ನಿಮ್ಮ Premium ಸದಸ್ಯತ್ವವನ್ನು ಅಪ್‌ಡೇಟ್ ಮಾಡಿ

ನೀವು YouTube Premium ಅಥವಾ YouTube Music Premium ಸದಸ್ಯರಾದಾಗ, ನೀವು ರದ್ದುಗೊಳಿಸುವವರೆಗೆ ಪ್ರತಿ ಹೊಸ ಬಿಲ್ಲಿಂಗ್ ಸೈಕಲ್‌ನ ಪ್ರಾರಂಭದಲ್ಲಿ ಸದಸ್ಯತ್ವದ ಬೆಲೆಯನ್ನು ಸ್ವಯಂಚಾಲಿತವಾಗಿ ನಿಮಗೆ ವಿಧಿಸಲಾಗುತ್ತದೆ.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ಹೇಗೆ ಅಪ್‌ಡೇಟ್ ಮಾಡುವುದು ಎಂಬುದರ ಕುರಿತು ಕೆಳಗೆ ಇನ್ನಷ್ಟು ತಿಳಿಯಿರಿ.

YouTube Premium

ಪಾವತಿ ಮತ್ತು ಸದಸ್ಯತ್ವದ ಆದ್ಯತೆಗಳನ್ನು ಅಪ್‌ಡೇಟ್ ಮಾಡಿ

  1. https://www.youtube.com/paid_memberships  ಗೆ ಹೋಗಿ.
  2. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮ್ಮ ಪಾವತಿ ಅಥವಾ ಸದಸ್ಯತ್ವದ ಆದ್ಯತೆಗಳನ್ನು ಅಪ್‌ಡೇಟ್ ಮಾಡಿ.

ನೀವು YouTube iOS ಆ್ಯಪ್ ಮೂಲಕ ಸೇರಿಕೊಂಡಿದ್ದರೆ: iTunes ನಲ್ಲಿ ನಿಮ್ಮ ಪಾವತಿ ಮತ್ತು ಸಬ್‌ಸ್ಕ್ರಿಪ್ಶನ್ ಆಯ್ಕೆಗಳನ್ನು ನೀವು ಅಪ್‌ಡೇಟ್ ಮಾಡಬಹುದು.

ಭಾರತದಲ್ಲಿನ ಮರುಕಳಿಸುವ ಶುಲ್ಕಗಳು

ಭಾರತೀಯ ರಿಸರ್ವ್ ಬ್ಯಾಂಕ್‌ನ ಇ-ಮ್ಯಾಂಡೇಟ್ ಅಗತ್ಯತೆಗಳ ಕಾರಣದಿಂದಾಗಿ, ನಿಮ್ಮ ಮರುಕಳಿಸುವ ಸದಸ್ಯತ್ವಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಪಾವತಿ ವಿವರಗಳನ್ನು ನೀವು ದೃಢೀಕರಿಸಬೇಕಾಗುತ್ತದೆ ಅಥವಾ ಮರು-ನಮೂದಿಸಬೇಕಾಗುತ್ತದೆ. ಹಾಗೆ ಮಾಡಲು, YouTube ಆ್ಯಪ್‌ನಲ್ಲಿ ಅಥವಾ youtube.com ನಲ್ಲಿ ಸೂಚನೆಗಳನ್ನು ಅನುಸರಿಸಿ. ಗಮನಿಸಿ, ಈ ಸಮಯದಲ್ಲಿ ನಿಮ್ಮ ಬ್ಯಾಂಕ್ ಮರುಕಳಿಸುವ ಪಾವತಿಯನ್ನು ಬೆಂಬಲಿಸದಿರಬಹುದು. ಮರುಕಳಿಸುವ ಪಾವತಿಗಳನ್ನು ಬೆಂಬಲಿಸುವ ಬ್ಯಾಂಕ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅಥವಾ ಇನ್ನಷ್ಟು ತಿಳಿಯಿರಿ.

YouTube ಕುಟುಂಬ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಿ

YouTube ಕುಟುಂಬ ಪ್ಲಾನ್‌ಗೆ ನಿಮ್ಮ ವೈಯಕ್ತಿಕ YouTube Premium ಸದಸ್ಯತ್ವವನ್ನು ಅಪ್‌ಡೇಟ್ ಮಾಡುವುದು ಹೇಗೆಂದು ತಿಳಿಯಿರಿ.

ಕುಟುಂಬ ಪ್ಲಾನ್‌ನಿಂದ ವೈಯಕ್ತಿಕ ಸದಸ್ಯತ್ವಕ್ಕೆ ಬದಲಿಸಿ

YouTube Music Premium

ಪಾವತಿ ಮತ್ತು ಸದಸ್ಯತ್ವದ ಆದ್ಯತೆಗಳನ್ನು ಅಪ್‌ಡೇಟ್ ಮಾಡಿ

  1. https://music.youtube.com/paid_memberships ಗೆ ಹೋಗಿ.
  2. ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. ನಿಮ್ಮ ಪಾವತಿ ಅಥವಾ ಸದಸ್ಯತ್ವದ ಆದ್ಯತೆಗಳನ್ನು ಅಪ್‌ಡೇಟ್ ಮಾಡಿ.

ಭಾರತದಲ್ಲಿನ ಮರುಕಳಿಸುವ ಶುಲ್ಕಗಳು

ಭಾರತೀಯ ರಿಸರ್ವ್ ಬ್ಯಾಂಕ್‌ನ ಇ-ಮ್ಯಾಂಡೇಟ್ ಅಗತ್ಯತೆಗಳ ಕಾರಣದಿಂದಾಗಿ, ನಿಮ್ಮ ಮರುಕಳಿಸುವ ಸದಸ್ಯತ್ವಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಪಾವತಿ ವಿವರಗಳನ್ನು ನೀವು ದೃಢೀಕರಿಸಬೇಕಾಗುತ್ತದೆ ಅಥವಾ ಮರು-ನಮೂದಿಸಬೇಕಾಗುತ್ತದೆ. ಹಾಗೆ ಮಾಡಲು, YouTube ಆ್ಯಪ್‌ನಲ್ಲಿ ಅಥವಾ youtube.com ನಲ್ಲಿ ಸೂಚನೆಗಳನ್ನು ಅನುಸರಿಸಿ. ಗಮನಿಸಿ, ಈ ಸಮಯದಲ್ಲಿ ನಿಮ್ಮ ಬ್ಯಾಂಕ್ ಮರುಕಳಿಸುವ ಪಾವತಿಯನ್ನು ಬೆಂಬಲಿಸದಿರಬಹುದು. ಮರುಕಳಿಸುವ ಪಾವತಿಗಳನ್ನು ಬೆಂಬಲಿಸುವ ಬ್ಯಾಂಕ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅಥವಾ ಇನ್ನಷ್ಟು ತಿಳಿಯಿರಿ.

YouTube Premium ಗೆ ಅಪ್‌ಗ್ರೇಡ್ ಮಾಡಿ

ನೀವು ಸಕ್ರಿಯ YouTube Music Premium ಸದಸ್ಯತ್ವವನ್ನು ಹೊಂದಿದ್ದರೆ, ನೀವು ಯಾವಾಗ ಬೇಕಾದರೂ YouTube Premium ಗೆ ಅಪ್‌ಗ್ರೇಡ್ ಮಾಡಬಹುದು. YouTube Premium ಗೆ ಅಪ್‌ಗ್ರೇಡ್ ಮಾಡಲು:
  1. ನಿಮ್ಮ YouTube Music Premium ಖಾತೆಗೆ ಸೈನ್ ಇನ್ ಮಾಡಿ.
  2. music.youtube.com/paid_memberships ನಂತರ YouTube ನ ಆಫರ್‌ಗಳು ಎಂಬಲ್ಲಿಗೆ ಹೋಗಿ.
  3. Premium ಅಡಿಯಲ್ಲಿ, ಇನ್ನಷ್ಟು ತಿಳಿಯಿರಿ ಎಂಬುದನ್ನು ಕ್ಲಿಕ್ ಮಾಡಿ.
  4. YouTube Premium ಗೆ ಸೇರಿಕೊಳ್ಳಲು, ಹಂತಗಳನ್ನು ಅನುಸರಿಸಿ.

YouTube ಕುಟುಂಬ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಿ

YouTube ಕುಟುಂಬ ಪ್ಲಾನ್‌ಗೆ ನಿಮ್ಮ ವೈಯಕ್ತಿಕ YouTube Music Premium ಸದಸ್ಯತ್ವವನ್ನು ಅಪ್‌ಡೇಟ್ ಮಾಡುವುದು ಹೇಗೆಂದು ತಿಳಿಯಿರಿ.

ಕುಟುಂಬ ಪ್ಲಾನ್‌ನಿಂದ ವೈಯಕ್ತಿಕ ಸದಸ್ಯತ್ವಕ್ಕೆ ಬದಲಿಸಿ

ನೀವು YouTube ಕುಟುಂಬ ಪ್ಲಾನ್‌ನ ಭಾಗವಾಗಿದ್ದರೆ, ವೈಯಕ್ತಿಕ ಸದಸ್ಯತ್ವವನ್ನು ಪಡೆಯಲು ಕುಟುಂಬ ಗುಂಪನ್ನು ತೊರೆಯುವುದು ಹೇಗೆಂದು ತಿಳಿಯಿರಿ.

ಗಮನಿಸಿ: 2022 ರಿಂದ, Android ನಲ್ಲಿ ಸೈನ್ ಅಪ್ ಮಾಡಿದ ಹೊಸ YouTube Premium ಮತ್ತು Music Premium ಸಬ್‌ಸ್ಕ್ರೈಬರ್‌ಗಳಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಈ ಬದಲಾವಣೆಯು ಪ್ರಸ್ತುತ ಸಬ್‌ಸ್ಕ್ರೈಬರ್‌ಗಳ ಮೇಲೆ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ಶುಲ್ಕಗಳನ್ನು ನೋಡಲು ಹಾಗೂ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂಬುದನ್ನು ತಿಳಿಯಲು ನೀವು payments.google.com ಗೆ ಭೇಟಿ ನೀಡಬಹುದು. Google Play ಖರೀದಿಗಾಗಿ ಮರುಪಾವತಿಯನ್ನು ವಿನಂತಿಸಲು, ಇಲ್ಲಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8940993017457354389
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false