ಮೊಬೈಲ್ ಸಾಧನಗಳಲ್ಲಿ ಇನ್‌ಕಾಗ್ನಿಟೊ ಆಗಿರುವಾಗ YouTube ಅನ್ನು ಬ್ರೌಸ್ ಮಾಡಿ

YouTube ಆ್ಯಪ್‌ಗೆ ಲಾಗ್ ಇನ್ ಮಾಡಿದಾಗ, ನೀವು ಈಗ ಇನ್‌‌ಕಾಗ್ನಿಟೊ ಅನ್ನು ಆನ್ ಮಾಡಬಹುದು. ಇನ್‌‌ಕಾಗ್ನಿಟೊ ನಿಮ್ಮ ಖಾತೆಯ ಹುಡುಕಾಟ ಮತ್ತು ವೀಕ್ಷಣೆ ಇತಿಹಾಸವು ಪ್ರಭಾವ ಬೀರದ ಅಥವಾ ಪ್ರತಿಬಿಂಬಿಸದ ಸೆಶನ್‌ನಲ್ಲಿ ಬ್ರೌಸ್ ಮಾಡಲು ನಿಮಗೆ ಅವಕಾಶ ನೀಡುತ್ತದೆ.

Android ನಲ್ಲಿ ಇನ್‌ಕಾಗ್ನಿಟೊ ಆಗಿರಿ! 😎| YouTube ಸಹಾಯದಿಂದ ವೃತ್ತಿಪರ ಸಲಹೆಗಳು

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಇನ್‌‌ಕಾಗ್ನಿಟೊದಲ್ಲಿ ಬ್ರೌಸ್ ಮಾಡುವುದು ಹೇಗೆ

ಇನ್‌‌ಕಾಗ್ನಿಟೊದಲ್ಲಿ ಬ್ರೌಸ್ ಮಾಡಲು, ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ, ನಂತರ ಇನ್‌‌ಕಾಗ್ನಿಟೊವನ್ನು ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಸೈನ್ ಇನ್ ಮಾಡಿದ್ದರೆ ಮಾತ್ರ ಈ ಫೀಚರ್ ಅನ್ನು ಬಳಸಬಹುದು. ಇನ್‌‌ಕಾಗ್ನಿಟೊ ಮೋಡ್ ನೀವು ಸೈನ್ ಇನ್ ಆಗಿರಲು ಅವಕಾಶ ನೀಡುತ್ತದೆ, ಆದರೆ ನೀವು ಸೈನ್ ಔಟ್ ಮಾಡಿರುವಂತೆ ಕಾರ್ಯನಿರ್ವಹಿಸುತ್ತದೆ.

ನೀವು ಬ್ರೌಸ್ ಮಾಡುವಾಗ, ನೀವು ಇನ್‌‌ಕಾಗ್ನಿಟೊ ಮೋಡ್‌ನಲ್ಲಿರುವಿರಿ ಎಂದು ನಿಮಗೆ ರಿಮೈಂಡ್ ಮಾಡಲು, ಸ್ಕ್ರೀನ್‌ನ ಕೆಳಭಾಗದಲ್ಲಿ ಕಪ್ಪು ಬಾರ್ ರೀತಿಯಲ್ಲಿ ನಿರಂತರ ರಿಮೈಂಡರ್ ಕಾಣಿಸುತ್ತದೆ.
ಹುಡುಕಾಟದ ಇತಿಹಾಸವು ಇನ್‌‌ಕಾಗ್ನಿಟೊ ಮೋಡ್‌ನಲ್ಲಿ ಸೇವ್ ಆಗುವುದಿಲ್ಲ.

ಇನ್‌‌ಕಾಗ್ನಿಟೊದಲ್ಲಿ ಬ್ರೌಸ್ ಮಾಡುವಾಗ ಏನಾಗುತ್ತದೆ

ಇನ್‌‌ಕಾಗ್ನಿಟೊದಲ್ಲಿರುವಾಗ, YouTube ಆ್ಯಪ್ ನಿಮ್ಮ ಖಾತೆಗೆ ನೀವು ಸೈನ್ ಇನ್ ಮಾಡಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತದೆ. ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳು ಅಥವಾ ವೀಕ್ಷಣೆ ಇತಿಹಾಸದಂತಹ ನಿಮ್ಮ ಖಾತೆಯ ಚಟುವಟಿಕೆಯು ನಿಮ್ಮ YouTube ಅನುಭವದ ಮೇಲೆ ಪ್ರಭಾವ ಬೀರುವುದಿಲ್ಲ.

ಈ ಸೆಶನ್‌ನಲ್ಲಿನ ನಿಮ್ಮ ಚಟುವಟಿಕೆಯನ್ನು ನಿಮ್ಮ ಖಾತೆಯ ಜೊತೆ ಲಿಂಕ್ ಮಾಡಲಾಗುವುದಿಲ್ಲ. ಡೇಟಾ ಬಳಕೆಯು Google ನ ಗೌಪ್ಯತೆ ನೀತಿಯನ್ನು ಅನುಸರಿಸುತ್ತದೆ. ನೀವು ಇನ್‌ಕಾಗ್ನಿಟೊವನ್ನು ಆಫ್ ಮಾಡಿದಾಗ, ಇನ್‌ಕಾಗ್ನಿಟೊವನ್ನು ಆನ್ ಮಾಡುವ ಮುನ್ನ ನೀವು ಬಳಸಿದ ಕೊನೆಯ ಖಾತೆಗೆ ಹಿಂತಿರುಗುತ್ತೀರಿ. ಅಲ್ಲದೆ, ನೀವು 90 ನಿಮಿಷಗಳಿಗಿಂತ ಹೆಚ್ಚು ಕಾಲ ನಿಷ್ಕ್ರಿಯರಾಗಿದ್ದರೆ, ನಿಮ್ಮ ಇನ್‌ಕಾಗ್ನಿಟೊ ಸೆಶನ್ ಕೊನೆಗೊಳ್ಳುತ್ತದೆ. ನೀವು ಬಳಸಿದ ಕೊನೆಯ ಖಾತೆಗೆ ನಿಮ್ಮನ್ನು ಹಿಂತಿರುಗಿಸಲಾಗುತ್ತದೆ. ಮುಂದಿನ ಬಾರಿ ನೀವು YouTube ಅನ್ನು ತೆರೆದಾಗ, ನೀವು ಈಗ ಇನ್‌ಕಾಗ್ನಿಟೊ ಮೋಡ್‌ನಲ್ಲಿಲ್ಲ ಎಂದು ನಿಮಗೆ ತಿಳಿಸುವ ಸಂದೇಶ ಕಾಣಿಸುತ್ತದೆ.

ಕಾಮೆಂಟ್ ಮಾಡುವುದು ಅಥವಾ ಸಬ್‌ಸ್ಕ್ರೈಬ್ ಮಾಡುವಂತಹ ಸಾರ್ವಜನಿಕವಾಗಿ ಏನನ್ನಾದರೂ ಮಾಡಲು ನೀವು ಪ್ರಯತ್ನಿಸಿದಾಗ, ಆ ಕ್ರಿಯೆಯನ್ನು ಪೂರ್ಣಗೊಳಿಸುವುದಕ್ಕಾಗಿ ಸೈನ್ ಇನ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3869825766493817359
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false