ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳಲ್ಲಿ ಸಂಪರ್ಕ ಮಾಹಿತಿ

ನಮ್ಮ ವೆಬ್‌ಫಾರ್ಮ್‌ನ ಮೂಲಕ ನೀವು ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದಾಗ ಕೆಲವೊಂದು ವೈಯಕ್ತಿಕ ಮಾಹಿತಿಯ ಅಗತ್ಯವಿರುತ್ತದೆ.

ನಿಮ್ಮ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ

  • ಕೃತಿಸ್ವಾಮ್ಯವನ್ನು ಉಲ್ಲಂಘಿಸಿದ್ದಕ್ಕಾಗಿ ವೀಡಿಯೊವನ್ನು ತೆಗೆದುಹಾಕಿದರೆ, YouTube ನಲ್ಲಿ ವೀಡಿಯೊದ ಜಾಗದಲ್ಲಿ ಕೃತಿಸ್ವಾಮ್ಯ ಮಾಲೀಕರ ಹೆಸರು ಗೋಚರಿಸುತ್ತದೆ.
  • ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಪೂರ್ಣಗೊಳಿಸುವುದಕ್ಕಾಗಿ ನಿಮ್ಮ ಕಾನೂನುಬದ್ಧವಾದ ಪೂರ್ಣ ಹೆಸರಿನ ಅಗತ್ಯವಿದೆ. ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲಾದ ವೀಡಿಯೊವನ್ನು ಅಪ್‌ಲೋಡ್ ಮಾಡಿದವರ ಜೊತೆಗೆ ಅದನ್ನು ಹಂಚಿಕೊಳ್ಳಬಹುದಾಗಿದೆ.
  • ನಿಮ್ಮ ತೆಗೆದುಹಾಕುವಿಕೆ ವಿನಂತಿಯಿಂದ ನಿಮ್ಮ ಪ್ರಾಥಮಿಕ ಇಮೇಲ್ ವಿಳಾಸವನ್ನು, ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕಲಾದ ವೀಡಿಯೊವನ್ನು ಅಪ್‌ಲೋಡ್ ಮಾಡಿದವರ ಜೊತೆಗೆ ಹಂಚಿಕೊಳ್ಳಬಹುದಾಗಿದೆ. ಅಪ್‌ಲೋಡ್ ಮಾಡಿದವರು, ತಮ್ಮ ಸಂಬಂಧಿತ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಲು ನಿಮ್ಮನ್ನು ಸಂಪರ್ಕಿಸಬಹುದು.
  • ಒಂದು ಮೊಕದ್ದಮೆಯ ಭಾಗವಾಗಿ ವಿನಂತಿಸದ ಹೊರತು, ನಿಮ್ಮ ಭೌತಿಕ ವಿಳಾಸ ಮತ್ತು ಫೋನ್ ಸಂಖ್ಯೆಯನ್ನು ಗೌಪ್ಯವಾಗಿಡಲಾಗುತ್ತದೆ. YouTube ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವ ಅಗತ್ಯವಿದ್ದರೆ, ಹಾಗೆ ಮಾಡುವ ಮೊದಲು ನಿಮಗೆ ಸೂಚಿಸುತ್ತೇವೆ.
  • ಕೃತಿಸ್ವಾಮ್ಯ ಉಲ್ಲಂಘನೆಗಾಗಿ ತೆಗೆದುಹಾಕಲಾದ ವೀಡಿಯೊದ ಅಪ್‌ಲೋಡ್ ಮಾಡುವವರ ಜೊತೆಗೆ ಆಪಾದಿಸಲಾದ ಉಲ್ಲಂಘನೆಯ ಕೆಲಸದ ವಿವರಣೆಯನ್ನು ಹಂಚಿಕೊಳ್ಳಲಾಗುತ್ತದೆ, ಇದರಿಂದ ಅವರು ತಮ್ಮ ವೀಡಿಯೊವನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. 

ತೆಗೆದುಹಾಕುವಿಕೆ ವಿನಂತಿಗಳ ಸಾರ್ವಜನಿಕ ದಾಖಲೆ

ಉಲ್ಲಂಘಿಸುತ್ತಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದವರು, ನಿಮ್ಮ ತೆಗೆದುಹಾಕುವಿಕೆ ವಿನಂತಿಯ ಪ್ರತಿಯನ್ನು ವಿನಂತಿಸಿಕೊಳ್ಳಬಹುದು. ಈ ಸಾರ್ವಜನಿಕ ದಾಖಲೆಯಲ್ಲಿ ತೋರಿಸುವ ಮಾಹಿತಿಯು ಇವುಗಳನ್ನು ಒಳಗೊಂಡಿದೆ:

  • ಹಕ್ಕುಸ್ವಾಮ್ಯದ ಮಾಲೀಕರ ಹೆಸರು
  • ಪ್ರಾಥಮಿಕ ಇಮೇಲ್ ವಿಳಾಸ
  • ಸೆಕೆಂಡರಿ ಇಮೇಲ್ ವಿಳಾಸ (ವೆಬ್‌ಫಾರ್ಮ್‌ನಲ್ಲಿ ಆಪ್ಷನ್‌ಗಳ ಫೀಲ್ಡ್)
  • ನಿಮ್ಮ ಕಾನೂನುಬದ್ಧವಾದ ಪೂರ್ಣ ಹೆಸರು
  • ಉಲ್ಲಂಘಿಸುತ್ತಿದೆ ಎಂದು ಆರೋಪಿಸಲಾಗಿರುವ ಕೃತಿಯ ಕುರಿತು ನಿಮ್ಮ ವಿವರಣೆ
  • ಹೆಚ್ಚಿನ ಮಾಹಿತಿಗಾಗಿ YouTube ನ ವಿನಂತಿಗಳಿಗೆ ನಿಮ್ಮ ಪ್ರತಿಕ್ರಿಯೆಗಳು ನಿಮ್ಮ ಆರಂಭಿಕ ತೆಗೆದುಹಾಕುವಿಕೆ ವಿನಂತಿಯು ಅಪೂರ್ಣವಾಗಿದ್ದರೆ ಅಥವಾ ಅಮಾನ್ಯವೆಂದು ಕಂಡುಬಂದರೆ, YouTube ಹೆಚ್ಚಿನ ಮಾಹಿತಿಯನ್ನು ವಿನಂತಿಸಿಕೊಳ್ಳುತ್ತದೆ.

ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳುವ ಕುರಿತು ಆತಂಕಗಳು

YouTube ನಲ್ಲಿ ಯಾರೋ ನಿಮಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಕುರಿತು ನಿಮಗೆ ಆತಂಕವಿದ್ದರೆ, ಕೃತಿಸ್ವಾಮ್ಯ ಉಲ್ಲಂಘನೆಯನ್ನು ವರದಿ ಮಾಡುವುದಕ್ಕೆ ಬದಲಾಗಿ ನೀವು ಕಿರುಕುಳ ಹಾಗೂ ಸೈಬರ್ ನಿಂದಿಸುವಿಕೆಯನ್ನು ವರದಿ ಮಾಡುವ ಕುರಿತು ಇನ್ನಷ್ಟು ತಿಳಿಯಲು ಬಯಸಬಹುದು.

ಕಿರುಕುಳ ಮತ್ತು ಕೃತಿಸ್ವಾಮ್ಯ ಉಲ್ಲಂಘನೆಯ ಕುರಿತಾದ ಆತಂಕಗಳು ಕೆಲವೊಮ್ಮೆ ಓವರ್‌ಲ್ಯಾಪ್ ಆಗುತ್ತವೆಯಾದರೂ, ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿ ಪ್ರಕ್ರಿಯೆಯು ಈ ಪ್ರಕರಣಗಳಲ್ಲಿ ಅತ್ಯುತ್ತಮ ಆಯ್ಕೆಯಲ್ಲದಿರಬಹುದು. ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸುವ ಮೊದಲು, ನ್ಯಾಯಯುತ ಬಳಕೆಯಂತಹ ಕೃತಿಸ್ವಾಮ್ಯ ವಿನಾಯಿತಿಗಳ ಕುರಿತು ನೀವು ಇನ್ನಷ್ಟು ತಿಳಿಯಲು ಬಯಸಬಹುದು.

ನೆನಪಿಡಿ, ಅಧಿಕೃತ ಪ್ರತಿನಿಧಿಯೊಬ್ಬರು (ಅಟಾರ್ನಿಯ ಹಾಗೆ) ಕೃತಿಸ್ವಾಮ್ಯ ಮಾಲೀಕರ ಪರವಾಗಿ ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು. ವಿನಂತಿಯನ್ನು ಸಲ್ಲಿಸುವುದಕ್ಕಾಗಿ ಅಧಿಕೃತ ಪ್ರತಿನಿಧಿಯು ತಮ್ಮದೇ ಆದ YouTube ಖಾತೆಯನ್ನು ಬಳಸಬೇಕು. ಜೊತೆಗೆ, ತೆಗೆದುಹಾಕುವಿಕೆ ವಿನಂತಿಯಲ್ಲಿ, ಕೃತಿಸ್ವಾಮ್ಯ ಮಾಲೀಕರೊಂದಿಗಿನ ತಮ್ಮ ಸಂಬಂಧವನ್ನು ಅವರು ನಿರ್ದಿಷ್ಟಪಡಿಸಬೇಕಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12045651686938371073
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false