YouTube ಸ್ವಯಂ ಪ್ರಮಾಣೀಕರಣ ಅವಲೋಕನ

ನೀವು ಸ್ವಯಂ-ಪ್ರಮಾಣೀಕರಣಕ್ಕೆ ಆ್ಯಕ್ಸೆಸ್ ಅನ್ನು ಹೊಂದಿರುವಾಗ, ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ವಿರುದ್ಧ ನಿಮ್ಮ ವೀಡಿಯೊಗಳಿಗೆ ಸ್ವಯಂ-ರೇಟ್ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ.

YouTube ಸ್ವಯಂ ಪ್ರಮಾಣೀಕರಣ ಪ್ರೋಗ್ರಾಂ

ಸ್ವಯಂ ಪ್ರಮಾಣೀಕರಣ ಏಕೆ?

ಮಾನಿಟೈಸೇಶನ್ ನಿರ್ಧಾರಗಳನ್ನು ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡಲು ನಿಮ್ಮ ಇನ್‌ಪುಟ್ ನಮಗೆ ಸಹಾಯ ಮಾಡುತ್ತದೆ. ಸ್ವಯಂ ಪ್ರಮಾಣೀಕರಣದ ಮೂಲಕ:

  1. ನಿಮ್ಮ ವೀಡಿಯೊದಲ್ಲಿ ಏನಿದೆ ಎಂಬುದನ್ನು ನೀವು ನಮಗೆ ಹೇಳಬಹುದು.
  2. ನಮ್ಮ ಸ್ವಯಂಚಾಲಿತ ಸಿಸ್ಟಂಗಳು ನಂತರ ಪರಿಶೀಲಿಸುತ್ತವೆ ಮತ್ತು ನಿರ್ಧರಿಸುತ್ತವೆ.
  3. ನಮ್ಮ ಸ್ವಯಂಚಾಲಿತ ಸಿಸ್ಟಂಗಳನ್ನು ನೀವು ಒಪ್ಪದಿದ್ದರೆ, ನೀವು ಮಾನವ ವಿಮರ್ಶೆಯನ್ನು ವಿನಂತಿಸಬಹುದು.
  4. ವಿಮರ್ಶಕರು ನಿಮ್ಮ ವೀಡಿಯೊವನ್ನು ಪರಿಶೀಲಿಸುತ್ತಾರೆ ಮತ್ತು ಪ್ರತಿಕ್ರಿಯೆ ನೀಡುತ್ತಾರೆ. ಆ ವೀಡಿಯೊದಲ್ಲಿನ ಯಾವ ಕಂಟೆಂಟ್ ಕುರಿತು ನೀವು ಮತ್ತು ವಿಮರ್ಶಕರು ಒಪ್ಪುವುದಿಲ್ಲ (ಉದಾಹರಣೆಗೆ, “ಸೂಕ್ತವಲ್ಲದ ಭಾಷೆ” ಅಥವಾ “ಸೂಕ್ಷ್ಮ ಸಮಸ್ಯೆಗಳು”) ಎಂಬುದನ್ನು ನೀವು ನೋಡಬಹುದು.

ನೀವು ನಿರಂತರವಾಗಿ ನಿಮ್ಮ ವೀಡಿಯೊಗಳಿಗೆ ನಿಖರವಾಗಿ ರೇಟ್ ನೀಡಿದರೆ, ನಮ್ಮ ಸ್ವಯಂಚಾಲಿತ ಸಿಸ್ಟಂಗಳ ಮೇಲೆ ನಿಮ್ಮ ಇನ್‌ಪುಟ್ ಅನ್ನು ನಾವು ಅವಲಂಬಿಸುತ್ತೇವೆ. ಮಾನಿಟೈಸ್ ಮಾಡುವ ಕ್ರಿಯೇಟರ್‌ಗಳ ಸಂಪೂರ್ಣ ಸಮುದಾಯಕ್ಕಾಗಿ ನಮ್ಮ ಸಿಸ್ಟಂಗಳನ್ನು ಸುಧಾರಿಸಲು ನಿಮ್ಮ ಇನ್‌ಪುಟ್ ಅನ್ನು ಸಹ ಬಳಸಲಾಗುತ್ತದೆ.

ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಗುರುತಿಸಲಾದ ಕಂಟೆಂಟ್‌ಗೆ ಸ್ವಯಂ ಪ್ರಮಾಣೀಕರಣ ಲಭ್ಯವಿದೆ. ಮಕ್ಕಳು ಮತ್ತು ಕುಟುಂಬದ ಕಂಟೆಂಟ್‌ಗೆ ಸಂಬಂಧಿಸಿದ ಉತ್ತಮ ಅಭ್ಯಾಸಗಳು, ಹಾಗೆಯೇ ಮಕ್ಕಳ ಕಂಟೆಂಟ್‌ಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ಕುರಿತು ಇನ್ನಷ್ಟು ತಿಳಿಯಿರಿ.

ನೀವು ಏನು ಮಾಡಬೇಕು

ಸ್ವಯಂ ಪ್ರಮಾಣೀಕರಣದ ಮೂಲಕ, ನೀವು ಇವುಗಳಿಗೆ ರೇಟ್ ನೀಡಬೇಕಾಗುತ್ತದೆ:

  • ನೀವು ಆ್ಯಡ್‌ಗಳನ್ನು ಆನ್ ಮಾಡುವ ಎಲ್ಲಾ ಹೊಸ ವೀಡಿಯೊಗಳು.
  • ನೀವು ಈಗ ಆ್ಯಡ್‌ಗಳನ್ನು ಆನ್ ಮಾಡಲು ಬಯಸುವ ಈ ಹಿಂದೆ ಅಪ್‌ಲೋಡ್ ಮಾಡಿದ ವೀಡಿಯೊಗಳು.

ಆ್ಯಡ್‌ಗಳನ್ನು ಆನ್ ಮಾಡಿರುವ ಅಸ್ತಿತ್ವದಲ್ಲಿರುವ ವೀಡಿಯೊಗಳಿಗೆ ನೀವು ರೇಟ್ ನೀಡಬೇಕಾಗಿಲ್ಲ.

ನಿಮ್ಮ ವೀಡಿಯೊಗಳಿಗೆ ರೇಟ್ ನೀಡುವುದು ಹೇಗೆ

ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ವಿರುದ್ಧ ನಿಮ್ಮ ವೀಡಿಯೊಗಳಿಗೆ ಸ್ವಯಂ-ರೇಟ್ ನೀಡಲು ಈ ಹಂತಗಳನ್ನು ಅನುಸರಿಸಿ:

  1. YouTube Studio ದಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲು ಹಂತಗಳನ್ನು ಅನುಸರಿಸಿ. ನಿಮ್ಮ ವೀಡಿಯೊ ಅಪ್‌ಲೋಡ್ ಆಗುತ್ತಿರುವಾಗ, ಮಾನಿಟೈಸೇಶನ್ ಡ್ರಾಪ್‌ಡೌನ್ ಆಯ್ಕೆಮಾಡಿ ನಂತರ ಆನ್ ಮಾಡಿ ಎಂಬುದನ್ನು ಆಯ್ಕೆಮಾಡಿ ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ ನಂತರ ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.
  2. ಸುಧಾರಿತ ಸೆಟ್ಟಿಂಗ್‌ಗಳು ಪುಟದಲ್ಲಿ ಯಾವುದೇ ಸಂಬಂಧಿತ ಫೀಚರ್‌ಗಳನ್ನು ಆಯ್ಕೆಮಾಡಿ ನಂತರ ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.
  3. ಆ್ಯಡ್‌ಗಾಗಿ ಸೂಕ್ತತೆ ಪುಟದಲ್ಲಿನ ಪ್ರಶ್ನಾವಳಿಯನ್ನು ಭರ್ತಿ ಮಾಡಿ ನಂತರ ರೇಟಿಂಗ್ ಅನ್ನು ಸಲ್ಲಿಸಿ ಎಂಬುದನ್ನು ಕ್ಲಿಕ್ ಮಾಡಿ ನಂತರ ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.
    • ಪ್ರಶ್ನಾವಳಿಯಲ್ಲಿ ಪಟ್ಟಿ ಮಾಡಲಾದ ಕಂಟೆಂಟ್ ಅನ್ನು ನಿಮ್ಮ ವೀಡಿಯೊ ಒಳಗೊಂಡಿಲ್ಲದಿದ್ದರೆ, ನೀವು ಕೆಳಕ್ಕೆ ಸ್ಕ್ರಾಲ್ ಮಾಡಬಹುದು ಮತ್ತು “ಮೇಲಿನ ಯಾವುದೂ ಅಲ್ಲ” ಎಂಬುದರ ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತಿಸಬಹುದು.
  4. ಪರಿಶೀಲನೆಗಳು ಪುಟವು ನಿಮ್ಮ ವೀಡಿಯೊಗೆ ನೀವು ರೇಟ್ ನೀಡಿದ ನಂತರ ಆ್ಯಡ್‌ಗಾಗಿ ಸೂಕ್ತತೆಯನ್ನು ಪರಿಶೀಲಿಸಲು ನಮ್ಮ ಸಿಸ್ಟಂಗಳನ್ನು ಬಳಸುತ್ತದೆ. ಒಮ್ಮೆ ಇದು ಮುಗಿದ ನಂತರ ನಂತರ ಮುಂದಿನದು ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ ವೀಡಿಯೊದ ಗೋಚರತೆಯ ಸ್ಥಿತಿಯನ್ನು ಆರಿಸಿ.
  6. ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗೊತ್ತುಪಡಿಸಿದ ಕಂಟೆಂಟ್‌ಗೆ ನೀವು ಸ್ವಯಂ-ರೇಟಿಂಗ್ ನೀಡುತ್ತಿದ್ದೀರಾ? ಹಾಗಿದ್ದರೆ, ಮಕ್ಕಳು ಮತ್ತು ಕುಟುಂಬದ ಕಂಟೆಂಟ್‌ಗೆ ಸಂಬಂಧಿಸಿದ ನಮ್ಮ ಉತ್ತಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮರೆಯದಿರಿ. ವೀಡಿಯೊಗಳನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗುರುತಿಸುವ ಹಂತಗಳನ್ನು ಕಂಡುಕೊಳ್ಳಲು (Studio ದಲ್ಲಿ ಅವುಗಳನ್ನು ಸ್ವಯಂ-ಪ್ರಮಾಣೀಕರಿಸಲು), ಈ ಪುಟಕ್ಕೆ ಭೇಟಿ ನೀಡಿ.

ನಿಮ್ಮ ರೇಟಿಂಗ್ ಸ್ಥಿತಿಯನ್ನು ಅರ್ಥಮಾಡಿಕೊಳ್ಳಿ

ನೀವು ಪ್ರೋಗ್ರಾಂನಲ್ಲಿರುವಾಗ, ನಿಮಗೆ ರೇಟಿಂಗ್ ನಿಖರತೆಯ ಪುಟ ಕಾಣಿಸುತ್ತದೆ.

  • ನಿಮ್ಮ ರೇಟಿಂಗ್ ನಿಖರತೆಯನ್ನು ಪರಿಶೀಲಿಸಿ.
  • ರೇಟಿಂಗ್‌ಗೆ ಸಂಬಂಧಿಸಿದಂತೆ ಯಾವುದರ ಕುರಿತು ನೀವು ಮತ್ತು YouTube ಒಪ್ಪುವುದಿಲ್ಲ.
  • ನಮ್ಮ ರೇಟರ್‌ಗಳಿಂದ ಪ್ರತಿಕ್ರಿಯೆಯನ್ನು ವಿನಂತಿಸಿ ಅಥವಾ ನಮ್ಮ ರೇಟರ್‌ಗಳು ನೀಡಿದ ಪ್ರತಿಕ್ರಿಯೆಯನ್ನು ವೀಕ್ಷಿಸಿ.

ನಿಮ್ಮ ರೇಟಿಂಗ್‌ಗಳ ಇತಿಹಾಸವು ನಮ್ಮ ಸಿಸ್ಟಂಗಳು ಮತ್ತು ಮಾನವ ವಿಮರ್ಶಕರ ಜೊತೆಗೆ ಎಷ್ಟು ಚೆನ್ನಾಗಿ ಹೊಂದಾಣಿಕೆಯಾಗುತ್ತದೆ ಎಂಬುದನ್ನು ನೀವು ನೋಡಬಹುದು. ನೀವು 20 ವೀಡಿಯೊಗಳಿಗೆ ರೇಟ್ ನೀಡಿದ ನಂತರ ನೀವು ಎಷ್ಟು ನಿಖರವಾಗಿರುತ್ತೀರಿ ಎಂಬುದನ್ನು ನಾವು ಸಾಮಾನ್ಯವಾಗಿ ನಿರ್ಧರಿಸಬಹುದು. ಈ ಮಾಹಿತಿಯು ಮುಖ್ಯವಾಗಿದೆ ಏಕೆಂದರೆ ನಿಮ್ಮ ರೇಟಿಂಗ್‌ಗಳು ಹೆಚ್ಚು ನಿಖರವಾಗಿದ್ದಷ್ಟು, ಯಾವ ಆ್ಯಡ್‌ಗಳನ್ನು ರನ್ ಮಾಡಬೇಕೆಂದು ನಿರ್ಧರಿಸಲು ನಾವು ಅವುಗಳನ್ನು ಹೆಚ್ಚು ಬಳಸಬಹುದು.

ನಿಮ್ಮ ನಿಖರತೆಯ ರೇಟಿಂಗ್ ಅನ್ನು ಹೇಗೆ ರೀಡ್ ಮಾಡುವುದು
ನೀವು ಹೆಚ್ಚಿನ ವೀಡಿಯೊಗಳಿಗೆ ರೇಟ್ ನೀಡಿದಂತೆಲ್ಲಾ, ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಮತ್ತು ಮಾನವ ವಿಮರ್ಶಕರೊಂದಿಗೆ ನಿಮ್ಮ ರೇಟಿಂಗ್‌ಗಳು ಎಷ್ಟು ಚೆನ್ನಾಗಿ ಹೊಂದಾಣಿಕೆಯಾಗುತ್ತವೆ ಎಂಬುದನ್ನು ನೀವು ಕಂಡುಕೊಳ್ಳಬಹುದು.

ನಿಮ್ಮ ರೇಟಿಂಗ್ ಸ್ಥಿತಿ ಪುಟವನ್ನು ಹುಡುಕಿ

  1. ಸ್ವಯಂ-ಪ್ರಮಾಣೀಕರಣದ ಭಾಗವಾಗಿರುವ ನಿಮ್ಮ ಚಾನಲ್ ಅನ್ನು ಬಳಸಿಕೊಂಡು YouTube ಗೆ ಸೈನ್ ಇನ್ ಮಾಡಿ.
  2. https://studio.youtube.com/channel/UC/videos/contentratings ಗೆ ಹೋಗಿ.
  3. ನಿಮಗೆ ಸ್ಥಿತಿ ರೇಟಿಂಗ್‌ಗಳ ಪುಟವನ್ನು ಕಾಣಿಸುತ್ತದೆ.

ನಿಮ್ಮ ರೇಟಿಂಗ್ ಸ್ಥಿತಿ ಪುಟದಲ್ಲಿನ ಪ್ರತಿ ಕಾಲಮ್‌ನ ಅರ್ಥವೇನು

  • ವೀಡಿಯೊ: ವೀಡಿಯೊಗೆ ರೇಟ್ ನೀಡಲಾಗುತ್ತಿದೆ.
  • ರೇಟ್ ನೀಡಿದ ದಿನಾಂಕ: ನಿಮ್ಮ ವೀಡಿಯೊಗೆ ನೀವು ರೇಟ್ ನೀಡಿದ ದಿನಾಂಕ.
  • ನಿಮ್ಮ ರೇಟಿಂಗ್: ನಿಮ್ಮ ವೀಡಿಯೊಗೆ ನೀವು ಹೇಗೆ ರೇಟ್ ನೀಡಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಯನ್ನು ನಮ್ಮ ಸಿಸ್ಟಂಗಳು ಊಹಿಸುತ್ತವೆ.
  • YouTube ರೇಟಿಂಗ್: YouTube ಸಿಸ್ಟಂಗಳು ಅಥವಾ ನಮ್ಮ ಮಾನವ ವಿಮರ್ಶಕರು ಈ ವೀಡಿಯೊದ ಮಾನಿಟೈಸೇಶನ್ ಸ್ಥಿತಿ ಹೇಗಿರಬೇಕು ಎಂದು ನಂಬುತ್ತಾರೆ.
  • YouTube ಪರಿಶೀಲನೆಯ ಪ್ರಕಾರ: ನಿಮಗೆ 2 ವಿಭಿನ್ನ ಐಕಾನ್‌ಗಳು ಕಾಣಿಸುತ್ತವೆ. ಒಂದು ನಮ್ಮ ಸ್ವಯಂಚಾಲಿತ ಸಿಸ್ಟಂಗಳು ನಿಮ್ಮ ವೀಡಿಯೊವನ್ನು ಪರಿಶೀಲಿಸಿದೆ ಎಂದು ತೋರಿಸುತ್ತದೆ ಮತ್ತು ಇನ್ನೊಂದು ನೀತಿ ತಜ್ಞರು ಅದನ್ನು ಪರಿಶೀಲಿಸಿದ್ದಾರೆ ಎಂದು ತೋರಿಸುತ್ತದೆ.
    • ಕಂಪ್ಯೂಟರ್: ಈ ಐಕಾನ್ ಎಂದರೆ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಮಾನಿಟೈಸೇಶನ್ ನಿರ್ಧಾರವನ್ನು ತೆಗೆದುಕೊಂಡಿವೆ.
    • ಮಾನವ: ಈ ಐಕಾನ್ ಎಂದರೆ ನೀತಿ ತಜ್ಞರು -- ನಿಜವಾದ ವ್ಯಕ್ತಿ -- ವೀಡಿಯೊವನ್ನು ಪರಿಶೀಲಿಸಿದ್ದಾರೆ.
  • ಆ್ಯಕ್ಷನ್: ಮಾನಿಟೈಸೇಶನ್ ನಿರ್ಧಾರದ ಕುರಿತು ನೀವು ಏನು ಮಾಡಬಹುದು ಎಂಬುದನ್ನು ಈ ಕಾಲಮ್ ನಿಮಗೆ ತಿಳಿಸುತ್ತದೆ.
    • ಪರಿಶೀಲನೆಗೆ ವಿನಂತಿಸಿ: ನಮ್ಮ ಸ್ವಯಂಚಾಲಿತ ಸಿಸ್ಟಂಗಳು ನಿಮ್ಮ ವೀಡಿಯೊವನ್ನು ಪರಿಶೀಲಿಸಿವೆ. ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಯಾವಾಗಲೂ ಸರಿ ಎಂದು ಹೇಳಲು ಸಾಧ್ಯವಿಲ್ಲ. ಅಂತಿಮ ಮಾನಿಟೈಸೇಶನ್ ನಿರ್ಧಾರವನ್ನು ಮಾಡಲು ನಮ್ಮ ನೀತಿ ತಜ್ಞರಲ್ಲಿ ಒಬ್ಬರನ್ನು ಪಡೆಯಲು ನೀವು ಪರಿಶೀಲನೆಗೆ ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಬಹುದು.
    • ಪ್ರತಿಕ್ರಿಯೆಯನ್ನು ವೀಕ್ಷಿಸಿ: ನೀತಿ ತಜ್ಞರು ನಿಮ್ಮ ವೀಡಿಯೊವನ್ನು ಪರಿಶೀಲಿಸಿದ್ದಾರೆ ಮತ್ತು ಅಂತಿಮ ನಿರ್ಧಾರವನ್ನು ಮಾಡಿದ್ದಾರೆ. ಮಾನವ ವಿಮರ್ಶಕರು ಒಮ್ಮೆ ನಿರ್ಧರಿಸಿದರೆ, ಮಾನಿಟೈಸೇಶನ್ ಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ. ನೀವು ಪ್ರತಿಕ್ರಿಯೆಯನ್ನು ವೀಕ್ಷಿಸಿ ಎಂಬುದನ್ನು ಕ್ಲಿಕ್ ಮಾಡಿದರೆ, ನೀವು ವೀಡಿಯೊಗೆ ಹೇಗೆ ರೇಟ್ ನೀಡಿದ್ದೀರಿ ಮತ್ತು ನಮ್ಮ ನೀತಿ ತಜ್ಞರು ವೀಡಿಯೊಗೆ ಹೇಗೆ ರೇಟ್ ನೀಡಿದ್ದಾರೆ ಎಂಬುದರ ನಡುವಿನ ವ್ಯತ್ಯಾಸಗಳನ್ನು ನೀವು ನೋಡುತ್ತೀರಿ. ಅಡ್ವರ್‌ಟೈಸರ್ ಸ್ನೇಹಿ ಮಾನಿಟೈಸೇಶನ್ ವಿಮರ್ಶೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ನಿಮ್ಮ ರೇಟಿಂಗ್ ನಿಮ್ಮ ಚಾನಲ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ
ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಗೆ ನೀವು ಹೇಗೆ ರೇಟ್ ನೀಡಿದ್ದೀರಿ ಎಂಬುದರ ಜೊತೆಗೆ ನಮ್ಮ ಮಾನಿಟೈಸೇಶನ್ ನಿರ್ಧಾರವು ಎಷ್ಟು ಬಾರಿ ಹೊಂದಾಣಿಕೆಯಾಗುತ್ತದೆ ಎಂಬುದರ ಆಧಾರದ ಮೇಲೆ ನಿಮಗೆ ರೇಟಿಂಗ್ ಸ್ಥಿತಿಯನ್ನು ನೀಡಲಾಗುತ್ತದೆ.
ನಿಮ್ಮ ನಿಖರತೆ ಹೆಚ್ಚಿದ್ದರೆ: ಅಂದರೆ ನಿಮ್ಮ ವೀಡಿಯೊಗಳಲ್ಲಿ ಯಾವ ಆ್ಯಡ್‌ಗಳನ್ನು ರನ್ ಮಾಡಬಹುದು ಎಂಬುದನ್ನು ನಿರ್ಧರಿಸುವುದಕ್ಕೆ ಸಹಾಯ ಮಾಡಲು ನಾವು ನಿಮ್ಮ ಇನ್‌ಪುಟ್ ಅನ್ನು ಬಳಸುತ್ತೇವೆ.
ನಿಮ್ಮ ರೇಟಿಂಗ್ ನಿಖರತೆ ಕಡಿಮೆಯಿದ್ದರೆ, ಗೊತ್ತಿಲ್ಲದಿದ್ದರೆ ಅಥವಾ ನೀವು ಹೆಚ್ಚಿನ ವೀಡಿಯೊಗಳಿಗೆ ರೇಟ್ ನೀಡಿರದಿದ್ದರೆ: ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಅಥವಾ ಹೆಚ್ಚಿನ ವೀಡಿಯೊಗಳಿಗೆ ರೇಟ್ ನೀಡುವುದು ಹೇಗೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮ್ಮ ನೀತಿ ತಜ್ಞರ ಪ್ರತಿಕ್ರಿಯೆಯನ್ನು ನೀವು ಪರಿಶೀಲಿಸಬೇಕಾಗಬಹುದು. ಒಮ್ಮೆ ನಿಮ್ಮ ರೇಟಿಂಗ್ ನಿಖರತೆಯು ಸುಧಾರಿಸಿದರೆ, ನಿಮ್ಮ ವೀಡಿಯೊಗಳಲ್ಲಿ ಯಾವ ಆ್ಯಡ್‌ಗಳನ್ನು ರನ್ ಮಾಡಬಹುದು ಎಂಬುದನ್ನು ನಿರ್ಧರಿಸುವುದಕ್ಕೆ ಸಹಾಯ ಮಾಡಲು ನಾವು ನಿಮ್ಮ ಇನ್‌ಪುಟ್ ಅನ್ನು ಹೆಚ್ಚಾಗಿ ಬಳಸುತ್ತೇವೆ.
ನಿಮ್ಮ ನಿಖರತೆಯ ರೇಟಿಂಗ್ ಕಾಲಾನಂತರದಲ್ಲಿ ಬದಲಾಗಬಹುದು.

ಪ್ರೋಗ್ರಾಂ FAQ ಗಳು

ಸ್ವಯಂ-ಪ್ರಮಾಣೀಕರಣಕ್ಕೆ ನಾನು ಹೇಗೆ ಆ್ಯಕ್ಸೆಸ್ ಪಡೆಯುವುದು?

ನೀವು ಸ್ವಯಂ-ಪ್ರಮಾಣೀಕರಣಕ್ಕೆ ಆ್ಯಕ್ಸೆಸ್ ಅನ್ನು ಹೊಂದಿರುವಾಗ, ನೀವು ಇದೀಗ ನಿಮ್ಮ ವೀಡಿಯೊಗಳಿಗೆ ರೇಟ್ ನೀಡಬಹುದು ಎಂಬುದನ್ನು ನಿಮಗೆ ತಿಳಿಸುವ ಸಂದೇಶವನ್ನು ನೀವು YouTube Studio ದಲ್ಲಿ ನೋಡುತ್ತೀರಿ. ಇದು ಸಾಮಾನ್ಯವಾಗಿ YouTube ಪಾಲುದಾರ ಕಾರ್ಯಕ್ರಮಕ್ಕೆ ಸೇರಿದ ಒಂದು ಅಥವಾ ಎರಡು ತಿಂಗಳ ನಂತರ ಸಂಭವಿಸುತ್ತದೆ. 

ನಾನು ನನ್ನ ವೀಡಿಯೊಗಳಿಗೆ ರೇಟ್ ನೀಡಲು ಪ್ರಾರಂಭಿಸಿದಾಗ, ನಾನು ಯಾವಾಗಲೂ ಮಾನಿಟೈಸ್ ಮಾಡುತ್ತೇನೆ ಎಂದರ್ಥವೇ?

ನಿಮ್ಮ ವೀಡಿಯೊ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸದಿದ್ದರೆ ಮತ್ತು ನೀವು ಆ್ಯಡ್‌ಗಳನ್ನು ಆನ್ ಮಾಡಲು ಪ್ರಯತ್ನಿಸಿದರೆ, ನೀತಿ ತಜ್ಞರು ಇನ್ನೂ ನಿಮ್ಮ ವೀಡಿಯೊವನ್ನು ಡಿಮಾನಿಟೈಸ್ ಮಾಡುತ್ತಾರೆ. ಉತ್ತಮ ವಿಚಾರವೆಂದರೆ, ನಿಮ್ಮ ವೀಡಿಯೊಗೆ ಸಂಬಂಧಿಸಿದಂತೆ ನೀವು ಸ್ಥಿರವಾಗಿ ನಿಖರವಾದ ಮಾನಿಟೈಸೇಶನ್ ನಿರ್ಧಾರಗಳನ್ನು ಮಾಡಿದರೆ, ಕಾಲಾನಂತರದಲ್ಲಿ ನೀವು ಕಡಿಮೆ ಹಳದಿ ಐಕಾನ್‌ಗಳನ್ನು ನೋಡಬಹುದು. ನಿಮ್ಮ ವೀಡಿಯೊಗಳಲ್ಲಿ ಯಾವ ಆ್ಯಡ್‌ಗಳನ್ನು ರನ್ ಮಾಡಬೇಕೆಂದು ಲೆಕ್ಕಾಚಾರ ಮಾಡಲು, ನಾವು ನಮ್ಮ ಸ್ವಯಂಚಾಲಿತ ಸಿಸ್ಟಂಗಳಲ್ಲಿ ನಿಮ್ಮ ರೇಟಿಂಗ್‌ಗಳನ್ನು ಬಳಸುತ್ತಿರುವುದು ಈ ಬದಲಾವಣೆಯ ಕಾರಣವಾಗಿದೆ.

ನಾನು ನನ್ನ ವೀಡಿಯೊವನ್ನು ಸಾರ್ವಜನಿಕಗೊಳಿಸುವ ಮೊದಲು ಅದರ ಮಾನಿಟೈಸೇಶನ್ ಅನ್ನು ನೋಡಲು ಯಾವುದಾದರೂ ಒಂದು ಮಾರ್ಗವಿದೆಯೇ?
ವೀಡಿಯೊವನ್ನು ಸಾರ್ವಜನಿಕಗೊಳಿಸುವ ಮೊದಲು ನೀವು ಮಾನಿಟೈಸೇಶನ್ ಸ್ಥಿತಿಯನ್ನು ಪರಿಶೀಲಿಸಲು ಬಯಸಿದರೆ, ಅಪ್‌ಲೋಡ್ ಪ್ರಕ್ರಿಯೆಯ ಸಮಯದಲ್ಲಿ ಆ್ಯಡ್‌ಗಾಗಿ ಸೂಕ್ತತೆಯ ಪರಿಶೀಲನೆಗಳು ಪೂರ್ಣಗೊಳ್ಳುವವರೆಗೆ ನೀವು ಕಾಯಬಹುದು.
ನನ್ನ ರೇಟಿಂಗ್‌ಗಳ ನಿಖರತೆಯನ್ನು ನಾನು ಹೇಗೆ ಸುಧಾರಿಸಬಹುದು?
ನಿಮ್ಮ ವೀಡಿಯೊಗೆ ನಿಖರವಾಗಿ ರೇಟ್ ನೀಡುವುದು ಹೇಗೆ ಎಂಬುದನ್ನು ನೀವು ಕಲಿಯಲು 3 ವಿಧಾನಗಳಿವೆ:

ಅಪ್‌ಲೋಡ್ ಮಾಡುವಾಗ ಪರಿಶೀಲನೆಗಳು ಪುಟವನ್ನು ಬಳಸಿ

ನಿಮ್ಮ ವೀಡಿಯೊವನ್ನು ಪ್ರಕಟಿಸುವ ಮೊದಲು ಆ್ಯಡ್ ಸೂಕ್ತತೆ ಮತ್ತು ಕೃತಿಸ್ವಾಮ್ಯ ಕ್ಲೈಮ್‌ಗಳಿಗಾಗಿ ಅದನ್ನು ಪ್ರದರ್ಶಿಸಲು ಅಪ್‌ಲೋಡ್ ಸಮಯದಲ್ಲಿ ನೀವು ಪರಿಶೀಲನೆಗಳು ಪುಟವನ್ನು ಬಳಸಬಹುದು.
ನಮ್ಮ ಮಾರ್ಗಸೂಚಿಗಳನ್ನು ಪರಿಶೀಲಿಸಿ
ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ವಿರುದ್ಧ ಸ್ವಯಂ-ರೇಟಿಂಗ್‌ನ ಕುರಿತಾದ ನಮ್ಮ ಮಾರ್ಗದರ್ಶಿಯನ್ನು ನೀವು ನೋಡಬಹುದು. ಎಲ್ಲಾ ಅಡ್ವರ್‌ಟೈಸರ್‌ಗಳಿಗೆ ಯಾವುದು ಸೂಕ್ತ ಮತ್ತು ಯಾವುದು ಸೂಕ್ತವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಮಾಹಿತಿಯ ಮೂಲವು ನಿಮಗೆ ಸಹಾಯ ಮಾಡುತ್ತದೆ. ಮಕ್ಕಳಿಗಾಗಿ ರಚಿಸಲಾದ ಕಂಟೆಂಟ್‌ಗೆ ನೀವು ಸ್ವಯಂ-ರೇಟಿಂಗ್ ಅನ್ನು ನೀಡುತ್ತಿದ್ದರೆ, ಮಕ್ಕಳು ಮತ್ತು ಕುಟುಂಬದ ಕಂಟೆಂಟ್‌ಗೆ ಸಂಬಂಧಿಸಿದ ನಮ್ಮ ಉತ್ತಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಮರೆಯದಿರಿ.
YouTube ವಿಮರ್ಶಕರ ಪ್ರತಿಕ್ರಿಯೆಯನ್ನು ಪಡೆಯಿರಿ
ನಿಮ್ಮ ವೀಡಿಯೊಗೆ ರೇಟಿಂಗ್ ನೀಡುವ ಕುರಿತು ನಿಮಗೆ ಇನ್ನೂ ಖಚಿತವಿಲ್ಲದಿದ್ದರೆ, ನೀವು ಹೀಗೆ ಮಾಡಬಹುದು:
  1. ನಿಮ್ಮ ವೀಡಿಯೊಗೆ ರೇಟಿಂಗ್ ನೀಡಿ.
  2. ಮಾನವ ವಿಮರ್ಶೆಗೆ ವಿನಂತಿಸಿ.
    • ನಿಮ್ಮ ವೀಡಿಯೊ ಆ್ಯಡ್‌ಗಳಿಗೆ ಸೂಕ್ತವಲ್ಲ ಎಂದು ನೀವು ರೇಟ್ ನೀಡಿದಾಗ ಮತ್ತು ಮಾನವ ವಿಮರ್ಶೆಗೆ ವಿನಂತಿಸಿದಾಗ, ನಾವು ಪರಿಶೀಲನೆಯ ಸಮಯವನ್ನು ತ್ವರಿತಗೊಳಿಸುತ್ತೇವೆ.
  3. ನಮ್ಮ ರೇಟರ್‌ಗಳು ನಂತರ ನಿಮ್ಮ ವೀಡಿಯೊವನ್ನು ಪರಿಶೀಲಿಸುತ್ತಾರೆ ಮತ್ತು ಅಂತಿಮ ಮಾನಿಟೈಸೇಶನ್ ನಿರ್ಧಾರವನ್ನು ನೀಡುತ್ತಾರೆ.
  4. ರೇಟರ್‌ನ ಪ್ರತಿಕ್ರಿಯೆಯನ್ನು ಪರಿಶೀಲಿಸಿ.
ನಾನು ತಪ್ಪು ಮಾಡಿದರೆ ಮತ್ತು ನನ್ನ ವೀಡಿಯೊಗಳಿಗೆ ತಪ್ಪಾಗಿ ರೇಟ್ ನೀಡಿದರೆ ಏನಾಗುತ್ತದೆ?

ಸರಿಯಾದ ಮಾನಿಟೈಸೇಶನ್ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮ ರೇಟಿಂಗ್‌ಗಳನ್ನು ಬಳಸಲು ನಾವು ಬಯಸುವುದರಿಂದ, ನಿಮ್ಮ ಕಂಟೆಂಟ್ ಅನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ರೇಟ್ ನೀಡುವುದು ಮುಖ್ಯ.

ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ಆಧಾರದ ಮೇಲೆ ನಾವು ಪುನರಾವರ್ತಿತ, ಅತಿರೇಕದ ತಪ್ಪುಗಳನ್ನು ನೋಡಿದರೆ, YouTube ಪಾಲುದಾರ ಕಾರ್ಯಕ್ರಮದಲ್ಲಿ ಸೇರ್ಪಡೆಗಾಗಿ ನಿಮ್ಮ ಚಾನಲ್ ಅನ್ನು ಪರಿಶೀಲಿಸಲಾಗುತ್ತದೆ.

ಟಿವಿಗೆ ಹೋಲಿಸಿದರೆ YouTube ನಲ್ಲಿ ಕಂಟೆಂಟ್ ಮಾರ್ಗಸೂಚಿಗಳು ಏಕೆ ವಿಭಿನ್ನವಾಗಿವೆ?
ಅಡ್ವರ್‌ಟೈಸರ್‌ಗಳು YouTube ವರ್ಸಸ್ TV ಗೆ ಸಂಬಂಧಿಸಿದಂತೆ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಟಿವಿಯಲ್ಲಿ, ಅಡ್ವರ್‌ಟೈಸರ್‌ಗಳು ಸಾಮಾನ್ಯವಾಗಿ ಕಂಟೆಂಟ್ ಅನ್ನು ಪ್ರಸಾರ ಮಾಡುವ ಮೊದಲು ಅದನ್ನು ಪರಿಶೀಲಿಸಲು ಅವಕಾಶವನ್ನು ಹೊಂದಿರುತ್ತಾರೆ ಮತ್ತು ಅದು ಅವರಿಗೆ ಸರಿಯಾಗಿದೆಯೇ ಎಂಬುದನ್ನು ನಿರ್ಧರಿಸುತ್ತಾರೆ. YouTube ನಲ್ಲಿ, ಅಡ್ವರ್‌ಟೈಸರ್‌ಗಳು ತಮ್ಮ ಆ್ಯಡ್‌ಗಳನ್ನು ಪ್ರದರ್ಶಿಸುವ ಪ್ರತಿಯೊಂದು ವೀಡಿಯೊವನ್ನು ಪರಿಶೀಲಿಸಲು ಸಾಧ್ಯವಿಲ್ಲ. ನಮ್ಮ ಅಡ್ವರ್‌ಟೈಸರ್ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು, ಅಡ್ವರ್‌ಟೈಸರ್‌ಗಳು ತಮ್ಮ ಬ್ರ್ಯಾಂಡ್ ಅನ್ನು ಸಂಯೋಜಿಸಲು ಯಾವುದು ಅನುಕೂಲಕರವಾಗಿರುತ್ತದೆ ಎಂಬುದನ್ನು ಪ್ರತಿಬಿಂಬಿಸುತ್ತವೆ. ಅಡ್ವರ್‌ಟೈಸರ್‌ಗಳು ತಮ್ಮ ವೈಯಕ್ತಿಕ ಆದ್ಯತೆಗಳನ್ನು ಬದಲಾಯಿಸಬಹುದಾದರೂ, ನಮ್ಮ ಮಾರ್ಗಸೂಚಿಗಳು ಪ್ರಪಂಚದಾದ್ಯಂತದ ಎಲ್ಲಾ ಅಡ್ವರ್‌ಟೈಸರ್‌ಗಳಿಗೆ ಯಾವುದು ಸೂಕ್ತ ಎಂಬುದನ್ನು ಪ್ರತಿನಿಧಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15331561751797585840
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false