ಸಂಗೀತ ಚಾರ್ಟ್‌ಗಳು ಮತ್ತು ಒಳನೋಟಗಳು

YouTube ಚಾರ್ಟ್‌ಗಳುಪ್ರಪಂಚದಾದ್ಯಂತದ ಹಾಟೆಸ್ಟ್ ಕಲಾವಿದರು, ಹಾಡುಗಳು ಮತ್ತು ಸಂಗೀತ ವೀಡಿಯೊಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುತ್ತವೆ. ನಾವು ಸಾಂದರ್ಭಿಕವಾಗಿ ನಮ್ಮ ಚಾರ್ಟ್‌ಗಳ ಮಾನದಂಡವನ್ನು ಅಪ್‌ಡೇಟ್‌ ಮಾಡುತ್ತೇವೆ — ಅಪ್‌ಡೇಟ್‌ಗಳಿಗಾಗಿ ಇಲ್ಲಿ ಮತ್ತೆ ಪರಿಶೀಲಿಸಿ.

ದೈನಂದಿನ YouTube ಚಾರ್ಟ್‌ಗಳು

YouTube ವೀಕ್ಷಣೆಗಳ ಆಧಾರದ ಮೇಲೆ ಕೆಳಗಿನ ಚಾರ್ಟ್‌ಗಳನ್ನು ಪ್ರತಿದಿನ ಅಪ್‌ಡೇಟ್ ಮಾಡಲಾಗುತ್ತದೆ.

ಟ್ರೆಂಡಿಂಗ್ ಚಾರ್ಟ್

ಟ್ರೆಂಡಿಂಗ್ ಚಾರ್ಟ್ ನಿಮಗೆ ಸಂಗೀತದಲ್ಲಿ ಹೊಸತು ಮತ್ತು ಟಾಪ್ ಯಾವುದು ಎಂಬ ಮಾಹಿತಿ ನೀಡುತ್ತದೆ. ಬಿಡುಗಡೆಯಾದ ನಂತರ ಜನಪ್ರಿಯತೆಯ ಆಧಾರದ ಮೇಲೆ ಹಾಡುಗಳನ್ನು ರ‍್ಯಾಂಕ್ ಮಾಡಲಾಗುತ್ತದೆ. ಟ್ರೆಂಡಿಂಗ್ ಚಾರ್ಟ್ ಅನ್ನು ದಿನಕ್ಕೆ ಕೆಲವು ಬಾರಿ ಅಪ್‌ಡೇಟ್ ಮಾಡಲಾಗುತ್ತದೆ.

ದೈನಂದಿನ ಟಾಪ್ ಸಂಗೀತ ವೀಡಿಯೊಗಳು

ದೈನಂದಿನ ಟಾಪ್ ಸಂಗೀತ ವೀಡಿಯೊಗಳ ಚಾರ್ಟ್ ಪ್ರತಿದಿನ ರಿಫ್ರೆಶ್ ಆಗುತ್ತದೆ ಮತ್ತು YouTube ನಲ್ಲಿ ಹೆಚ್ಚು ವೀಕ್ಷಿಸಿದ ಅಧಿಕೃತ ಸಂಗೀತ ವೀಡಿಯೊಗಳನ್ನು ಇದು ಹೈಲೈಟ್ ಮಾಡುತ್ತದೆ.

Shorts ನಲ್ಲಿ ದೈನಂದಿನ ಟಾಪ್ ಹಾಡುಗಳು

Shorts ಗಳಲ್ಲಿನ ಟಾಪ್ ಹಾಡುಗಳು YouTube Shorts ನಾದ್ಯಂತ ಹಾಡಿನ ಪರ್ಫಾರ್ಮೆನ್ಸ್ ಅನ್ನು ಗುರುತಿಸುತ್ತವೆ. ಹಾಡನ್ನು ಒಳಗೊಂಡಿರುವ Shorts ನ ಒಟ್ಟು ಸಂಖ್ಯೆಯನ್ನು ಆಧರಿಸಿ ಹಾಡುಗಳನ್ನು ಪ್ರತಿದಿನ ರ‍್ಯಾಂಕ್ ಮಾಡಲಾಗುತ್ತದೆ.

ಸಾಪ್ತಾಹಿಕ YouTube ಚಾರ್ಟ್‌ಗಳು

ವಾರದ YouTube ವೀಕ್ಷಣೆಗಳ ಆಧಾರದ ಮೇಲೆ ಕೆಳಗಿನ ಚಾರ್ಟ್‌ಗಳನ್ನು ಅಪ್‌ಡೇಟ್‌ ಮಾಡಲಾಗಿದೆ.

ಸಾಪ್ತಾಹಿಕ ಟಾಪ್ ಹಾಡುಗಳು

ಸಾಪ್ತಾಹಿಕ ಟಾಪ್ ಹಾಡುಗಳ ಚಾರ್ಟ್ YouTube ನಲ್ಲಿ ಹೆಚ್ಚು ಪ್ಲೇ ಮಾಡಿದ ಹಾಡುಗಳನ್ನು ಹೈಲೈಟ್ ಮಾಡುತ್ತದೆ. ಈ ಚಾರ್ಟ್ ಕೆಳಗಿನವುಗಳನ್ನು ಒಳಗೊಂಡಂತೆ ಹಾಡಿನ ಪ್ರತಿ ಅಧಿಕೃತ ಆವೃತ್ತಿಗೆ ಒಟ್ಟು ವೀಕ್ಷಣೆಗಳನ್ನು ಒಟ್ಟುಗೂಡಿಸುತ್ತದೆ:
  • ಅಧಿಕೃತ ಸಂಗೀತ ವೀಡಿಯೊ
  • ಅಧಿಕೃತ ಹಾಡಿನೊಂದಿಗೆ ಬಳಕೆದಾರ-ನಿರ್ಮಿತ ವೀಡಿಯೊಗಳು
  • ಲಿರಿಕ್ ವೀಡಿಯೊಗಳು

ಸಾಪ್ತಾಹಿಕ ಟಾಪ್ ಕಲಾವಿದರು

ವಾರದ ಟಾಪ್ ಕಲಾವಿದರ ಚಾರ್ಟ್ YouTube ನಲ್ಲಿನ ಅತ್ಯಂತ ಜನಪ್ರಿಯ ಕಲಾವಿದರಿಗೆ ಗೌರವ ಸಲ್ಲಿಸುತ್ತದೆ. ಕಲಾವಿದರ ಸಂಪೂರ್ಣ ಡಿಸ್ಕೋಗ್ರಾಫಿಯ ಒಟ್ಟು ವೀಕ್ಷಣೆಗಳ ಮೊತ್ತವನ್ನು ಬಳಸಿಕೊಂಡು, ಕಲಾವಿದರು ಈ ಚಾರ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಇದು ಇವುಗಳನ್ನು ಒಳಗೊಂಡಿರುತ್ತದೆ:
  • ಅಧಿಕೃತ ಸಂಗೀತ ವೀಡಿಯೊಗಳು
  • ಅಧಿಕೃತ ಹಾಡಿನೊಂದಿಗೆ ಬಳಕೆದಾರ-ನಿರ್ಮಿತ ವೀಡಿಯೊಗಳು
  • ಅಧಿಕೃತ ಲೈವ್ ಪ್ರದರ್ಶನಗಳು
  • ರೀಮಿಕ್ಸ್‌ಗಳು
  • ಲಿರಿಕ್ ವೀಡಿಯೊಗಳು
  • ಆಲ್ಬಮ್‌ ಹಾಡುಗಳು
  • ಕೊಲಬೊರೇಶನ್‌ಗಳು

ಸಾಪ್ತಾಹಿಕ ಟಾಪ್ ಸಂಗೀತ ವೀಡಿಯೊಗಳು

ಸಾಪ್ತಾಹಿಕ ಟಾಪ್ ಸಂಗೀತ ವೀಡಿಯೊಗಳ ಚಾರ್ಟ್ ವೀಕ್ಷಣೆಯ ಲೆಕ್ಕದ ಆಧಾರದ ಮೇಲೆ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಜನಪ್ರಿಯವಾದ ಅಧಿಕೃತ ಸಂಗೀತ ವೀಡಿಯೊಗಳನ್ನು ಹೈಲೈಟ್ ಮಾಡುತ್ತದೆ.

Shorts ನಲ್ಲಿ ಸಾಪ್ತಾಹಿಕ ಟಾಪ್ ಹಾಡುಗಳು

Shorts ಗಳಲ್ಲಿನ ಟಾಪ್ ಹಾಡುಗಳು YouTube Shorts ನೊಳಗಿನ ಹಾಡಿನ ಪರ್ಫಾರ್ಮೆನ್ಸ್ ಅನ್ನು ಗುರುತಿಸುತ್ತವೆ. ಹಾಡನ್ನು ಒಳಗೊಂಡಿರುವ Shorts ನ ಒಟ್ಟು ಸಂಖ್ಯೆಯನ್ನು ಆಧರಿಸಿ ಹಾಡುಗಳನ್ನು ಸಾಪ್ತಾಹಿಕವಾಗಿ ರ‍್ಯಾಂಕ್ ಮಾಡಲಾಗುತ್ತದೆ.

YouTube ಚಾರ್ಟ್‌ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ

ಲಭ್ಯವಿರುವ ಸ್ಥಳಗಳು

YouTube ಚಾರ್ಟ್‌ಗಳು ಪ್ರಪಂಚದಾದ್ಯಂತ 61 ದೇಶಗಳು/ಪ್ರದೇಶಗಳಲ್ಲಿ ಲಭ್ಯವಿದೆ:

  • ಅರ್ಜೆಂಟಿನಾ
  • ಆಸ್ಟ್ರೇಲಿಯಾ
  • ಆಸ್ಟ್ರಿಯಾ
  • ಬೆಲ್ಜಿಯಂ
  • ಬೊಲಿವಿಯಾ
  • ಬ್ರೆಝಿಲ್
  • ಕೆನಡಾ
  • ಚಿಲಿ
  • ಕೊಲಂಬಿಯಾ
  • ಕೋಸ್ಟ ರಿಕಾ
  • ಝೆಕ್ ಗಣರಾಜ್ಯ
  • ಡೆನ್ಮಾರ್ಕ್
  • ಡೊಮಿನಿಕನ್ ರಿಪಬ್ಲಿಕ್
  • ಈಕ್ವಡೋರ್
  • ಈಜಿಪ್ಟ್
  • ಎಲ್ ಸಾಲ್ವಡೋರ್
  • ಎಸ್ಟೋನಿಯಾ
  • ಫಿನ್‌ಲ್ಯಾಂಡ್
  • ಫ್ರಾನ್ಸ್
  • ಗ್ವಾಟೆಮಾಲಾ
  • ಜರ್ಮನಿ
  • ಹೊಂಡೂರಸ್
  • ಹಂಗೇರಿ
  • ಐಸ್‌ಲ್ಯಾಂಡ್
  • ಭಾರತ
  • ಇಂಡೋನೇಶಿಯಾ
  • ಐರ್ಲೆಂಡ್
  • ಇಸ್ರೇಲ್
  • ಇಟಲಿ
  • ಜಪಾನ್
  • ಕೀನ್ಯಾ
  • ಲುಕ್ಸೆಂಬರ್ಗ್
  • ಮೆಕ್ಸಿಕೊ
  • ನೆದರ್ಲೆಂಡ್ಸ್
  • ನ್ಯೂಜಿಲ್ಯಾಂಡ್
  • ನಿಕರಾಗುವಾ
  • ನೈಜೀರಿಯಾ
  • ನಾರ್ವೇ
  • ಪನಾಮಾ
  • ಪರಾಗ್ವೇ
  • ಪೆರು
  • ಪೋಲ್ಯಾಂಡ್
  • ಪೋರ್ಚುಗಲ್
  • ರೊಮೇನಿಯಾ
  • ರಷ್ಯಾ
  • ಸೌದಿ ಅರೇಬಿಯಾ
  • ಸೆರ್ಬಿಯಾ
  • ದಕ್ಷಿಣ ಕೊರಿಯಾ
  • ದಕ್ಷಿಣ ಆಫ್ರಿಕಾ
  • ಸ್ಪೇನ್
  • ಸ್ವೀಡನ್
  • ಸ್ವಿಟ್ಜರ್‌ಲ್ಯಾಂಡ್
  • ತಾಂಜಾನಿಯಾ
  • ಟರ್ಕಿ
  • ಉಗಾಂಡಾ
  • UK
  • ಉಕ್ರೇನ್
  • ಯುನೈಟೆಡ್ ಅರಬ್ ಎಮಿರೇಟ್ಸ್
  • ಉರುಗ್ವೆ
  • US
  • ಜಿಂಬಾಬ್ವೆ

ನಿಮ್ಮ ಮೆಚ್ಚಿನ ಹಾಡುಗಳು ಮತ್ತು ಕಲಾವಿದರ ಕುರಿತು ಹೆಚ್ಚಿನ ಚಾರ್ಟ್‌ಗಳನ್ನು ನಿರೀಕ್ಷಿಸಿ, ಅವುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ.

YouTube ಚಾರ್ಟ್‌ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

YouTube ಚಾರ್ಟ್‌ಗಳು ಹಾಡು, ವೀಡಿಯೊ, ಕಲಾವಿದ ಮತ್ತು Shorts ಮೂಲಕ YouTube ನಲ್ಲಿ ಹೆಚ್ಚು ವೀಕ್ಷಿಸಲಾದ ಸಂಗೀತವನ್ನು ವಿಂಗಡಿಸುತ್ತವೆ.

  • ಟಾಪ್ ಹಾಡುಗಳ ಚಾರ್ಟ್‌ಗಳು ಒಟ್ಟಾರೆ ವೀಕ್ಷಣೆಯ ಲೆಕ್ಕದ ಆಧಾರದ ಮೇಲೆ YouTube ನಲ್ಲಿ ಹಾಡಿನ ಪರ್ಫಾರ್ಮೆನ್ಸ್ ಅನ್ನು ರ‍್ಯಾಂಕ್ ಮಾಡುತ್ತವೆ. ಕೆಳಗಿನ ವೀಡಿಯೊ ಪ್ರಕಾರಗಳಾದ್ಯಂತ ಅಧಿಕೃತ ಹಾಡಿನ ವೀಕ್ಷಣೆಗಳನ್ನು ಒಟ್ಟುಗೂಡಿಸುವ ಮೂಲಕ ಪ್ರಮುಖ ಹಾಡುಗಳಿಗಾಗಿ YouTube ದೈನಂದಿನ ಮತ್ತು ಸಾಪ್ತಾಹಿಕ ಚಾರ್ಟ್‌ಗಳನ್ನು ಜನರೇಟ್ ಮಾಡುತ್ತದೆ:
    • ಅಧಿಕೃತ ಸಂಗೀತ ವೀಡಿಯೊ
    • ಅಧಿಕೃತ ಹಾಡನ್ನು ಬಳಸುವ ಬಳಕೆದಾರರು ರಚಿಸಿದ ಕಂಟೆಂಟ್
    • ಲಿರಿಕ್ ವೀಡಿಯೊಗಳು
  • ಟಾಪ್ ಸಂಗೀತ ವೀಡಿಯೊ ಚಾರ್ಟ್‌ಗಳು ವೀಡಿಯೊ ವೀಕ್ಷಣೆಯ ಲೆಕ್ಕ ಮಾಡುವ ಮೂಲಕ ಅಧಿಕೃತ ಸಂಗೀತ ಪರ್ಫಾರ್ಮೆನ್ಸ್ ಅನ್ನು ರ‍್ಯಾಂಕ್ ಮಾಡುತ್ತದೆ. ಟಾಪ್ ಸಂಗೀತ ವೀಡಿಯೊಗಳಿಗಾಗಿ YouTube ದೈನಂದಿನ ಮತ್ತು ಸಾಪ್ತಾಹಿಕ ಚಾರ್ಟ್‌ಗಳನ್ನು ಜನರೇಟ್ ಮಾಡುತ್ತದೆ.
  • Shorts ನಲ್ಲಿರುವ ಟಾಪ್ ಹಾಡುಗಳು Shorts ನಲ್ಲಿ ಕಾಣಿಸಿಕೊಂಡಿರುವ ಟಾಪ್ 50 ಹಾಡುಗಳನ್ನು ರ‍್ಯಾಂಕ್ ಮಾಡುತ್ತವೆ. ಹಾಡನ್ನು ಒಳಗೊಂಡಿರುವ Shorts ನ ಒಟ್ಟು ಸಂಖ್ಯೆಯನ್ನು ಆಧರಿಸಿ ಹಾಡುಗಳನ್ನು ರ‍್ಯಾಂಕ್ ಮಾಡಲಾಗುತ್ತದೆ. Shorts ನಲ್ಲಿನ ಟಾಪ್ ಹಾಡುಗಳಿಗಾಗಿ YouTube ದೈನಂದಿನ ಮತ್ತು ಸಾಪ್ತಾಹಿಕ ಚಾರ್ಟ್‌ಗಳನ್ನು ಜನರೇಟ್ ಮಾಡುತ್ತದೆ.
  • ಸಾಪ್ತಾಹಿಕ ಟಾಪ್ ಕಲಾವಿದರು ಎನ್ನುವ ಫೀಚರ್ ಒಟ್ಟು ವೀಕ್ಷಣೆಗಳ ಮೂಲಕ ಟಾಪ್ 100 ಕಲಾವಿದರಿಗೆ ರ‍್ಯಾಂಕ್ ನೀಡುತ್ತದೆ. ಕಲಾವಿದರ ಒಟ್ಟು ವೀಕ್ಷಣೆಗಳು, YouTube ನಲ್ಲಿ ಕಲಾವಿದರಿಗೆ ಸಂಬಂಧಪಟ್ಟ ಸಂಯೋಜಿತ ಹಾಡಿನ ವೀಕ್ಷಣೆಗಳನ್ನು ಆಧರಿಸಿರುತ್ತವೆ.

YouTube ಚಾರ್ಟ್‌ಗಳು ಸಂಗೀತದಲ್ಲಿ ಹೆಚ್ಚು ಪ್ರಸ್ತುತವಾದ ಚಲನವಲನವನ್ನು ಪ್ರತಿಬಿಂಬಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು, ಕೆಲವು ತಿಂಗಳುಗಳಿಂದ ಚಾರ್ಟಿಂಗ್ ಆಗಿರುವ ಮತ್ತು ಗಮನಾರ್ಹ ಪ್ರಮಾಣದ ವೀಕ್ಷಕರ ಬೆಳವಣಿಗೆಯನ್ನು ತೋರಿಸದ ಹಾಡುಗಳನ್ನು, ನಮ್ಮ ನೀತಿಗಳ ಪ್ರಕಾರ YouTube ಚಾರ್ಟ್‌ಗಳಿಂದ ತೆಗೆದುಹಾಕಬಹುದು.

ಗಮನಿಸಿ: YouTube ನಲ್ಲಿ ಪಾವತಿಸಿದ ಜಾಹೀರಾತು ವೀಕ್ಷಣೆಗಳನ್ನು YouTube ಚಾರ್ಟ್‌ಗಳಿಗೆ ಪರಿಗಣಿಸಲಾಗುವುದಿಲ್ಲ.

YouTube Music ಒಳನೋಟಗಳು

ನಾವು YouTube Music ಒಳನೋಟಗಳ ಟೂಲ್ ಅನ್ನು ಅಪ್‌ಡೇಟ್ ಮಾಡುತ್ತಿದ್ದೇವೆ, ಇದು 2024 ರಲ್ಲಿ YouTube ಚಾರ್ಟ್‌ಗಳಲ್ಲಿ ಲಭ್ಯವಿರುತ್ತದೆ. ತಾತ್ಕಾಲಿಕ ಅಡಚಣೆಗಾಗಿ ನಾವು ಕ್ಷಮೆಯಾಚಿಸುತ್ತೇವೆ, ಆದರೆ ಅಪ್‌ಡೇಟ್‌ಗಳಿಗಾಗಿ ಟ್ಯೂನ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1289452406658539467
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false