ಹೆಚ್ಚು ಡೈನಾಮಿಕ್ ವ್ಯಾಪ್ತಿ (HDR) ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

ನೀವು YouTube ನಲ್ಲಿ ಹೆಚ್ಚು ಡೈನಾಮಿಕ್ ವ್ಯಾಪ್ತಿ (HDR) ವೀಡಿಯೊಗಳನ್ನು ಅಪ್‌ಲೋಡ್ ಮಾಡಬಹುದು. HDR ವೀಡಿಯೊಗಳು ಸ್ಟ್ಯಾಂಡರ್ಡ್ ಡಿಜಿಟಲ್ ವೀಡಿಯೊಗಿಂತ ಹೆಚ್ಚು ಬಣ್ಣಗಳೊಂದಿಗೆ ಅಧಿಕ ಕಾಂಟ್ರಾಸ್ಟ್ ಅನ್ನು ತೋರಿಸುತ್ತವೆ.

ವೀಕ್ಷಕರು, ಹೊಂದಾಣಿಕೆಯಾಗುವ ಮೊಬೈಲ್ ಸಾಧನಗಳು ಹಾಗೂ HDR ಟಿವಿಗಳಲ್ಲಿ HDR ವೀಡಿಯೊಗಳನ್ನು ವೀಕ್ಷಿಸಬಹುದು. ಅವರು Chromecast Ultra ಬಳಸಿಕೊಂಡು HDR ಟಿವಿಯಲ್ಲಿ HDR ವೀಡಿಯೊಗಳನ್ನು ಸಹ ಸ್ಟ್ರೀಮ್ ಮಾಡಬಹುದು. ವೀಕ್ಷಕರು, ವೀಡಿಯೊ ಪ್ಲೇಯರ್‌ನಲ್ಲಿ ಪ್ರತಿ ಗುಣಮಟ್ಟದ ಆಯ್ಕೆಯ ನಂತರ "HDR" ಎಂಬುದನ್ನು ನೋಡುತ್ತಾರೆ (ಉದಾಹರಣೆಗೆ, 1080p HDR).

HDR-ಅಲ್ಲದ ಸಾಧನಗಳಲ್ಲಿ ವೀಕ್ಷಿಸುತ್ತಿರುವ ವೀಕ್ಷಕರು, ವೀಡಿಯೊವನ್ನು ಸ್ಟ್ಯಾಂಡರ್ಡ್ ಡೈನಾಮಿಕ್ ರೇಂಜ್ (SDR) ವೀಡಿಯೊವಾಗಿ ನೋಡುತ್ತಾರೆ.

HDR ವೀಡಿಯೊಗಳನ್ನು ಅಪ್‌ಲೋಡ್ ಮಾಡಿ

YouTube ನಲ್ಲಿ ಸರಿಯಾಗಿ ಪ್ಲೇ ಬ್ಯಾಕ್ ಮಾಡಲು, HDR ವೀಡಿಯೊಗಳು ಕೋಡೆಕ್ ಅಥವಾ ಕಂಟೈನರ್‌ನಲ್ಲಿ HDR ಮೆಟಾಡೇಟಾವನ್ನು ಹೊಂದಿರಬೇಕು. ಮೆಟಾಡೇಟಾವನ್ನು ಸಮರ್ಪಕವಾಗಿ ರೆಕಾರ್ಡ್ ಮಾಡಲು ಅತ್ಯಂತ ವಿಶ್ವಾಸಾರ್ಹ ವಿಧಾನವೆಂದರೆ ಬೆಂಬಲಿತ ಆ್ಯಪ್‌ನಿಂದ ರಫ್ತು ಮಾಡುವುದು.

ಸ್ಟ್ಯಾಂಡರ್ಡ್ HDR ಮೆಟಾಡೇಟಾವನ್ನು ರಫ್ತು ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ವೀಡಿಯೊದಲ್ಲಿ HDR ಮೆಟಾಡೇಟಾವನ್ನು ಸೇರಿಸಲು, ನೀವು YouTube HDR ಮೆಟಾಡೇಟಾ ಪರಿಕರವನ್ನು ಬಳಸಬಹುದು. ನಿಮ್ಮ ವೀಡಿಯೊವನ್ನು HDR ಟ್ರಾನ್ಸ್‌ಫರ್ ಫಂಕ್ಷನ್ ಅನ್ನು ಬಳಸಿಕೊಂಡು ಗ್ರೇಡ್ ಮಾಡಲಾಗಿದ್ದರೆ ಮಾತ್ರ ಈ ಪರಿಕರ ಸರಿಯಾಗಿ ಕೆಲಸ ಮಾಡುತ್ತದೆ.

ಗಮನಿಸಿ: ನಿಮ್ಮ ವೀಡಿಯೊವನ್ನು, HDR ಟ್ರಾನ್ಸ್‌ಫರ್ ಫಂಕ್ಷನ್ ಅನ್ನು ಬಳಸಿಕೊಂಡು ಗ್ರೇಡ್ ಮಾಡಲಾಗಿದೆಯೇ ಎಂದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ಈ ಪರಿಕರದ ಬಳಕೆಯು ನಿಮ್ಮ ವೀಡಿಯೊಗಳನ್ನು ಕೆಟ್ಟದಾಗಿ ತಿರುಚಬಹುದು. ಶೀರ್ಷಿಕೆಯಲ್ಲಿ "HDR" ಎಂಬುದನ್ನು ಹೊಂದಿರುವ ಅನೇಕ ವೀಡಿಯೊಗಳನ್ನು HDR ಟ್ರಾನ್ಸ್‌ಫರ್ ಫಂಕ್ಷನ್‌ನೊಂದಿಗೆ ಗ್ರೇಡ್ ಮಾಡಲಾಗಿರುವುದಿಲ್ಲ. ಆ ವೀಡಿಯೊಗಳಲ್ಲಿ ಈ ಪರಿಕರ ಕೆಲಸ ಮಾಡುವುದಿಲ್ಲ. ನಿಮಗೆ ಕಲರ್ ಗ್ರೇಡಿಂಗ್ ಕುರಿತು ಹೆಚ್ಚು ತಿಳಿದಿಲ್ಲ ಎಂದಾದರೆ ಅಥವಾ ನಿಮ್ಮದೇ ವೀಡಿಯೊವನ್ನು HDR ನಲ್ಲಿ ಗ್ರೇಡ್ ಮಾಡಿಲ್ಲ ಎಂದಾದರೆ, YouTube HDR ಮೆಟಾಡೇಟಾ ಪರಿಕರವನ್ನು ಬಳಸಬೇಡಿ.

ನಿಮ್ಮ ವೀಡಿಯೊವನ್ನು ಗ್ರೇಡ್ ಮಾಡುತ್ತೀರಿ ಎಂದಾದರೆ, Rec. 2020 ನಲ್ಲಿ PQ ಅಥವ HLG ಜೊತೆ ಗ್ರೇಡ್ ಮಾಡಿ. DCI P3 ಸೇರಿದಂತೆ ವಿಭಿನ್ನ ಕಾನ್ಫಿಗರೇಶನ್ ಅನ್ನು ಬಳಸುವುದರಿಂದ, ತಪ್ಪು ಫಲಿತಾಂಶಗಳು ಉಂಟಾಗುತ್ತವೆ.

ಒಮ್ಮೆ ಒಂದು ವೀಡಿಯೊವನ್ನು ಸಮರ್ಪಕವಾಗಿ HDR ಎಂದು ಗುರುತಿಸಿದರೆ, ಅದನ್ನು ಅಪ್‌ಲೋಡ್ ಮಾಡಲು, ವೀಡಿಯೊವನ್ನು ಅಪ್‌ಲೋಡ್ ಮಾಡುವ ಸಾಮಾನ್ಯ ಪ್ರಕ್ರಿಯೆಯನ್ನು ಬಳಸಬಹುದು. YouTube, HDR ಮೆಟಾಡೇಟಾವನ್ನು ಪತ್ತೆಹಚ್ಚುತ್ತದೆ ಮತ್ತು ಅದನ್ನು ಪ್ರಕ್ರಿಯೆಗೊಳಿಸುತ್ತದೆ, ಮತ್ತು HDR ಸಾಧನಗಳಿಗಾಗಿ HDR ಟ್ರಾನ್ಸ್‌ಕೋಡ್‌ಗಳು ಮತ್ತು ಇತರ ಸಾಧನಗಳಿಗಾಗಿ SDR downconversion ಅನ್ನು ಉತ್ಪಾದಿಸುತ್ತದೆ.

ಗಮನಿಸಿ: HDR ವೀಡಿಯೊಗಳನ್ನು, ಪ್ರಸ್ತುತ, YouTube ವೆಬ್ ಎಡಿಟರ್‌ನಲ್ಲಿ ಎಡಿಟ್ ಮಾಡಲು ಸಾಧ್ಯವಿಲ್ಲ.

HDR ವೀಡಿಯೊ ಅವಶ್ಯಕತೆಗಳು

ನೀವು ಒಂದು ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ, YouTube ಎಲ್ಲಾ ರೆಸಲ್ಯೂಷನ್‌ಗಳನ್ನು ಬೆಂಬಲಿಸುತ್ತದೆ ಮತ್ತು ಅಗತ್ಯವಿದ್ದಾಗ HDR ವೀಡಿಯೊವನ್ನು SDR ವೀಡಿಯೊಗಳಿಗೆ ಪರಿವರ್ತಿಸುತ್ತದೆ.

ಅಪ್‌ಲೋಡ್ ಅವಶ್ಯಕತೆಗಳು

ರೆಸಲ್ಯೂಷನ್ 720p, 1080p, 1440p, 2160p
ಅತ್ಯುತ್ತಮ ಫಲಿತಾಂಶಗಳಿಗಾಗಿ, DCI ವಿಡ್ತ್‌ಗಳಿಗೆ ಬದಲಾಗಿ UHD ಅನ್ನು ಬಳಸಿ (ಉದಾಹರಣೆಗೆ, 4096x1716 ಬದಲಿಗೆ 3840x1600 ಬಳಸಿ).
ಫ್ರೇಮ್ ರೇಟ್ 23.976, 24, 25, 29.97, 30, 48, 50, 59.94, 60
ಬಣ್ಣದ ಡೆಪ್ತ್‌ 10 ಬಿಟ್‌ಗಳು ಅಥವಾ 12 ಬಿಟ್‌ಗಳು
ಕಲರ್ ಪ್ರೈಮರಿಗಳು Rec. 2020
ಕಲರ್ ಮ್ಯಾಟ್ರಿಕ್ಸ್ Rec. 2020 ನಾನ್-ಕಾನ್‌ಸ್ಟಂಟ್ ಲ್ಯೂಮಿನೆನ್ಸ್
EOTF PQ ಅಥವಾ HLG (Rec. 2100)
ವಿಡಿಯೋ ಬಿಟ್ ಪ್ರಮಾಣ H.264 ಗಾಗಿ, ಶಿಫಾರಸು ಮಾಡಲಾದ ಅಪ್‌ಲೋಡ್ ಎನ್‌ಕೋಡಿಂಗ್ ಸೆಟ್ಟಿಂಗ್ ಅನ್ನು ಬಳಸಿ
ಆಡಿಯೋ ಶಿಫಾರಸು ಮಾಡಲಾದ ಅಪ್‌ಲೋಡ್ ಎನ್‌ಕೋಡಿಂಗ್ ಸೆಟ್ಟಿಂಗ್‍ನ ಹಾಗೆಯೇ

HDR ವೀಡಿಯೊ ಫೈಲ್ ಎನ್‌ಕೋಡಿಂಗ್

ಈ ಕಂಟೈನರ್‌ಗಳು ಕೆಲಸ ಮಾಡುತ್ತವೆ ಎಂದು ಪರೀಕ್ಷಿಸಿ ನೋಡಲಾಗಿದೆ:

  • MOV/QuickTime
  • MP4
  • MKV


ಈ ಕೋಡೆಕ್‌ಗಳು HDR ಮೆಟಾಡೇಟಾದೊಂದಿಗೆ 10 ಬಿಟ್ ಎನ್‌ಕೋಡಿಂಗ್ ಅನ್ನು ಬೆಂಬಲಿಸುವುದರಿಂದ ಮತ್ತು ಸಮಂಜಸವಾದ ಬಿಟ್ ಪ್ರಮಾಣಗಳಲ್ಲಿ ಅಧಿಕ ಗುಣಮಟ್ಟವನ್ನು ಒದಗಿಸುವುದರಿಂದ ಇವುಗಳನ್ನು ಶಿಫಾರಸು ಮಾಡಲಾಗಿದೆ:

  • VP9 ಪ್ರೊಫೈಲ್ 2
  • AV1
  • HEVC/H.265


ಈ ಕೋಡೆಕ್‌ಗಳು ಸಹ ಕೆಲಸ ಮಾಡುತ್ತವೆ, ಆದರೆ ಅಧಿಕ ಗುಣಮಟ್ಟವನ್ನು ಸಾಧಿಸಲು ಬಹಳ ಅಧಿಕ ಬಿಟ್ ಪ್ರಮಾಣಗಳ ಅಗತ್ಯವಿರುತ್ತದೆ, ಇದರಿಂದಾಗಿ ಅಪ್‌ಲೋಡ್ ಮತ್ತು ಪ್ರಕ್ರಿಯೆಗೊಳಿಸುವಿಕೆ ಸಮಯಗಳು ದೀರ್ಘವಾಗಬಹುದು:

  • ProRes 422
  • ProRes 4444
  • DNxHR HQX
  • H.264 10-ಬಿಟ್

HDR ಮೆಟಾಡೇಟಾ

ಪ್ರಕ್ರಿಯೆಗೊಳಿಸುವುದಕ್ಕಾಗಿ, HDR ವೀಡಿಯೊಗಳನ್ನು ಇವುಗಳಿಗಾಗಿ ಸರಿಯಾದ ಮೌಲ್ಯಗಳೊಂದಿಗೆ ಟ್ಯಾಗ್ ಮಾಡಬೇಕು:
  • ಟ್ರಾನ್ಸ್‌ಫರ್ ಫಂಕ್ಷನ್ (PQ ಅಥವಾ HLG)
  • ಕಲರ್ ಪ್ರೈಮರಿಗಳು (Rec. 2020)
  • ಮ್ಯಾಟ್ರಿಕ್ಸ್ (Rec. 2020 ನಾನ್-ಕಾನ್‌ಸ್ಟಂಟ್ ಲ್ಯೂಮಿನೆನ್ಸ್)
PQ ಸಿಗ್ನಲಿಂಗ್ ಅನ್ನು ಬಳಸುವ HDR ವೀಡಿಯೊಗಳು ಸಹ ಅದನ್ನು ಮಾಸ್ಟರ್ ಮಾಡಿದ ಡಿಸ್‌ಪ್ಲೇಯ ಕುರಿತು ಮಾಹಿತಿಯನ್ನು ಹೊಂದಿರಬೇಕು (SMPTE ST 2086 ಮಾಸ್ಟರಿಂಗ್ ಮೆಟಾಡೇಟಾ). ಅದು ಹೊಳಪಿನ ಕುರಿತಾಗಿಯೂ ವಿವರಗಳನ್ನು ಹೊಂದಿರಬೇಕು (CEA 861-3 MaxFALL ಹಾಗೂ MaxCLL). ಅದು ಕಾಣೆಯಾಗಿದ್ದರೆ, ನಾವು Sony BVM-X300 ಮಾಸ್ಟರಿಂಗ್ ಡಿಸ್‌ಪ್ಲೇಯ ಮೌಲ್ಯಗಳನ್ನು ಬಳಸುತ್ತೇವೆ.
ಐಚ್ಛಿಕವಾಗಿ, HDR ವೀಡಿಯೊಗಳು ಡೈನಾಮಿಕ್ (HDR10+) ಮೆಟಾಡೇಟಾವನ್ನು ITU-T T.35 ಟರ್ಮಿನಲ್ ಕೋಡ್‌ಗಳು ಅಥವಾ SEI ಹೆಡರ್‌ಗಳಾಗಿ ಹೊಂದಿರಬಹುದು.

HDR ಆಥರಿಂಗ್ ಪರಿಕರಗಳು 

YouTube ನಲ್ಲಿ HDR ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ನೀವು ಬಳಸಬಹುದಾದ ಪರಿಕರಗಳ ಉದಾಹರಣೆಗಳು ಹೀಗಿವೆ:

  • DaVinci Resolve
  • Adobe Premiere Pro
  • Adobe After Effects
  • Final Cut Pro X

ಸಾಮಾನ್ಯ ಸಮಸ್ಯೆಗಳು

ತಪ್ಪಾದ ಕಲರ್ ಸ್ಪೇಸ್ ಗುರುತಿಸುವಿಕೆ

ಸಿನೆಮಾದಲ್ಲಿ HDR ವೀಡಿಯೊಗಳನ್ನು DCI P3 ಕಲರ್ ಸ್ಪೇಸ್‌ನಲ್ಲಿ, ಒಂದೋ DCI (~D50) ಅಥವಾ D65 ವೈಟ್ ಪಾಯಿಂಟ್‌ಗಳೊಂದಿಗೆ ಮಾಸ್ಟರ್ ಮಾಡುವುದು ಸಾಮಾನ್ಯವಾಗಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್‌ಗೆ ಡೆಲಿವರಿಗಾಗಿ ಹೀಗೆ ಮಾಡುವುದು ಬೆಂಬಲಿತ ಫಾರ್ಮ್ಯಾಟ್ ಆಗಿಲ್ಲ. ಮಾಸ್ಟರ್ ಮಾಡುವಾಗ, Rec. 2020 ಕಲರ್ ಪ್ರೈಮರಿಗಳನ್ನು ಆಯ್ಕೆ ಮಾಡಿ (Rec. 2100 ಸ್ಟ್ಯಾಂಡರ್ಡ್ ಎಂದರೆ ಅನೇಕ ಆ್ಯಪ್‌ಗಳಲ್ಲಿ Rec. 2020 ಕಲರ್ ಅನ್ನು ಸೂಚಿಸುತ್ತದೆ).
ಒಂದು ಸಾಮಾನ್ಯ ತಪ್ಪು ಎಂದರೆ P3 ಯಲ್ಲಿ ಮಾಸ್ಟರ್ ಮಾಡುವುದು, ನಂತರ Rec. 2020 ಪ್ರೈಮರಿಗಳಲ್ಲಿ ಫಲಿತಾಂಶವನ್ನು ಟ್ಯಾಗ್ ಮಾಡುವುದು. ಹೀಗೆ ಮಾಡಿದರೆ, ಶಿಫ್ಟ್ ಆದ ಛಾಯೆಗಳೊಂದಿಗೆ ಓವರ್‌ಸ್ಯಾಚುರೇಟ್ ಆದ ನೋಟವನ್ನು ಒದಗಿಸುತ್ತದೆ.

SDR ಪರಿವರ್ತನೆಯ ಮೇಲೆ ಹೆಚ್ಚಿನ ನಿಯಂತ್ರಣ

YouTube ನ ಸ್ವಯಂಚಾಲಿತ SDR downconversion, ಯಾವುದೇ ಪ್ರಯತ್ನವಿಲ್ಲದೆ ಉತ್ತಮ ಫಲಿತಾಂಶಗಳನ್ನು ಒದಗಿಸಬಹುದಾದ ಅನುಕೂಲಕರ ಆಯ್ಕೆಯಾಗಿದೆ. ಆದರೂ, ಸವಾಲಿನ ಕ್ಲಿಪ್‌ಗಳಲ್ಲಿ ಇದು ಪರಿಪೂರ್ಣ ಫಲಿತಾಂಶವನ್ನು ಒದಗಿಸದಿರಬಹುದು. ಸ್ವಯಂಚಾಲಿತ SDR downconversion ಎಲ್ಲಾ ಸಾಮಗ್ರಿಗಳಿಗಾಗಿಯೂ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗುವ ಹಾಗೆ ಅದನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ.
YouTube ನ SDR downconversion ಗೆ 3D ಲುಕ್-ಅಪ್ ಟೇಬಲ್ ಅಥವಾ LUT ಯ ಸ್ವರೂಪದಲ್ಲಿ ಸುಳಿವು ನೀಡಲು ಸಾಧ್ಯವಿದೆ. ಈ LUT ಅನ್ನು ಉತ್ಪಾದಿಸಲು:
  1. ನಿಮ್ಮ HDR ವೀಡಿಯೊವನ್ನು, ಯಾವುದೇ ಕಲರ್ ನಿರ್ವಹಣೆಯನ್ನು ಅನ್ವಯಿಸದೆ ಕಲರ್ ಗ್ರೇಡಿಂಗ್ ಆ್ಯಪ್‌ಗೆ ಅಪ್‌ಲೋಡ್ ಮಾಡಿ.
  2. ನಿಮ್ಮ ಮಾಸ್ಟರಿಂಗ್ ಡಿಸ್‌ಪ್ಲೇ ಅನ್ನು Rec. 709 color ಹಾಗೂ Gamma 2.4 ಟ್ರಾನ್ಸ್‌ಫರ್ ಫಂಕ್ಷನ್‌ಗೆ ಸೆಟ್ ಮಾಡಿ.
  3. Rec. 2020 + ST. 2084 ಯಿಂದ Rec. 709 ಗೆ ಪರಿವರ್ತಿಸುವ, ಅಸ್ತಿತ್ವದಲ್ಲಿರುವ LUT ಅನ್ನು ಅನ್ವಯಿಸಿ ಮತ್ತು ನಿಮಗೆ ಬೇಕಾದ ನೋಟವನ್ನು ಪಡೆದುಕೊಳ್ಳಲು, ನಂತರದ ನೋಡ್‌ಗಳಲ್ಲಿ, ಪ್ರೈಮರಿ ಕರೆಕ್ಟರ್‌ಗಳು, ಕರ್ವ್‌ಗಳು ಹಾಗೂ ಕೀಗಳನ್ನು ಬದಲಾಯಿಸಿ.
  4. LUT ಅನ್ನು .cube ಫಾರ್ಮ್ಯಾಟ್‌ನಲ್ಲಿ HDR ವೀಡಿಯೊ ಇರುವ ಅದೇ ಫೋಲ್ಡರ್‌ಗೆ ರಫ್ತು ಮಾಡಿ.
  5. LUT ಹಾಗೂ HDR ವೀಡಿಯೊ - ಎರಡನ್ನೂ ಆಯ್ಕೆ ಮಾಡಿ ಮತ್ತು ಮೆಟಾಡೇಟಾ ಪರಿಕರದಲ್ಲಿ ಅವುಗಳನ್ನು ಡ್ರ್ಯಾಗ್ ಮಾಡಿ ಮತ್ತು ಡ್ರಾಪ್ ಮಾಡಿ.

ಈ ಪರಿಕರವು BVM-X300 ಗಾಗಿ ಮೆಟಾಡೇಟಾವನ್ನು ಅನ್ವಯಿಸುತ್ತದೆ ಮತ್ತು SDR downconversion ಗೆ ಸುಳಿವುಗಳನ್ನು ನೀಡಲು LUT ಅನ್ನು ಸಹ ಜೊತೆಗೆ ಸೇರಿಸುತ್ತದೆ.

ಗಮನಿಸಿ: ಪ್ರಸ್ತುತ, SDR downconversion ನ ಸುಳಿವು ನೀಡುವುದಕ್ಕಾಗಿ ಸ್ಪ್ಯಾಶಿಯಲ್ ಅಥವಾ ಟೆಂಪೋರಲ್ ನಿಯಂತ್ರಣವಿಲ್ಲ. ಪವರ್ ವಿಂಡೋಗಳು ಮತ್ತು ಬ್ಲರ್‌ನಂತಹ ನಿಯಂತ್ರಣಗಳನ್ನು ಒಳಗೊಂಡಿರುವ ಕೀಗಳು ಮಾತ್ರವಲ್ಲದೆ, ಪ್ರತ್ಯೇಕ ಶಾಟ್‌ಗಳಿಗೆ ಅನ್ವಯಿಸುವ ಹೊಂದಾಣಿಕೆಗಳು ಸಹ ಕೆಲಸ ಮಾಡುವುದಿಲ್ಲ.

ನೆರಳುಗಳಲ್ಲಿ ಅಡಚಣೆಗಳು

PQ (ST 2084) ನಲ್ಲಿ ಮಾಸ್ಟರ್ ಮಾಡುವಾಗ, ಸಿಗ್ನಲ್ ವ್ಯಾಪ್ತಿಯ ಬಹುತೇಕ ಭಾಗವನ್ನು ನೆರಳಿನ ವಿವರಣೆಗಾಗಿ ಮೀಸಲಿರಿಸಲಾಗುತ್ತದೆ. ProRes ಹಾಗೂ DNxHR ನಂತಹ ಡಿಜಿಟಲ್ ಮಧ್ಯಂತರ ಕೋಡೆಕ್‌ಗಳು ಚಿತ್ರದ ಶ್ರೇಣಿಯಾದ್ಯಂತ ವಿವರಗಳನ್ನು ಉಳಿಸಿಕೊಳ್ಳುತ್ತವೆ. ನಿಮ್ಮ ವೀಡಿಯೊಗಳಲ್ಲಿ, ಚಿತ್ರವು ಗಾಢವಾಗಿರುವ ಪ್ರದೇಶಗಳಲ್ಲಿ ಅಡಚಣೆಯಿರಬಹುದು ಮತ್ತು ಇದನ್ನು ವಿಷುವಲ್ ಆಗಿ, ಚಿತ್ರದಲ್ಲಿ ಹೈಲೈಟ್‌ಗಳ ಮೂಲಕ ಮರೆಮಾಡಲಾಗುತ್ತದೆ.
YouTube ನ ವೀಡಿಯೊ ಪ್ರಕ್ರಿಯೆಗೊಳಿಸುವಿಕೆಯು ಸ್ಟ್ರೀಮಿಂಗ್ ಬಿಟ್ ಪ್ರಮಾಣಗಳನ್ನು ಸಾಧಿಸುವುದಕ್ಕಾಗಿ ಕೆಲವೊಂದು ಅಡಚಣೆಗಳನ್ನು ತೆಗೆದುಹಾಕಬಹುದು. ನಿಮ್ಮ ವೀಡಿಯೊವನ್ನು ಅಪ್‌ಲೋಡ್‌ಗಾಗಿ ರೆಂಡರ್ ಮಾಡುವ ಮೊದಲು, ಅಡಚಣೆಯನ್ನು ತೆಗೆಯುವುದರಿಂದ ನೀವು ಹೆಚ್ಚಿನ ನಿಯಂತ್ರಣ ಪಡೆಯಬಹುದು. ನಿಮ್ಮ ವೀಡಿಯೊವನ್ನು ಸ್ಟ್ರೀಮ್ ಮಾಡುವಾಗ ಅದು ತೀರಾ "ಕುಗ್ಗಿರುವಂತೆ" ಕಾಣಿಸಿದರೂ ಸಹ, ಅಡಚಣೆಯನ್ನು ತೆಗೆಯುವುದು ಉಪಯುಕ್ತವಾಗಿರಬಹುದು.
ಈ ಪ್ರಕರಣವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ನಿಭಾಯಿಸುವುದು ಒಳಗೊಂಡಂತೆ, YouTube ವೀಡಿಯೊಗಳ ಗುಣಮಟ್ಟವನ್ನು ಸುಧಾರಿಸಲು ನಾವು ಸದಾ ಕಾರ್ಯನಿರತರಾಗಿದ್ದೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12278272035917051163
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false