YouTube ಗಾಗಿ ಕೀಬೋರ್ಡ್ ಶಾರ್ಟ್‌ಕಟ್‌ಗಳು

ಕೀಬೋರ್ಡ್ ಶಾರ್ಟ್‌ಕಟ್‌ಗಳ ಮೂಲಕ, YouTube ನ್ಯಾವಿಗೇಟ್ ಮಾಡುವ ಸಮಯವನ್ನು ಸೇವ್ ಮಾಡಿ.

ಕೀಬೋರ್ಡ್ ಶಾರ್ಟ್‌ಕಟ್‌ಗಳ ಪಟ್ಟಿಯನ್ನು ಆ್ಯಕ್ಸೆಸ್ ಮಾಡಲು, ನಿಮ್ಮ ಪ್ರೊಫೈಲ್ ಚಿತ್ರಕ್ಕೆ ಹೋಗಿ Profile ಮತ್ತು ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು Keyboard ಎಂಬುದನ್ನು ಆಯ್ಕೆಮಾಡಿ. ನಿಮ್ಮ ಕೀಬೋರ್ಡ್‌ನಲ್ಲಿ ನೀವು SHIFT+? ಅನ್ನು ಸಹ ನಮೂದಿಸಬಹುದು. ನೀವು ಕೆಲವು ಪ್ಲೇಯರ್ ಬಟನ್‌ಗಳ ಮೇಲೆ ಮೌಸ್ ಇರಿಸಿದಾಗ, ಸಂಬಂಧಿತ ಕೀಬೋರ್ಡ್ ಶಾರ್ಟ್‌ಕಟ್ ನಿಮಗೆ ಕಾಣಿಸುತ್ತದೆ. ಉದಾಹರಣೆಗೆ, ನೀವು ಪೂರ್ಣ ಸ್ಕ್ರೀನ್‌ನ ಐಕಾನ್ ಮೇಲೆ ಮೌಸ್ ಇರಿಸಿದಾಗ, ನಿಮಗೆ 'ಫುಲ್ ಸ್ಕ್ರೀನ್ (f)' ಕಾಣಿಸುತ್ತದೆ, ಇದು ನೀವು ಪೂರ್ಣ ಸ್ಕ್ರೀನ್ ಅನ್ನು ತೆರೆಯಲು f ಅನ್ನು ನಮೂದಿಸಬಹುದು ಎಂದು ಸೂಚಿಸುತ್ತದೆ.

ಕೀಬೋರ್ಡ್ ಶಾರ್ಟ್‌ಕಟ್‍ಗಳು | YouTube ಸಹಾಯದಿಂದ ವೃತ್ತಿಪರ ಸಲಹೆಗಳು

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಕೀಬೋರ್ಡ್ ಶಾರ್ಟ್‌ಕಟ್‌ಗಳು

ನೀವು ಹೊಸ ಕಂಪ್ಯೂಟರ್ ಅನುಭವವನ್ನು ಬಳಸುತ್ತಿದ್ದರೆ, ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಬಳಸುವ ಮೊದಲು ನೀವು ವೀಡಿಯೊ ಪ್ಲೇಯರ್ ಅನ್ನು ಕ್ಲಿಕ್ ಮಾಡಬೇಕು. ಕ್ಲಾಸಿಕ್ ಕಂಪ್ಯೂಟರ್ ಅನುಭವಕ್ಕೆ ಹಿಂತಿರುಗಲು, ಪ್ರೊಫೈಲ್ ಚಿತ್ರಕ್ಕೆ ಹೋಗಿ  ಮತ್ತು ಹಳೆಯ YouTube ಅನ್ನು ಮರುಸ್ಥಾಪಿಸಿ ಎಂಬುದನ್ನು ಕ್ಲಿಕ್ ಮಾಡಿ.
ಕೀಬೋರ್ಡ್ ಶಾರ್ಟ್‌ಕಟ್ ಫಂಕ್ಷನ್
ಸ್ಪೇಸ್‌ಬಾರ್ ಸೀಕ್ ಬಾರ್ ಅನ್ನು ಆಯ್ಕೆಮಾಡಿದಾಗ ಪ್ಲೇ ಮಾಡಿ/ವಿರಾಮಗೊಳಿಸಿ. ಬಟನ್ ಫೋಕಸ್ ಹೊಂದಿದ್ದರೆ, ಬಟನ್ ಅನ್ನು ಸಕ್ರಿಯಗೊಳಿಸಿ.
ಕೀಬೋರ್ಡ್‌ಗಳಲ್ಲಿ ಮಾಧ್ಯಮ ಪ್ಲೇ ಮಾಡಿ/ವಿರಾಮಗೊಳಿಸಿ ಕೀ ಪ್ಲೇ ಮಾಡಿ / ವಿರಾಮಗೊಳಿಸಿ.
k ಪ್ಲೇಯರ್‌ನಲ್ಲಿ ಪ್ಲೇ ಮಾಡಿ/ವಿರಾಮಗೊಳಿಸಿ.
m ವೀಡಿಯೊವನ್ನು ಮ್ಯೂಟ್ ಮಾಡಿ/ಅನ್‌ಮ್ಯೂಟ್ ಮಾಡಿ.
ಕೀಬೋರ್ಡ್‌ಗಳಲ್ಲಿ ಮಾಧ್ಯಮ ನಿಲ್ಲಿಸಿ ಕೀ ನಿಲ್ಲಿಸಿ.
ಕೀಬೋರ್ಡ್‌ಗಳಲ್ಲಿ ಮುಂದಿನ ಟ್ರ್ಯಾಕ್ ಮಾಧ್ಯಮ ಕೀ ಪ್ಲೇಪಟ್ಟಿಯಲ್ಲಿ ಮುಂದಿನ ಟ್ರ್ಯಾಕ್‌ಗೆ ಮೂವ್ ಆಗುತ್ತದೆ.
ಸೀಕ್ ಬಾರ್‌ನಲ್ಲಿನ ಎಡ/ಬಲ ಬಾಣದ ಗುರುತು 5 ಸೆಕೆಂಡ್‌ಗಳವರೆಗೆ ಬ್ಯಾಕ್‌ವರ್ಡ್/ಫಾರ್ವರ್ಡ್ ಸೀಕ್ ಮಾಡುತ್ತದೆ.
j ಪ್ಲೇಯರ್‌ನಲ್ಲಿ 10 ಸೆಕೆಂಡ್‌ಗಳವರೆಗೆ ಬ್ಯಾಕ್‌ವರ್ಡ್ ಸೀಕ್ ಮಾಡುತ್ತದೆ.
l ಪ್ಲೇಯರ್‌ನಲ್ಲಿ 10 ಸೆಕೆಂಡ್‌ಗಳವರೆಗೆ ಫಾರ್ವರ್ಡ್ ಸೀಕ್ ಮಾಡುತ್ತದೆ.
. ವೀಡಿಯೊವನ್ನು ವಿರಾಮಗೊಳಿಸಿದಾಗ, ಮುಂದಿನ ಫ್ರೇಮ್‌ಗೆ ತೆರಳಿ.
, ವೀಡಿಯೊವನ್ನು ವಿರಾಮಗೊಳಿಸಿದಾಗ, ಹಿಂದಿನ ಫ್ರೇಮ್‌ಗೆ ತೆರಳಿ.
> ವೀಡಿಯೊ ಪ್ಲೇಬ್ಯಾಕ್ ರೇಟ್ ಅನ್ನು ವೇಗಗೊಳಿಸಿ.
< ವೀಡಿಯೊ ಪ್ಲೇಬ್ಯಾಕ್ ರೇಟ್ ಅನ್ನು ನಿಧಾನಗೊಳಿಸಿ.
ಸೀಕ್ ಬಾರ್‌ನಲ್ಲಿನ ಆರಂಭ/ಮುಕ್ತಾಯ ವೀಡಿಯೊದ ಆರಂಭ/ಮುಕ್ತಾಯ ಸೆಕೆಂಡ್‌ಗಳನ್ನು ಸೀಕ್ ಮಾಡಿ.
ಸೀಕ್ ಬಾರ್‌ನಲ್ಲಿನ ಮೇಲೆ/ಕೆಳಗೆ ಬಾಣದ ಗುರುತು 5% ವಾಲ್ಯೂಮ್ ಅನ್ನು ಹೆಚ್ಚಿಸಿ/ಕಡಿಮೆಗೊಳಿಸಿ.
ಸಂಖ್ಯೆಗಳು 1 ರಿಂದ 9 ವೀಡಿಯೊದ 10% ರಿಂದ 90% ವರೆಗೆ ಸೀಕ್ ಮಾಡಿ.
ಸಂಖ್ಯೆ 0 ವೀಡಿಯೊದ ಆರಂಭಕ್ಕೆ ಸೀಕ್ ಮಾಡಿ.
/ ಹುಡುಕಾಟ ಬಾಕ್ಸ್‌ಗೆ ಹೋಗಿ.
f ಪೂರ್ಣ ಸ್ಕ್ರೀನ್ ಅನ್ನು ಸಕ್ರಿಯಗೊಳಿಸಿ. ಪೂರ್ಣ ಸ್ಕ್ರೀನ್ ಮೋಡ್ ಅನ್ನು ಸಕ್ರಿಯಗೊಳಿಸಿದರೆ, F ಅನ್ನು ಮತ್ತೆ ಸಕ್ರಿಯಗೊಳಿಸಿ ಅಥವಾ ಪೂರ್ಣ ಸ್ಕ್ರೀನ್ ಮೋಡ್‌ನಿಂದ ನಿರ್ಗಮಿಸಲು escape ಒತ್ತಿರಿ.
c ಉಪಶೀರ್ಷಿಕೆಗಳು ಮತ್ತು ಸಬ್‌ಟೈಟಲ್‌ಗಳು ಲಭ್ಯವಿದ್ದರೆ ಸಕ್ರಿಯಗೊಳಿಸಿ. ಶೀರ್ಷಿಕೆಗಳು ಮತ್ತು ಸಬ್‌ಟೈಟಲ್‌ಗಳನ್ನು ಮರೆಮಾಡಲು, C ಅನ್ನು ಮತ್ತೆ ಸಕ್ರಿಯಗೊಳಿಸಿ.
Shift+N ಮುಂದಿನ ವೀಡಿಯೊಗೆ ಮೂವ್ ಮಾಡಿ (ನೀವು ಪ್ಲೇಪಟ್ಟಿಯನ್ನು ಬಳಸುತ್ತಿದ್ದರೆ, ಪ್ಲೇಪಟ್ಟಿಯ ಮುಂದಿನ ವೀಡಿಯೊಗೆ ಹೋಗುತ್ತದೆ. ಪ್ಲೇಪಟ್ಟಿಯನ್ನು ಬಳಸದಿದ್ದರೆ, ಅದು ಮುಂದಿನ YouTube ಸಲಹೆಯಾಗಿ ನೀಡಲಾದ ವೀಡಿಯೊಗೆ ಮೂವ್ ಆಗುತ್ತದೆ).
Shift+P ಹಿಂದಿನ ವೀಡಿಯೊಗೆ ಮೂವ್ ಮಾಡಿ. ನೀವು ಪ್ಲೇಪಟ್ಟಿಯನ್ನು ಬಳಸುತ್ತಿರುವಾಗ ಮಾತ್ರ ಈ ಶಾರ್ಟ್‌ಕಟ್ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಿ.
i ಮಿನಿಪ್ಲೇಯರ್ ಅನ್ನು ತೆರೆಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10362415456208278760
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false