YouTube ಗಾಗಿ ಸಿಸ್ಟಮ್ ಅವಶ್ಯಕತೆಗಳು ಮತ್ತು ಬೆಂಬಲಿತ ಸಾಧನಗಳು

YouTube ವೀಡಿಯೊಗಳನ್ನು ವೀಕ್ಷಿಸಲು, ನೀವು ಅತ್ಯಂತ ಅಪ್ ಡೇಟ್ ಆಗಿರುವ ಬ್ರೌಸರ್, ಆಪರೇಟಿಂಗ್ ಸಿಸ್ಟಮ್ ಮತ್ತು ಉತ್ತಮ ಇಂಟರ್ನೆಟ್ ನೆಟ್ ವರ್ಕ್ ಅನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ:

  • Google Chrome, Firefox, ಅಥವಾ Safari ಯ ಹೊಸ ಆವೃತ್ತಿ
  • 500+ Kbps ಯೊಂದಿಗೆ ಇಂಟರ್ನೆಟ್ ಕನೆಕ್ಷನ್

ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳ ಅವಶ್ಯಕತೆಗಳು

ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಹಾಗೂ ಲೈವ್ ಸ್ಟ್ರೀಮ್‌ಗಳಂತಹ YouTube ನಲ್ಲಿನ ಕೆಲವು ಪ್ರೀಮಿಯಂ ವೀಡಿಯೊಗಳಿಗೆ ಅತ್ಯುತ್ತಮ ಸ್ಟ್ರೀಮಿಂಗ್ ವೇಗಕ್ಕಾಗಿ ಅಧಿಕ ವೇಗದ ಇಂಟರ್ನೆಟ್ ಕನೆಕ್ಷನ್ ಹಾಗೂ ಅಧಿಕ ಪ್ರೊಸೆಸಿಂಗ್ ಪವರ್‌ನ ಅಗತ್ಯವಿರುತ್ತದೆ. ನಿಮಗೆ ಬೇಕಾಗುವ ವಿಷಯಗಳು ಇವು:

  • Google Chrome, Firefox, ಅಥವಾ Safari ಯ ಹೊಸ ಆವೃತ್ತಿ
  • ಆಪರೇಟಿಂಗ್ ಸಿಸ್ಟಮ್: ವಿಂಡೋಸ್ 7 +, Mac OS X 10.7+, ಅಥವಾ ಉಬುಂಟು 10+
  • 1+ Mbps ನೊಂದಿಗೆ ಇಂಟರ್ನೆಟ್ ಕನೆಕ್ಷನ್

ನಿಮ್ಮ ವೀಡಿಯೊವನ್ನು ಸ್ಟ್ರೀಮ್ ಮಾಡುವಾಗ ಇತರ ಟ್ಯಾಬ್‌ಗಳು, ಬ್ರೌಸರ್‌ಗಳು ಮತ್ತು ಪ್ರೋಗ್ರಾಂಗಳನ್ನು ಮುಚ್ಚಲು ಇದು ಸಹಾಯ ಮಾಡುತ್ತದೆ. ವೈರ್‌ಲೆಸ್ ನೆಟ್‌ವರ್ಕ್ ಕನೆಕ್ಷನ್ ಅನ್ನು ಬಳಸುವ ಬದಲು ವೈರ್ಡ್ ಇಂಟರ್ನೆಟ್ ಕನೆಕ್ಷನ್ ಅನ್ನು ಬಳಸಲು ಸಹ ಇದು ಸಹಾಯ ಮಾಡಬಹುದು.

ಪ್ರತಿಯೊಂದು ವೀಡಿಯೊ ಫಾರ್ಮ್ಯಾಟ್ ಅನ್ನು ಪ್ಲೇ ಮಾಡಲು ಶಿಫಾರಸು ಮಾಡಲಾದ ಅಂದಾಜು ವೇಗವನ್ನು ಕೆಳಗಿನ ಟೇಬಲ್‌ನಲ್ಲಿ ನೀಡಲಾಗಿದೆ.

ವೀಡಿಯೊ ರೆಸಲ್ಯೂಷನ್

ಶಿಫಾರಸು ಮಾಡಲಾದ ಸುಸ್ಥಿರ ವೇಗ
4K UHD 20 Mbps
HD 1080p 5 Mbps
HD 720p  2.5 Mbps
SD 480p 1.1 Mbps
SD 360p 0.7 Mbps

 

ಸೂಚನೆಗಳು:
  • HD ಪ್ಲೇಬ್ಯಾಕ್ ಅನ್ನು Safari ಯಲ್ಲಿ ಹೊರತುಪಡಿಸಿ ಬೇರೆ ಬ್ರೌಸರ್‌ಗಳಲ್ಲಿ ಸ್ಟ್ರೀಮ್ ಮಾಡಲು ಸಾಧ್ಯವಾಗುವುದಿಲ್ಲ. ಇಲ್ಲಿ ಪಟ್ಟಿ ಮಾಡಲಾದ ಬೆಂಬಲಿತ ಸಾಧನಗಳಲ್ಲಿ ಒಂದನ್ನು ಬಳಸಿಕೊಂಡು ನೀವು HD ಯಲ್ಲಿಯೂ ಸ್ಟ್ರೀಮ್ ಮಾಡಬಹುದು.
  • ಕೆಲವೊಮ್ಮೆ, ನೀವು HD/UHD ಪ್ಲೇಬ್ಯಾಕ್ ಅನ್ನು ಬೆಂಬಲಿಸದ ಸಾಧನ ಅಥವಾ ಬ್ರೌಸರ್‌ನಲ್ಲಿ ವೀಡಿಯೊದ HD/UHD ಆವೃತ್ತಿಯನ್ನು ಖರೀದಿಸಬಹುದು ಅಥವಾ ಬಾಡಿಗೆಗೆ ಪಡೆಯಬಹುದು. ಆ ಸಾಧನದಲ್ಲಿ ನೀವು ಈಗಲೂ ಕಡಿಮೆ ಗುಣಮಟ್ಟದಲ್ಲಿ ಶೀರ್ಷಿಕೆಯನ್ನು ವೀಕ್ಷಿಸಬಹುದು ಅಥವಾ ಬೇರೆ ಹೊಂದಾಣಿಕೆಯ ಸಾಧನದಲ್ಲಿ HD/UHD ಯಲ್ಲಿ ವೀಕ್ಷಿಸಬಹುದು.

Primetime ಚಾನಲ್‌ಗಳನ್ನು ಬೆಂಬಲಿಸುವ ಸಾಧನಗಳು (ಯುಎಸ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ಯುಕೆ ಮಾತ್ರ)

ನೀವು Comcast Xfinity ಗ್ರಾಹಕರಾಗಿದ್ದು, ನಿಮ್ಮ ಪ್ರಸ್ತುತ ಟಿವಿ ಬಾಕ್ಸ್ ಮೂಲಕ NFL ಸಂಡೇ ಟಿಕೆಟ್ ಅಥವಾ YouTube Primetime ಚಾನಲ್‌ಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಟಿವಿ ಬಾಕ್ಸ್ ಅನ್ನು ನೀವು ಬದಲಿಸಬೇಕಾಗಬಹುದು. ಇನ್ನಷ್ಟು ತಿಳಿದುಕೊಳ್ಳಲು Xfinity ಸ್ಟೋರ್‌ಗೆ ಭೇಟಿ ನೀಡಿ ಅಥವಾ Comcast ಬೆಂಬಲ ತಂಡಕ್ಕೆ ಕರೆ ಮಾಡಿ. 

ನೀವು ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಫ್ರಾನ್ಸ್, ಆಸ್ಟ್ರೇಲಿಯಾ ಅಥವಾ ಯುನೈಟೆಡ್ ಕಿಂಗ್‌ಡಮ್‌ನಲ್ಲಿದ್ದರೆ, ನೀವು ಈ ಕೆಳಗಿನ ಸಾಧನಗಳಲ್ಲಿ YouTube Primetime ಚಾನಲ್‌ಗಳನ್ನು ವೀಕ್ಷಿಸಬಹುದು:

ಗೇಮ್ ಕನ್ಸೋಲ್‌ಗಳು
  • PlayStation 5
  • PlayStation 4
  • PlayStation 4 Pro
  • Xbox Series X
  • Xbox Series S
  • Xbox One X
  • Xbox One S
  • Xbox One
ಸ್ಮಾರ್ಟ್ ಡಿಸ್‌ಪ್ಲೇಗಳು
  • Nest Hub Max
  • Nest Hub
ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು Android 6.0 Marshmallow ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡುತ್ತಿರುವ ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳು
iOS 12 ಅಥವಾ ನಂತರದ ಆವೃತ್ತಿಗಳನ್ನು ರನ್ ಮಾಡುತ್ತಿರುವ iPhone ಗಳು ಹಾಗೂ iPad ಗಳು
ಸ್ಮಾರ್ಟ್ ಟಿವಿಗಳು Hisense ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
LG ಸ್ಮಾರ್ಟ್ ಟಿವಿಗಳು (2016+ ಮಾಡೆಲ್‌ಗಳು ಮಾತ್ರ)
Roku ಟಿವಿಗಳು (ಎಲ್ಲಾ ಮಾಡೆಲ್‌ಗಳು)
Samsung ಸ್ಮಾರ್ಟ್ ಟಿವಿಗಳು (2017+ ಮಾಡೆಲ್‌ಗಳು ಮಾತ್ರ)
Sharp ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
Sony ಸ್ಮಾರ್ಟ್ ಟಿವಿಗಳು (ಆಯ್ದ ಮಾಡೆಲ್‌ಗಳು)
Vizio SmartCast ಟಿವಿಗಳು (ಆಯ್ದ ಮಾಡೆಲ್‌ಗಳು)
Android TV ಬಿಲ್ಟ್-ಇನ್ ಮತ್ತು NVIDIA ಶೀಲ್ಡ್ ಹೊಂದಿರುವ ಆಯ್ದ ಟಿವಿಗಳು
ಆಯ್ದ Fire TV ಎಡಿಷನ್ ಸ್ಮಾರ್ಟ್ ಟಿವಿಗಳು
ಸ್ಟ್ರೀಮಿಂಗ್ ಸಾಧನಗಳು Apple TV (4ನೇ ಜನರೇಶನ್ ಮತ್ತು 4K)
Chromecast ಜೊತೆಗೆ Google TV
  • Fire TV Stick (3ನೇ ಜನರೇಶನ್)
  • Fire TV Stick Lite
  • Fire TV Stick (2ನೇ ಜನರೇಶನ್)
  • Fire TV Stick 4K
  • Fire TV Cube
  • Fire TV Cube (1ನೇ ಜನರೇಶನ್)
ಆಯ್ದ ಕೇಬಲ್ ಟಿವಿ ಸಾಧನಗಳು (Xfinity X1 ರೀತಿಯದು)

ನೀವು ಈ ಕೆಳಗಿನ ಯಾವುದೇ ಸಾಧನಗಳಲ್ಲಿ YouTube Primetime ಚಾನಲ್‌ಗಳನ್ನು ವೀಕ್ಷಿಸಬಹುದು ಆದರೆ ಖರೀದಿಸಲು ಸಾಧ್ಯವಾಗುವುದಿಲ್ಲ:

  • Apple TV
  • Xbox
  • ಆಯ್ದ Panasonic TV ಗಳು

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3417979377277284421
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false