ನಿಮ್ಮ ಅನನ್ಯ ವೀಕ್ಷಕರ ಡೇಟಾವನ್ನು ಅರ್ಥಮಾಡಿಕೊಳ್ಳಿ

ನಿಮ್ಮ ಪ್ರೇಕ್ಷಕರ ಪ್ರಮಾಣ, ಅಥವಾ ನಿರ್ದಿಷ್ಟ ಸಮಯಾವಧಿಯಲ್ಲಿ ನಿಮ್ಮ ವೀಡಿಯೊವನ್ನು ವೀಕ್ಷಿಸಲು ಆಗಮಿಸಿದ ವೀಕ್ಷಕರ ಅಂದಾಜು ಸಂಖ್ಯೆಯ ಸ್ಪಷ್ಟ ಚಿತ್ರಣವನ್ನು ಪಡೆಯಲು, ನೀವು ಅನನ್ಯ ವೀಕ್ಷಕರ ಡೇಟಾವನ್ನು ಬಳಸಬಹುದು. ಅವರು ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್‌ನಲ್ಲಿ ವೀಕ್ಷಿಸಲಿ ಅಥವಾ ಒಂದಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಿ, ಆ ವೀಕ್ಷಣೆಯನ್ನು ಒಬ್ಬ ಅನನ್ಯ ಪ್ರೇಕ್ಷಕರು ಎಂದು ಲೆಕ್ಕ ಹಾಕಲಾಗುತ್ತದೆ.

ಗಮನಿಸಿ, ಈ ಮೆಟ್ರಿಕ್‌ಗಳು ನಿಮ್ಮ ಪ್ರೇಕ್ಷಕರು ಹಾಗೂ ರೀಚ್‌ನ ಸಾಮಾನ್ಯ ಅಂದಾಜನ್ನು ಒದಗಿಸುವ ಉದ್ದೇಶ ಹೊಂದಿವೆ. ನಿಮ್ಮ ಪರ್ಫಾರ್ಮೆನ್ಸ್ ಅವಲೋಕನವನ್ನು ಪಡೆಯಲು ನಿಮ್ಮ ಇತರ ಚಾನಲ್ ಹಾಗೂ ವೀಡಿಯೊ ಮೆಟ್ರಿಕ್‌ಗಳನ್ನು ನೀವು ಪರಿಶೀಲಿಸಬಹುದು.

ಒಬ್ಬ ವೀಕ್ಷಕರು ವಿವಿಧ ಸಾಧನಗಳಲ್ಲಿ ಕಂಟೆಂಟ್ ಅನ್ನು ವೀಕ್ಷಿಸಬಹುದಾದಂತಹ ಅಥವಾ ಅನೇಕ ವೀಕ್ಷಕರು ಒಂದೇ ಸಾಧನವನ್ನು ಹಂಚಿಕೊಳ್ಳುವಂತಹ ಪ್ರಕರಣಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವ ಮೂಲಕ ಈ ಡೇಟಾವು ವೀಡಿಯೊದ ಒಟ್ಟು ವ್ಯಾಪ್ತಿಯನ್ನು ಲೆಕ್ಕಾಚಾರ ಮಾಡುತ್ತದೆ. ಸಿಸ್ಟಂ, ಸಾಧನಗಳಿಂದ ಡೇಟಾವನ್ನು ಒಳಗೊಂಡಿರುತ್ತದೆ ಮತ್ತು ವೀಕ್ಷಕರ ಸಂಖ್ಯೆಯನ್ನು ಅಂದಾಜಿಸುವುದಕ್ಕಾಗಿ ಸೈನ್ ಇನ್ ಮಾಡಿದ ಮತ್ತು ಸೈನ್ ಔಟ್ ಮಾಡಿದ ಟ್ರಾಫಿಕ್ ಅನ್ನು ಸಹ ಒಳಗೊಂಡಿರುತ್ತದೆ.

ಡೇಟಾ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, 90 ದಿನಗಳವರೆಗಿನ ಸಮಯಾವಧಿಗಳಿಗಾಗಿ ಅನನ್ಯ ವೀಕ್ಷಕರ ಒಟ್ಟು ಸಂಖ್ಯೆಯು ಲಭ್ಯವಿದೆ. ಕಾಲ ಕಳೆದಂತೆ ಬದಲಾವಣೆಗಳನ್ನು ನೋಡುವುದಕ್ಕಾಗಿ ನೀವು 90-ದಿನದ ವಿವಿಧ ಸಮಯಾವಧಿಗಳನ್ನು ಹೋಲಿಸಬಹುದು. ಅನನ್ಯ ವೀಕ್ಷಕರಿಗಾಗಿ ಡೇಟಾ, 1 ಆಗಸ್ಟ್ 2017 ರಿಂದ ಲಭ್ಯವಿದೆ.

ನಿಮ್ಮ ಅನನ್ಯ ವೀಕ್ಷಕರ ಡೇಟಾವನ್ನು ಕಂಡುಕೊಳ್ಳಿ

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, Analytics ಎಂಬುದನ್ನು ಆಯ್ಕೆಮಾಡಿ.
  3. ನಿಮ್ಮ ಅನನ್ಯ ವೀಕ್ಷಕರನ್ನು ನೋಡಲು, ಪ್ರೇಕ್ಷಕರು ಟ್ಯಾಬ್ ಅನ್ನು ಕ್ಲಿಕ್ ಮಾಡಿ.

 ಅನನ್ಯ ವೀಕ್ಷಕರ ಕುರಿತು FAQ

ಈ ಡೇಟಾವನ್ನು ನಾನು ಹೇಗೆ ಬಳಸಬಹುದು?
"ಅನನ್ಯ ವೀಕ್ಷಕರ" ಕುರಿತಾದ ಡೇಟಾವನ್ನು ನೀವು ಬಳಸಬಹುದಾದ ಕೆಲವು ವಿಧಾನಗಳು ಹೀಗಿವೆ:
  • ಇನ್ನಷ್ಟು ನೋಡಿ ಟ್ಯಾಬ್‌ನಲ್ಲಿ “ಪ್ರತಿ ವೀಕ್ಷಕರಿಗಾಗಿ ಸರಾಸರಿ ವೀಕ್ಷಣೆಗಳು” ಮೆಟ್ರಿಕ್ ಅನ್ನು ನೋಡುವ ಮೂಲಕ ನಿಮ್ಮ ಚಾನಲ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದ ಅನನ್ಯ ವೀಕ್ಷಕರ ಸರಾಸರಿ ಸಂಖ್ಯೆಯನ್ನು ನೀವು ಪರಿಶೀಲಿಸಬಹುದು.
  • ನಿಮ್ಮ ಪ್ರೇಕ್ಷಕರ ಪ್ರಮಾಣವನ್ನು ನಿಮ್ಮ ಸಬ್‌ಸ್ಕ್ರೈಬರ್ ಬಳಗಕ್ಕೆ ಹೋಲಿಸಿ ಮತ್ತು ನಿಮ್ಮ ಸಬ್‌ಸ್ಕ್ರೈಬರ್‌ಗಳನ್ನೂ ಮೀರಿ ವ್ಯಾಪಕ ಪ್ರೇಕ್ಷಕರನ್ನು ತಲುಪಲು ನಿಮಗೆ ಸಹಾಯ ಮಾಡಿದ ವೀಡಿಯೊಗಳನ್ನು ಗುರುತಿಸಿ.
  • ವೀಡಿಯೊವನ್ನು ಪ್ರಕಟಿಸುವ ಮೊದಲು ಮತ್ತು ನಂತರ ನಿಮ್ಮ ಚಾನಲ್‌ನ ಅನನ್ಯ ವೀಕ್ಷಕರನ್ನು ಹೋಲಿಸುವ ಮೂಲಕ ನಿಮ್ಮ ವೀಡಿಯೊ ಹೊಸ ಪ್ರೇಕ್ಷಕರ ಗಮನ ಸೆಳೆದ ಪ್ರಕರಣಗಳನ್ನು ಗುರುತಿಸಿ.
  • ನಿಮ್ಮ ಕಂಟೆಂಟ್ ಕಾರ್ಯತಂತ್ರವನ್ನು ನಿರ್ದೇಶಿಸಲು ಈ ಮಾಹಿತಿಯನ್ನು ನೀವು ಬಳಸಬಹುದು.
ಅನನ್ಯ ಪ್ರೇಕ್ಷಕರ ಸಂಖ್ಯೆಯು, ನನ್ನ ವೀಡಿಯೊಗಳ ವೀಕ್ಷಕರ ಸಂಖ್ಯೆಯನ್ನು ಕೂಡಿಸಿದಾಗ ಕಂಡುಬರುವ ಸಂಖ್ಯೆಗಿಂತ ಏಕೆ ಕಡಿಮೆಯಾಗಿದೆ?
ಒಬ್ಬ ವೀಕ್ಷಕರು ನಿಮ್ಮ ಚಾನಲ್‌ನಲ್ಲಿ ಒಂದಕ್ಕಿಂತ ಹೆಚ್ಚು ವೀಡಿಯೊವನ್ನು ವೀಕ್ಷಿಸಿದರೆ, ಪ್ರತಿಯೊಂದು ವೀಡಿಯೊಗಾಗಿ ಅದನ್ನು ಅನನ್ಯ ವೀಕ್ಷಕರೆಂದು ತೋರಿಸಲಾಗುತ್ತದೆ. ಆದರೆ, ಆ ವೀಕ್ಷಣೆಗಳನ್ನು ನಿಮ್ಮ ಚಾನಲ್‌ಗಾಗಿ ಒಂದು ಅನನ್ಯ ವೀಕ್ಷಕರು ಎಂಬುದಾಗಿ ಸಂಯೋಜಿಸಲಾಗುತ್ತದೆ.
ನನ್ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಗಿಂತ ಕಡಿಮೆ ಅನನ್ಯ ವೀಕ್ಷಕರನ್ನು ನಾನು ಏಕೆ ಹೊಂದಿದ್ದೇನೆ?
ನಿಮ್ಮ ಪ್ರೇಕ್ಷಕರ ಪ್ರಮಾಣವನ್ನು ಅಂದಾಜಿಸಲು ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯು ಅತ್ಯಂತ ನಿಖರವಾದ ವಿಧಾನವಲ್ಲ. ಸರಾಸರಿಯಾಗಿ ವೀಕ್ಷಕರು, ಡಜನ್‌ಗಟ್ಟಲೆ ಚಾನಲ್‌ಗಳಿಗೆ ಸಬ್‌ಸ್ಕ್ರೈಬ್ ಮಾಡಿರುತ್ತಾರೆ ಮತ್ತು ಅವರು ಸಬ್‌ಸ್ಕ್ರೈಬ್ ಮಾಡಿದ ಪ್ರತಿ ಚಾನಲ್‌ನ ಪ್ರತಿಯೊಂದು ಹೊಸ ಅಪ್‌ಲೋಡ್ ಅನ್ನು ವೀಕ್ಷಿಸಲು ಮರಳಿ ಬರದಿರಬಹುದು.
ಸಬ್‌ಸ್ಕ್ರೈಬರ್‌ಗಳಿಗಿಂತ ಕಡಿಮೆ ಸಂಖ್ಯೆಯ ಅನನ್ಯ ವೀಕ್ಷಕರನ್ನು ನೀವು ಹೊಂದಿದ್ದರೆ, ನಿಮ್ಮ ಸಬ್‌ಸ್ಕ್ರೈಬರ್‌ಗಳು ಚಾನಲ್ ನೋಟಿಫಿಕೇಶನ್‌ಗಳನ್ನು ಆನ್ ಮಾಡಿಲ್ಲದಿರಬಹುದು ಅಥವಾ ನಿಮ್ಮ ಹೊಚ್ಚಹೊಸ ಅಪ್‌ಡೇಟ್‌ಗಳನ್ನು ತಕ್ಷಣ ವೀಕ್ಷಿಸದಿರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16500174685527040051
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false