ಭಾಷೆ ಅಥವಾ ಸ್ಥಳದ ಸೆಟ್ಟಿಂಗ್‌ಗಳನ್ನು ಬದಲಾಯಿಸಿ

ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ವೆಬ್‌ಬಳಸಿ ನೀವು YouTube ನಲ್ಲಿ ನಿಮ್ಮ ಆದ್ಯತೆಯ ಭಾಷೆ ಮತ್ತು ಸ್ಥಳವನ್ನು ನೀವು ಆಯ್ಕೆ ಮಾಡಬಹುದು. YouTube ಮೊಬೈಲ್ ಆ್ಯಪ್ ಬಳಸುವಾಗ, ನಿಮ್ಮ ಸ್ಥಳವನ್ನು ನೀವು ಆಯ್ಕೆ ಮಾಡಬಹುದು. ಭಾಷಾ ಸೆಟ್ಟಿಂಗ್‌ಗಳು ವೀಡಿಯೊಗಳ ಸಮಯದಲ್ಲಿ ಗೋಚರಿಸುವ ಪಠ್ಯವನ್ನು ಬದಲಾಯಿಸುತ್ತವೆ.* ನೀವು ಆಯ್ಕೆ ಮಾಡಿದ ಸ್ಥಳವು ಈ ವೀಡಿಯೊಗಳ ಮೇಲೆ ಪರಿಣಾಮ ಬೀರುತ್ತದೆ:

  • ಶಿಫಾರಸುಗಳು
  • ಟ್ರೆಂಡಿಂಗ್
  • ಸುದ್ದಿ

YouTube, YouTube ಲಭ್ಯವಿರುವ ಎಲ್ಲಾ ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಿಗೆ ಭಾಷೆ ಮತ್ತು ಕಂಟೆಂಟ್ ಗಳಿಗೆ ಪ್ರಾಶಸ್ತ್ಯ ಒದಗಿಸುತ್ತದೆ. ನಾವು ನಿರಂತರವಾಗಿ ಉತ್ಪನ್ನಗಳನ್ನು ಹೆಚ್ಚಿನ ಬಳಕೆದಾರರನ್ನು ತಲುಪಿಸುವ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ. ನಿಮ್ಮ ಭಾಷೆ ಅಥವಾ ದೇಶ/ಪ್ರದೇಶವನ್ನು ನೀವು ಕಂಡುಹಿಡಿಯಲಾಗದಿದ್ದರೆ, ನಿಮ್ಮ ಅಗತ್ಯತೆಗಳು ಮತ್ತು ಆಸಕ್ತಿಗಳಿಗೆ ಹೆಚ್ಚು ಸೂಕ್ತವಾದ ಆಯ್ಕೆಯನ್ನು ಆರಿಸಿ.

YouTube ಗೆ ನಿಮ್ಮ ದೇಶ/ಪ್ರದೇಶವನ್ನು ಹುಡುಕಲು ಸಾಧ್ಯವಾಗದಿದ್ದರೆ, ಡೀಫಾಲ್ಟ್ ಸ್ಥಳವಾಗಿ ಯುನೈಟೆಡ್ ಸ್ಟೇಟ್ಸ್ ಆಯ್ಕೆಯಾಗಲಿದೆ.

*ಭಾರತದಲ್ಲಿ, ಭಾಷಾ ಸೆಟ್ಟಿಂಗ್‌ಗಳು ಮುಖಪುಟ ಮತ್ತು ಟ್ರೆಂಡಿಂಗ್‌ನಲ್ಲಿ ತೋರಿಸಲಾದ ವೀಡಿಯೊಗಳನ್ನು ಬದಲಾಯಿಸುತ್ತವೆ ಎಂಬುದನ್ನು ಗಮನಿಸಿ.

ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು ಮತ್ತು ಗೇಮ್ ಕನ್ಸೋಲ್‌ಗಳಲ್ಲಿ YouTube

ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು ಮತ್ತು ಗೇಮ್ ಕನ್ಸೋಲ್‌ಗಳಲ್ಲಿನ YouTube ಆ್ಯಪ್ ಡಿಫಾಲ್ಟ್ ಆಗಿ ನಿಮ್ಮ ಸಾಧನದ ಭಾಷೆ ಮತ್ತು ಸ್ಥಳ ಸೆಟ್ಟಿಂಗ್‌ಗಳನ್ನು ಅನುಸರಿಸುತ್ತದೆ. ನೀವು YouTube ನಲ್ಲಿ ಈ ಸೆಟ್ಟಿಂಗ್ ಗಳನ್ನು ಯಾವಾಗ ಬೇಕಾದರೂ ಬದಲಿಸಬಹುದು. ಈ ಸೆಟ್ಟಿಂಗ್ ಗಳನ್ನು ಬದಲಿಸಲು:
  1. ನಿಮ್ಮ ಟಿವಿ ಸಾಧನದಲ್ಲಿ YouTube ಆ್ಯಪ್ ಅನ್ನು ತೆರೆಯಿರಿ
  2. ಆಯ್ಕೆಮಾಡಿ. 
  3. ವಿಭಿನ್ನ ಭಾಷೆಯನ್ನು ಆಯ್ಕೆ ಮಾಡಲು ಭಾಷೆ ಆಯ್ಕೆ ಮಾಡಿ.
  4. ವಿಭಿನ್ನ ಸ್ಥಳಗಳನ್ನು ಆಯ್ಕೆ ಮಾಡಲು ಸ್ಥಳ ಆಯ್ಕೆ ಮಾಡಿ.

ನಿಮ್ಮ ಕೀಬೋರ್ಡ್‌ಗಾಗಿ ಹುಡುಕಾಟದ ಭಾಷೆಯನ್ನು ಬದಲಾಯಿಸಿ

ಹುಡುಕಾಟ ಕೀಬೋರ್ಡ್‌ಗಾಗಿ ನೀವು ಹುಡುಕಾಟ ಭಾಷೆಯ ಸೆಟ್ಟಿಂಗ್ ಅನ್ನು ಸಹ ಬದಲಾಯಿಸಬಹುದು:

  1. ನಿಮ್ಮ ಸ್ಮಾರ್ಟ್ ಟಿವಿ, ಸ್ಟ್ರೀಮಿಂಗ್ ಸಾಧನ ಅಥವಾ ಗೇಮ್ ಕನ್ಸೋಲ್‌ನಲ್ಲಿ YouTube ಅಪ್ಲಿಕೇಶನ್ ತೆರೆಯಿರಿ.
  2. ಹುಡುಕಿ, ಅನ್ನು ಆಯ್ಕೆ ಮಾಡಿ ಮತ್ತು ಭಾಷೆಯನ್ನು ಆಯ್ಕೆ ಮಾಡಿ.

ಹುಡುಕಾಟ ಕೀಬೋರ್ಡ್ ಈ ಕೆಳಗಿನ ಭಾಷೆಗಳನ್ನು ಬೆಂಬಲಿಸುತ್ತದೆ:

  • ಅರೇಬಿಕ್
  • ಚೈನೀಸ್ ಸರಳೀಕೃತ 
  • ಚೀನಾ ಸಾಂಪ್ರದಾಯಿಕ (ಹಾಂಗ್ ಕಾಂಗ್)
  • ಚೀನಾ ಸಾಂಪ್ರದಾಯಿಕ (ತೈವಾನ್)
  • ಡ್ಯಾನಿಶ್
  • ಡಚ್
  • ಇಂಗ್ಲಿಷ್
  • ಫ್ರೆಂಚ್
  • ಫ್ರೆಂಚ್ (ಕೆನಡಾ)
  • ಜರ್ಮನ್
  • ಗ್ರೀಕ್
  • ಹೀಬ್ರ್ಯೂ
  • ಹಂಗೇರಿಯನ್
  • ಇಟಾಲಿಯನ್
  • ಜಪಾನೀಸ್
  • ಕೊರಿಯನ್
  • ನಾರ್ವೆಜಿಯನ್
  • ಪೋಲಿಶ್
  • ಪೋರ್ಚುಗೀಸ್
  • ಪೋರ್ಚುಗೀಸ್ (ಬ್ರೆಜಿಲ್)
  • ರಷ್ಯನ್
  • ಸ್ಪ್ಯಾನಿಶ್
  • ಸ್ಪಾನಿಶ್ (ಮೆಕ್ಸಿಕೋ)
  • ಸ್ಪ್ಯಾನಿಷ್ (US)
  • ಸ್ವೀಡಿಷ್
  • ಥಾಯ್
  • ಟರ್ಕಿಶ್
  • ಉಕ್ರೇನಿಯನ್
  • ವಿಯೆಟ್ನಾಮೀಸ್
ಟಿಪ್ಪಣಿ: ನಿಮ್ಮ ಆ್ಯಪ್ ನ ಭಾಷೆಯನ್ನು ಬೆಂಬಲಿಸದಿದ್ದರೆ, ಹುಟುಕಾಟದ ಕೀಬೋರ್ಡ್ ಡಿಫಾಲ್ಟ್ ಆಗಿ ಇಂಗ್ಲಿಷ್ ಗೆ ಸೆಟ್ ಆಗುತ್ತದೆ.
  1. ನಿಮ್ಮ ಪ್ರೊಫೈಲ್ ಚಿತ್ರವನ್ನು ಕ್ಲಿಕ್ ಮಾಡಿ .
  2. ಭಾಷೆ ಅಥವಾ ಸ್ಥಳಅನ್ನು ಕ್ಲಿಕ್ ಮಾಡಿ.
  3. ನೀವು ಬಳಸಲು ಬಯಸುವ ಭಾಷೆ ಅಥವಾ ಸ್ಥಳವನ್ನು ಕ್ಲಿಕ್ ಮಾಡಿ.

YouTube ಭಾಷೆಯ ಸೆಟ್ಟಿಂಗ್‌ಗಳು ಸಂಪೂರ್ಣ ಸೈಟ್‌ಗೆ ಅನ್ವಯಿಸುತ್ತವೆ, ಆದರೆ ವೀಡಿಯೊಗಳು ಅವುಗಳ ಮೂಲ ಭಾಷೆಯಲ್ಲಿ ಉಳಿಯುತ್ತವೆ. ಭಾಷಾ ಸೆಟ್ಟಿಂಗ್‌ಗಳನ್ನು ಬ್ರೌಸರ್‌ನಲ್ಲಿ ಉಳಿಸಲಾಗಿದೆ. ನೀವು ಯಾವಾಗಲಾದರೂ ಕ್ಯಾಶೆ ಮತ್ತು ಕುಕಿಗಳನ್ನು ಕ್ಲಿಯರ್ ಮಾಡಿದ್ದರೆ, ನೀವು ನಿಮ್ಮ ಭಾಷೆ ಸೆಟ್ಟಿಂಗ್ ಗಳನ್ನು ರೀಸೆಟ್ ಮಾಡಬೇಕಾಗಬಹುದು.

How to change the language and location on YouTube from your computer

ಇಮೇಲ್ ನೋಟಿಫಿಕೇಷನ್ ಗಳಿಗಾಗಿ ಭಾಷೆಯನ್ನು ಬದಲಾಯಿಸಿ

YouTube ನಿಂದ ನಿಮ್ಮ ಇಮೇಲ್‌ಗಳನ್ನು ನಿಮ್ಮ ದೇಶ/ಪ್ರದೇಶಕ್ಕಾಗಿ ಡೀಫಾಲ್ಟ್ ಭಾಷೆಯಲ್ಲಿ ವಿತರಿಸಲಾಗುತ್ತದೆ ನಿಮ್ಮ YouTube ಭಾಷೆಯ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಿದ್ದರೆ, ಅದಕ್ಕೆ ಹೊಂದಿಸಲು ನಿಮ್ಮ ಇಮೇಲ್ ಸೆಟ್ಟಿಂಗ್‌ಗಳನ್ನು ನೀವು ಬದಲಾಯಿಸಬಹುದು:

  1. ನಿಮ್ಮ ಇಮೇಲ್ ಸೆಟ್ಟಿಂಗ್ ಗಳುಗೆ ಹೋಗಿ.
  2. ನಿಮ್ಮ ಇಮೇಲ್ ನೋಟಿಫಿಕೇಷನ್ ನ ಭಾಷೆಯನ್ನು ಅಪ್ ಡೇಟ್ ಮಾಡಲು "ಭಾಷೆ" ಗೆ ಸ್ಕ್ರಾಲ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8925811494780760598
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false