2014 ಕ್ಕೂ ಮೊದಲು ರಚಿಸಿದ ಖಾತೆಗಳಿಗೆ ಬದಲಾವಣೆಗಳು
2014 ರ ಮೊದಲು ರಚಿಸಿದ ಚಾನಲ್ಗಳಿಗೆ, ಈಗ ಹೊಸ ಖಾತೆಗಳಿಗೆ ಲಭ್ಯವಿರುವ ಎಲ್ಲಾ ಫೀಚರ್ಗಳ ಆ್ಯಕ್ಸೆಸ್ ಇಲ್ಲ. ಎಲ್ಲಾ ಚಾನಲ್ಗಳು ಒಂದೇ ಫೀಚರ್ಗಳನ್ನು ಹೊಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನಾವು ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಮಾಡುವ ಮೂಲಕ ನಿಮ್ಮ ಚಾನಲ್ ಅನ್ನು ಅಪ್ಡೇಟ್ ಮಾಡಿದ್ದೇವೆ. ನಿಮ್ಮ ಚಾನಲ್ ಈ ಹಿಂದಿನಂತೆ ಅದೇ ಹೆಸರು, ವೀಡಿಯೊಗಳು ಮತ್ತು ಸಬ್ಸ್ಕ್ರೈಬರ್ಗಳನ್ನು ಹೊಂದಿರುತ್ತದೆ, ಆದರೆ ಪ್ರತ್ಯೇಕ ಗುರುತನ್ನು ಅನುಮತಿಸುತ್ತದೆ. ಗುರುತಿನೊಂದಿಗೆ, ನಿಮ್ಮ ವೈಯಕ್ತಿಕ ಹೆಸರು ಮತ್ತು ಇಮೇಲ್ ವಿಳಾಸವು ಸಾರ್ವಜನಿಕರಿಗೆ ಕಾಣಿಸುವುದಿಲ್ಲ.
ನೀವು ಯಾವ ಬಗೆಯ ಖಾತೆಯನ್ನು ಹೊಂದಿದ್ದೀರೆಂದು ನಿಮಗೆ ಖಚಿತವಾಗಿರದಿದ್ದರೆ, ನೀವು YouTube ನಲ್ಲಿ ಪರಿಶೀಲಿಸಬಹುದು.
ಏನೆಲ್ಲ ಬದಲಾಗಿದೆ:
- ಇದೀಗ ನಿಮ್ಮ YouTube ಚಾನಲ್ ಸ್ವಯಂಚಾಲಿತವಾಗಿ ಬ್ರ್ಯಾಂಡ್ ಖಾತೆಗೆ ಕನೆಕ್ಟ್ ಆಗಿದೆ. ಇದೀಗ ನಿಮ್ಮ YouTube ಚಾನಲ್, ನಿಮ್ಮ Google ಖಾತೆಯಿಂದ ಬೇರೆ ಹೆಸರು ಮತ್ತು ಫೋಟೋವನ್ನು ಹೊಂದಬಹುದು.
- ಇದೀಗ ನೀವು ಕಾಮೆಂಟ್ ಮಾಡಲು, ನಿಮ್ಮ ಚಾನಲ್ ಹೆಸರು ಬದಲಿಸಲು ಅಥವಾ ಚಾನಲ್ ಮ್ಯಾನೇಜರ್ಗಳನ್ನು ನಿರ್ವಹಿಸಲು ಮತ್ತು ಸೇರಿಸಲು ಸಂಪೂರ್ಣ ಆ್ಯಕ್ಸೆಸ್ ಹೊಂದಿದ್ದೀರಿ.
- ನಿಮ್ಮ ಚಾನಲ್ ಸೆಟ್ಟಿಂಗ್ಗಳ ಕೆಲವು ಕಡೆಗಳಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ನೋಡಬಹುದು, ಆದರೆ ಅದು ಸಾರ್ವಜನಿಕವಾಗಿ ಗೋಚರಿಸುವುದಿಲ್ಲ. ನಿಮ್ಮ YouTube ಚಾನಲ್ಗಳ ನಿರ್ವಹಣೆ ಬಗ್ಗೆ ಇನ್ನಷ್ಟು ತಿಳಿಯಿರಿ
- ನಿಮ್ಮ ಚಾನಲ್ ಈ ಹಿಂದಿನಂತೆ ಅದೇ ಕಂಟೆಂಟ್ ಅನ್ನು ಹೊಂದಿರುತ್ತದೆ. ನಿಮ್ಮ ಚಾನಲ್ ಪಟ್ಟಿ ಅಥವಾ ಸಬ್ಸ್ಕ್ರಿಪ್ಶನ್ ನಿಮಗೆ ಕಾಣಿಸದಿದ್ದರೆ, ಅಕೌಂಟ್ ಸ್ವಿಚರ್ ಮೂಲಕ ಖಾತೆಗಳನ್ನು ಬದಲಾಯಿಸಿ ನೋಡಿ.
ಗಮನಿಸಿ: ನೀವು ಬ್ರ್ಯಾಂಡ್ ಖಾತೆಯನ್ನು ಬಳಸುವಾಗ, ಕೆಲವು ಕಡೆಗಳಲ್ಲಿ
channel-name-1234@pages.plusgoogle.com
ರೀತಿಯ ಅಸಹಜ ಇಮೇಲ್ ವಿಳಾಸವನ್ನೂ ಸಹ ಪಡೆಯಬಹುದು. ಅದು ನೈಜ ಇಮೇಲ್ ಅಲ್ಲ, ಅದು ಕೇವಲ ಬ್ರ್ಯಾಂಡ್ ಖಾತೆಗಾಗಿ ಗುರುತಿಸುವಿಕೆ ಮಾತ್ರ. Google+ ಲಭ್ಯವಿಲ್ಲದಿದ್ದರೂ ಸಹ ನೀವು ಬ್ರ್ಯಾಂಡ್ ಖಾತೆಯನ್ನು ಹೊಂದಬಹುದು.YouTube ಚಾನಲ್ಗೆ ಸಂಬಂಧಿಸಿದ ಇಮೇಲ್ ನೋಟಿಫಿಕೇಶನ್ಗಳನ್ನು ಬ್ರ್ಯಾಂಡ್ ಖಾತೆಗೆ ನೀವು ಸೆಟ್ ಮಾಡುವ ನೋಟಿಫಿಕೇಶನ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.