ಗೇಮಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಪರಿಕರಗಳು ಮತ್ತು ಸೇವೆಗಳು

YouTube ಲೈವ್‍ಗೆ ಲಭ್ಯವಿರುವ ಥರ್ಡ್-ಪಾರ್ಟಿ ಪರಿಕರಗಳು ಮತ್ತು ಸೇವೆಗಳನ್ನು ಬಳಸಿಕೊಂಡು ನಿಮ್ಮ ಲೈವ್ ಸ್ಟ್ರೀಮ್ ಅನ್ನು ಹೆಚ್ಚು ಆಸಕ್ತಿಕರ ಮತ್ತು ಸಂವಾದಾತ್ಮಕಗೊಳಿಸಿ.

ಗಮನಿಸಿ: ಈ ಕೆಳಗಡೆ ಪಟ್ಟಿ ಮಾಡಿದ ಯಾವುದೇ ಉತ್ಪನ್ನಗಳನ್ನು Google LLC ನಿಂದ ತಯಾರಿಸಲ್ಪಟ್ಟಿಲ್ಲ ಅಥವಾ ಅನುಮೋದಿಸಲ್ಪಟ್ಟಿಲ್ಲ. ಈ ಉತ್ಪನ್ನಗಳನ್ನು ಮೌಲ್ಯೀಕರಿಸುವುದು ಮತ್ತು ನಿಮಗೆ ಅಥವಾ ನಿಮ್ಮ ವ್ಯಾಪಾರಕ್ಕೆ ಯಾವುದು ಹೆಚ್ಚು ಸೂಕ್ತವೆಂದು ನಿರ್ಧರಿಸುವುದು ತುಂಬಾ ಮುಖ್ಯವಾಗಿದೆ.

ಗೇಮಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ ಪರಿಕರಗಳು

ಪರಿಕರ ವಿವರಣೆ
Discord Discord ನ ಮಾಡರ್ನ್ ವಾಯ್ಸ್ ಮತ್ತು ಪಠ್ಯ ಚಾಟ್ ಆ್ಯಪ್ ಮೂಲಕ ನಿಮ್ಮ ಸಮುದಾಯವನ್ನು ಹೆಚ್ಚಿಸಿಕೊಳ್ಳಿ. ಅತ್ಯಂತ ಸ್ಪಷ್ಟ ಧ್ವನಿ, ಸರ್ವರ್ ಹಾಗೂ ಚಾನಲ್ ಬೆಂಬಲಕ್ಕೆ ಹಲವಾರು ಆಯ್ಕೆಗಳು, ಮೊಬೈಲ್ ಆ್ಯಪ್‍ಗಳು ಮತ್ತು ಇನ್ನಷ್ಟು. ನಿಮ್ಮ ಸದಸ್ಯರಿಗೆ ಖಾಸಗಿ ವಾಯ್ಸ್ ಮತ್ತು ಪಠ್ಯ ಸರ್ವರ್‌ಗಳಿಗೆ ಆ್ಯಕ್ಸೆಸ್ ನೀಡಲು Discord ನಿಮಗೆ ಅವಕಾಶ ಮಾಡಿಕೊಡುತ್ತದೆ.
GameWisp GameWisp ತಮ್ಮ ಪ್ರೇಕ್ಷರಿಗೆ ಆಸಕ್ತಿ ಮೂಡಿಸಲು ಮತ್ತು ಮಾನಿಟೈಜ್ ಮಾಡಲು YouTubers ಸಬ್ಸ್‌ಕ್ರಿಪ್ಶನ್ ಪರಿಕರಗಳನ್ನು ನೀಡುತ್ತದೆ.
IFTTT.com IFTTT (ಹೀಗೆ ಇದ್ದರೆ, ಅದು ಹಾಗೆ) ಥರ್ಡ್ ಪಾರ್ಟಿ, ವೆಬ್ ಆಧಾರಿತ ಸೇವೆಯಾಗಿದ್ದು, ಇದು ಒಟ್ಟಿಗೆ ವಿಭಿನ್ನ ಆ್ಯಪ್‍ಗಳು, ಸೇವೆಗಳು ಮತ್ತು ಸಾಧನಗಳನ್ನು ಕನೆಕ್ಟ್ ಮಾಡುತ್ತದೆ. Super Chat ಜೊತೆ ಸಂವಹನ ನಡೆಸುವುದಕ್ಕಾಗಿ ವೀಕ್ಷಕರಿಗೆ ಮೋಜು ಮತ್ತು ಸಂವಾದಾತ್ಮಕ ಶೈಲಿಯನ್ನು ಸೇರಿಸಲು ಕ್ರಿಯೇಟರ್‌ಗಳಿಗೆ ಅನುಮತಿಸುವ ನಿಟ್ಟಿನಲ್ಲಿ Super Chat ಇದೀಗ IFTTT ಜೊತೆಯಲ್ಲಿ ಕಾರ್ಯನಿರ್ವಹಿಸುತ್ತದೆ. IFTTT ಮತ್ತು ಸೂಪರ್ ಚಾಟ್ ಬಗ್ಗೆ ಇನ್ನಷ್ಟು ತಿಳಿಯಿರಿ.
Infiniscene ನೇರವಾಗಿ ವೆಬ್ ಬ್ರೌಸರ್‌ನಿಂದ ಲೈವ್ ಸ್ಟ್ರೀಮ್ ಮಾಡಲು Infiniscene ನಿಮಗೆ ಅವಕಾಶ ಮಾಡಿಕೊಡುತ್ತದೆ. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ, ನೀವು ಹಂಚಿಕೊಳ್ಳಬೇಕಿರುವುದನ್ನು ಸೇರಿಸಿ, ನಂತರ ಲೈವ್‍ಗೆ ಹೋಗಿ ಅನ್ನು ಆಯ್ಕೆಮಾಡಿ. ಕ್ಲಿಷ್ಟಕರವಾದ ಸೆಟಪ್ ಇಲ್ಲದೇ ನಿಮ್ಮ ಸ್ಟ್ರೀಮ್ ಅನ್ನು ಅಪ್‍ಗ್ರೇಡ್ ಮಾಡಿ – ಬಿಟ್‍ರೇಟ್‍ಗಳು ಮತ್ತು ಸಂಕೀರ್ಣವಾದ ಎನ್‍ಕೋಡರ್ ಸೆಟ್ಟಿಂಗ್‍ಗಳ ಯಾವುದೇ ಗೊಂದಲವಿಲ್ಲ.
Nightbot Nightbot ಚಾಟ್‌ಬಾಟ್ ಆಗಿದ್ದು, ಅದು ಮಾಡರೇಶನ್ ಮತ್ತು ಹೊಸ ಫೀಚರ್‌ಗಳೊಂದಿಗೆ ನಿಮ್ಮ ಲೈವ್ ಸ್ಟ್ರೀಮ್‍ನ ಚಾಟ್ ಅನ್ನು ಸ್ವಯಂಚಾಲಿತಗೊಳಿಸಲು ಅನುಮತಿಸುತ್ತದೆ.
StreamElements StreamElements ಸ್ಟ್ರೀಮ್ ಮಾಡುವವರಿಗಾಗಿ ಇರುವ ಆಲ್ ಇನ್ ಒನ್ ಟೂಲ್‍ಸೆಟ್ ಆಗಿದೆ. ಸ್ಟ್ರೀಮ್ ಓವರ್‌ಲೇಗಳು (ಗ್ರಾಫಿಕ್ ಪ್ಯಾಕೇಜ್), ಪ್ರೇಕ್ಷಕರನ್ನು ಉತ್ತಮವಾಗಿ ತೊಡಗಿಸಿಕೊಳ್ಳಲು ಚಾಟ್‌ಬಾಟ್, ಟಿಪ್ಪಿಂಗ್ ಸಿಸ್ಟಮ್ ಮತ್ತು ನಿಮ್ಮ ಇನ್‍ಬಾಕ್ಸ್‌ಗೆ ಕಳುಹಿಸಿದ ಸ್ಟ್ರೀಮ್ ನಂತರದ ವರದಿಗಳನ್ನು ಒಳಗೊಂಡ ಫೀಚರ್‌ಗಳು. ನಿಮ್ಮ ಸ್ಟ್ರೀಮ್ ಸೆಟಪ್ ಮಾಡಲು ಮತ್ತು ಅವರ ಪರಿಕರಗಳಿಂದ ಹೆಚ್ಚಿನ ಪ್ರಯೋಜನ ಪಡೆಯಲು ಅವರ ಬೆಂಬಲ ತಂಡ ನಿಮಗೆ ಸಹಾಯ ಮಾಡುತ್ತದೆ.
Streamlabs ಆಕರ್ಷಕ, ಆನ್-ಸ್ಟ್ರೀಮ್ ನೋಟಿಫಿಕೇಶನ್ ಪಾಪ್ಅಪ್‍ಗಳ ಮೂಲಕ ನಿಮ್ಮ ನಿಷ್ಠಾವಂತ ವೀಕ್ಷಕರಿಗೆ ಧನ್ಯವಾದ ತಿಳಿಸುವ ಮೂಲಕ ಅವರಿಗೆ ರಿವಾರ್ಡ್ ನೀಡಿ. ಹಲವಾರು ಪಾವತಿ ಆಯ್ಕೆಗಳ ಮೂಲಕ ದೇಣಿಗೆಗಳನ್ನು ತೆಗೆದುಕೊಳ್ಳಿ, ದೇಣಿಗೆ ಗುರಿಗಳನ್ನು ನಿರ್ವಹಿಸಿ, ದೃಶ್ಯಗಳಿಗೆ ಲೇಬಲ್‍ಗಳನ್ನು ಸೇರಿಸಿ ಮತ್ತು ಇನ್ನಷ್ಟು.
XSplit Broadcaster & Gamecaster XSplit Gamecaster ನಿಮಗೆ ಒಂದು ಬಟನ್ ಕ್ಲಿಕ್‍ನಲ್ಲಿ ನಿಮ್ಮ ಅದ್ಭುತ ಗೇಮಿಂಗ್ ಕ್ಷಣಗಳನ್ನು ಸುಲಭವಾಗಿ ಸ್ಟ್ರೀಮ್ ಮತ್ತು ರೆಕಾರ್ಡ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಇದು ತುಂಬಾ ಸರಳ, ಬಳಸಲು ಸುಲಭ ಮತ್ತು ನಿಮ್ಮ ಗೇಮ್‍ಪ್ಲೇ ಅನ್ನು ಜಗತ್ತಿಗೆ ಹಂಚಲು ಪರಿಪೂರ್ಣವಾಗಿದೆ.
YuzzitPro

YuzzitPro ನಿಮ್ಮ ಲೈವ್‍ಸ್ಟ್ರೀಮ್‍ನಿಂದ ಹೈಲೈಟ್‍ಗಳನ್ನು ಟ್ರಿಮ್ ಮಾಡಲು ನಿಮಗೆ ಅವಕಾಶ ಮಾಡಿಕೊಡುತ್ತದೆ. ನೀವು ಈವೆಂಟ್ ಮುಗಿಯುವವರೆಗೆ ಕಾಯಬೇಕಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಒಂದೇ ಕ್ಲಿಕ್‍ನಲ್ಲಿ ಕ್ಷಣಗಳನ್ನು ಕ್ಲಿಪ್ ಮಾಡಿ, ಪೋಸ್ಟ್ ಮಾಡಬಹುದು. ದುಬಾರಿ PC ಅಗತ್ಯವಿಲ್ಲ, YuzzitPro ಕ್ಲೌಡ್ ಆಧಾರಿತವಾಗಿದೆ, ನೀವು ನಿಮ್ಮ ಬ್ರೌಸರ್‌ನಿಂದ ಆ್ಯಕ್ಸೆಸ್ ಮಾಡಬಹುದು. ಇದನ್ನು ಬಳಸುವುದು ಎಷ್ಟು ಸುಲಭವೆಂದರೆ, ಯಾವುದೇ ತರಬೇತಿ ಸಹ ಬೇಕಿಲ್ಲ.

ಹೆಚ್ಚು ಸಂಪನ್ಮೂಲಗಳು

YouTube ಗೆ ಸ್ಟ್ರೀಮ್ ಮಾಡಲು ಎನ್‍ಕೋಡಿಂಗ್ ಸಾಫ್ಟ್‌ವೇರ್ ಆಯ್ಕೆಮಾಡಲು ನಿಮಗೆ ಸಹಾಯ ಬೇಕಿದ್ದರೆ, ನಮ್ಮ ಲೈವ್ ಪರಿಶೀಲಿತ ಸಾಧನಗಳು ಮತ್ತು ಸಾಫ್ಟ್‌ವೇರ್ ಪಟ್ಟಿಯನ್ನು ಪರಿಶೀಲಿಸಿ.

YouTube Live API docs ಮೂಲಕ ನಿಮ್ಮದೇ ಆದಂತಹ ಲೈವ್ ಸ್ಟ್ರೀಮಿಂಗ್ ಪರಿಕರಗಳನ್ನು ರಚಿಸುವ ಕುರಿತು ಇನ್ನಷ್ಟು ಮಾಹಿತಿಯನ್ನು ಸಹ ಕಾಣಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14498782686070294515
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false