರುತ್ತದೆ. YouTube ಬೀಟಾ ಟೆಸ್ಟರ್ ಆಗಿ, ನೀವು ಸಾಮಾನ್ಯದಂತೆ YouTube ಆ್ಯಪ್ ಬಳಸಬಹುದು. ಇದು ಎಲ್ಲಾ ಬಳಕೆದಾರರಿಗೆ ಮತ್ತು ರಚನೆಕಾರರಿಗೆ YouTube ಅನ್ನು ಸುಧಾರಿಸಲು ಮತ್ತು ಸ್ಥಿರಗೊಳಿಸಲು ನಮಗೆ ಸಹಾಯ ಮಾಡುತ್ತದೆ.

ಸಕ್ರಿಯಗೊಳಿಸುವುದು ಹೇಗೆ

YouTube Android ಬೀಟಾ ಟೆಸ್ಟರ್ ಆಗಲು:
  1. ಬೀಟಾ ಪರೀಕ್ಷೆ ಪ್ರೋಗ್ರಾಂನ ಸಕ್ರಿಯಗೊಳಿಸುವಿಕೆ ಪುಟಕ್ಕೆ ಹೋಗಿ (ನೀವು ನಿಮ್ಮ Google ಖಾತೆ ಸೈನ್ ಇನ್ ಮಾಡಬೇಕಾಗಬಹುದು).
  2. ಟೆಸ್ಟರ್ ಆಗಿ ಅನ್ನು ಆರಿಸಿಕೊಳ್ಳಿ.
  3. ಬೀಟಾ ಆವೃತ್ತಿಯನ್ನು ಬಳಸುವುದನ್ನು ಆರಂಭಿಸಲು ಸ್ಕ್ರೀನ್‌ನಲ್ಲಿನ ಸೂಚನೆಗಳನ್ನು ಫಾಲೋ ಮಾಡಿ.

ಹೊರಗುಳಿಯುವುದು ಹೇಗೆ

YouTube Android ಬೀಟಾ ಟೆಸ್ಟರ್ ಆಗಿರುವುದನ್ನು ನಿಲ್ಲಿಸಲು:
  1. ಬೀಟಾ ಪರೀಕ್ಷೆ ಪ್ರೋಗ್ರಾಂನ ಹೊರಗುಳಿಯುವಿಕೆ ಪುಟಕ್ಕೆ ಹೋಗಿ (ನೀವು ನಿಮ್ಮ Google ಖಾತೆ ಸೈನ್ ಇನ್ ಮಾಡಬೇಕಾಗಬಹುದು).
  2. ಪ್ರೋಗ್ರಾಂ ತೊರೆಯಿರಿ ಆಯ್ಕೆಮಾಡಿ.
ಗಮನಿಸಿ: ನೀವು ಪ್ರೋಗ್ರಾಂ ಅನ್ನು ತೊರೆದರೆ, ಸಾಮಾನ್ಯ ಆವೃತ್ತಿಯನ್ನು ಬಳಸುವುದಕ್ಕಾಗಿ ನಿಮ್ಮ YouTube ಆ್ಯಪ್ ಅನ್ನು ನೀವು ಅಪ್‌ಡೇಟ್ ಮಾಡಬೇಕಾಗಬಹುದು.

ನಮಗೆ ಪ್ರತಿಕ್ರಿಯೆಯನ್ನು ಕಳುಹಿಸಿ

ನಿಮ್ಮ ಭಾಗವಹಿಸುವಿಕೆ ಮತ್ತು ಪ್ರತಿಕ್ರಿಯೆಯು ಆ್ಯಪ್‌ನ ಉತ್ತಮ ಆವೃತ್ತಿಯನ್ನು ನಿರ್ಮಿಸಲು ನಮಗೆ ಸಹಾಯ ಮಾಡುತ್ತದೆ. ನೀವು ಪರೀಕ್ಷಿಸಿದ ಯಾವುದೇ ಫೀಚರ್‌ಗಳ ಕುರಿತು ನಮಗೆ ಪ್ರತಿಕ್ರಿಯೆ ಅಥವಾ ಪ್ರಶ್ನೆಗಳನ್ನು ದಯವಿಟ್ಟು ನಮಗೆ ಕಳುಹಿಸಿ.

ಪದೇ ಕೇಳಲಾಗುವ ಪ್ರಶ್ನೆಗಳು

ಆ್ಯಪ್‌ನ ಬೀಟಾ ಆವೃತ್ತಿ ಮತ್ತು ಸಾಮಾನ್ಯ ಆವೃತ್ತಿ ಹೀಗೆ ಎರಡನ್ನೂ ನಾನು ಹೊಂದಿರಬಹುದೇ?

ಇಲ್ಲ, ನಿಮ್ಮ Android ಸಾಧನದಲ್ಲಿ YouTube ಆ್ಯಪ್‌ನ ಒಂದು ಆವೃತ್ತಿಯನ್ನು ಮಾತ್ರ ನೀವು ಇನ್‌ಸ್ಟಾಲ್ ಮಾಡಿರಬೇಕು.

ನಾನು ಬೀಟಾ ಆವೃತ್ತಿಗೆ ಬದಲಿಸಿದರೆ ಯಾವುದೇ ಡೇಟಾವನ್ನು ನಾನು ಕಳೆದುಕೊಳ್ಳುತ್ತೇನೆಯೇ?

ಬೀಟಾ ಆವೃತ್ತಿಗೆ ಬದಲಿಸುವುದು ಸಾಮಾನ್ಯ ಅಪ್‌ಡೇಟ್‌ನಂತೆಯೇ ಆಗಿರುತ್ತದೆ, ಆದ್ದರಿಂದ ನೀವು ಯಾವುದೇ ಡೇಟಾ ಅಥವಾ ಸೆಟ್ಟಿಂಗ್‌ಗಳನ್ನು ಕಳೆದುಕೊಳ್ಳುವುದಿಲ್ಲ. 

YouTube ನ ಬೀಟಾ ಪ್ರೋಗ್ರಾಂನಲ್ಲಿ ಸ್ಥಳಾವಕಾಶ ಸೀಮಿತಗೊಂಡಿರುತ್ತದೆಯೇ?

ಹೌದು, ಬೀಟಾ ಪ್ರೋಗ್ರಾಂನಲ್ಲಿ ಬಳಕೆದಾರರ ಸಂಖ್ಯೆಯನ್ನು YouTube ಮಿತಿಗೊಳಿಸಿರುತ್ತದೆ. ಇನ್ನು ಹೆಚ್ಚಿನ ಸ್ಥಳಾವಕಾಶ ಇಲ್ಲದಿದ್ದರೆ, ಅದು ಭರ್ತಿಯಾಗಿದೆ ಎಂಬ ಸಂದೇಶವನ್ನು ನೀವು ಗಮನಿಸುತ್ತೀರಿ. ಒಂದು ವೇಳೆ ಪ್ರಸ್ತುತ ಟೆಸ್ಟರ್‌ಗಳು ತೊರೆದರೆ, ನಂತರದಲ್ಲಿ ಹೆಚ್ಚಿನ ಸ್ಥಳಾವಕಾಶ ತೆರೆದುಕೊಳ್ಳಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16125486190211307216
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false