ಲೈವ್ ಸ್ಟ್ರೀಮಿಂಗ್ ವಿಳಂಬ

ಸ್ಟ್ರೀಮ್ ವಿಳಂಬ ಎಂದರೆ ನಿಮ್ಮ ಕ್ಯಾಮರಾ ಈವೆಂಟ್ ಅನ್ನು ಕ್ಯಾಪ್ಚರ್ ಮಾಡುವ ಮತ್ತು ವೀಕ್ಷಕರಿಗೆ ತೋರಿಸಲಾಗುವ ಈವೆಂಟ್ ನಡುವಿನ ವಿಳಂಬವಾಗಿದೆ. ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸೆಟಪ್ ಮಾಡುವಾಗ, ವಿಳಂಬದ ಮಟ್ಟವು ನಿಮ್ಮ ವೀಕ್ಷಕರ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ಯೋಚಿಸಿ.

ನೀವು ವೀಕ್ಷಕರೊಂದಿಗೆ ಲೈವ್ ಚಾಟ್ ಮಾಡುತ್ತಿದ್ದರೆ, ವೀಕ್ಷಕರ ಕಾಮೆಂಟ್‌ಗಳು ಮತ್ತು ಪ್ರಶ್ನೆಗಳಿಗೆ ಪ್ರತ್ಯುತ್ತರಿಸಲು ಕಡಿಮೆ ವಿಳಂಬವು ಉತ್ತಮವಾಗಿರುತ್ತದೆ. ಕಡಿಮೆ ವಿಳಂಬದೊಂದಿಗೆ, ನಿಮ್ಮ ವೀಕ್ಷಕರು ಹೆಚ್ಚು ಪ್ಲೇಬ್ಯಾಕ್ ಬಫರಿಂಗ್ ಅನ್ನು ಅನುಭವಿಸಬಹುದು ಎಂಬುದನ್ನು ಗಮನಿಸಿ.

ನಿಮ್ಮ ಪ್ರೇಕ್ಷಕರೊಂದಿಗೆ ನೀವು ಸಂವಹನ ನಡೆಸದಿದ್ದರೆ, ಹೆಚ್ಚು ವಿಳಂಬದ ಬಗ್ಗೆ ಯಾವುದೇ ಸಮಸ್ಯೆಯಿಲ್ಲ.

ವಿಳಂಬ ಮತ್ತು ಗುಣಮಟ್ಟದ ನಡುವೆ ಟ್ರೇಡ್-ಆಫ್ ಏಕಿದೆ?

ಕಡಿಮೆ ವಿಳಂಬದಿಂದ, ವೀಡಿಯೊ ಪ್ಲೇಯರ್ ಕಡಿಮೆ ರೀಡ್-ಅಹೆಡ್ ಬಫರ್ ಅನ್ನು ಹೊಂದಿರುತ್ತದೆ. ರೀಡ್-ಅಹೆಡ್ ಬಫರ್ ಪ್ರಮಾಣವು ಮುಖ್ಯವಾಗಿದೆ, ಏಕೆಂದರೆ ಅದು ಸ್ಟ್ರೀಮ್ ವಿಳಂಬದ ಮುಖ್ಯ ಮೂಲವಾಗಿದೆ. ಕಡಿಮೆ ವಿಳಂಬದೊಂದಿಗೆ, ವೀಕ್ಷಕರು ಎನ್‌ಕೋಡರ್ ಮತ್ತು ಪ್ಲೇಯರ್ ನಡುವಿನ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.
ನೆಟ್‌ವರ್ಕ್ ದಟ್ಟಣೆ ಮತ್ತು ಇತರ ಅಂಶಗಳು ನಿಮ್ಮ ಸ್ಟ್ರೀಮ್ ಅನ್ನು ವಿಳಂಬಗೊಳಿಸುವ ಲೈವ್ ಸ್ಟ್ರೀಮಿಂಗ್ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ಸರಾಸರಿ ಸ್ಟ್ರೀಮಿಂಗ್ ಬಿಟ್ ಪ್ರಮಾಣವನ್ನು ಉಳಿಸಿಕೊಳ್ಳುವ ಉತ್ತಮ ನೆಟ್‌ವರ್ಕ್ ಹೊಂದಿರುವಾಗಲೂ ವಿಳಂಬಗಳು ಸಂಭವಿಸಬಹುದು.
ಸಾಮಾನ್ಯವಾಗಿ, ನಿಮ್ಮ ವೀಕ್ಷಕರ ಪ್ಲೇಯರ್ ಕೆಲವು ಹೆಚ್ಚುವರಿ ಲೈವ್ ಸ್ಟ್ರೀಮ್ ಡೇಟಾವನ್ನು ಇರಿಸಿಕೊಂಡು ಇಂಟರ್ನೆಟ್ ವೇಗದಲ್ಲಿ ಈ ಬದಲಾವಣೆಗಳನ್ನು ನಿಭಾಯಿಸಬಹುದು. ಈ ಫಂಕ್ಷನ್ ಅನ್ನು ನರ್ಡ್ಸ್‌ಗಾಗಿ ಅಂಕಿಅಂಶಗಳಲ್ಲಿನ ಬಫರ್ ಹೆಲ್ತ್ ಎಂದು ಕರೆಯಲಾಗುತ್ತದೆ.

ಲೈವ್ ಸ್ಟ್ರೀಮ್ ವಿಳಂಬವನ್ನು ಹೇಗೆ ಬದಲಾಯಿಸುವುದು

ಲೈವ್ ನಿಯಂತ್ರಣ ಕೊಠಡಿಯಲ್ಲಿ:

  1. YouTube Studio ಗೆ ಹೋಗಿ. ಮೇಲಿನ ಬಲಭಾಗದಲ್ಲಿ, ರಚಿಸಿ ನಂತರ ಲೈವ್ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  2. ಮೇಲ್ಭಾಗದಲ್ಲಿ, ಸ್ಟ್ರೀಮ್ ಅಥವಾ ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ. ಸ್ಟ್ರೀಮ್ ರಚಿಸಿ ಅಥವಾ ನಿಗದಿತ ಸ್ಟ್ರೀಮ್ ತೆರೆಯಿರಿ.
  3. ಸ್ಟ್ರೀಮ್ ಡ್ಯಾಶ್‌ಬೋರ್ಡ್‌ನಿಂದ, ಸ್ಟ್ರೀಮ್ ಸೆಟ್ಟಿಂಗ್‌ಗಳು ಎಂಬುದನ್ನು ಕ್ಲಿಕ್ ಮಾಡಿ.
  4. "ಸ್ಟ್ರೀಮ್ ವಿಳಂಬ" ಅಡಿಯಲ್ಲಿ, ನಿಮ್ಮ ವಿಳಂಬವನ್ನು ಆಯ್ಕೆಮಾಡಿ.

ವೆಬ್‌ಕ್ಯಾಮ್ ಮತ್ತು ಮೊಬೈಲ್ ಸ್ಟ್ರೀಮಿಂಗ್ ಅನ್ನು ಯಾವಾಗಲೂ ಇಂಟರ‍್ಯಾಕ್ಟಿವಿಟಿ ಸೆಟಪ್ ಮಾಡಲಾಗಿದೆ. ಅವರಿಗಾಗಿ ಲೈವ್ ಸ್ಟ್ರೀಮ್ ವಿಳಂಬ ಸೆಟ್ ಮಾಡಲು ನಿಮ್ಮಿಂದ ಸಾಧ್ಯವಿಲ್ಲ.

ಲೈವ್ ಸ್ಟ್ರೀಮ್ ವಿಳಂಬಕ್ಕಾಗಿ 3 ಆಯ್ಕೆಗಳಿವೆ:

ಸಾಮಾನ್ಯ ವಿಳಂಬ

ಇದಕ್ಕಾಗಿ ಉತ್ತಮ: ಸಂವಹನವಿಲ್ಲದ ಲೈವ್ ಸ್ಟ್ರೀಮ್‌ಗಳು
ನೀವು ಲೈವ್ ಸ್ಟ್ರೀಮ್‌ನಲ್ಲಿ ನಿಮ್ಮ ಪ್ರೇಕ್ಷಕರ ಜೊತೆ ಸಂವಹನ ನಡೆಸುವ ಯೋಜನೆ ಹೊಂದಿರದಿದ್ದರೆ "ಸಾಮಾನ್ಯ ವಿಳಂಬವನ್ನು" ಆಯ್ಕೆಮಾಡಿ. ಈ ಆಯ್ಕೆಯು ಅತಿಕಡಿಮೆ ಪ್ರಮಾಣದ ವೀಕ್ಷಕರ ಬಫರಿಂಗ್ ಹೊಂದಿರುವ ಕಾರಣ, ಇದು ವೀಕ್ಷಕರ ಪಾಲಿಗೆ ಅತ್ಯುನ್ನತ ಗುಣಮಟ್ಟದ ಸೆಟ್ಟಿಂಗ್ ಆಗಿದೆ.
ಎಲ್ಲಾ ರೆಸಲ್ಯೂಷನ್‌ಗಳು ಮತ್ತು ಲೈವ್ ಫೀಚರ್‌ಗಳನ್ನು ಸಾಮಾನ್ಯ ವಿಳಂಬದಲ್ಲಿ ಬೆಂಬಲಿಸಲಾಗುತ್ತದೆ.

ಕಡಿಮೆ ವಿಳಂಬ

ಇದಕ್ಕಾಗಿ ಉತ್ತಮ: ಸೀಮಿತ ಪ್ರೇಕ್ಷಕರ ಸಂವಹನ
ಪ್ರೇಕ್ಷಕರ ಜೊತೆಗಿನ ನಿಮ್ಮ ಸಂವಹನ ಸೀಮಿತವಾಗಿದ್ದರೆ ಮತ್ತು ಸಮೀಕ್ಷೆಗಳಲ್ಲಿ ಆಗುವಂತೆ ಪ್ರತಿಕ್ರಿಯೆಗಳಿಗಾಗಿ ಕಾಯುವ ಅಗತ್ಯವಿಲ್ಲದಿದ್ದರೆ ಈ ಆಯ್ಕೆಯನ್ನು ಆರಿಸಿ. ಕಡಿಮೆ-ವಿಳಂಬ ಸ್ಟ್ರೀಮ್‌ನ ಬಹುತೇಕ ವೀಕ್ಷಕರು 10 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯ ವಿಳಂಬವನ್ನು ಅನುಭವಿಸುತ್ತಾರೆ. ಈ ಸೆಟ್ಟಿಂಗ್ ಇತರ ಎರಡು ಆಯ್ಕೆಗಳ ನಡುವಿನ ಉತ್ತಮ ಸಮತೋಲನವಾಗಿದೆ.
ಈ ಸೆಟ್ಟಿಂಗ್ 4K ರೆಸಲ್ಯೂಷನ್ ಅನ್ನು ಬೆಂಬಲಿಸುವುದಿಲ್ಲ.

ಅತ್ಯಂತ-ಕಡಿಮೆ ವಿಳಂಬ

ಇದಕ್ಕಾಗಿ ಉತ್ತಮ: ನೈಜ-ಸಮಯದ ತೊಡಗಿಸಿಕೊಳ್ಳುವಿಕೆಯುಳ್ಳ ಅತಿಹೆಚ್ಚು ಸಂವಹನವಿರುವ ಲೈವ್ ಸ್ಟ್ರೀಮ್‌ಗಳು
ನೀವು ನಿಮ್ಮ ಪ್ರೇಕ್ಷಕರ ಜೊತೆ ಸಂಭಾಷಣೆ ನಡೆಸಲು ಬಯಸಿದರೆ ಈ ಆಯ್ಕೆಯನ್ನು ಆರಿಸಿ. ಅತ್ಯಂತ-ಕಡಿಮೆ ವಿಳಂಬ ಸ್ಟ್ರೀಮ್‌ನ ಬಹುತೇಕ ವೀಕ್ಷಕರು 5 ಸೆಕೆಂಡ್‌ಗಳಿಗಿಂತ ಕಡಿಮೆ ಅವಧಿಯ ವಿಳಂಬವನ್ನು ಅನುಭವಿಸುತ್ತಾರೆ. ಇದರಿಂದ ನಿಮ್ಮ ವೀಕ್ಷಕರಿಗೆ ಬಫರಿಂಗ್ ದೊರೆಯುವ ಸಾಧ್ಯತೆ ಹೆಚ್ಚಾಗಬಹುದು.
ಈ ಸೆಟ್ಟಿಂಗ್ 4K ರೆಸಲ್ಯೂಷನ್ ಅನ್ನು ಬೆಂಬಲಿಸುವುದಿಲ್ಲ.
ಗಮನಿಸಿ: ಈ ಸೆಟ್ಟಿಂಗ್‌ನಲ್ಲಿ ನಿಮ್ಮ ನೆಟ್‌ವರ್ಕ್‌ನಲ್ಲಿನ ಲೈವ್ ಇಂಜೆಷನ್ ಸಮಸ್ಯೆಗಳು ವೀಕ್ಷಕರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ನಿಮ್ಮ ನೆಟ್‌ವರ್ಕ್ ಕನೆಕ್ಷನ್ ನಿಮ್ಮ ಆಯ್ಕೆಯ ಬಿಟ್ ಪ್ರಮಾಣದಲ್ಲಿ ಸ್ಟ್ರೀಮ್ ಮಾಡುವಿಕೆಯನ್ನು ಕಾಯ್ದುಕೊಳ್ಳಬಲ್ಲದು ಎಂಬುದನ್ನು ಖಚಿತಪಡಿಸಿಕೊಳ್ಳಿ. ಅತ್ಯುತ್ತಮ ಫಲಿತಾಂಶಗಳಿಗಾಗಿ, ಯಾವುದೇ ಬಿಟ್ ಪ್ರಮಾಣದಲ್ಲಿ ಅತ್ಯುತ್ತಮ ಗುಣಮಟ್ಟಕ್ಕಾಗಿ AV1 ಅಥವಾ HEVC ಬಳಸಿ ಮತ್ತು YouTube ಲೈವ್‌ನ ಎನ್‌ಕೋಡರ್ ಶಿಫಾರಸುಗಳನ್ನು ಇಲ್ಲಿ ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10572253841637086527
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false