YouTube Premium ಮತ್ತು ರಚನೆಕಾರರಿಗಾಗಿ ಬೆಂಬಲ

YouTube Premium ಸದಸ್ಯರಾಗಿ, ನಿಮ್ಮ ಮೆಚ್ಚಿನ YouTube ರಚನೆಕಾರರನ್ನು ಬೆಂಬಲಿಸುತ್ತಾ, ಆ್ಯಡ್-ಮುಕ್ತ ವೀಡಿಯೊಗಳಂತಹ ಪ್ರಯೋಜನಗಳನ್ನು ನೀವು ಆನಂದಿಸಬಹುದು.

YouTube Premium, ರಚನೆಕಾರರನ್ನು ಹೇಗೆ ಬೆಂಬಲಿಸುತ್ತದೆ

ರಚನೆಕಾರರು YouTube ನ ಆತ್ಮ ಮತ್ತು ಹೃದಯವಾಗಿದ್ದಾರೆ. ಅವರ ಕೆಲಸಕ್ಕಾಗಿ ಅವರಿಗೆ ಪ್ರತಿಫಲ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ, ನೀವು YouTube ನಲ್ಲಿ ಆ್ಯಡ್‌ಗಳನ್ನು ವೀಕ್ಷಿಸಿದಾಗ ನಾವು ಅವರೊಂದಿಗೆ ಆ್ಯಡ್ ಆದಾಯವನ್ನು ಹಂಚಿಕೊಳ್ಳುತ್ತೇವೆ. ನೀವು YouTube Premium ಸದಸ್ಯರಾಗಿದ್ದರೆ, ನಿಮಗೆ ಆ್ಯಡ್‌ಗಳು ಕಾಣಿಸುವುದಿಲ್ಲ, ಆದ್ದರಿಂದ ನಿಮ್ಮ ಮಾಸಿಕ ಸದಸ್ಯತ್ವದ ಶುಲ್ಕವನ್ನು ನಾವು ರಚನೆಕಾರರೊಂದಿಗೆ ಹಂಚಿಕೊಳ್ಳುತ್ತೇವೆ. ಎಲ್ಲಕ್ಕಿಂತಲೂ ಉತ್ತಮ ವಿಷಯವೆಂದರೆ, ನಿಮ್ಮ ಮೆಚ್ಚಿನ ರಚನೆಕಾರರಿಂದ ನೀವು ಎಷ್ಟು ಹೆಚ್ಚು ವೀಡಿಯೊಗಳನ್ನು ನೋಡುತ್ತೀರೋ, ಅವರು ಅಷ್ಟು ಹೆಚ್ಚು ಹಣ ಗಳಿಸುತ್ತಾರೆ.

ಪ್ರೀಮಿಯಂ ಫೀಚರ್‌ಗಳ ಬೆಲೆ

ಇತರ ಪಾವತಿಸಿದ ಸದಸ್ಯತ್ವ ಸೇವೆಗಳ ಹಾಗೆಯೇ, YouTube Premium, YouTube ನಲ್ಲಿ ಪ್ರೀಮಿಯಂ ಫೀಚರ್‌ಗಳ ಬಂಡಲ್‌ಗಾಗಿ ಪಾವತಿಸುವ ಆಯ್ಕೆಯನ್ನು ನಿಮಗೆ ನೀಡುತ್ತದೆ. ಹಿನ್ನೆಲೆ ಪ್ಲೇ, YouTube Originals ಗೆ ಆ್ಯಕ್ಸೆಸ್ ಮತ್ತು ಆಫ್‌ಲೈನ್‌ನಲ್ಲಿ ವೀಕ್ಷಿಸುವುದಕ್ಕಾಗಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವ ಆಯ್ಕೆಯು, ನಿಮ್ಮ ಸದಸ್ಯತ್ವದಿಂದ ನಿಮಗೆ ಉತ್ತಮ ಮೌಲ್ಯವನ್ನು ಒದಗಿಸುತ್ತದೆ. YouTube Premium ಖಾತೆಯನ್ನು ಬಳಸುವ ಮೂಲಕ, ರಚನೆಕಾರರ ಕೆಲಸಕ್ಕಾಗಿ ಅವರಿಗೆ ಪ್ರತಿಫಲ ಸಿಗುವುದನ್ನು ಖಚಿತಪಡಿಸುವುದರ ಜೊತೆಗೆ ನಿಮ್ಮ YouTube ಅನುಭವವನ್ನು ವರ್ಧಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12818065845983827460
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false