ಉದಯೋನ್ಮುಖ ರಚನೆಕಾರ ಮತ್ತು ಉದಯೋನ್ಮುಖ ಕಲಾವಿದ

ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳಲ್ಲಿ ದೇಶಗಳು ಹಾಗೂ ಪ್ರದೇಶಗಳನ್ನು ಆಯ್ಕೆಮಾಡಲು ಈ ಫೀಚರ್ YouTube ನಲ್ಲಿ ಲಭ್ಯವಿದೆ.

ಪ್ರತಿನಿತ್ಯ YouTube ನಲ್ಲಿ ಹೊಸ ರಚನೆಕಾರರು ಮತ್ತು ಕಲಾವಿದರು ಹೊರಹೊಮ್ಮುತ್ತಾರೆ. YouTube ನ ವೈವಿಧ್ಯತೆ ಮತ್ತು ಚೈತನ್ಯವನ್ನು ಆಚರಿಸಲು ಮತ್ತು ಅಭಿಮಾನಿಗಳನ್ನು ಹುಡುಕುವ ನಿಟ್ಟಿನಲ್ಲಿ ರಚನೆಕಾರರು ಮತ್ತು ಕಲಾವಿದರಿಗೆ ಸಹಾಯ ಮಾಡಲು, ನಾವು ಅಂತಹ ಕೆಲವು ರಚನೆಕಾರರು ಮತ್ತು ಕಲಾವಿದರನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಬಯಸುತ್ತೇವೆ.

ಟ್ರೆಂಡಿಂಗ್‌ನಲ್ಲಿ ಉದಯೋನ್ಮುಖ ರಚನೆಕಾರರು ಮತ್ತು ಕಲಾವಿದರನ್ನು YouTube ಹೈಲೈಟ್ ಮಾಡುತ್ತದೆ:

  • ಉದಯೋನ್ಮುಕ ಕಲಾವಿದ: ಮುಂಬರುವ ಸಂಗೀತಗಾರರಿಂದ ತಾಜಾ ಸಂಗೀತ ವೀಡಿಯೊಗಳನ್ನು ಪ್ರದರ್ಶಿಸುತ್ತದೆ.
  • ಉದಯೋನ್ಮುಖ ರಚನೆಕಾರ: ಹೊಸ ಸಂಗೀತೇತರ YouTube ಚಾನಲ್ ಅನ್ನು ಹೈಲೈಟ್ ಮಾಡುತ್ತದೆ
  • ಉದಯೋನ್ಮುಖ ಗೇಮಿಂಗ್ ರಚನೆಕಾರ: ಕಂಪ್ಯೂಟರ್ ಮತ್ತು ಮೊಬೈಲ್ ಸಾಧನಗಳಲ್ಲಿ ಉದಯೋನ್ಮುಖ ಗೇಮಿಂಗ್ ರಚನೆಕಾರರನ್ನು ಹೈಲೈಟ್ ಮಾಡಲಾಗುತ್ತಿದೆ

ಟ್ರೆಂಡಿಂಗ್ ಆಯ್ದ ಕಲಾವಿದರು ಮತ್ತು ರಚನೆಕಾರರನ್ನು 24 ಗಂಟೆಗಳವರೆಗೆ ತೋರಿಸುತ್ತದೆ. ಆ ಸಮಯದಲ್ಲಿ, ಅವರು ಟ್ರೆಂಡಿಂಗ್‌ನಲ್ಲಿ ತಮ್ಮ ಚಾನಲ್ ಹೆಸರಿನೊಂದಿಗೆ ತೋರಿಸುವ ನೀಲಿ "ಉದಯೋನ್ಮುಖ ಕಲಾವಿದ" ಅಥವಾ "ಉದಯೋನ್ಮುಖ ರಚನೆಕಾರ" ಬ್ಯಾಡ್ಜ್ ಅನ್ನು ಸಹ ಪಡೆಯುತ್ತಾರೆ. ಟ್ರೆಂಡಿಂಗ್ ಬಗ್ಗೆ ಇನ್ನಷ್ಟು ತಿಳಿಯಿರಿ.

ಬೆಂಬಲಿತ ದೇಶಗಳು ಮತ್ತು ಪ್ರದೇಶಗಳು

  • ಉದಯೋನ್ಮುಖ ಕಲಾವಿದ: ಕೆನಡಾ, ಯುನೈಟೆಡ್ ಸ್ಟೇಟ್ಸ್
  • ಉದಯೋನ್ಮುಖ ರಚನೆಕಾರ: ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಗ್ರೇಟ್ ಬ್ರಿಟನ್, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಲ್ಯಾಟಿನ್ ಅಮೇರಿಕಾ, ಮಲೇಷ್ಯಾ, ಮೆಕ್ಸಿಕೊ, ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ಪಾಕಿಸ್ತಾನ, ಫಿಲಿಪೈನ್ಸ್, ಪೋಲೆಂಡ್, ದಕ್ಷಿಣ ಕೊರಿಯಾ, ಸ್ಪೇನ್, ತೈವಾನ್, ಥಾಯ್‌ಲ್ಯಾಂಡ್, ಯುನೈಟೆಡ್ ಸ್ಟೇಟ್ಸ್, ವಿಯೆಟ್ನಾಂ
  • ಉದಯೋನ್ಮುಖ ಗೇಮ್ ರಚನೆಕಾರ: ಜಪಾನ್, ಯುನೈಟೆಡ್ ಸ್ಟೇಟ್ಸ್

ಆಯ್ಕೆಯ ಮಾನದಂಡ

ಉದಯೋನ್ಮುಖ ರಚನೆಕಾರ ಮತ್ತು ಉದಯೋನ್ಮುಖ ಕಲಾವಿದ ಪ್ರಮುಖವಾಗಿ, YouTube ನಲ್ಲಿ ಮುಂಬರಲಿರುವ ರಚನೆಕಾರರು ಮತ್ತು ಕಲಾವಿದರನ್ನು ಹೈಲೈಟ್ ಮಾಡುತ್ತದೆ ಯಾವುದೇ ಅಪ್ಲಿಕೇಶನ್ ಪ್ರಕ್ರಿಯೆ ಇರುವುದಿಲ್ಲ. ಈ ಮೇಲೆ ತಿಳಿಸಲಾದ ಬೆಂಬಲಿತ ರಾಷ್ಟ್ರಗಳ, 1,000 ಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್‌‌ಗಳನ್ನು ಹೊಂದಿರುವ ಉದಯೋನ್ಮುಖ ಕಲಾವಿದರು ಮತ್ತು ರಚನೆಕಾರರು ತಮ್ಮ ದೇಶಗಳಲ್ಲಿ ಸ್ವಯಂಚಾಲಿತವಾಗಿ ಅರ್ಹರಾಗುತ್ತಾರೆ. ಅರ್ಹತೆಯ ದೇಶವನ್ನು, ಚಾನಲ್‌ನ ಸ್ಥಳ ಅಥವಾ ಚಾನಲ್ ಹೆಚ್ಚಾಗಿ ಅಪ್‌ಲೋಡ್ ಮಾಡುವ ಸ್ಥಳದಿಂದ ನಿರ್ಧರಿಸಲಾಗುತ್ತದೆ.

ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸಲು ನಾವು ವಿವಿಧ ಅಂಶಗಳನ್ನು ಪರಿಗಣಿಸುತ್ತೇವೆ. ವೀಕ್ಷಣೆ ಸಂಖ್ಯೆ, ವೀಕ್ಷಣೆ ಸಮಯದ ಬೆಳವಣಿಗೆ ಮತ್ತು ವೀಡಿಯೊಗಳನ್ನು ಎಷ್ಟು ಬಾರಿ ಅಪ್‍ಲೋಡ್ ಮಾಡಲಾಗುತ್ತದೆ ಎಂಬುದು ನಾವು ನೋಡುವ ಕೆಲವು ಅಂಶಗಳಾಗಿವೆ. ಈ ಮೆಟ್ರಿಕ್‍ಗಳ ಆಧಾರದ ಮೇಲೆ YouTube ನ ಸಿಸ್ಟಮ್‍ಗಳು ಮತ್ತು ತಂಡಗಳು ಆಯ್ಕೆಗಳನ್ನು ಪರಿಶೀಲಿಸುತ್ತವೆ.

ಆಯ್ಕೆ ನೋಟಿಫಿಕೇಶನ್

ನೀವು ಉದಯೋನ್ಮುಖ ರಚನೆಕಾರ ಎಂದು ಆಯ್ಕೆಯಾದರೆ, ಆ ದಿನದಂದೇ YouTube ಕಡೆಯಿಂದ ಇಮೇಲ್ ಮತ್ತು ಮೊಬೈಲ್ ನೋಟಿಫಿಕೇಶನ್ ಪಡೆಯುತ್ತೀರಿ. ಸಾಧ್ಯವಾದಲ್ಲಿ, ನಿಮ್ಮ ಆಯ್ಕೆಯನ್ನು ಆಚರಿಸಲು ನಮ್ಮ ಸ್ಥಳೀಯ ರಚನೆಕಾರ Twitter ಹ್ಯಾಂಡಲ್‍ನಿಂದ ನಾವು ಟ್ವೀಟ್ ಸಹ ಮಾಡುತ್ತೇವೆ. ನೀವು Twitter ಹ್ಯಾಂಡಲ್ ಹೊಂದಿದ್ದರೆ, ನಿಮ್ಮನ್ನು ಟ್ವೀಟ್‍ನಲ್ಲಿ ಉಲ್ಲೇಖಿಸಲಾಗುತ್ತದೆ.

ನೀವು ಆಯ್ಕೆಯಾದರೆ, ನಿಮ್ಮ ಚಾನಲ್‍ಗೆ ಎಂದಿಗಿಂತ ಹೆಚ್ಚಿನ ವೀಕ್ಷಕರನ್ನು ನೀವು ಪಡೆಯಬಹುದು. ನಿಮ್ಮ ಚಾನಲ್ ಸೆಟ್ಟಿಂಗ್‌ಗಳನ್ನು ನೀವು ಪರಿಶೀಲಿಸಲು ಬಯಸಬಹುದು—ವಿಶೇಷವಾಗಿ ವೀಡಿಯೊಗಳಲ್ಲಿನ ಕಾಮೆಂಟ್‌ಗಳನ್ನು ಹೇಗೆ ಮಾಡರೇಟ್ ಮಾಡುವುದು.

ಟ್ರೆಂಡಿಂಗ್‍ನಲ್ಲಿ ಉದಯೋನ್ಮುಖ ರಚನೆಕಾರ ಅಥವಾ ಉದಯೋನ್ಮುಖ ಕಲಾವಿದ ಕಾಣುತ್ತಿಲ್ಲವೆ?

ಟ್ರೆಂಡಿಂಗ್‍ನಲ್ಲಿ ಉದಯೋನ್ಮುಖ ರಚನೆಕಾರ ಅಥವಾ ಉದಯೋನ್ಮುಖ ಕಲಾವಿದರನ್ನು ನೀವು ನೋಡದಿರಲು ಕೆಲವು ಕಾರಣಗಳು:

  • ಟ್ರೆಂಡಿಂಗ್‌ನಲ್ಲಿ ಉದಯೋನ್ಮುಖ ರಚನೆಕಾರರು ಮತ್ತು ಕಲಾವಿದರನ್ನು ವಾರಕ್ಕೆ ಕೆಲವು ಬಾರಿಯಷ್ಟೆ YouTube ಬೆಂಬಲಿತ ದೇಶಗಳು/ಪ್ರದೇಶಗಳಲ್ಲಿ ಹೈಲೈಟ್ ಮಾಡುತ್ತದೆ. ನೀವು ರಚನೆಕಾರರು/ಕಲಾವಿದರನ್ನು ಹೈಲೈಟ್ ಮಾಡಿದ ಅಂತರದಲ್ಲಿ ನೀವು ಟ್ರೆಂಡಿಂಗ್‍ಗೆ ಭೇಟಿ ನೀಡುತ್ತಿರಬಹುದು, ಹೀಗಾಗಿ ನಂತರ ಮತ್ತೊಮ್ಮೆ ಪರಿಶೀಲಿಸಿ.
  • ನೀವು ಬೆಂಬಲಿತ ರಾಷ್ಟ್ರದಲ್ಲಿ ಇಲ್ಲದಿದ್ದರೆ, ನಿಮಗೆ ಯಾವುದೇ ರಚನೆಕಾರರು ಅಥವಾ ಉದಯೋನ್ಮುಖ ಕಲಾವಿದರನ್ನು ನೋಡಲು ಸಾಧ್ಯವಾಗುವುದಿಲ್ಲ. ನೀವು ನಿಮ್ಮ ಸ್ಥಳ ಸೆಟ್ಟಿಂಗ್ ಅನ್ನು ಬದಲಿಸಬಹುದು, ಆದರೆ ಹೀಗೆ ಮಾಡುವುದರಿಂದ ಟ್ರೆಂಡಿಂಗ್ ಮಾತ್ರವಲ್ಲದೆ ನಿಮ್ಮ ಒಟ್ಟಾರೆ YouTube ಅನುಭವದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರಲಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5572768498450594965
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false