ನಿಮ್ಮ ವೀಡಿಯೊಗಳನ್ನು ಟ್ರಿಮ್ ಮಾಡಿ

ಕಂಪ್ಯೂಟರ್‌ನಲ್ಲಿ, ನಿಮ್ಮ ವೀಡಿಯೊದ ಪ್ರಾರಂಭ, ಮಧ್ಯ ಅಥವಾ ಅಂತ್ಯವನ್ನು ನೀವು ಕಟ್ ಮಾಡಬಹುದು. ವೀಡಿಯೊವೊಂದನ್ನು ಟ್ರಿಮ್ ಮಾಡಲು ನೀವು ಅದನ್ನು ಮರು-ಅಪ್‌ಲೋಡ್ ಮಾಡಬೇಕಿಲ್ಲ. ವೀಡಿಯೊದ URL, ವೀಕ್ಷಣೆ ಎಣಿಕೆ ಮತ್ತು ಕಾಮೆಂಟ್‌ಗಳು ಹಾಗೆಯೇ ಇರುತ್ತವೆ. ಆರು ಗಂಟೆಗಳಿಗಿಂತ ಕಡಿಮೆ ಅವಧಿಯ ವೀಡಿಯೊಗಳಿಗೆ ಈ ಫೀಚರ್ ಲಭ್ಯವಿದೆ.

YouTube Studio ನಲ್ಲಿ ವೀಡಿಯೊ ಎಡಿಟರ್ ಬಳಸಿ ನಿಮ್ಮ ವೀಡಿಯೊಗಳನ್ನು ಟ್ರಿಮ್ ಮಾಡುವುದು ಮತ್ತು ಕತ್ತರಿಸುವುದು ಹೇಗೆ

ಸೂಚನೆ: 100,000 ಕ್ಕೂ ಹೆಚ್ಚು ವೀಕ್ಷಣೆಗಳಿರುವ ಎಡಿಟ್ ಮಾಡದ ವೀಡಿಯೊಗಾಗಿ, ಮುಖಗಳನ್ನು ಬ್ಲರ್ ಮಾಡುವುದನ್ನು ಹೊರತುಪಡಿಸಿ, ನೀವು ಅದರಲ್ಲಿ ಬದಲಾವಣೆಗಳನ್ನು ಸೇವ್ ಮಾಡಲು ಆಗದೇ ಇರಬಹುದು. YouTube ಪಾಲುದಾರ ಕಾರ್ಯಕ್ರಮದಲ್ಲಿರುವ ಚಾನಲ್‌ಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ.

ನಿಮ್ಮ ವೀಡಿಯೊದ ಒಂದು ಭಾಗವನ್ನು ಟ್ರಿಮ್ ಮಾಡಲು ಅಥವಾ ತೆಗೆದುಹಾಕಲು ವೀಡಿಯೊ ಎಡಿಟರ್ ಅನ್ನು ತೆರೆಯಿರಿ.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್  ಎಂಬುದನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊದ ಶೀರ್ಷಿಕೆ ಅಥವಾ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಲ್ಲಿ, ಎಡಿಟರ್ ಅನ್ನು ಆಯ್ಕೆಮಾಡಿ.

ನಿಮ್ಮ ವೀಡಿಯೊದ ಆರಂಭ ಅಥವಾ ಮುಕ್ತಾಯವನ್ನು ಟ್ರಿಮ್ ಮಾಡಿ

  1. ಟ್ರಿಮ್ ಮಾಡಿ ಮತ್ತು ಕಟ್ ಮಾಡಿ  ಎಂಬುದನ್ನು ಆಯ್ಕೆ ಮಾಡಿ. ಎಡಿಟರ್‌ನಲ್ಲಿ ನೀಲಿ ಬಾಕ್ಸ್ ಗೋಚರಿಸುತ್ತದೆ.
  2. ನೀಲಿ ಬಾಕ್ಸ್‌ನ ಬದಿಗಳನ್ನು ಡ್ರ್ಯಾಗ್ ಮಾಡಿ. ನೀವು ಇರಿಸಿಕೊಳ್ಳಲು ಬಯಸುವ ವೀಡಿಯೊದ ಭಾಗವನ್ನು ಬಾಕ್ಸ್ ಕವರ್ ಮಾಡಿದಾಗ ನಿಲ್ಲಿಸಿ. ಬಾಕ್ಸ್‌ನಲ್ಲಿಲ್ಲದ ಯಾವುದೇ ಭಾಗವನ್ನು ವೀಡಿಯೊದಿಂದ ತೆಗೆದುಹಾಕಲಾಗುತ್ತದೆ.
  3. ಸೇವ್ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ವೀಡಿಯೊದ ಭಾಗವೊಂದನ್ನು ತೆಗೆದುಕೊಳ್ಳಿ

  1. ಟ್ರಿಮ್ ಮಾಡಿ ಮತ್ತು ಕಟ್ ಮಾಡಿ  ಎಂಬುದನ್ನು ಆಯ್ಕೆ ಮಾಡಿ, ನಂತರ ಹೊಸ ಕಟ್ ಎಂಬುದನ್ನು ಕ್ಲಿಕ್ ಮಾಡಿ. ಎಡಿಟರ್‌ನಲ್ಲಿ ಕೆಂಪು ಬಾಕ್ಸ್ ಕಾಣಿಸುತ್ತದೆ.
  2. ಕೆಂಪು ಬಾಕ್ಸ್‌ನ ಬದಿಗಳನ್ನು ಡ್ರ್ಯಾಗ್ ಮಾಡಿ. ನೀವು ತೆಗೆದುಹಾಕಲು ಬಯಸುವ ವೀಡಿಯೊದ ಭಾಗವನ್ನು ಕೆಂಪು ಬಾಕ್ಸ್ ಕವರ್ ಮಾಡಿದಾಗ ನಿಲ್ಲಿಸಿ. ಕೆಂಪು ಬಾಕ್ಸ್‌ನಲ್ಲಿ ಇಲ್ಲದಿರುವ ಯಾವುದೇ ಭಾಗ ವೀಡಿಯೊದಲ್ಲಿ ಉಳಿದುಕೊಳ್ಳುತ್ತದೆ.
  3. ನಿಮ್ಮ ಎಡಿಟ್‌ಗಳನ್ನು ಖಚಿತಪಡಿಸಲು,   ಆಯ್ಕೆ ಮಾಡಿ.
  4. ಸೇವ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.

ನಿಮ್ಮ ವೀಡಿಯೊವನ್ನು ಒಂದು ನಿರ್ದಿಷ್ಟ ಸಮಯದಲ್ಲಿ ಟ್ರಿಮ್ ಮಾಡಲು ಅಥವಾ ಕಟ್ ಮಾಡಲು ನೀವು ಬಯಸಿದರೆ, ಸಂಬಂಧಿತ ಬಾಕ್ಸ್‌ಗಳಲ್ಲಿ ನೀವು ಸಮಯವನ್ನು ನಮೂದಿಸಬಹುದು. ನಿಮ್ಮ ಎಡಿಟ್‌ಗಳನ್ನು ಪರಿಶೀಲಿಸಲು, ಪ್ರಿವ್ಯೂ ಅನ್ನು ಆಯ್ಕೆ ಮಾಡಿ. ಆ ಭಾಗಕ್ಕೆ ಕಟ್‌ವೊಂದನ್ನು ರದ್ದುಗೊಳಿಸಲು, ರದ್ದುಗೊಳಿಸಿ ಅನ್ನು ಕ್ಲಿಕ್ ಮಾಡಿ. ನಿಮ್ಮ ಬದಲಾವಣೆಗಳನ್ನು ರದ್ದುಗೊಳಿಸಲು ನೀವು ಯಾವಾಗ ಬೇಕಾದರೂ ಬದಲಾವಣೆಗಳನ್ನು ತ್ಯಜಿಸಿ ಎಂಬುದನ್ನು ಕ್ಲಿಕ್ ಮಾಡಬಹುದು.

ಇನ್ನಷ್ಟು ಆಯ್ಕೆಗಳು

  • ನಿಮ್ಮ ಡ್ರಾಫ್ಟ್‌ನಲ್ಲಿ ನೀವು ಸೇವ್ ಮಾಡಿರದ ಯಾವುದೇ ಬದಲಾವಣೆಗಳನ್ನು ತೆಗೆದುಹಾಕಲು ಇನ್ನಷ್ಟು ನಂತರ ಪೂರ್ವಸ್ಥಿತಿಗೆ ಮರಳಿಸಿ ಎಂಬುದನ್ನು ಆಯ್ಕೆ ಮಾಡಿ.
  • ನಿಮ್ಮ ಎಡಿಟ್ ಮಾಡಲಾದ ವೀಡಿಯೊವನ್ನು ನೀವು ಡೌನ್‌ಲೋಡ್ ಮಾಡಬಹುದು ಮತ್ತು ನೀವು ಮಾಡಿರುವ ಬದಲಾವಣೆಗಳನ್ನು ಪ್ರಕಟಿಸಲು ಅದನ್ನು ಮತ್ತೊಮ್ಮೆ ಅಪ್‌ಲೋಡ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2000424146332420112
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false