YouTube ವೀಡಿಯೊಗಳನ್ನು ವೇಗಗೊಳಿಸಿ ಅಥವಾ ನಿಧಾನಗೊಳಿಸಿ

ನೀವು ವಿಭಿನ್ನ ವೇಗಗಳಲ್ಲಿ ವೀಡಿಯೊವನ್ನು ಪ್ಲೇ ಮಾಡಬಹುದು ಅಥವಾ ಹಲವಾರು ಸಾಧನಗಳಲ್ಲಿ ಫಾಸ್ಟ್ ಫಾರ್ವರ್ಡ್ ಮಾಡಬಹುದು ಮತ್ತು ವೀಡಿಯೊಗಳನ್ನು ರಿವೈಂಡ್ ಮಾಡಬಹುದು.

ಗಮನಿಸಿ: ಕಾರ್ಯಕ್ಷಮತೆಯ ಕಾರಣಗಳಿಗಾಗಿ, ವಿಭಿನ್ನ ವೇಗದಲ್ಲಿ ವೀಡಿಯೊಗಳನ್ನು ಪ್ಲೇ ಮಾಡಲು ನೀವು Android ಆವೃತ್ತಿ 5.0 ಅಥವಾ ನಂತರದ ಆವೃತ್ತಿಯಾಗಿರಬೇಕು.

ವೀಡಿಯೊಗೆ ಹೋಗಿ.

  1. ವೀಡಿಯೊವನ್ನು ಒಮ್ಮೆ ಟ್ಯಾಪ್ ಮಾಡಿ, ನಂತರ ಇನ್ನಷ್ಟು ಎಂಬುದನ್ನು ಟ್ಯಾಪ್ ಮಾಡಿ.
  2. ಪ್ಲೇಬ್ಯಾಕ್ ವೇಗ ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ವೀಡಿಯೊವನ್ನು ಪ್ಲೇ ಮಾಡಲು ಬಯಸುವ ವೇಗವನ್ನು ಆಯ್ಕೆಮಾಡಿ.

ವೀಡಿಯೊವನ್ನು 10 ಸೆಕೆಂಡುಗಳಷ್ಟು ಫಾಸ್ಟ್ ಫಾರ್ವರ್ಡ್ ಮಾಡಲು ಅಥವಾ ರಿವೈಂಡ್ ಮಾಡಲು:

  • ರಿವೈಂಡ್ ಮಾಡಲು, ವೀಡಿಯೊ-ಸ್ಕ್ರೀನ್‌ನ ಎಡಭಾಗವನ್ನು ಡಬಲ್-ಟ್ಯಾಪ್ ಮಾಡಿ.
  • ಫಾಸ್ಟ್ ಫಾರ್ವರ್ಡ್ ಮಾಡಲು, ಸ್ಕ್ರೀನ್‌ನ ಬಲಭಾಗವನ್ನು ಡಬಲ್-ಟ್ಯಾಪ್ ಮಾಡಿ.

ವೀಡಿಯೊವನ್ನು 2 ಪಟ್ಟು ವೇಗದಲ್ಲಿ ಫಾಸ್ಟ್ ಫಾರ್ವರ್ಡ್ ಮಾಡಲು: 

  1. ವೀಡಿಯೊದಲ್ಲಿ ಎಲ್ಲಾದರೂ ಒತ್ತಿಹಿಡಿದುಕೊಳ್ಳಿ. 
  2. ಫಾಸ್ಟ್ ಫಾರ್ವರ್ಡಿಂಗ್ ಅನ್ನು ನಿಲ್ಲಿಸಲು, ನಿಮ್ಮ ಬೆರಳನ್ನು ಮೇಲೆತ್ತಿ.

YouTube ನಲ್ಲಿ ನಿಮ್ಮ ವೀಕ್ಷಣಾ ಅನುಭವವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವಂತಹ ಫೀಚರ್‌ಗಳನ್ನು ಕುರಿತು ತಿಳಿಯಿರಿ

ಸ್ಮಾರ್ಟ್ ಟಿವಿಗಳು & ಸ್ಟ್ರೀಮಿಂಗ್ ಸಾಧನಗಳು

ಗಮನಿಸಿ: ಎಲ್ಲಾ ಸ್ಮಾರ್ಟ್ ಟಿವಿಗಳು ಮತ್ತು ಸ್ಟ್ರೀಮಿಂಗ್ ಸಾಧನಗಳಲ್ಲಿ ಪ್ಲೇಬ್ಯಾಕ್ ವೇಗ ಲಭ್ಯವಿಲ್ಲದಿರಬಹುದು.
  1. ವೀಡಿಯೊದ ವೀಕ್ಷಣಾ ಪುಟದಲ್ಲಿ, ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆಮಾಡಿ.
  2. ವೇಗ ಎಂಬುದನ್ನು ಆಯ್ಕೆಮಾಡಿ.
  3. ನೀವು ವೀಡಿಯೊವನ್ನು ಪ್ಲೇ ಮಾಡಲು ಬಯಸುವ ವೇಗವನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11712161069308061904
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false