ಅನುವಾದ ಮತ್ತು ಟ್ರಾನ್ಸ್‌ಕ್ರಿಪ್ಶನ್ ಗ್ಲಾಸರಿ

  • ASR: ಸ್ವಯಂಚಾಲಿತ ಧ್ವನಿ ಗುರುತಿಸುವಿಕೆ. ವೀಡಿಯೊಗಳಿಗೆ ಸ್ವಯಂಚಾಲಿತ ಕ್ಯಾಪ್ಷನ್‌ಗಳನ್ನು ಸೇರಿಸಲು YouTube ಸ್ವಯಂಚಾಲಿತ ಧ್ವನಿ ಗುರುತಿಸುವಿಕೆಯನ್ನು ಬಳಸುತ್ತದೆ. ಫೀಚರ್ ಇಂಗ್ಲಿಷ್, ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿದೆ. ಎಲ್ಲಾ ವೀಡಿಯೊಗಳಿಗೆ ASR ಲಭ್ಯವಿಲ್ಲ.
  • ಸ್ವಯಂಚಾಲಿತ ಕ್ಯಾಪ್ಷನ್: ಸ್ವಯಂಚಾಲಿತ ಧ್ವನಿ ಗುರುತಿಸುವಿಕೆಯಿಂದ ಕ್ಯಾಪ್ಷನ್ ಟ್ರ್ಯಾಕ್ ಅನ್ನು ರಚಿಸಲಾಗಿದೆ.
  • ಕ್ಯಾಪ್ಷನ್: ವೀಡಿಯೊದಲ್ಲಿ ಪಠ್ಯದಂತೆ ತೋರಿಸುವ ಒಂದೇ ಭಾಷೆಯ ಟ್ರಾನ್ಸ್‌ಕ್ರಿಪ್ಶನ್‌ಗಳು ಮತ್ತು ಅನುವಾದಿತ ಸಬ್‌ಟೈಟಲ್‌ಗಳೆರಡನ್ನೂ ಉಲ್ಲೇಖಿಸಲು ಬಳಸಲಾಗುತ್ತದೆ. ಡೀಫಾಲ್ಟ್ ಆಗಿ, "ಕ್ಯಾಪ್ಷನ್" ಒಂದೇ ಭಾಷೆಯ ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೂಚಿಸುತ್ತದೆ. 
  • ಉಪಶೀರ್ಷಿಕೆಗಳು: ಉಪಶೀರ್ಷಿಕೆಗಳು ವೀಡಿಯೊದಲ್ಲಿನ ಆಡಿಯೊವನ್ನು ಪಠ್ಯದಲ್ಲಿ ತೋರಿಸುತ್ತದೆ. ಈ ಕಂಟೆಂಟ್ ಪ್ರಾಥಮಿಕವಾಗಿ ಶ್ರವಣ ದೋಷವಿರುವ ಮತ್ತು ಕಿವುಡ ವೀಕ್ಷಕರಿಗಾಗಿ ಇದೆ. ಕಂಟೆಂಟ್, ಮಾತನಾಡುವ ಪದಗಳ ಟ್ರಾನ್ಸ್‌ಕ್ರಿಪ್ಶನ್ ಅನ್ನು ಮತ್ತು ಧ್ವನಿ ಸೂಚನೆಗಳನ್ನು ಒಳಗೊಂಡಿರುತ್ತದೆ, ಉದಾಹರಣೆಗೆ "[ಸಂಗೀತ ಪ್ಲೇ ಆಗುತ್ತಿದೆ]" ಅಥವಾ "[ನಗು]". ಉಪಶೀರ್ಷಿಕೆಗಳು ಸ್ಪೀಕರ್ ಅನ್ನು ಸಹ ಗುರುತಿಸಬಲ್ಲವು, ಉದಾಹರಣೆಗೆ "ಮೈಕ್: ಹಾಯ್!" ಅಥವಾ ಸ್ಕ್ರೀನ್ ಮೇಲೆ ಸ್ಥಾನ ನಿರ್ಧಾರವನ್ನು ಬಳಸುವ ಮೂಲಕ.
  • ಕೊಡುಗೆ ನೀಡುವುದು: ಮೆಟಾಡೇಟಾ ಅನುವಾದಗಳನ್ನು ಅಥವಾ ವೀಡಿಯೊದಲ್ಲಿ ಪ್ರಕಟಿಸಲಾದ ಹೊಸ ಕ್ಯಾಪ್ಷನ್ ಟ್ರ್ಯಾಕ್ ಅನ್ನು ರಚಿಸುವುದು ಅಥವಾ ಎಡಿಟ್ ಮಾಡುವುದು.
  • ಕೊಡುಗೆ: ಪರಿಶೀಲಿಸಲಾದ ಮತ್ತು ವೀಡಿಯೊದಲ್ಲಿ ಪ್ರಕಟಿಸಲಾದ ಹೊಸ ಅಥವಾ ಎಡಿಟ್ ಮಾಡಿದ ಮೆಟಾಡೇಟಾ ಅನುವಾದ, ಸಬ್‌ಟೈಟಲ್ ಅಥವಾ ಉಪಶೀರ್ಷಿಕೆ.
  • ಕೊಡುಗೆದಾರರು: ಹೊಸ ಸಬ್‌ಟೈಟಲ್ ಕಂಟೆಂಟ್, ಉಪಶೀರ್ಷಿಕೆ ಕಂಟೆಂಟ್ ಅಥವಾ ಮೆಟಾಡೇಟಾ ಅನುವಾದವನ್ನು ಸಲ್ಲಿಸಿದ ಸ್ವಯಂ ಸೇವಕರು; ಅಥವಾ ಇತರ ಕೊಡುಗೆದಾರರ ಕಂಟೆಂಟ್ ಅನ್ನು ಎಡಿಟ್ ಮಾಡಿದವರು ಅಥವಾ ಪರಿಶೀಲಿಸಿದವರು.
  • ಕ್ರಿಯೇಟರ್: ವೀಡಿಯೊ ಅಪ್‌ಲೋಡ್ ಮಾಡುವವರು/ಮಾಲೀಕರು.
  • ಸಲ್ಲಿಸುವುದು: ವೀಡಿಯೊದಲ್ಲಿ ಪ್ರಕಟಿಸಲು ಪರಿಶೀಲನೆಗಾಗಿ ಸಂಪೂರ್ಣ ಅಥವಾ ಭಾಗಶಃ ಲಿಖಿತ ಟ್ರ್ಯಾಕ್ ಅನ್ನು ಕಳುಹಿಸುವುದು.
  • ಸಲ್ಲಿಕೆ: ವೀಡಿಯೊದಲ್ಲಿ ಪ್ರಕಟಿಸಲು ಪರಿಶೀಲನೆಗಾಗಿ ಕಳುಹಿಸಲಾದ ಸಂಪೂರ್ಣ ಅಥವಾ ಭಾಗಶಃ ಲಿಖಿತ ಅನುವಾದ ಅಥವಾ ಟ್ರಾನ್ಸ್‌ಕ್ರಿಪ್ಶನ್.
  • ಸಬ್‌ಟೈಟಲ್‌ಗಳು: ವೀಡಿಯೊದಲ್ಲಿ ಮಾತನಾಡುವ ಭಾಷೆಗಿಂತ ಬೇರೆ ಭಾಷೆಯಲ್ಲಿ ಆ ವೀಡಿಯೊದ ಜೊತೆಗಿರುವ ಪಠ್ಯ ಟ್ರ್ಯಾಕ್‌ಗಳು. ಈ ಕಂಟೆಂಟ್ ಪ್ರಾಥಮಿಕವಾಗಿ ವಿದೇಶಿ ಭಾಷೆಯ ವೀಕ್ಷಕರಿಗೆ ಆಗಿದೆ. ಕಂಟೆಂಟ್ ಮಾತನಾಡುವ ಪದಗಳ ಮತ್ತು ಲಿಖಿತ ಪಠ್ಯದ ಅನುವಾದವಾಗಿದ್ದು, ಅದು ವೀಡಿಯೊದ ಕೆಳಭಾಗದಲ್ಲಿ ಅಥವಾ ಕೆಳಗೆ ತೋರಿಸುತ್ತದೆ ("ಸಬ್" ಟೈಟಲ್‌ಗಳು).
  • ಟೈಮಿಂಗ್‌ಗಳನ್ನು ಸೆಟ್ ಮಾಡುವುದು: ಯಾರಾದರೂ ಟ್ರಾನ್ಸ್‌ಕ್ರಿಪ್ಟ್ ಅನ್ನು ಸಲ್ಲಿಸಿದಾಗ, ವೀಡಿಯೊದೊಂದಿಗೆ ಟ್ರಾನ್ಸ್‌ಕ್ರಿಪ್ಟ್ ಅನ್ನು ಸ್ವಯಂಚಾಲಿತವಾಗಿ ಹೊಂದಿಸಲು ನಾವು ನಮ್ಮ ಸಿಂಕ್ ಸರ್ವರ್ ಅನ್ನು ಬಳಸುತ್ತೇವೆ, ಟೈಮ್ ಸ್ಟ್ಯಾಂಪ್ ಮಾಡಿದ ಕ್ಯಾಪ್ಷನ್ ಟ್ರ್ಯಾಕ್ ಅನ್ನು ರಚಿಸುತ್ತೇವೆ.
  • ಟ್ರಾನ್ಸ್‌ಕ್ರಿಪ್ಟ್: ವೀಡಿಯೊದಿಂದ ಅಕ್ಷರಶಃ ಟ್ರಾನ್ಸ್‌ಕ್ರೈಬ್ ಮಾಡಿದ ಫಾರ್ಮ್ಯಾಟ್ ಮಾಡದ (ಮತ್ತು ಟೈಮ್ ಸ್ಟ್ಯಾಂಪ್ ಮಾಡದ) ಪಠ್ಯ.
  • ಅನುವಾದ: ಅಸ್ತಿತ್ವದಲ್ಲಿರುವ ಮೆಟಾಡೇಟಾ, ಸಬ್‌ಟೈಟಲ್‌ಗಳು ಅಥವಾ ಉಪಶೀರ್ಷಿಕೆಗಳನ್ನು ಅನುವಾದಿಸುವ ಮೂಲಕ ರಚಿಸಲಾದ ಶೀರ್ಷಿಕೆ, ವಿವರಣೆ ಅಥವಾ ಸಬ್‌ಟೈಟಲ್.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11935625734908942575
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false