YouTube ಯುನಿವರ್ಸಲ್ ಲಿಂಕ್‌ಗಳು

YouTube ಯುನಿವರ್ಸಲ್ ಲಿಂಕ್‌ಗಳ ಸಹಾಯದಿಂದ ನಿಮ್ಮ iOS ಸಾಧನದಲ್ಲಿ YouTube ಆ್ಯಪ್ ಹಾಗೂ ಇತರ ಆ್ಯಪ್‌ಗಳ ನಡುವೆ ಸುಲಭವಾಗಿ ಸರಿಸಬಹುದಾಗಿದೆ. ನೀವು ಯಾವುದೇ YouTube ಲಿಂಕ್ (youtube.com, m.youtube.com, ಹಾಗೂ youtu.be ಅನ್ನು ಒಳಗೊಂಡು) ಕ್ಲಿಕ್ ಮಾಡಿದಾಗ, ನಿಮ್ಮ iOS ಸಾಧನವು ಸ್ವಯಂಚಾಲಿತವಾಗಿ YouTube ಆ್ಯಪ್‌ನಲ್ಲಿ ಆ ಲಿಂಕ್ ಅನ್ನು ತೆರೆಯುತ್ತದೆ.

iOS 9 ಅಥವಾ ನಂತರದ ಆವೃತ್ತಿಗಳನ್ನು ಆಪರೇಟಿಂಗ್ ಸಿಸ್ಟಮ್ ಆಗಿ ಬಳಸುವ ಎಲ್ಲಾ ಸಾಧನಗಳಲ್ಲಿ ಯುನಿವರ್ಸಲ್ ಲಿಂಕ್‌ಗಳನ್ನು ಸ್ವಯಂಚಾಲಿತವಾಗಿ ಆನ್ ಮಾಡಲಾಗುತ್ತದೆ. ನಿಮ್ಮ ಹಿಂದಿನ ಆ್ಯಪ್‌ಗೆ ಮರಳಲು, ಪುಟದ ಮೇಲ್ಭಾಗದಲ್ಲಿ ಹಿಂದೆ ಆ್ಯರೋವನ್ನು ಕ್ಲಿಕ್ ಮಾಡಿ.

ಲಭ್ಯವಿರುವ ಇತ್ತೀಚಿನ YouTube ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ, ಏಕೆಂದರೆ ಅದು ಮೊಬೈಲ್ ವೆಬ್ ಆವೃತ್ತಿಗಿಂತ ಹೆಚ್ಚು ಫೀಚರ್‌ಗಳನ್ನು ಹೊಂದಿದೆ.

ಯುನಿವರ್ಸಲ್ ಲಿಂಕ್‌ಗಳನ್ನು ಆನ್ ಮಾಡಿ

ನೀವು ಯುನಿವರ್ಸಲ್ ಲಿಂಕ್‌ಗಳನ್ನು ಮರಳಿ ಆನ್ ಮಾಡಬಹುದು.

  1. YouTube ಮೊಬೈಲ್ ಸೈಟ್ ಅನ್ನು ತೆರೆಯಿರಿ.
  2. ನಿಮ್ಮ ಮೊಬೈಲ್ ಬ್ರೌಸರ್‌ನ ಮೇಲ್ಭಾಗದಲ್ಲಿ ತೆರೆಯಿರಿ ಎಂಬುದನ್ನು ಟ್ಯಾಪ್ ಮಾಡಿ.

ಕೆಲವು ಲಿಂಕ್‌ಗಳು ಹಾಗೂ ಅಪ್ಲಿಕೇಶನ್‌ಗಳು “‘YouTube’ ನಲ್ಲಿ ತೆರೆಯಬೇಕೇ?” ಎಂದು ಕೇಳುತ್ತವೆ. ಈ ಸಂದರ್ಭದಲ್ಲಿ, YouTube ಆ್ಯಪ್‌ಗೆ ಹೋಗಲು ತೆರೆಯಿರಿ ಎಂಬುದನ್ನು ಆಯ್ಕೆ ಮಾಡಿ.

iPhone/iPod ಗಳಲ್ಲಿ YouTube ಕುರಿತಾಗಿ Google Search ಫಲಿತಾಂಶಗಳು m.youtube.com ಗೆ ನಿರ್ದೇಶಿಸುತ್ತವೆ, ಆದರೆ iPad ಗಳಲ್ಲಿ YouTube ಕುರಿತಾದ Google Search ಫಲಿತಾಂಶಗಳು youtube.com ಗೆ ನಿರ್ದೇಶಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1127370985051566593
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false