ಖಾಸಗಿ ಎಂಬುದಾಗಿ ಲಾಕ್ ಮಾಡಿರುವ ವೀಡಿಯೊಗಳು

YouTube ನಲ್ಲಿ, ಪ್ರಪಂಚದಾದ್ಯಂತದ ರಚನೆಕಾರರಿಗೆ ಮತ್ತು ವೀಕ್ಷಕರಿಗೆ ಸೈಟ್ ಅನ್ನು ಉತ್ತಮಗೊಳಿಸುತ್ತಲೇ, ದುರುಪಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನೈಜ, ಧನಾತ್ಮಕ ಪ್ರಭಾವವನ್ನು ಉಂಟುಮಾಡುವ ಮಾರ್ಗಗಳಲ್ಲಿ ಪರಿಹರಿಸುವುದನ್ನು ನಾವು ನಂಬುತ್ತೇವೆ. ಇದನ್ನು ಮಾಡಲು ನಾವು ಪ್ರಯತ್ನಿಸುವ ಒಂದು ವಿಧಾನವೆಂದರೆ, ಸಂಬಂಧಿಸಿರದ ಅಥವಾ ದಾರಿ ತಪ್ಪಿಸುವ ಟ್ಯಾಗ್‌ಗಳ ಬಳಕೆಯನ್ನು ನಿಷೇಧಿಸುವುದು.

ನಿಮ್ಮ ವೀಡಿಯೊ ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿರುವುದನ್ನು ಗುರುತಿಸಿದರೆ, ಅದನ್ನು ಖಾಸಗಿ ಎಂಬುದಾಗಿ ಲಾಕ್ ಮಾಡಬಹುದು. ವೀಡಿಯೊವನ್ನು ಖಾಸಗಿ ಎಂಬುದಾಗಿ ಲಾಕ್ ಮಾಡಿದಾಗ, ಅದು ಸಾರ್ವಜನಿಕರಿಗೆ ಗೋಚರಿಸುವುದಿಲ್ಲ. ವೀಕ್ಷಕರು ವೀಡಿಯೊದ ಲಿಂಕ್ ಅನ್ನು ಹೊಂದಿದ್ದರೆ, ಅದು ಲಭ್ಯವಿಲ್ಲ ಎಂದು ಗೋಚರಿಸುತ್ತದೆ.

ಈ ಕ್ರಮದ ಕುರಿತು ನನಗೆ ಹೇಗೆ ಸೂಚನೆ ನೀಡಲಾಗುತ್ತದೆ?

ನಿಮ್ಮ ವೀಡಿಯೊಗಳಲ್ಲಿ ಒಂದನ್ನು ಖಾಸಗಿ ಎಂಬುದಾಗಿ ಲಾಕ್ ಮಾಡಲಾಗಿದೆ ಎಂದು ವಿವರಿಸುವ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ. ಕೆಲವು ಸಂದರ್ಭಗಳಲ್ಲಿ, ನೀವು ಮೇಲ್ಮನವಿ ಸಲ್ಲಿಸುವುದು ಸಾಧ್ಯವಾಗಬಹುದು. ಹಾಗಿದ್ದರೆ, ಮೇಲ್ಮನವಿಗಳ ಪ್ರಕ್ರಿಯೆಯ ಭಾಗವಾಗಿ ಇಮೇಲ್ ಮೂಲಕ ಹೇಗೆ ಮುಂದುವರೆಯಬೇಕು ಎಂಬುದನ್ನು ವಿವರಿಸುವ ಹೆಚ್ಚಿನ ಸಂದೇಶವನ್ನು ನಿಮಗೆ ಕಳುಹಿಸಲಾಗಬಹುದು.

ನನ್ನ ವೀಡಿಯೊವನ್ನು ಖಾಸಗಿ ಎಂಬುದಾಗಿ ಲಾಕ್ ಮಾಡಿದಾಗ ಅದಕ್ಕೆ ಏನಾಗುತ್ತದೆ?

ವೀಡಿಯೊವೊಂದನ್ನು ಖಾಸಗಿ ಎಂಬುದಾಗಿ ಲಾಕ್ ಮಾಡಿದಾಗ, ಅದು ನಿಮ್ಮ ಚಾನಲ್‌ನಲ್ಲಿ ಅಥವಾ ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸುವುದಿಲ್ಲ ಮತ್ತು ಇತರ ಬಳಕೆದಾರರಿಗೆ ಅಗೋಚರವಾಗಿರುತ್ತದೆ. ಖಾಸಗಿ ಎಂಬುದಾಗಿ ಲಾಕ್ ಆಗಿರುವ ವೀಡಿಯೊ ನಿಮ್ಮ ಯಾವುದೇ ಸಬ್‌ಸ್ಕ್ರೈಬರ್‌ಗಳಿಗೆ ಕಾಣಿಸುವುದಿಲ್ಲ. ಬಳಕೆದಾರರು ಆಯ್ಕೆಮಾಡಿದ ಖಾಸಗಿ ವೀಡಿಯೊಗಳಿಗಿಂತ ಭಿನ್ನವಾಗಿ, ವೀಡಿಯೊ ಯಶಸ್ವಿಯಾಗಿ ಮರು-ಪರಿಶೀಲನೆಯಾಗುವವರೆಗೆ ವೀಡಿಯೊದ ಸ್ಥಿತಿಯನ್ನು ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಇದು ಸಂಭವಿಸಿದಾಗ ನಿಮ್ಮ ಖಾತೆಗೆ ಯಾವುದೇ ಸ್ಟ್ರೈಕ್ ಅನ್ವಯಿಸುವುದಿಲ್ಲ. ನೀವು ಇರುವ ಯಾವುದಾದರೂ ಸಮಸ್ಯೆಗಳನ್ನು ಪರಿಹರಿಸಬಹುದು ಮತ್ತು ನಿಮ್ಮ ವೀಡಿಯೊ ನಿರ್ವಾಹಕದಿಂದ ನೇರವಾಗಿ ವೀಡಿಯೊವನ್ನು ಮತ್ತೊಮ್ಮೆ ಪರಿಶೀಲಿಸಲು ಮೇಲ್ಮನವಿಯನ್ನು ಸಲ್ಲಿಸಬಹುದು. ಮೇಲ್ಮನವಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತಾದ ಹಂತಗಳಿಗಾಗಿ ಕೆಳಗೆ ನೋಡಿ.

ನಾನು ಇದನ್ನು ಹೇಗೆ ಸರಿಪಡಿಸಬಹುದು?

  1. YouTube ನ ಸಮುದಾಯ ಮಾರ್ಗಸೂಚಿಗಳನ್ನು ಪರಿಶೀಲಿಸಿ.
  2. ನಿಮ್ಮ ಕಂಟೆಂಟ್, ನಮ್ಮ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆಯೇ ಎಂಬುದನ್ನು ಮರುಪರಿಶೀಲಿಸಿ.
  3. ನೀವು ಯಾವುದೇ ಸಮಸ್ಯೆಗಳನ್ನು ಸರಿಪಡಿಸಿದ್ದರೆ ಅಥವಾ ನಮ್ಮಿಂದ ತಪ್ಪಾಗಿದೆ ಎಂದು ನೀವು ಭಾವಿಸುವುದಾದರೆ, YT Studio ದಲ್ಲಿ ಮೇಲ್ಮನವಿ ಸಲ್ಲಿಸಿ.

ದೃಢೀಕರಿಸದ API ಸೇವೆಯ ಮೂಲಕ ಅಪ್‌ಲೋಡ್ ಮಾಡಿರುವುದರ ಕಾರಣ ಖಾಸಗಿ ಎಂಬುದಾಗಿ ಲಾಕ್ ಆಗಿರುವ ವೀಡಿಯೊಗಳಿಗಾಗಿ, ಮೇಲ್ಮನವಿ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ. ದೃಢೀಕೃತ API ಸೇವೆಯ ಮೂಲಕ ಅಥವಾ YouTube ಆ್ಯಪ್/ಸೈಟ್ ಮೂಲಕ ನೀವು ವೀಡಿಯೊವನ್ನು ಮರು-ಅಪ್‌ಲೋಡ್ ಮಾಡಬೇಕಾಗುತ್ತದೆ. ದೃಢೀಕರಿಸದ API ಸೇವೆಯು API ಆಡಿಟ್‌ಗೆ ಸಹ ಅರ್ಜಿ ಸಲ್ಲಿಸಬಹುದು.

ನಿಮ್ಮ ವೀಡಿಯೊವನ್ನು ಪುನಃ ಖಾಸಗಿ ಎಂಬುದಾಗಿ ಲಾಕ್ ಮಾಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಈ ಕೆಳಗಿನಂತಹ ಕಂಟೆಂಟ್ ಅನ್ನು ಪೋಸ್ಟ್ ಮಾಡಬೇಡಿ: 

  • ನಿಮ್ಮ ವೀಡಿಯೊದ “ವಿವರಣೆ” ಮತ್ತು “ಟ್ಯಾಗ್” ವಿಭಾಗಗಳಲ್ಲಿ ಸಂಬಂಧವಿಲ್ಲದ ಅಥವಾ ತಪ್ಪುದಾರಿಗೆಳೆಯುವ ಟ್ಯಾಗ್‌ಗಳನ್ನು ಹೊಂದಿರುವ ಕಂಟೆಂಟ್. ಮೆಟಾಡೇಟಾಕ್ಕೆ ಸಂಬಂಧಿಸಿದ ಉತ್ತಮ ಅಭ್ಯಾಸಗಳ ಕುರಿತಾದ ನಮ್ಮ ಲೇಖನದಲ್ಲಿ ಇನ್ನಷ್ಟು ತಿಳಿಯಿರಿ.
  • ದೃಢೀಕರಿಸದ ಥರ್ಡ್ ಪಾರ್ಟಿ API ಸೇವೆಯಿಂದ ಅಪ್‌ಲೋಡ್ ಮಾಡಲಾಗಿರುವ ಕಂಟೆಂಟ್.

ಗಮನಿಸಿ, ಇದು ಸಂಪೂರ್ಣ ಪಟ್ಟಿಯಲ್ಲ. 

ನನ್ನ ಮೇಲ್ಮನವಿಯು ಯಶಸ್ವಿಯಾದರೆ ನನ್ನ ವೀಡಿಯೊವನ್ನು ಸ್ವಯಂಚಾಲಿತವಾಗಿ ಸಾರ್ವಜನಿಕಗೊಳಿಸಲಾಗುತ್ತದೆಯೇ?

ಇಲ್ಲ. ನಿಮಗೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾದರೆ ಮತ್ತು ನಿಮ್ಮ ವೀಡಿಯೊವನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದ್ದರೆ, ಅದನ್ನು ಸಾರ್ವಜನಿಕಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ಆದರೆ, ಅದನ್ನು ಸ್ವಯಂಚಾಲಿತವಾಗಿ ಸಾರ್ವಜನಿಕಗೊಳಿಸಲಾಗುವುದಿಲ್ಲ. ನೀವು ವೀಡಿಯೊದ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವವರೆಗೆ ವೀಡಿಯೊಗಳು ಖಾಸಗಿಯಾಗಿ ಉಳಿಯುತ್ತವೆ. ನಿಮ್ಮ ವೀಡಿಯೊವನ್ನು ಸಾರ್ವಜನಿಕಗೊಳಿಸುವ ಸಮಯವನ್ನು ನೀವು ನಿಯಂತ್ರಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಮಾಡಲಾಗುತ್ತದೆ.

ಇದು ಮಾನಿಟೈಸೇಶನ್ ಮೇಲೆ ಯಾವ ಪರಿಣಾಮ ಬೀರುತ್ತದೆ?

ಖಾಸಗಿ ಎಂಬುದಾಗಿ ಲಾಕ್ ಮಾಡಲಾದ ವೀಡಿಯೊಗಳು ಮಾನಿಟೈಸೇಶನ್‌ಗೆ ಅರ್ಹವಾಗಿರುವುದಿಲ್ಲ. ಮೇಲ್ಮನವಿಯನ್ನು ಸಲ್ಲಿಸಿದರೆ ಮತ್ತು ಆ ವೀಡಿಯೊ ಈಗ ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿಲ್ಲ ಎಂಬುದು ಕಂಡುಬಂದರೆ, ವೀಡಿಯೊ ಮಾನಿಟೈಸೇಶನ್ ಅನ್ನು ಪುನರಾರಂಭಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12925981005134204241
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false