ಅಧಿಕೃತ ಕಲಾವಿದರ ಚಾನಲ್ ವಿಭಾಗಗಳು

ಶೀಘ್ರದಲ್ಲೇ, ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನಿಂದ ವೀಡಿಯೊಗಳ ಟ್ಯಾಬ್‌ನ ಅಡಿಯಲ್ಲಿ "ಸಂಗೀತ" ಮತ್ತು "ಕಲಾವಿದರಿಂದ ಇನ್ನಷ್ಟು" ಶೆಲ್ಫ್‌ಗಳನ್ನು ನಾವು ತೆಗೆದುಹಾಕುತ್ತಿದ್ದೇವೆ. ನಿಮ್ಮ ಕಂಟೆಂಟ್, ನಿಮ್ಮ ಚಾನಲ್‌ನಲ್ಲಿ ಗೋಚರಿಸುತ್ತಿರುತ್ತದೆ.

ಅಧಿಕೃತ ಕಲಾವಿದರ ಚಾನಲ್‌ಗಳು ನಿಮ್ಮ ಚಾನಲ್ ಲೇಔಟ್‌ಗಾಗಿ ಹೊಸ ಆಯ್ಕೆಗಳನ್ನು ಒದಗಿಸುತ್ತವೆ. ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನಲ್ಲಿ ಪ್ರಮಾಣಿತ ಚಾನಲ್ ವಿಭಾಗಗಳು ಮಾತ್ರವಲ್ಲದೆ, ಈ ಕೆಳಗಿನ ವಿಭಾಗಗಳನ್ನು ನೀವು ಸೇರಿಸಬಹುದು:

ವೈಶಿಷ್ಟ್ಯಪೂರ್ಣ ವೀಡಿಯೊ

ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನ ಮೇಲ್ಭಾಗದಲ್ಲಿ ಯಾವ ವೀಡಿಯೊವನ್ನು ತೋರಿಸಲು ಬಯಸುವಿರಿ ಎಂಬುದನ್ನು ನೀವು ಆಯ್ಕೆ ಮಾಡಬಹುದು—ಅದು ನೀವು ಅಪ್‌ಲೋಡ್ ಮಾಡಿದ ವೀಡಿಯೊ ಸಹ ಆಗಿರಬಹುದು. ಹೊಸ ಸಂದರ್ಶಕರು ಮತ್ತು ಮರಳಿ ಬರುತ್ತಿರುವ ಸಬ್‌ಸ್ಕ್ರೈಬರ್‌ಗಳಿಗಾಗಿ ವಿಭಿನ್ನ ವೀಡಿಯೊಗಳನ್ನು ಆಯ್ಕೆ ಮಾಡಿ.

ಬಿಡುಗಡೆಗಳು

ಬಿಡುಗಡೆಗಳ ವಿಭಾಗವು, ನಿಮ್ಮ ಎಲ್ಲಾ ಬಿಡುಗಡೆಗಳನ್ನು ಒಳಗೊಂಡಿರುವ, ಸ್ವಯಂಚಾಲಿತವಾಗಿ ರಚಿಸಲಾದ ವಿಭಾಗವಾಗಿದೆ. ಈ ವಿಭಾಗವು, ನಿಮ್ಮ ವೀಕ್ಷಕರು ನಿಮ್ಮ ಸಂಗೀತವನ್ನು ಇನ್ನಷ್ಟು ತ್ವರಿತವಾಗಿ ಹುಡುಕುವುದನ್ನು ಸುಲಭಗೊಳಿಸುತ್ತದೆ.

ಸಂಗೀತ ವೀಡಿಯೊಗಳು

ಸಂಗೀತ ವೀಡಿಯೊಗಳ ವಿಭಾಗವು ನಿಮ್ಮ ಎಲ್ಲಾ YouTube ಚಾನಲ್‌ಗಳಾದ್ಯಂತದಿಂದ ನಿಮ್ಮ ಅಧಿಕೃತ ಸಂಗೀತ ವೀಡಿಯೊ ಕಂಟೆಂಟ್ ಅನ್ನು ಒಟ್ಟುಗೂಡಿಸುವ ಸ್ವಯಂಚಾಲಿತವಾಗಿ ರಚಿಸಲಾದ ವಿಭಾಗವಾಗಿದೆ. ಈ ವೀಡಿಯೊಗಳನ್ನು ಇವುಗಳ ಪ್ರಕಾರ ವ್ಯವಸ್ಥಿತಗೊಳಿಸಲಾಗಿದೆ:

  • ಅಪ್‌ಲೋಡ್ ದಿನಾಂಕ
  • ಜನಪ್ರಿಯತೆ

ವೀಡಿಯೊಗಳು

ವೀಡಿಯೊಗಳ ವಿಭಾಗವು, ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನಲ್ಲಿ ವೀಡಿಯೊಗಳ ಟ್ಯಾಬ್‌ನಿಂದ ನಿಮ್ಮ ಇತ್ತೀಚಿನ ಎಲ್ಲಾ ವೀಡಿಯೊ ಕಂಟೆಂಟ್ ಅನ್ನು ಸಂಗ್ರಹಿಸುವ, ಸ್ವಯಂಚಾಲಿತವಾಗಿ ರಚಿಸಲಾದ ವಿಭಾಗವಾಗಿದೆ.

ಕಸ್ಟಮೈಸ್ ಮಾಡಬಹುದಾದ ವಿಭಾಗಗಳು

ಸ್ವಯಂಚಾಲಿತವಾಗಿ ರಚಿಸಲಾದ "ಸಂಗೀತ ವೀಡಿಯೊಗಳು", “ಬಿಡುಗಡೆಗಳು” ಹಾಗೂ "ವೀಡಿಯೊಗಳು" ವಿಭಾಗಗಳ ಕೆಳಗೆ, ನೀವು ಪ್ಲೇ ಮಾಡಲು ಆಯ್ಕೆ ಮಾಡಿದ ಪ್ಲೇಪಟ್ಟಿಗಳು ಹಾಗೂ ಚಾನಲ್‌ಗಳ ಹೆಚ್ಚುವರಿ ಶೆಲ್ಫ್‌ಗಳನ್ನು ನೀವು ಸೇರಿಸಬಹುದು.

FAQ ಗಳು

ನನ್ನ ಅಧಿಕೃತ ಕಲಾವಿದರ ಚಾನಲ್‌ನಲ್ಲಿ ನನ್ನ Vevo ಚಾನಲ್ ಅನ್ನು ನಾನು ಹೇಗೆ ಸೇರಿಸಬಹುದು?

ನಿಮ್ಮ ಅಧಿಕೃತ ಕಲಾವಿದರ ಚಾನಲ್‌ನೊಂದಿಗೆ ವಿಲೀನಗೊಳಿಸಲು ಬಯಸುವ Vevo ಚಾನಲ್ ಅನ್ನು ನೀವು ಹೊಂದಿದ್ದರೆ, ನಮ್ಮನ್ನು ಸಂಪರ್ಕಿಸಲು ಈ ಫಾರ್ಮ್ ಅನ್ನು ಬಳಸಿ.

ನನ್ನ Vevo ಚಾನಲ್‌ನ ಕಂಟೆಂಟ್‌ಗೆ ಸಂಬಂಧಿಸಿದ ಒಂದು ಸಮಸ್ಯೆಯ ಕುರಿತು ನಾನು ವರದಿ ಮಾಡಬಹುದೇ?

ನಿಮ್ಮ Vevo ಚಾನಲ್‌ನಲ್ಲಿನ ಕಂಟೆಂಟ್‌ಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಂಡುಬಂದರೆ, content@vevo.com ನಲ್ಲಿ Vevo ಅನ್ನು ನೇರವಾಗಿ ಸಂಪರ್ಕಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6248868618396793288
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false