YouTube Analytics ನಲ್ಲಿ ಸೀಮಿತ ಡೇಟಾದ ಕುರಿತು ಅರ್ಥಮಾಡಿಕೊಳ್ಳುವುದು

ರಚನೆಕಾರರಿಗೆ ಅವರ ಚಾನಲ್ ಕುರಿತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ಅವರಿಗೆ ಉಪಯುಕ್ತ ಡೇಟಾವನ್ನು ನೀಡಲು ಬಯಸುತ್ತೇವೆ, ಆದರೆ YouTube Analytics ನಲ್ಲಿ ಕೆಲವು ಡೇಟಾ ಸೀಮಿತವಾಗಿರಬಹುದು.

ಗಮನಿಸಿ: ನಿಮ್ಮ ವೀಡಿಯೊ ಅಥವಾ ಚಾನಲ್ ಆಯ್ಕೆಮಾಡಿದ ಸಮಯದಲ್ಲಿ ಸಾಕಷ್ಟು ಟ್ರಾಫಿಕ್ ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಡೇಟಾ ನಿಮಗೆ ಕಾಣಿಸದಿರಬಹುದು. ನೀವು ಭೌಗೋಳಿಕ ಪ್ರದೇಶ ಅಥವಾ ಲಿಂಗ ಮಾಹಿತಿಯಂತಹ ನಿರ್ದಿಷ್ಟ ಫಿಲ್ಟರ್ ಅನ್ನು ಆಯ್ಕೆ ಮಾಡಿದ್ದರೂ ಸಹ ನಿಮಗೆ ಡೇಟಾ ಕಾಣಿಸದೇ ಇರಬಹುದು.

ನೀವು ಏನು ನೋಡುತ್ತೀರಿ

ನೀವು ನೋಡುವುದು:

  • "ಸಾಕಷ್ಟು ಜನಸಂಖ್ಯಾ ಡೇಟಾ ಇಲ್ಲ" ಎಂಬಂತಹ ಸಂಪೂರ್ಣ ವರದಿಯನ್ನು ನೀವು ಆ್ಯಕ್ಯೆಸ್ ಮಾಡಲು ಸಾಧ್ಯವಿಲ್ಲ ಎಂದು Analytics ನಲ್ಲಿ ತೋರಿಸುವ ಒಂದು ಸಂದೇಶ.
  • ವರದಿ ಅಥವಾ ಕಾರ್ಡ್‌ಗಾಗಿ "ಒಟ್ಟು ಮೊತ್ತ" ಮತ್ತು ಅದರ ಪ್ರತ್ಯೇಕ ಸಾಲುಗಳ ಮೊತ್ತದ ನಡುವಿನ ವ್ಯತ್ಯಾಸ. ಡೇಟಾದ ಸಾಲು ಲಭ್ಯವಿಲ್ಲದಿದ್ದಾಗ ಈ ಘಟನೆ ಸಂಭವಿಸುತ್ತದೆ, ಆದರೆ ನಿಖರವಾದ ಎಣಿಕೆಗಾಗಿ ಇನ್ನೂ ಒಟ್ಟು ಮೊತ್ತದಲ್ಲಿ ಸೇರಿಸಲಾಗುತ್ತದೆ. ಟಾಪ್ ಫಲಿತಾಂಶಗಳು ಮಾತ್ರ ಲಭ್ಯವಿರುತ್ತವೆ ಎಂಬ ಟಿಪ್ಪಣಿಯನ್ನು ನೀವು ಟೇಬಲ್‌ನ ಕೆಳಭಾಗದಲ್ಲಿ ನೋಡುತ್ತೀರಿ.

ನೀವು ಇನ್ನಷ್ಟು ನೋಡಲು ಬಯಸಿದರೆ, ಸಮಯದ ಅವಧಿಯನ್ನು ವಿಸ್ತರಿಸಲು ಅಥವಾ ಫಿಲ್ಟರ್‌ಗಳು ಮತ್ತು ಬ್ರೇಕ್‌ಡೌನ್‌ಗಳನ್ನು ತೆಗೆದುಹಾಕಲು ಪ್ರಯತ್ನಿಸಿ. ಈ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ಪೂರ್ಣ ವರದಿಯಲ್ಲಿನ ಡೇಟಾ ಪ್ರಮಾಣವನ್ನು ಹೆಚ್ಚಿಸಬಹುದು.

ಸೀಮಿತ ಡೇಟಾ ಪ್ರಕಾರಗಳು

ಈ ಕೆಳಗಿನ ಮಾಹಿತಿಯು ಸೀಮಿತವಾಗಿರಬಹುದು:

ಜನಸಂಖ್ಯೆ ಡೇಟಾ

ವಯಸ್ಸು ಮತ್ತು ಲಿಂಗ ಮಾಹಿತಿಯಂತಹ ಜನಸಂಖ್ಯೆ ಡೇಟಾವನ್ನು YouTube Analytics ನಲ್ಲಿ ಸೀಮಿತಗೊಳಿಸಬಹುದು. ಉದಾಹರಣೆಗೆ, ತೋರಿಸಲು ಸಾಕಷ್ಟು ಡೇಟಾ ಇಲ್ಲದಿದ್ದರೆ ವೈಯಕ್ತಿಕ ವೀಡಿಯೊ ಅಥವಾ ದೇಶಕ್ಕೆ ಸಂಬಂಧಪಟ್ಟ ಜನಸಂಖ್ಯೆ ಮೆಟ್ರಿಕ್‌ಗಳನ್ನು ವೀಕ್ಷಿಸುವಾಗ ನೀವು ಸಂದೇಶವನ್ನು ನೋಡಬಹುದು.
ನಿಮ್ಮ ಚಾನಲ್‌ನಲ್ಲಿನ ಟ್ರಾಫಿಕ್ ಪ್ರಮಾಣವನ್ನು ಲೆಕ್ಕಿಸದೆಯೇ, ಖಾಸಗಿ ಅಥವಾ ಪಟ್ಟಿ ಮಾಡದಿರುವ ವೀಡಿಯೊಗಳಿಗಾಗಿ ನೀವು ಜನಸಂಖ್ಯೆ ಡೇಟಾವನ್ನು ನೋಡುವುದಿಲ್ಲ.

ಪ್ರೇಕ್ಷಕರ ಡೇಟಾ

ನೀವು ಈ ಕೆಳಗಿನ ಸಂದರ್ಭಗಳಲ್ಲಿ, YouTube Analytics ನಲ್ಲಿ ಸೀಮಿತ ಪ್ರಮಾಣದ ಪ್ರೇಕ್ಷಕರ ಡೇಟಾವನ್ನು ನೋಡಬಹುದು:

ಭೌಗೋಳಿಕ ಪ್ರದೇಶದ ಡೇಟಾ

ದೇಶಕ್ಕೆ ಸಂಬಂಧಿಸಿದ ಮೆಟ್ರಿಕ್‌ಗಳು ಅಥವಾ ಆಯಾಮಗಳು ಸೀಮಿತವಾಗಿರಬಹುದು. ದೇಶದ ಪ್ರಕಾರವಾಗಿ ಆದಾಯದ ಡೇಟಾ ಸೀಮಿತವಾಗಿರುವುದಿಲ್ಲ.

ನಿಮ್ಮ ಚಾನಲ್‌ನಲ್ಲಿನ ಟ್ರಾಫಿಕ್ ಪ್ರಮಾಣವನ್ನು ಲೆಕ್ಕಿಸದೆಯೇ, ಕೆಳಗಿನವುಗಳಿಗಾಗಿ ನೀವು ದೇಶಕ್ಕೆ ಸಂಬಂಧಿಸಿದ ಯಾವುದೇ ಡೇಟಾವನ್ನು ನೋಡುವುದಿಲ್ಲ:

  • ನೈಜ ಸಮಯದ ವರದಿಗಳು
  • ಖಾಸಗಿ ಅಥವಾ ಪಟ್ಟಿ ಮಾಡಿರದ ವೀಡಿಯೊಗಳು

ಹುಡುಕಾಟ ಪದಗಳು ಮತ್ತು URL ಗಳು

ಟ್ರಾಫಿಕ್ ಮೂಲಗಳು, ಪ್ಲೇಬ್ಯಾಕ್ ಸ್ಥಳಗಳು ಮತ್ತು ಸಬ್‌ಸ್ಕ್ರೈಬರ್ ಮಾಹಿತಿ ಮೂಲಗಳ ವರದಿಗಳಲ್ಲಿ ಹುಡುಕಾಟ ಪದಗಳು ಮತ್ತು ಬಾಹ್ಯ URL ಗಳಿಗೆ ಸಂಬಂಧಿಸಿದ ಸೀಮಿತ ಡೇಟಾವನ್ನು ನೀವು ನೋಡಬಹುದು. ಉದಾಹರಣೆಗೆ, ಕಡಿಮೆ ಟ್ರಾಫಿಕ್‌ಗೆ ಕಾರಣವಾಗುವ ಒಂದು-ಬಾರಿಯ ಹುಡುಕಾಟ ಪದಗಳು ಮತ್ತು URL ಗಳನ್ನು ತೋರಿಸದಿರಬಹುದು. ನಿಮ್ಮ ಕಂಟೆಂಟ್‌ಗೆ ಸಾಮಾನ್ಯವಾಗಿ ವೀಕ್ಷಕರನ್ನು ಕರೆದೊಯ್ಯುವುದನ್ನು ಸಹ ನೀವು ನೋಡುತ್ತೀರಿ.
ಗಮನಿಸಿ: ಪ್ಲ್ಯಾಟ್‌ಫಾರ್ಮ್ ಅನ್ನು ಆಧರಿಸಿ ನೀವು YouTube Analytics ನಲ್ಲಿ ವಿಭಿನ್ನ ಮೆಟ್ರಿಕ್‌ಗಳನ್ನು ನೋಡಬಹುದು - ಅಂದರೆ, ಕಂಪ್ಯೂಟರ್‌ನಲ್ಲಿ YouTube Studio ಅಥವಾ YouTube Studio ಆ್ಯಪ್.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18414248406852743065
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false