ವೀಡಿಯೊ ಪ್ರಗತಿ ಪಟ್ಟಿ

ನಿಮ್ಮ ಮೊಬೈಲ್ ಸಾಧನದಲ್ಲಿ YouTube ಕಂಟೆಂಟ್ ಅನ್ನು ಎಕ್ಸ್‌ಪ್ಲೋರ್ ಮಾಡಲು ನ್ಯಾವಿಗೇಶನ್ ಸಲಹೆಗಳು

ನೀವು ಒಂದು ವೀಡಿಯೊವನ್ನು ಕಳೆದ ಬಾರಿ ವೀಕ್ಷಿಸಿದಾಗ, ಎಲ್ಲಿ ನಿಲ್ಲಿಸಿದ್ದೀರಿ ಎಂಬುದನ್ನು ವೀಡಿಯೊ ಪ್ರಗತಿ ಪಟ್ಟಿಯ ಮೂಲಕ ಸುಲಭವಾಗಿ ಪರಿಶೀಲಿಸಬಹುದು. ನೀವು ಒಂದು ವೀಡಿಯೊವನ್ನು ಪೂರ್ಣವಾಗಿ ವೀಕ್ಷಿಸದೆ, ಮಧ್ಯದಲ್ಲಿ ತೊರೆದರೆ, ನೀವು ಎಲ್ಲಿ ನಿಲ್ಲಿಸಿದ್ದೀರಿ ಎಂಬುದನ್ನು ವೀಡಿಯೊ ಥಂಬ್‌ನೇಲ್‌ನ ಅಡಿಯಲ್ಲಿರುವ ಪಟ್ಟಿಯು ನಿಮಗೆ ತೋರಿಸುತ್ತದೆ. ನೀವು ವೀಡಿಯೊವನ್ನು ಮತ್ತೊಮ್ಮೆ ಪ್ಲೇ ಮಾಡಿದಾಗ, ನೀವು ನಿಲ್ಲಿಸಿದಲ್ಲಿಂದ ಅದು ಮರುಪ್ರಾರಂಭವಾಗುತ್ತದೆ.

ಟಿವಿ, ನಿಮ್ಮ ಕಂಪ್ಯೂಟರ್ ಅಥವಾ YouTube ಮೊಬೈಲ್ ಆ್ಯಪ್‌ಗಳಲ್ಲಿ ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿದಾಗ ಪ್ರಗತಿ ಪಟ್ಟಿಯು ಲಭ್ಯವಿರುತ್ತದೆ.

ಗಮನಿಸಿ: ನಿಮ್ಮ ವೀಕ್ಷಣೆಯ ಇತಿಹಾಸವನ್ನು ತೆರೆವುಗೊಳಿಸಿದಾಗ, ನಿಮ್ಮ ಪ್ರಗತಿ ಪಟ್ಟಿಗಳನ್ನು ಸಹ ತೆರವುಗೊಳಿಸಲಾಗುತ್ತದೆ.

ಆಂಶಿಕವಾಗಿ ವೀಕ್ಷಿಸಲಾದ ವೀಡಿಯೊವನ್ನು ನೀವು ಆಯ್ಕೆ ಮಾಡಿದಾಗ, ಸಾಮಾನ್ಯವಾಗಿ ನೀವು ನಿಲ್ಲಿಸಿದಲ್ಲಿಂದ ವೀಡಿಯೊ ಪುನರಾರಂಭವಾಗುತ್ತದೆ. ನೀವು ನಿಲ್ಲಿಸಿದಲ್ಲಿಂದ ವೀಡಿಯೊ ಪ್ರಾರಂಭವಾಗದಿರುವ ಕೆಲವು ಸಂದರ್ಭಗಳಿವೆ, ಉದಾಹರಣೆಗೆ ವೀಡಿಯೊ ಬಹುತೇಕ ಪೂರ್ಣವಾಗಿದ್ದಾಗ.

ಗಮನಿಸಿ: ಕೆಲವೊಮ್ಮೆ, ಪ್ರಗತಿ ಪಟ್ಟಿಯು ತಕ್ಷಣ ಅಪ್‌ಡೇಟ್ ಆಗುವುದಿಲ್ಲ. ಈ ಸಂದರ್ಭದಲ್ಲಿ, ನಿಮ್ಮ ಬ್ರೌಸರ್ ಅಥವಾ ಫೀಡ್ ಅನ್ನು ರಿಫ್ರೆಶ್ ಮಾಡಿ ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9210655274203647535
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false