ನಿಮ್ಮ ವೀಡಿಯೊಗಳನ್ನು ಬ್ಲರ್ ಮಾಡಿ

ನಿಮ್ಮ ಕಂಪ್ಯೂಟರ್‌ನಲ್ಲಿನ YouTube Studio ದಲ್ಲಿ ನಿಮ್ಮ ವೀಡಿಯೊದ ಭಾಗಗಳನ್ನು ಬ್ಲರ್ ಮಾಡಬಹುದು.

ಸೂಚನೆ: 100,000 ವೀಕ್ಷಣೆಗಳೊಂದಿಗೆ ಎಡಿಟ್ ಮಾಡದ ವೀಡಿಯೊಗಾಗಿ, ಬ್ಲರ್ ಫೇಸಸ್ ಅನ್ನು ಹೊರತುಪಡಿಸಿ, ನೀವು ಅದಕ್ಕೆ ಬದಲಾವಣೆಗಳನ್ನು ಸೇವ್ ಮಾಡಲು ಆಗದೇ ಇರಬಹುದು. YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಚಾನಲ್‌ಗಳಿಗೆ ಈ ನಿರ್ಬಂಧವು ಅನ್ವಯಿಸುವುದಿಲ್ಲ.

ವೀಡಿಯೊ ಎಡಿಟರ್ ಅನ್ನು ತೆರೆಯಿರಿ

ನಿಮ್ಮ ವೀಡಿಯೊದ ಭಾಗವನ್ನು ಬ್ಲರ್ ಮಾಡಲು ವೀಡಿಯೊ ಎಡಿಟರ್ ಅನ್ನು ತೆರೆಯಿರಿ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊದ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ ಎಡಿಟರ್ ಅನ್ನು ಆಯ್ಕೆ ಮಾಡಿ.

ಫೇಸ್ ಬ್ಲರ್ ಅನ್ನು ಸೇರಿಸಿ

  1. ಬ್ಲರ್ ಅನ್ನು ಆಯ್ಕೆಮಾಡಿ , ನಂತರ ಫೇಸ್ ಬ್ಲರ್ ಅನ್ನು ಆಯ್ಕೆಮಾಡಿ.
  2. ಪ್ರಕ್ರಿಯೆಗೊಳಿಸುವುದು ಪೂರ್ಣಗೊಂಡ ನಂತರ, ನೀವು ಬ್ಲರ್ ಮಾಡಲು ಬಯಸುವ ಮುಖಗಳನ್ನು ಆಯ್ಕೆ ಮಾಡಿ, ನಂತರ ಅನ್ವಯಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ಬ್ಲರ್ ಅನ್ನು ಹೊಂದಿಸಲು ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  4. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ಕಸ್ಟಮ್ ಬ್ಲರ್ ಅನ್ನು ಸೇರಿಸಿ

  1. ಬ್ಲರ್ ಅನ್ನು ಆಯ್ಕೆಮಾಡಿ , ನಂತರ ಕಸ್ಟಮ್ ಬ್ಲರ್ ಅನ್ನು ಆಯ್ಕೆಮಾಡಿ.
  2. ಬ್ಲರ್ ಅನ್ನು ಹೊಂದಿಸಲು ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  3. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ಇನ್ನಷ್ಟು ಆಯ್ಕೆಗಳು

  • ಬ್ಲರ್ ಮಾಡಿದ ಬಾಕ್ಸ್ ಅನ್ನು ಬೇರೆ ಸ್ಥಳಕ್ಕೆ ಸರಿಸಿ: ಬಾಕ್ಸ್‌ನ ಒಳಗೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  • ಬ್ಲರ್ ಆಕಾರವನ್ನು ಬದಲಾಯಿಸಿ: ನಿಮ್ಮ ಬ್ಲರ್ ಆಕಾರವನ್ನಾಗಿ ಆಯತ ಅಥವಾ ಅಂಡಾಕಾರವನ್ನು ಆಯ್ಕೆ ಮಾಡಿ.
  • ಬ್ಲರ್ ಮಾಡಿದ ಪ್ರದೇಶವನ್ನು ಮರುಗಾತ್ರಗೊಳಿಸಿ: ದೊಡ್ಡ ಅಥವಾ ಸಣ್ಣ ಪ್ರದೇಶವನ್ನು ಬ್ಲರ್ ಮಾಡಲು ಬಾಕ್ಸ್‌ನ ಯಾವುದೇ ಮೂಲೆಯನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  • ಬ್ಲರಿಂಗ್ ಯಾವಾಗ ಆಗುತ್ತದೆ ಎಂಬುದನ್ನು ಬದಲಾಯಿಸಿ: ಬ್ಲರಿಂಗ್ ಯಾವಾಗ ಆರಂಭವಾಗುತ್ತದೆ ಮತ್ತು ಮುಕ್ತಾಯವಾಗುತ್ತದೆ ಎಂಬುದನ್ನು ಸೆಟ್ ಮಾಡಲು ಟೈಮ್‌ಲೈನ್‌ನ ತುದಿಗಳನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  • ಬ್ಲರ್ ಆಗಿರುವ ಪ್ರದೇಶವು ಸರಿಯಲು ಅನುಮತಿಸಿ: ಬ್ಲರ್ ಮಾಡಿರುವ ಪ್ರದೇಶವು ಆಚೀಚೆ ಸರಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಸ್ತುವನ್ನು ಟ್ರ್ಯಾಕ್ ಮಾಡಿ ಎಂಬುದನ್ನು ಆಯ್ಕೆಮಾಡಿ.
  • ಬ್ಲರ್ ಆಗಿರುವ ಪ್ರದೇಶವು ಸಂಪೂರ್ಣವಾಗಿ ಸರಿಯದೇ ಇರುವಂತೆ ತಡೆಯಿರಿ: ಬ್ಲರ್ ಮಾಡಿರುವ ಪ್ರದೇಶವು ಯಾವಾಗಲೂ ಅದೇ ಸ್ಥಳದಲ್ಲಿ ಉಳಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬ್ಲರ್ ಸ್ಥಾನವನ್ನು ನಿಶ್ಚಿತಗೊಳಿಸಿ ಎಂಬುದನ್ನು ಆಯ್ಕೆಮಾಡಿ.
  • ಕೆಲವು ಪ್ರದೇಶಗಳನ್ನು ಬ್ಲರ್ ಮಾಡಿ: ನೀವು ಬ್ಲರ್ ಮಾಡಲು ಬಯಸುವ ಭಾಗಗಳ ಮೇಲೆ ಹೊಸ ಬಾಕ್ಸ್‌ಗಳನ್ನು ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
  • ನಿಮ್ಮ ಎಡಿಟ್ ಮಾಡಲಾದ ವೀಡಿಯೊವನ್ನು ನೀವು ಡೌನ್‌ಲೋಡ್ ಮಾಡಬಹುದು ಮತ್ತು ನೀವು ಮಾಡಿರುವ ಬದಲಾವಣೆಗಳನ್ನು ಪ್ರಕಟಿಸಲು ಅದನ್ನು ಮತ್ತೊಮ್ಮೆ ಅಪ್‌ಲೋಡ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11596640529768623699
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false