ನಿಮ್ಮ ಲಿಂಕ್ ಮಾಡಲಾದ YouTube ಗಾಗಿ AdSense ಖಾತೆಯನ್ನು ಬದಲಾಯಿಸಿ

ನೀವು ಈಗಾಗಲೇ YouTube ಪಾಲುದಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮೋದನೆ ಪಡೆದಿದ್ದರೆ, ನಿಮ್ಮ YouTube ಚಾನಲ್ ಜೊತೆಗೆ ಲಿಂಕ್ ಆಗಿರುವ YouTube ಗಾಗಿ AdSense ಖಾತೆಯನ್ನು ನೀವು ಬದಲಾಯಿಸಬಹುದು. ಸಕ್ರಿಯ YouTube ಗಾಗಿ AdSense ಖಾತೆಯನ್ನು ನಿರ್ವಹಿಸಿ ಮತ್ತು YouTube ಪಾಲುದಾರ ಕಾರ್ಯಕ್ರಮದಲ್ಲಿ ಅರ್ಹರಾಗುವುದಕ್ಕೆ ಮುಂದುವರಿಯಲು ಅದನ್ನು ನಿಮ್ಮ ಚಾನಲ್‌ಗೆ ಲಿಂಕ್ ಮಾಡಿ.

ನೀವು ಲಿಂಕ್ ಮಾಡಿರುವ ನಿಮ್ಮ YouTube ಗಾಗಿ AdSense ಖಾತೆಯನ್ನು ಪ್ರತಿ 32 ದಿನಗಳಲ್ಲಿ ಒಮ್ಮೆ ಮಾತ್ರ ಬದಲಾಯಿಸಬಹುದು ಎಂಬುದನ್ನು ನೆನಪಿಡಿ.
  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಕೆ ವಿಭಾಗವನ್ನು ಆಯ್ಕೆಮಾಡಿ.
  3. YouTube ಪಾಲುದಾರ ಕಾರ್ಯಕ್ರಮದ ಆಯ್ಕೆಗಳು ಅಡಿಯಲ್ಲಿ, ಪ್ರಸ್ತುತವಾಗಿ ನಿಮ್ಮ YouTube ಚಾನಲ್‌ಗೆ ಜೊತೆಗೆ ಲಿಂಕ್ ಮಾಡಿರುವ YouTube ಗಾಗಿ AdSense ಖಾತೆಯ ಕುರಿತಾದ ವಿವರಗಳನ್ನು ನೀವು ಕಾಣುತ್ತೀರಿ. 
  4. YouTube ಗಾಗಿ AdSense ಗೆ ರೀಡೈರೆಕ್ಟ್ ಮಾಡಲು ಬದಲಾಯಿಸಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ ಪಾಸ್‌ವರ್ಡ್ ಅನ್ನು ನೀವು ನಮೂದಿಸಬೇಕು ಮತ್ತು ನೀವು ಆಯ್ಕೆ ಮಾಡಿದ ವಿಧಾನವನ್ನು ಬಳಸಿಕೊಂಡು ಮರು ದೃಢೀಕರಿಸಬೇಕು. ನಿಮ್ಮ YouTube ಖಾತೆಯನ್ನು ಮರು ದೃಢೀಕರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.
  5. ನಿಮ್ಮ ಪ್ರಸ್ತುತವಿರುವ ಖಾತೆಯನ್ನು ಲಿಂಕ್ ಮಾಡಲು ಅಥವಾ ಹೊಸ ಖಾತೆಯನ್ನು ರಚಿಸಲು, ನಿಮ್ಮನ್ನು YouTube ಗಾಗಿ AdSense ಗೆ ಕರೆದೊಯ್ಯಲಾಗುತ್ತದೆ. 
    • ಅಸ್ತಿತ್ವದಲ್ಲಿರುವ ಖಾತೆ: ನಿಮ್ಮ ಬಳಿ ಈಗಾಗಲೇ AdSense ಅಥವಾ YouTube ಗಾಗಿ AdSense ಖಾತೆಯಿದ್ದರೆ, ಅಸ್ತಿತ್ವದಲ್ಲಿರುವ ನಿಮ್ಮ ಖಾತೆಯನ್ನು ಆ್ಯಕ್ಸೆಸ್ ಮಾಡಲು ನೀವು ಬಳಸುವ Google ಖಾತೆಯ ಮೂಲಕ ನೀವು ಸೈನ್ ಇನ್ ಮಾಡಬೇಕು. ಇದು ನೀವು YouTube ಗೆ ಲಾಗ್ ಇನ್ ಮಾಡಲು ಬಳಸುವ ಲಾಗ್ ಇನ್ ರುಜುವಾತುಗಳಿಗಿಂತ ಬೇರೆಯಾಗಿರಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. 
    • ಹೊಸ ಖಾತೆ: ಒಂದು ವೇಳೆ ನೀವು ಹೊಸ YouTube ಗಾಗಿ AdSense ಖಾತೆಯನ್ನು ರಚಿಸುತ್ತಿದ್ದರೆ, ನಾವು ಪ್ರತಿ ಬಳಕೆದಾರರಿಗೆ ಒಂದು ಖಾತೆಯನ್ನು ಮಾತ್ರವೇ ಅನುಮತಿಸುತ್ತೇವೆ ಎಂಬುದು ನೆನಪಿನಲ್ಲಿರಲಿ. 
  6. ನೀವು ಆಯ್ಕೆ ಮಾಡಿರುವ ಖಾತೆಯು ಸ್ಕ್ರೀನ್ ಮೇಲ್ಭಾಗದಲ್ಲಿ ಕಾಣಿಸುತ್ತದೆ ಮತ್ತು "ನಿಮ್ಮ ವೆಬ್‌ಸೈಟ್" ಎಂಬುದರ ಅಡಿಯಲ್ಲಿ ನಿಮ್ಮ YouTube ಚಾನಲ್‌ನ URL ಅನ್ನು ಕಾಣಬಹುದು. ಈ ಮಾಹಿತಿಯು ತಪ್ಪಾಗಿದ್ದಲ್ಲಿ, ಅಸೋಸಿಯೇಷನ್ ಸ್ವೀಕರಿಸಿ ಆಯ್ಕೆಮಾಡಿ. ನಿಮ್ಮನ್ನು YouTube ಗೆ ರೀಡೈರೆಕ್ಟ್ ಮಾಡಲಾಗುತ್ತದೆ (ರೀಡೈರೆಕ್ಟ್ ಮಾಡದಿದ್ದರೆ, 'ರೀಡೈರೆಕ್ಟ್ ಮಾಡಿ' ಅನ್ನು ಆಯ್ಕೆಮಾಡಿ).
  7. YouTube ಗಾಗಿ AdSense ಸೆಟ್ ಅಪ್ ಮಾಡುವುದನ್ನು ನೀವು ಪೂರ್ಣಗೊಳಿಸಿದ್ದೀರಿ! ನಿಮ್ಮ ಮಾನಿಟೈಸೇಶನ್ ಆದ್ಯತೆಗಳನ್ನು ಹೊಂದಿಸಲು, ಸ್ಕ್ರೀನ್‌ನಲ್ಲಿ ಕಾಣಿಸುವ ಮುಂದಿನ ಹಂತಗಳನ್ನು ಅನುಸರಿಸಿ.

ನಿಮ್ಮ YouTube ಗಾಗಿ AdSense ಖಾತೆಯನ್ನು ನಿಮ್ಮ YouTube ಚಾನಲ್‌ಗೆ ಲಿಂಕ್ ಮಾಡಿದ ನಂತರ ನಮ್ಮ ಸಿಸ್ಟಮ್‌ಗಳಲ್ಲಿ ಅಸೋಸಿಯೇಷನ್ ಕಾಣಿಸಿಕೊಳ್ಳಲು ಗರಿಷ್ಠ 24 ಗಂಟೆಗಳ ಸಮಯ ಬೇಕಾಗುತ್ತದೆ.

ಗಮನಿಸಿ: ಅಸ್ತಿತ್ವದಲ್ಲಿರುವ ಮತ್ತೊಂದು AdSense ಅಥವಾ YouTube ಗಾಗಿ AdSense ಖಾತೆಗೆ ಮಾಡುವ ಅಸೋಸಿಯೇಷನ್‌ಗೆ ಸಾಮಾನ್ಯವಾಗಿ ಕೆಲವು ನಿಮಿಷಗಳ ಸಮಯ ಬೇಕಾಗುತ್ತದೆ. ಹೊಸ YouTube ಗಾಗಿ AdSense ಖಾತೆಯನ್ನು ರಚಿಸಿದಾಗ, ಸಾಮಾನ್ಯವಾಗಿ ಅನುಮೋದನೆ ಹಾಗೂ ಅಸೋಸಿಯೇಷನ್‌ಗೆ ಹಲವಾರು ದಿನಗಳ ಸಮಯ ಬೇಕಾಗುತ್ತದೆ, ಆದರೆ ಕೆಲವೊಮ್ಮೆ 2-3 ವಾರಗಳ ಸಮಯ ಬೇಕಾಗಬಹುದು. ಅಸೋಸಿಯೇಷನ್ ಪೂರ್ಣಗೊಂಡ ಬಳಿಕ ಮಾನಿಟೈಸೇಶನ್ ಆರಂಭವಾಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17361133204502683528
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false