YouTube Priority Flagger ಪ್ರೋಗ್ರಾಂ ಕುರಿತು

YouTube Priority Flagger ಪ್ರೋಗ್ರಾಂ, ಸರ್ಕಾರಿ ಏಜೆನ್ಸಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ (NGO ಗಳು) ಸದೃಢ ಟೂಲ್‌ಗಳನ್ನು ಒದಗಿಸಲು ಸಹಾಯ ಮಾಡುತ್ತದೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್‌ನ ಕುರಿತು YouTube ಗೆ ತಿಳಿಸಲು ಈ ಏಜೆನ್ಸಿಗಳು ಮತ್ತು NGO ಗಳು ವಿಶೇಷವಾಗಿ ಪರಿಣಾಮಕಾರಿಯಾಗಿವೆ.

YouTube Priority Flagger ಪ್ರೋಗ್ರಾಂ ಇವುಗಳನ್ನು ಒಳಗೊಂಡಿದೆ:

  • YouTube ಅನ್ನು ನೇರವಾಗಿ ಸಂಪರ್ಕಿಸಲು ಸರ್ಕಾರಿ ಏಜೆನ್ಸಿಗಳು ಮತ್ತು NGO ಗಳು ಬಳಸಬಹುದಾದ ವೆಬ್ ಫಾರ್ಮ್
  • ವರದಿ ಮಾಡಲಾದ ಕಂಟೆಂಟ್‌ಗೆ ಸಂಬಂಧಿಸಿದ ನಿರ್ಧಾರಗಳನ್ನು ನೋಡುವ ಸೌಲಭ್ಯ
  • ಹೆಚ್ಚಿದ ಕ್ರಿಯಾಶೀಲತೆಗಾಗಿ ಆದ್ಯತೆಯ ಫ್ಲ್ಯಾಗ್ ಪರಿಶೀಲನೆಗಳು
  • YouTube ಕಂಟೆಂಟ್ ಪ್ರದೇಶಗಳ ಕುರಿತು ಚಾಲ್ತಿಯಲ್ಲಿರುವ ಚರ್ಚೆ ಮತ್ತು ಫೀಡ್‌ಬ್ಯಾಕ್
  • ಸಾಂದರ್ಭಿಕ ಆನ್‌ಲೈನ್ ತರಬೇತಿಗಳು

ಪ್ರೋಗ್ರಾಂ ಅರ್ಹತೆ

ಸರ್ಕಾರಿ ಏಜೆನ್ಸಿಗಳು ಮತ್ತು NGO ಗಳು YouTube Priority Flagger ಪ್ರೋಗ್ರಾಂನಲ್ಲಿ ಭಾಗವಹಿಸಲು ಅರ್ಹವಾಗಿವೆ. ಆದರ್ಶ ಅಭ್ಯರ್ಥಿಗಳು:

  • ಕನಿಷ್ಠ ಒಂದು ನೀತಿ ವರ್ಟಿಕಲ್‌ನಲ್ಲಿ ಗುರುತಿಸಲಾದ ಪರಿಣತಿಯನ್ನು ಹೊಂದಿರುತ್ತಾರೆ
  • ಹೆಚ್ಚಿನ ನಿಖರತೆಯ ದರದೊಂದಿಗೆ ಕಂಟೆಂಟ್ ಅನ್ನು ಆಗಾಗ್ಗೆ ಫ್ಲ್ಯಾಗ್ ಮಾಡುತ್ತಾರೆ
  • ಕಂಟೆಂಟ್ ಪ್ರದೇಶಗಳ ಕುರಿತು YouTube ನೊಂದಿಗೆ ನಡೆಯುತ್ತಿರುವ ಚರ್ಚೆ ಮತ್ತು ಫೀಡ್‌ಬ್ಯಾಕ್‌ಗೆ ಮುಕ್ತವಾಗಿರುತ್ತಾರೆ

ಮಾನವ ಹಕ್ಕುಗಳ ಮೇಲಿನ ದೌರ್ಜನ್ಯಗಳು ಅಥವಾ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಇತಿಹಾಸವಿರುವ ದೇಶಗಳು/ಪ್ರದೇಶಗಳ ಸಂಸ್ಥೆಗಳು ಸೇರಿದಂತೆ ಕೆಲವು ಸಂಸ್ಥೆಗಳು ಹೆಚ್ಚಿನ ಪರಿಶೀಲನೆಗೆ ಒಳಪಡಬಹುದು.

YouTube Priority Flagger ಪ್ರೋಗ್ರಾಂಗೆ ಸೇರುವುದು ಹೇಗೆ

ನೀವು NGO ಅಥವಾ ಸರ್ಕಾರಿ ಏಜೆನ್ಸಿಯನ್ನು ಪ್ರತಿನಿಧಿಸುತ್ತಿದ್ದರೆ, YouTube ಅಥವಾ Google ನಲ್ಲಿನ ನಿಮ್ಮ ಸ್ಥಳೀಯ ನಿಯೋಜಿತ ವ್ಯಕ್ತಿಯನ್ನು ಸಂಪರ್ಕಿಸಿ.

ಸಲಹೆ: Priority Flagger ಆಗುವ ಮೊದಲು, ಸರ್ಕಾರಗಳು ಮತ್ತು NGO ಗಳಿಂದ ಭಾಗವಹಿಸುವವರು ನಮ್ಮ ಸಮುದಾಯ ಮಾರ್ಗಸೂಚಿಗಳು ಮತ್ತು ಜಾರಿಗೊಳಿಸುವಿಕೆ ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು YouTube ತರಬೇತಿಗೆ ಹಾಜರಾಗಬೇಕು.

ಪ್ರೋಗ್ರಾಂ ಅಗತ್ಯತೆಗಳು

Priority Flagger ಪ್ರೋಗ್ರಾಂ, ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದಕ್ಕೆ ಸಹಾಯ ಮಾಡಲು ಅಸ್ತಿತ್ವದಲ್ಲಿದೆ. ಭಾಗವಹಿಸುವವರು ಇವುಗಳನ್ನು ಮಾಡಬೇಕು:

  • ನಮ್ಮ ಮಾರ್ಗಸೂಚಿಗಳನ್ನು ಉಲ್ಲಂಘಿಸಬಹುದಾದ ಕಂಟೆಂಟ್ ಅನ್ನು ನಿಯಮಿತವಾಗಿ ವರದಿ ಮಾಡಲು ಬದ್ಧರಾಗಿರಬೇಕು. ಪ್ರೋಗ್ರಾಂನಲ್ಲಿ ಗಣನೀಯವಾಗಿ ಭಾಗವಹಿಸದ ಯಾವುದೇ ಭಾಗವಹಿಸುವವರನ್ನು ತೆಗೆದುಹಾಕುವ ಹಕ್ಕನ್ನು YouTube ಕಾಯ್ದಿರಿಸಿಕೊಂಡಿದೆ.
  • ವಿವಿಧ YouTube ಕಂಟೆಂಟ್ ಪ್ರದೇಶಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಫೀಡ್‌ಬ್ಯಾಕ್‌ಗೆ ಮುಕ್ತರಾಗಿರಬೇಕು.
  • Priority Flagger ಪ್ರೋಗ್ರಾಂನ ಭಾಗವಾಗಿ ಕಂಟೆಂಟ್ ಅನ್ನು ಫ್ಲ್ಯಾಗ್ ಮಾಡಲು YouTube ಗೆ ಸೈನ್ ಇನ್ ಮಾಡಬೇಕು.
  • ತಮ್ಮ ಇಮೇಲ್ ಅನ್ನು ಅಥವಾ Priority Flagger ಪ್ರೋಗ್ರಾಂಗೆ ಸಂಬಂಧಿಸಿದಂತೆ ಅವರ ಸಂಸ್ಥೆಯಲ್ಲಿರುವ ಕನಿಷ್ಠ ಒಬ್ಬ ನಿರಂತರ ನಿಯೋಜಿತ ವ್ಯಕ್ತಿಯ ಇಮೇಲ್ ಅನ್ನು ನೀಡಬೇಕು. ಈ ಇಮೇಲ್ ವಿಳಾಸಕ್ಕೆ ನಾವು Priority Flagger ಪ್ರೋಗ್ರಾಂ ಕುರಿತು ಕಾಲಕಾಲಕ್ಕೆ ಇಮೇಲ್‌ಗಳನ್ನು ಕಳುಹಿಸುತ್ತೇವೆ.

Priority Flagger ಪ್ರೋಗ್ರಾಂನಲ್ಲಿ ಭಾಗವಹಿಸುವ ಎಲ್ಲರೂ ಬಹಿರಂಗಪಡಿಸದಿರುವಿಕೆಯ ಒಪ್ಪಂದಕ್ಕೆ (NDA) ಒಳಪಟ್ಟಿರುತ್ತಾರೆ.

ಪ್ರೋಗ್ರಾಂನಲ್ಲಿ ಭಾಗವಹಿಸುವಿಕೆಯನ್ನು ನಿರಾಕರಿಸುವ, ಪ್ರೋಗ್ರಾಂ ಅವಶ್ಯಕತೆಗಳನ್ನು ಮಾರ್ಪಡಿಸುವ ಅಥವಾ ನಮ್ಮ ಸ್ವಂತ ವಿವೇಚನೆಯಿಂದ ಪ್ರೋಗ್ರಾಂ ಅನ್ನು ಅಮಾನತುಗೊಳಿಸುವ ಹಕ್ಕನ್ನು YouTube ಕಾಯ್ದಿರಿಸಿದೆ.

ಫ್ಲ್ಯಾಗ್ ಪರಿಶೀಲನೆ ಪ್ರಕ್ರಿಯೆ

YouTube ಕಂಟೆಂಟ್ ಮಾಡರೇಟರ್‌ಗಳು, Priority Flagger ಗಳು ಫ್ಲ್ಯಾಗ್ ಮಾಡಿದ ವೀಡಿಯೊಗಳನ್ನು YouTube ನ ಸಮುದಾಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರಿಶೀಲಿಸುತ್ತಾರೆ. Priority Flagger ಗಳು ವರದಿ ಮಾಡಿದ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ತೆಗೆದುಹಾಕಲಾಗುವುದಿಲ್ಲ ಅಥವಾ ಯಾವುದೇ ವಿಭಿನ್ನ ನೀತಿ ನಿರ್ವಹಣೆಗೆ ಒಳಪಟ್ಟಿರುವುದಿಲ್ಲ — ಇತರ ಬಳಕೆದಾರರಿಂದ ಸ್ವೀಕರಿಸಿದ ಫ್ಲ್ಯಾಗ್‌ಗಳಿಗೆ ಒಂದೇ ಮಾನದಂಡಗಳು ಅನ್ವಯಿಸುತ್ತವೆ. ಆದರೆ, ಅವರ ಹೆಚ್ಚಿನ ನಿಖರತೆಯ ಕಾರಣದಿಂದಾಗಿ, ನಮ್ಮ ತಂಡಗಳು ಪರಿಶೀಲನೆಗಾಗಿ Priority Flagger ಗಳಿಂದ ಬಂದಿರುವ ಫ್ಲ್ಯಾಗ್‌ಗಳಿಗೆ ಆದ್ಯತೆ ನೀಡುತ್ತವೆ.

Priority Flagger ಪ್ರೋಗ್ರಾಂ, ಸಂಭವನೀಯ ಸಮುದಾಯ ಮಾರ್ಗಸೂಚಿ ಉಲ್ಲಂಘನೆಗಳ ಕುರಿತು ವರದಿ ಮಾಡುವುದಕ್ಕಾಗಿ ವಿಶೇಷವಾಗಿ ಅಸ್ತಿತ್ವದಲ್ಲಿದೆ. ಇದು ಸ್ಥಳೀಯ ಕಾನೂನನ್ನು ಉಲ್ಲಂಘಿಸಬಹುದಾದ ಕಂಟೆಂಟ್ ಅನ್ನು ವರದಿ ಮಾಡುವ ಪ್ರಕ್ರಿಯೆಯಲ್ಲ. ಇಲ್ಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ಸ್ಥಳೀಯ ಕಾನೂನಿನ ಆಧಾರದ ಮೇಲೆ ವಿನಂತಿಗಳನ್ನು ಸಲ್ಲಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3796878303230321248
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false