ಅಪ್‌ಲೋಡ್ ಮಾಡಿದ ನಂತರ ವಿಡಿಯೋ ಗುಣಮಟ್ಟ ಕಡಿಮೆ

ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ, ಅದು ಆರಂಭದಲ್ಲಿ ಕಡಿಮೆ ಗುಣಮಟ್ಟದಲ್ಲಿ ಪ್ರಕ್ರಿಯೆಗೊಳ್ಳುತ್ತದೆ. ಈ ಪ್ರಕ್ರಿಯೆ ನಿಮಗೆ ಅಪ್ ಲೋಡ್ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳಲು ಸಹಾಯ ಮಾಡುತ್ತದೆ. ಅಪ್‌ಲೋಡ್ ಹರಿವು ಪೂರ್ಣಗೊಂಡಾಗ, ನಿಮ್ಮ ವೀಡಿಯೊ ಕಡಿಮೆ ಗುಣಮಟ್ಟದಲ್ಲಿ, ವಿವಿಧ ಸಾಧನಗಳಲ್ಲಿ ಸ್ಟ್ರೀಮ್ ಮಾಡಲು ಲಭ್ಯವಿರುತ್ತದೆ.

4K ಅಥವಾ 1080p ನಂತಹ ಉತ್ತಮ ಗುಣಮಟ್ಟದ ವಿಡಿಯೋಗಳು ಪ್ರಕ್ರಿಯೆಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಈ ಪ್ರಕ್ರಿಯೆಯು ನಡೆಯುವಾಗ, ನಿಮ್ಮ ವೀಡಿಯೊ ಹಲವಾರು ಗಂಟೆಗಳ ಕಾಲ ತನ್ನ ಉತ್ತಮ ಗುಣಮಟ್ಟವನ್ನು ಕಳೆದುಕೊಂಡಿರುವಂತೆ ತೋರಬಹುದು. ಒಮ್ಮೆ ಹೆಚ್ಚಿನ ರೆಸಲ್ಯೂಶನ್ ಪ್ರಕ್ರಿಯೆ ಮುಗಿದ ನಂತರ, ನಿಮ್ಮ ವಿಡಿಯೋ ಉತ್ತಮ ಗುಣಮಟ್ಟದಲ್ಲಿ ಕಾಣಸಿಗುತ್ತದೆ.

ಪ್ರಕ್ರಿಯೆ ಸಮಯದ ನಂತರ

ಪ್ರಕ್ರಿಯೆ ಸಮಯ ಈ ಕೆಳಗಿನಂತಹ ಹಲವು ಅಂಶಗಳನ್ನು ಆಧರಿಸಿರುತ್ತದೆ:

  • ವೀಡಿಯೊ ಫಾರ್ಮ್ಯಾಟ್
  • ವೀಡಿಯೊ ಅವಧಿ
  • ಫ್ರೇಮ್ ರೇಟ್
  • ಗುಣಮಟ್ಟ

4K ಅಥವಾ 1080p ನಲ್ಲಿನ ವೀಡಿಯೊಗಳಂತಹ ಉತ್ತಮ ಗುಣಮಟ್ಟದ ವೀಡಿಯೊಗಳು, ಅಪ್‌ಲೋಡ್ ಮತ್ತು ಪ್ರಕ್ರಿಯೆ ಎರಡಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 60-fps ನಂತಹ ಹೆಚ್ಚಿನ ಫ್ರೇಮ್ ದರಗಳನ್ನು ಹೊಂದಿರುವ ವೀಡಿಯೊಗಳಿಗೆ ಕೂಡ ಇದು ನಿಜವಾಗಿದೆ.

ಉದಾಹರಣೆಗೆ, 4K ವೀಡಿಯೊಗಳು 1080p ವೀಡಿಯೊಗಳಿಗಿಂತ 4 ಪಟ್ಟು ದೊಡ್ಡದಾಗಿದೆ. ಅಪ್‌ಲೋಡ್ ಪೂರ್ಣಗೊಂಡ ನಂತರ 4K ಗುಣಮಟ್ಟ ಲಭ್ಯವಾಗಲು 4 ಪಟ್ಟು ಹೆಚ್ಚು ಸಮಯ ತೆಗೆದುಕೊಳ್ಳಬಹುದು. 60 ನಿಮಿಷಗಳ ಅವಧಿಯ 30 fps ಫ್ರೇಮ್ ರೇಟ್ ಅನ್ನು ಹೊಂದಿರುವ 4K ವೀಡಿಯೊವು ಹೆಚ್ಚಿನ ರೆಸಲ್ಯೂಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 4 ಗಂಟೆಗಳವರೆಗೆ ತೆಗೆದುಕೊಳ್ಳಬಹುದು. 60fps ಫ್ರೇಮ್ ರೇಟ್ ನೊಂದಿಗೆ 4K ವೀಡಿಯೊ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ವೀಡಿಯೊ ಗುಣಮಟ್ಟವನ್ನು ಪರಿಶೀಲಿಸಿ

ನಿಮ್ಮ ವೀಡಿಯೊ ಉನ್ನತ ಗುಣಮಟ್ಟದಲ್ಲಿ ಪ್ರಕ್ರಿಯೆಗೊಳಿಸುವುದನ್ನು ಪೂರ್ಣಗೊಳಿಸಿದೆಯೇ ಎಂದು ನೋಡಲು, ವೀಡಿಯೊದ ವೀಕ್ಷಣಾ ಪುಟವನ್ನು ಪರಿಶೀಲಿಸಿ.

  1. ನಿಮ್ಮ ವೀಡಿಯೊ ವೀಕ್ಷಣೆ ಪುಟವನ್ನು ತೆರೆಯಿರಿ.
  2. ವೀಡಿಯೊ ಪ್ಲೇಯರ್‌ನಲ್ಲಿ, ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
  3. ಗುಣಮಟ್ಟವನ್ನು ಕ್ಲಿಕ್ ಮಾಡಿ.

ಉತ್ತಮ ಗುಣಮಟ್ಟದ ಆಯ್ಕೆಗಳು ಇನ್ನೂ ಕಾಣಿಸದಿದ್ದರೆ ಹಿನ್ನೆಲೆಯಲ್ಲಿ ಪ್ರಕ್ರಿಯೆಯು ಇನ್ನೂ ಪೂರ್ಣಗೊಳ್ಳುತ್ತಿದೆ ಎಂದರ್ಥ. ನಿಮ್ಮ ವೀಡಿಯೊದ ಗುಣಮಟ್ಟವನ್ನು ಬದಲಾಯಿಸುವುದುಹೇಗೆ ಎಂಬುದರ ಬಗ್ಗೆ ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6484416194638351747
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false