3D ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

ನೀವು 3D ವೀಡಿಯೊಗಳನ್ನು ಆಯತಾಕಾರದ 3D ವೀಡಿಯೊಗಳು, VR180, ಅಥವಾ 360 3D (VR ವೀಡಿಯೊಗಳು) ವೀಡಿಯೊಗಳಾಗಿ ಅಪ್‌ಲೋಡ್ ಮಾಡಬಹುದು ಮತ್ತು ಪ್ಲೇಬ್ಯಾಕ್ ಮಾಡಬಹುದು. 

YouTube, 3D ವೀಡಿಯೊಗಳಿಗಾಗಿ ಎಡ-ಬಲ (LR) ಸೈಡ್-ಬೈ-ಸೈಡ್ ಸ್ಟೀರಿಯೋ ಲೇಔಟ್‌ ಅನ್ನು ಬೆಂಬಲಿಸುತ್ತದೆ. ವೀಡಿಯೊದಲ್ಲಿ ಸ್ಟೀರಿಯೋ ಮೆಟಾಡೇಟಾ ಈ ಫಾರ್ಮ್ಯಾಟ್‌ನಲ್ಲಿರಬೇಕು:

  • .mov/.mp4 ನಲ್ಲಿ st3d ಬಾಕ್ಸ್,
  • .mkv/.webm ನಲ್ಲಿ ಸೈಡ್-ಬೈ-ಸೈಡ್ LR ಎಂಬುದಾಗಿ ಸೆಟ್ ಮಾಡಲಾಗಿರುವ StereoMode ಎಲಿಮೆಂಟ್ ಅಥವಾ
  • H264 SEI ಹೆಡರ್‌ಗಳಲ್ಲಿ FPA ಮೆಟಾಡೇಟಾ

ನಿಮ್ಮ 3D ವೀಡಿಯೊ, 3D ಮೆಟಾಡೇಟಾವನ್ನು ಹೊಂದಿರದಿದ್ದರೆ, Sony Vegas Pro ಅಥವಾ GoPro Studio ದಂತಹ ಆದ್ಯತೆಯ ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ನೀವು ಅದನ್ನು ಸೇರಿಸಬಹುದು. ನೀವು FFmpeg ಪರಿಕರವನ್ನು ಸಹ ಬಳಸಬಹುದು.

.mov ಅಥವಾ .mp4 ಕಂಟೈನರ್‌ನಲ್ಲಿ H.264 ಎನ್‌ಕೋಡ್ ಮಾಡಲಾದ ವೀಡಿಯೊ

ffmpeg -i input_file.mkv -vcodec libx264 -x264opts "frame-packing=3" output_file.mp4

Matroska ಹಾಗೂ WebM ವೀಡಿಯೊ

ffmpeg -i input_file.mkv -c copy -metadata:s:v:0 stereo_mode=1 output_file.mkv

ಗಮನಿಸಿ: ಟ್ಯಾಗ್‌ಗಳಿರುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಬಳಿಕ, ಅದನ್ನು ಸಂಪೂರ್ಣವಾಗಿ ಪ್ರಕ್ರಿಯೆಗೊಳಿಸಿದ ನಂತರ ಅದು ಕೇವಲ 3D ಆಗಿ ಪ್ಲೇ ಬ್ಯಾಕ್ ಆಗುತ್ತದೆ. ಅದಕ್ಕಿಂತ ಮೊದಲು, ಅದು ಸೈಡ್ ಬೈ ಸೈಡ್ ಫಾರ್ಮ್ಯಾಟ್‌ನಲ್ಲಿ (ಅಂದರೆ, 3D ಯಲ್ಲಿ ಅಲ್ಲ) ಪ್ಲೇ ಆಗುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11219693553529895725
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false