YouTube ಡೀಬಗ್ ಮಾಹಿತಿಯನ್ನು ಕಳುಹಿಸಿ

ನೀವು ವೀಡಿಯೊಗಳನ್ನು ಪ್ಲೇ ಮಾಡಲು ಸಮಸ್ಯೆಗಳನ್ನು ಹೊಂದಿರುವಿರಿ ಎಂಬುದನ್ನು YouTube ಗೆ ತಿಳಿಸಿದರೆ, ನಾವು ನಿಮ್ಮ ಡೀಬಗ್ ಮಾಹಿತಿ ಅಥವಾ "ನರ್ಡ್ಸ್‌ಗಾಗಿ ಅಂಕಿಅಂಶಗಳು" ಮಾಹಿತಿಯನ್ನು ಕೇಳಬಹುದು. ಈ ಮಾಹಿತಿಯು ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ನಮಗೆ ಸಹಾಯ ಮಾಡುತ್ತದೆ. ಡೀಬಗ್ ಮಾಹಿತಿ ಮತ್ತು "ನರ್ಡ್ಸ್‌ಗಾಗಿ ಅಂಕಿಅಂಶಗಳು" ಯಾವುದೇ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಒಳಗೊಂಡಿರುವುದಿಲ್ಲ, ಆದರೆ ಅವುಗಳು ನಿಮ್ಮ ಸಾಧನದ ಕುರಿತು ಮತ್ತು ನೀವು ವೀಕ್ಷಿಸುತ್ತಿರುವ ವೀಡಿಯೊಗಳ ಕುರಿತು ಕೆಲವು ವಿವರಗಳನ್ನು ಬಹಿರಂಗಪಡಿಸಬಹುದು. ಅಂತಹ ಕೆಲವು ವಿವರಗಳು ಈ ಕೆಳಗಿನಂತಿದ್ದು, ಅವುಗಳಿಗಷ್ಟೇ ಸೀಮಿತವಾಗಿರುವುದಿಲ್ಲ:

  • ಸಾಧನ (ತಯಾರಕರು, ಮಾಡೆಲ್ ಮತ್ತು OS ಆವೃತ್ತಿ)
  • ವೀಡಿಯೊ ID (ಪ್ಲೇ ಮಾಡುತ್ತಿರುವ ವೀಡಿಯೊ ಲಿಂಕ್)
  • CPN (ಪ್ರಸ್ತುತ ಪ್ಲೇಬ್ಯಾಕ್‌ಗಾಗಿ ಹೆಚ್ಚು ವಿಶಿಷ್ಟವಾದ ಯಾದೃಚ್ಛಿಕ ಐಡೆಂಟಿಫೈಯರ್)
  • ಬ್ಯಾಂಡ್‌ವಿಡ್ತ್ ವಿವರಗಳು
TV ಯಲ್ಲಿ YouTube

ನರ್ಡ್ಸ್‌ಗಾಗಿ ಅಂಕಿಅಂಶಗಳು

  1. ವೀಡಿಯೊ ಪ್ಲೇ ಆಗುತ್ತಿರುವಾಗ, ಸೆಟ್ಟಿಂಗ್‌ಗಳು ಆಯ್ಕೆಮಾಡಿ.
  2. ತೆರೆದುಕೊಳ್ಳುವ ಮೆನುವಿನಲ್ಲಿ, ನರ್ಡ್ಸ್‌ಗಾಗಿ ಅಂಕಿಅಂಶಗಳು ಆನ್ ಮಾಡಿ ಅಥವಾ ಆಯ್ಕೆಮಾಡಿ.
  3. ಪ್ಲೇಯರ್‌ನಲ್ಲಿ ತೋರಿಸಲಾಗುವ ನರ್ಡ್ಸ್‌ಗಾಗಿ ಅಂಕಿಅಂಶಗಳನ್ನು ನೋಡಲು ವೀಡಿಯೊಗೆ ಹಿಂತಿರುಗಿ.
  4. ನರ್ಡ್ಸ್‌ಗಾಗಿ ಅಂಕಿಅಂಶಗಳ ಒಂದು ಸ್ಪಷ್ಟವಾದ ಫೋಟೋವನ್ನು ತೆಗೆಯಿರಿ ಮತ್ತು ಹಂಚಿಕೊಳ್ಳಿ.

ನರ್ಡ್ಸ್‌ಗಾಗಿ ಅಂಕಿಅಂಶಗಳು ಆಫ್ ಮಾಡಲು, ಇನ್ನಷ್ಟು  ಎಂಬಲ್ಲಿಗೆ ಹಿಂತಿರುಗಿ ಮತ್ತು ಅದನ್ನು ಆಫ್ ಮಾಡಿ.

ಪರದೆಯಲ್ಲಿ ಬಿತ್ತರಿಸುವಾಗಲೂ ನರ್ಡ್ಸ್‌ಗಾಗಿ ಅಂಕಿಅಂಶಗಳು ಫೀಚರ್ ಬೆಂಬಲಿತವಾಗಿರುತ್ತದೆ. ನಿಮ್ಮ ಮೊಬೈಲ್ ಸಾಧನದಲ್ಲಿ ನರ್ಡ್ಸ್‌ಗಾಗಿ ಅಂಕಿಅಂಶಗಳು ಆನ್ ಮಾಡಿ (ಸೂಚನೆಗಳು ಕೆಳಗಿವೆ) ಮತ್ತು ಅವುಗಳು ಬಿತ್ತರಿಸುವ ಸೆಷನ್‌ನಲ್ಲಿ ಪರದೆಯಲ್ಲಿ ಕಾಣಿಸುತ್ತವೆ.

ನರ್ಡ್ಸ್‌ಗಾಗಿ ಅಂಕಿಅಂಶಗಳು

  1. ವೀಡಿಯೊ ವೀಕ್ಷಣೆ ಪುಟಕ್ಕೆ ಹೋಗಿ.
  2. ಪ್ಲೇಯರ್‌ನಲ್ಲಿ ಬಲ-ಕ್ಲಿಕ್ ಮಾಡಿ, ತದನಂತರ ಮೆನುವಿನಲ್ಲಿ ನರ್ಡ್ಸ್‌ಗಾಗಿ ಅಂಕಿಅಂಶಗಳು ಆಯ್ಕೆಮಾಡಿ.
  3. ವೀಡಿಯೊ ಪ್ಲೇ ಆಗುತ್ತಿರುವಾಗ, ಅದರ ಮೇಲ್ಭಾಗದಲ್ಲಿ ನರ್ಡ್ಸ್‌ಗಾಗಿ ಅಂಕಿಅಂಶಗಳು ಕಾಣಿಸುತ್ತದೆ.
  4. ನರ್ಡ್ಸ್‌ಗಾಗಿ ಅಂಕಿಅಂಶಗಳನ್ನು ಹಂಚಿಕೊಳ್ಳಲು ಅವುಗಳ ಸ್ಕ್ರೀನ್‌ಶಾಟ್ ಅಥವಾ ಸ್ಪಷ್ಟವಾದ ಫೋಟೋವನ್ನು ತೆಗೆದುಕೊಳ್ಳಿ.

ಡೀಬಗ್‌ ಮಾಹಿತಿ

  1. ವೀಡಿಯೊ ವೀಕ್ಷಣೆ ಪುಟಕ್ಕೆ ಹೋಗಿ.
  2. ಪ್ಲೇಯರ್‌ನಲ್ಲಿ ಬಲ-ಕ್ಲಿಕ್ ಮಾಡಿ, ತದನಂತರ ಮೆನುವಿನಲ್ಲಿ ಡೀಬಗ್ ಮಾಹಿತಿಯನ್ನು ನಕಲಿಸಿ ಆಯ್ಕೆಮಾಡಿ.
  3. ಡೀಬಗ್ ಮಾಹಿತಿಯನ್ನು ಹಂಚಿಕೊಳ್ಳಲು, ಅದನ್ನು ನಿಮ್ಮ ಕಂಪ್ಯೂಟರ್‌ನಿಂದ ಅಂಟಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15236045268546043833
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false